ಐಪಿಎಲ್‌ 2023 | ಟೈಟಾನ್ಸ್ ಬೌಲಿಂಗ್‌ ದಾಳಿಗೆ ನಲುಗಿದ ಡೆಲ್ಲಿ; ಹಾರ್ದಿಕ್‌ ಪಡೆಗೆ ಸಾಧಾರಣ ಗುರಿ

Date:

ಐಪಿಎಲ್‌ 16ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ಬೌಲರ್‌ಗಳಾದ ರಶೀದ್ ಖಾನ್‌, ಮೊಹಮ್ಮದ್ ಶಮಿ ಹಾಗೂ ಅಲ್ಜಾರಿ ಜೆಸೋಫ್ ದಾಳಿಗೆ ಸಿಲುಕಿದ ಡೇವಿಡ್‌ ವಾರ್ನರ್‌ ನೇತೃತ್ವದ ಡೆಲ್ಲಿ ಪಡೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್‌ ಸಾಧಾರಣ ಮೊತ್ತ ದಾಖಲಿಸಿದೆ.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಐದು ಓವರ್‌ಗಳಲ್ಲಿಯೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಾಯಕ ಡೇವಿಡ್ ವಾರ್ನರ್ 37 (32 ಎಸೆತ, 7 ಬೌಂಡರಿ), ಸರ್ಫರಾಜ್ ಖಾನ್ 30 (34 ಎಸೆತ, 2 ಬೌಂಡರಿ), 11 ಎಸೆತಗಳಲ್ಲಿ 2 ಸಿಕ್ಸರ್‌ನೊಂದಿಗೆ 20 ರನ್‌ ಸಿಡಿಸಿದ ಅಭಿಷೇಕ್ ಪೊರೆಲ್, ಸ್ಪಿನ್ನರ್ ಅಕ್ಷರ್ ಪಟೇಲ್ 22 ಚಂಡುಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್‌ನೊಂದಿಗೆ 36 ರನ್‌ ಬಾರಿಸಿದ್ದು, ಗೌರವಾನ್ವಿತ ಮೊತ್ತ ಕಲೆ ಹಾಕಲು ಕಾರಣವಾಯಿತು.

ಸ್ಪಿನ್ನರ್ ರಶೀದ್‌ ಖಾನ್ 31/3, ಮೊಹಮ್ಮದ್ ಶಮಿ 41/3 ಹಾಗೂ ಅಲ್ಜಾರಿ ಜೆಸೋಫ್ 29/2 ವಿಕೆಟ್ ಪಡೆದು ಉತ್ತಮ ಬೌಲರ್‌ಗಳೆನಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ತವ್ಯಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನೆ ಮುಂದುವರಿಯಲಿದೆ ಎಂದ ಸಾಕ್ಷಿ, ಪುನಿಯಾ

ಭಾರತೀಯ ಕುಸ್ತಿ ಒಕ್ಕೂಟದ ​​ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್...

ಒಡಿಶಾ ರೈಲು ದುರಂತ | ಪೋಷಕರ ಕಳೆದುಕೊಂಡ ಮಕ್ಕಳಿಗೆ ಸೆಹ್ವಾಗ್, ಗೌತಮ್‌ ಅದಾನಿ ಸಹಾಯಹಸ್ತ; ಉಚಿತ ಶಿಕ್ಷಣ 

ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ  ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 275 ಮಂದಿ...

ಕೋಝಿಕ್ಕೋಡ್ | ಫುಟ್‌ಬಾಲ್ ಆಡುತ್ತಿದ್ದ ಇಬ್ಬರು ಬಾಲಕರು ಸಮುದ್ರಪಾಲು

ಸಮುದ್ರ ತೀರದಲ್ಲಿ ಫುಟ್‌ಬಾಲ್‌ ಆಟವಾಡುತ್ತಿದ್ದ ವೇಳೆ ಇಬ್ಬರು ಯುವಕರು ನೀರುಪಾಲಾದ ಘಟನೆ...

ಟೆಸ್ಟ್‌ ಕ್ರಿಕೆಟ್‌ | ನಿವೃತ್ತಿ ದಿನಾಂಕ ಘೋಷಿಸಿದ ಡೇವಿಡ್‌ ವಾರ್ನರ್‌

ಆಸ್ಟ್ರೇಲಿಯಾ ತಂಡದ ದಿಗ್ಗಜ ಆಟಗಾರ, ಎಡಗೈ ಬ್ಯಾಟರ್‌ ಡೇವಿಡ್‌ ವಾರ್ನರ್‌ ಟೆಸ್ಟ್‌...