ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಆಗುವ ಭಾರತೀಯರ ಕನಸು ನುಚ್ಚು ನೂರಾಗಿದೆ.
ಟೀಮ್ ಇಂಡಿಯಾ ನೀಡಿದ್ದ 241 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ, ಫೈನಲ್‌ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿದ್ದಲ್ಲದೇ, 6ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಪಾರಮ್ಯ ಮೆರೆದಿದೆ.
15th October – Australia No.10 Ranked team in the World Cup Points Table.
19th November – Australia World Cup winners for the 6th time. pic.twitter.com/s9qCPh5AGF
— Mufaddal Vohra (@mufaddal_vohra) November 19, 2023
ಟೀಮ್ ಇಂಡಿಯಾ ನೀಡಿದ್ದ 241 ರನ್‌ಗಳನ್ನು ಬೆನ್ನತ್ತಿದ ಆಸೀಸ್, 47 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತಾದರೂ, ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಮಯೋಚಿತ ಆಟದಿಂದ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆ ಮೂಲಕ ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಆಗಬೇಕೆಂಬ ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರಾಗಿದೆ.
– Home World Cup.
– 10 Straight wins.
– Rohit and Virat in form.
– Bowlers all in form.
– Middle order in form.Even these couldn’t win team India the title, it’s really heartbreaking now. 💔 pic.twitter.com/LV2yITOZD2
— Mufaddal Vohra (@mufaddal_vohra) November 19, 2023
ಆಸೀಸ್ ಪರ ಬ್ಯಾಟಿಂಗ್‌ನಲ್ಲಿ ಟ್ರಾವಿಸ್ ಹೆಡ್ ಹಾಗೂ ಲಾಬೂಶೈನ್ ಅವರು ನಡೆದ 192 ರನ್‌ಗಳ ಬೃಹತ್ ಜೊತೆಯಾಟದ ಪರಿಣಾಮ ಟೀಮ್ ಇಂಡಿಯಾ ಸೋಲನುಭವಿಸಿತು. ಟ್ರಾವಿಸ್ ಹೆಡ್ ಶತಕ(137) ಬಾರಿಸಿ ಮಿಂಚಿದರೆ, ಲಾಬೂಶೈನ್ ಔಟಾಗದೆ 58 ರನ್ ದಾಖಲಿಸಿದರು. ಈ ಜೋಡಿ 4ನೇ ವಿಕೆಟ್‌ಗೆ 192 ರನ್‌ಗಳ ಜೊತೆಯಾಟ ನಡೆಸಿ, ಆಸ್ಟ್ರೇಲಿಯಾವನ್ನು ವಿಜಯದ ಕಡೆಗೆ ತೆಗೆದುಕೊಂಡು ಹೋದರು.
6ನೇ ಬಾರಿಗೆ ಆಸೀಸ್ ಚಾಂಪಿಯನ್
ಈ ಪ್ರಶಸ್ತಿಯ ಮೂಲಕ ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಮೊದಲು 1987, 1999, 2003, 2007 ಹಾಗೂ 2015ರಲ್ಲಿ ಚಾಂಪಿಯನ್ ಆಗಿತ್ತು.

ವಿಶ್ವಕಪ್ ಟೂರ್ನಿಯುದ್ಧಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಟೀಮ್ ಇಂಡಿಯಾ, ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ, ಆಸೀಸ್‌ನ ಉತ್ತಮ ಕ್ಷೇತ್ರ ರಕ್ಷಣೆ ಹಾಗೂ ಅತ್ಯುತ್ತಮ ಬೌಲಿಂಗ್‌ನಿಂದ 50 ಓವರ್‌ಗಳಲ್ಲಿ ಆಲೌಟ್ ಆಗಿ 240 ರನ್ ಗಳಿಸಿ ಆಸ್ಟ್ರೇಲಿಯಾಗೆ ಸಾಧಾರಣ ಗುರಿ ನೀಡಿತ್ತು.
ಅಹಮದಾಬಾದ್‌ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿದ್ದರು.
ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ ಬೌಲರ್‌ಗಳು
ಬುಮ್ರಾ ಎಸೆದ ಮೊದಲ ಓವರ್‌ನಲ್ಲೇ ಆಸೀಸ್‌ನ ಆರಂಭಿಕ ಬ್ಯಾಟರ್‌ಗಳು 15 ರನ್‌ಗಳನ್ನು ಬಾಚುವ ಮೂಲಕ ಸ್ಫೋಟಕ ಆರಂಭದ ಮುನ್ಸೂಚನೆ ನೀಡಿದರು. ಆದರೆ ಇದಕ್ಕೆ 2ನೇ ಓವರ್ ಎಸೆದ ಸೆಮಿಫೈನಲ್ ಪಂದ್ಯದ ಹೀರೋ ಮೊಹಮ್ಮದ್ ಶಮಿ ಅವಕಾಶ ನೀಡಲಿಲ್ಲ.
The feeling remains the same since 2013. pic.twitter.com/6xSYcNXBef
— Mufaddal Vohra (@mufaddal_vohra) November 19, 2023
ಮೊಹಮ್ಮದ್ ಶಮಿ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡುವ ಮೂಲಕ ಡೇವಿಡ್ ವಾರ್ನರ್ 7 ರನ್ ಬಾರಿಸಿ ಔಟಾದರೆ, ಜಸ್ಪ್ರೀತ್ ಬುಮ್ರಾ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ 15 ಎಸೆತಗಳಲ್ಲಿ 15 ರನ್ ಬಾರಿಸಿದ್ದ ಮಿಚೆಲ್ ಮಾರ್ಷ್ ಔಟಾದರು.
ಆ ಬಳಿಕ ಜಸ್ಪ್ರೀತ್ ಬುಮ್ರಾ ಎಸೆದ 7ನೇ ಓವರ್ನ 4ನೇ ಎಸೆತದಲ್ಲಿ ಆಕರ್ಷಕ ಸ್ಟ್ರೈಡ್ ಡ್ರೈವ್ ಫೋರ್ ಬಾರಿಸಿದ ಸ್ಟೀವ್ ಸ್ಮಿತ್, ಕೊನೆಯ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು, 4 ರನ್ ಗಳಿಸಿದ್ದ ಸ್ಟೀವ್ ಸ್ಮಿತ್ ನಿರ್ಗಮಿಸಿದರು. ಆ ಮೂಲಕ ಟೀಮ್ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಮೂರನೇ ಯಶಸ್ಸು ತಂದುಕೊಟ್ಟರು.
ಸ್ಟೀವ್ ಸ್ಮಿತ್ ಎಲ್‌ಬಿಡಬ್ಲ್ಯೂ ನಿಜವಾಗಿಯೂ ಔಟ್ ಅಲ್ಲ. ರಿವೀವ್ಯೂ ತೆಗೆಯುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದೇ, ನೇರವಾಗಿ ಪೆವಿಲಿಯನ್ ಕಡೆಗೆ ತೆರಳಿದರು.