ಕ್ರಿಕೆಟ್ ಅನ್ನು ಹಾಳುಮಾಡಿದ ಭಾರತ: ಏಕಪಕ್ಷೀಯ ಟಿ20 ವಿಶ್ವಕಪ್ ಗೆಲುವಿಗೆ ಶೋಯೆಬ್ ಅಖ್ತರ್ ಅಸಮಾಧಾನ

Date:

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ ಭರ್ಜರಿ ಜಯಿಸಿದ ಬೆನ್ನಲ್ಲೇ ಪಾಕ್‌ನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, ಭಾರತದ ಈ ಪ್ರಾಬಲ್ಯವು “ಕ್ರಿಕೆಟ್ ಅನ್ನು ಹಾಳುಮಾಡಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

​ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 96 ರನ್‌ಗಳ ಬೃಹತ್ ಅಂತರದಿಂದ ನ್ಯೂಜಿಲೆಂಡ್ ಅನ್ನು ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತು. ಕ್ರಿಕೆಟ್ ಪಂಡಿತರು ಭಾರತದ ಈ ಅದ್ಭುತ ಪ್ರದರ್ಶನವನ್ನು ಕೊಂಡಾಡುತ್ತಿದ್ದರೆ, ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, ಭಾರತದ ತಂಡವನ್ನು ನೆರೆಹೊರೆಯ ಕ್ರಿಕೆಟ್ ಆಟದಲ್ಲಿ ದಬ್ಬಾಳಿಕೆ ಮಾಡುವ ‘ಶ್ರೀಮಂತ ಹುಡುಗನಿಗೆ’ ಹೋಲಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

​”ಇದೊಂಥರಾ ಬೀದಿಯಲ್ಲಿರುವ ಶ್ರೀಮಂತ ಹುಡುಗನೊಬ್ಬ ತನ್ನ ನೆರೆಹೊರೆಯ ಬಡ ಮಕ್ಕಳನ್ನು ಕರೆದು, ‘ಬನ್ನಿ ಕ್ರಿಕೆಟ್ ಆಡೋಣ’ ಎಂದಂತಿದೆ. ಭಾರತ ನಮ್ಮ ಜೊತೆ ಇದನ್ನೇ ಮಾಡುತ್ತಿದೆ. ಎಂಟು ತಂಡಗಳಲ್ಲಿ ನಾಲ್ಕನ್ನು ಉಳಿಸಿಕೊಳ್ಳುತ್ತಾರೆ, ಆಮೇಲೆ ಆ ನಾಲ್ಕರಲ್ಲಿ ಮೂರನ್ನು ಕರೆದು ಮುಂದಕ್ಕೆ ಹೋಗುತ್ತಾರೆ. ನಂತರ ‘ನೋಡಿ, ನಾನು ಗೆದ್ದೆ’ ಎನ್ನುತ್ತಾರೆ. ಅವರು ಕ್ರಿಕೆಟ್ ಅನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ” ಎಂದು ಅಖ್ತರ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿದ್ದೀರಾ? ನ್ಯೂಜಿಲೆಂಡ್ ಮಣಿಸಿ 96 ರನ್‌ಗಳ ಬೃಹತ್ ಜಯ; ಸತತ 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಭಾರತ

Advertisements

ಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಅಖ್ತರ್, ಭಾರತವೇ ಗೆಲ್ಲುವ ನೆಚ್ಚಿನ ತಂಡ ಎಂಬುದನ್ನು ಒಪ್ಪಿಕೊಂಡಿದ್ದರೂ, “ಕ್ರಿಕೆಟ್‌ನ ಒಳಿತಿಗಾಗಿ ನ್ಯೂಜಿಲೆಂಡ್ ಗೆಲ್ಲಬೇಕು” ಎಂಬ ಆಶಯ ವ್ಯಕ್ತಪಡಿಸಿದ್ದರು. “ಭಾರತದ 150 ಕೋಟಿ ಜನರ ನಿರೀಕ್ಷೆಯ ಒತ್ತಡ ಭಾರತದ ಮೇಲಿದೆ. ಇದೇ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ಎದುರು ಏಕದಿನ ವಿಶ್ವಕಪ್ ಫೈನಲ್ ಸೋತ ಇತಿಹಾಸವೂ ಇದೆ. ಆದರೆ, ಕ್ರಿಕೆಟ್‌ನ ಒಳಿತಿಗಾಗಿ ಈ ಬಾರಿ ನ್ಯೂಜಿಲೆಂಡ್ ವಿಶ್ವಕಪ್ ಗೆಲ್ಲುವ ಸಮಯ ಬಂದಿದೆ” ಎಂದಿದ್ದರು.

ಒಂದೆಡೆ ಟೀಕೆಗಳ ಮಳೆಗರೆದರೂ, ಭಾರತದ ಯಶಸ್ಸಿನ ಹಿಂದಿರುವ ಮುಖ್ಯ ಕಾರಣವೊಂದನ್ನು ಅಖ್ತರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಆಟಗಾರರ ಬೆನ್ನಿಗೆ ನಿಂತ ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ನಿಲುವೇ ಇಂಥ ಪ್ರಮುಖ ಟೂರ್ನಿಗಳಲ್ಲಿ ಗೆಲುವಿನ ವ್ಯತ್ಯಾಸವನ್ನು ತಂದುಕೊಡುತ್ತದೆ ಎಂದು ಅವರು ಹೊಗಳಿದ್ದಾರೆ.

ಪಾಕಿಸ್ತಾನದ ಮತ್ತೋರ್ವ ಮಾಜಿ ಆಟಗಾರ ಮೊಹಮ್ಮದ್ ಆಮಿರ್ ಕೂಡ ‘ಹಾರ್ನಾ ಮನಾ ಹೈ’ ಕಾರ್ಯಕ್ರಮದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. “ಭಾರತದ ಗೆಲುವಿನ ಬಹುಪಾಲು ಶ್ರೇಯಸ್ಸು ನ್ಯೂಜಿಲೆಂಡ್ ಬೌಲರ್‌ಗಳಿಗೆ ಸಲ್ಲಬೇಕು. ಕಿವೀಸ್ ಬೌಲರ್‌ಗಳು ಒತ್ತಡ ಹೇರಲು ವಿಫಲರಾಗಿದ್ದೇ ಭಾರತೀಯ ಬ್ಯಾಟರ್‌ಗಳು ಸುಲಭವಾಗಿ, ತಮ್ಮದೇ ವೇಗದಲ್ಲಿ ರನ್ ಕಲೆಹಾಕಲು ಕಾರಣವಾಯಿತು” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3 ಗಂಟೆಗಳ ರೋಚಕ ಹೋರಾಟ: ಯುಎಸ್ ಓಪನ್ ಮೊದಲ ಸುತ್ತಿನಲ್ಲೇ ವಿಲಿಯಮ್ಸ್ ಸಹೋದರಿಯರಿಗೆ ಸೋಲು

ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಸ್ಮಯಕಾರಿ ಪುನರಾಗಮನದ ನಿರೀಕ್ಷೆಯಲ್ಲಿದ್ದ ಲೆಜೆಂಡರಿ ಜೋಡಿ...

75ನೇ ವರ್ಷದ ಬಾಂಧವ್ಯ: ಭಾರತ-ಜಪಾನ್ ನಡುವೆ ಚೊಚ್ಚಲ ಟಿ20 ಕ್ರಿಕೆಟ್

ಭಾರತ ಹಾಗೂ ಜಪಾನ್ ನಡುವಿನ 75ನೇ ವರ್ಷದ ರಾಜತಾಂತ್ರಿಕ ಬಾಂಧವ್ಯದ ಸಂಭ್ರಮಾಚರಣೆಯ...

ಏಷ್ಯನ್ ಗೇಮ್ಸ್ | ಟೀಂ ಇಂಡಿಯಾಗೆ ‘ವೆರಿ ವೆರಿ ಸ್ಪೆಷಲ್’; ವಿವಿಎಸ್‌ ಲಕ್ಷ್ಮಣ್ ಹೆಡ್‌ ಕೋಚ್!

ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್ ಹಾಗೂ...

ನೂರಾರು ವಿವಾದ, ಅದಕ್ಕೂ ಮೀರಿದ ಮನುಷ್ಯತ್ವ: ಮೆಸ್ಸಿಯ 21 ವರ್ಷದ ಪಯಣದತ್ತ ಒಂದು ಹಿನ್ನೋಟ

ಲಿಯೋನೆಲ್ ಮೆಸ್ಸಿ ಎಂಬ ದಂತಕಥೆಯನ್ನು ನಾವು ಅತ್ಯಂತ ಸಮತೋಲಿತ ದೃಷ್ಟಿಕೋನದಿಂದ ನೋಡಬೇಕಾಗಿದೆ....