ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಜಿ ಎನ್ ಸಾಯಿಬಾಬಾ ಅವರ ಇಂಗ್ಲಿಷ್ ಕವನವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್ ಭಾಗ್ಯ
ಆ ದಿನ,
ರೋಹಿತ್ ವೇಮುಲ
ನೇಣು ಬಿಗಿದುಕೊಂಡು
“ನನ್ನ ಚಹರೆಯನ್ನು ನಾನು ಕುಗ್ಗಿಸಿಕೊಳ್ಳಲಾರೆ”
ಎಂದು ಸಾರಿದ ದಿನ
ನನ್ನ ಹೃದಯದ ಬಡಿತ ತಪ್ಪಿತು.
ಆ ದಿನ,
ಪೆರುಮಾಳ್ ಮುರುಗನ್
“ನನ್ನೊಳಗಿನ ಲೇಖಕ ಸತ್ತುಹೋದ”
ಎಂದು ಘೋಷಿಸಿದ ದಿನ
ನನಗೆ ನಿದ್ರೆಯಲ್ಲೇ ಉಸಿರು ನಿಂತಂತಾಯ್ತು.
ಆ ದಿನ,
ಹನ್ಸ್ ದಾ ಸೌವೇಂದು ಶೇಖರ್
“ಆದಿವಾಸಿಯು ನರ್ತಿಸುವುದಿಲ್ಲ”
ಎಂದು ಹೇಳಿದ ದಿನ
ನನ್ನ ಮಾಂಸಖಂಡಗಳು ಬಿಗಿದುಕೊಂಡವು.
This video cannot be played in your browser. Open the video directly
ಆ ದಿನ,
ಹಾಡಿಯಾ
ನ್ಯಾಯಾಲಯದಲ್ಲಿ ನಿಂತು
“ನನಗೆ ಸ್ವಾತಂತ್ರ್ಯ ಬೇಕು”
ಎಂದು ಯಾಚಿಸುವಂತೆ ಮಾಡಿದ ದಿನ
ಬಂಧೀಖಾನೆಯ ನನ್ನ ಕೋಣೆಯಲ್ಲಿ ಉಸಿರು ನಿಂತಿತು





