ಐಪಿಎಲ್‌ 2023 | ತುಷಾರ್​ ದೇಶಪಾಂಡೆ ಐಪಿಎಲ್‌ನ ಮೊತ್ತಮೊದಲ ʻಇಂಪ್ಯಾಕ್ಟ್‌ ಪ್ಲೇಯರ್‌ʼ

Date:

ಐಪಿಎಲ್‌ 16ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್ ಗೆಲುವಿನ ಆರಂಭ ಪಡೆದಿದೆ. ಅಹ್ಮದಾಬಾದ್‌ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್‌ ಪಡೆ, ನಾಲ್ಕು 4 ಬಾರಿಯ ಚಾಂಪಿಯನ್​​ ಚೆನ್ನೈ ಸೂಪರ್​ ಕಿಂಗ್ಸ್​ ತಂಡವವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿದೆ.

ಐಪಿಎಲ್‌ನಲ್ಲಿ ಈ ಬಾರಿ ಹೊಸದಾಗಿ ಪರಿಚಯಿಸಲಾಗಿರುವ ʻಇಂಪ್ಯಾಕ್ಟ್‌ ಪ್ಲೇಯರ್‌ʼ ಅವಕಾಶವನ್ನು ಬಳಸಿದ ಮೊದಲ ತಂಡ ಎಂಬ ಶ್ರೇಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನದಾಗಿಸಿಕೊಂಡಿದೆ.

ಕ್ಷೇತ್ರರಕ್ಷಣೆಯ ವೇಳೆ ಅಂಬಟಿ ರಾಯುಡು ಬದಲಾಗಿ ಮಧ್ಯಮ ವೇಗಿ ತುಷಾರ್​ ದೇಶಪಾಂಡೆ ಅವರನ್ನು ಕಣಕ್ಕಿಳಿಸಿತು. ಆ ಮೂಲಕ ತುಷಾರ್, ಐಪಿಎಲ್‌ನಲ್ಲಿ ಇತಿಹಾಸದಲ್ಲಿ ಮೊದಲ ‘ಇಂಪ್ಯಾಕ್ಟ್ ಪ್ಲೇಯರ್’ ಎನಿಸಿಕೊಂಡರು. ಇದಾದ ಬಳಿಕ ಗುಜರಾತ್​ ಟೈಟಾನ್ಸ್​, ಗಾಯಾಳು ಕೇನ್‌ ವಿಲಿಯಮ್ಸನ್‌ ಬದಲಿಗೆ ‘ಇಂಪ್ಯಾಕ್ಟ್ ಪ್ಲೇಯರ್’  ಆಗಿ ಸಾಯಿ ಸುದರ್ಶನ್ ಅವರನ್ನು ಸೇರಿಸಿಕೊಂಡಿತ್ತು.

ಇಂಪ್ಯಾಕ್ಟ್ ಆಗದ ಪ್ಲೇಯರ್ಸ್!​

ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಇಂಪ್ಯಾಕ್ಟ್‌ ಪ್ಲೇಯರ್‌ ಆಯ್ಕೆ ಶುಕ್ರವಾರ ಉಭಯ ತಂಡಗಳಿಗೂ ಪ್ರಯೋಜನವಾಗಲಿಲ್ಲ. ಚೆನ್ನೈ ಪರ 3.2 ಓವರ್ ಬೌಲಿಂಗ್​ ಮಾಡಿದ ದೇಶಪಾಂಡೆ, 51 ರನ್​ ನೀಡಿ ದುಬಾರಿಯಾದರು‌ ಕೇವಲ 1 ವಿಕೆಟ್‌ ಪಡೆಯಲಷ್ಟೇ ಶಕ್ತರಾದರು.

ಜಿಟಿ ತಂಡದಲ್ಲಿ ಸಾಯಿ ಸುದರ್ಶನ್​ ಸಹ ತಮಗೆ ಸಿಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲರಾದರು. 17 ಎಸೆತಗಳನ್ನು ಎದುರಿಸಿದ ಸುದರ್ಶನ್ 3 ಬೌಂಡರಿಗನ್ನೊಳಗೊಂಡ 22 ರನ್​ ಗಳಿಸಿದರು.‌

ಈ ಸುದ್ದಿ ಓದಿದ್ದೀರಾ?: ಐಪಿಎಲ್‌ 2023 | ಆರ್‌ಸಿಬಿ ಪಂದ್ಯದ ಟಿಕೆಟ್‌ಗಳಿಗೆ ತಡರಾತ್ರಿಯಿಂದಲೇ ಕಾದು ಕುಳಿತ ಅಭಿಮಾನಿಗಳು

ಚೆನ್ನೈ ತಂಡದ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿದ್ದವರು; ತುಷಾರ್​ ದೇಶಪಾಂಡೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ ಹಾಗೂ ನಿಶಾಂತ್ ಸಿಂಧು.

ಗುಜರಾತ್ ತಂಡದ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿದ್ದವರು;‌ ಜಯಂತ್ ಯಾದವ್, ಮೋಹಿತ್ ಶರ್ಮಾ, ಅಭಿನವ್ ಮನೋಹರ್, ಕೆ ಎಸ್ ಭಾರತ್ ಜೊತೆಗೆ ಬಿ ಸಾಯಿ ಸುದರ್ಶನ್

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಸ್ತಿಪಟುಗಳ ಮೇಲಿನ ಹಲ್ಲೆಗೆ ಕುಂಬ್ಳೆ ಬೇಸರ; ಆದಷ್ಟು ಬೇಗ ಸಮಸ್ಯೆ ಪರಿಹರಿಸಿ ಎಂದ ಕ್ರಿಕೆಟಿಗ

ನವದೆಹಲಿಯಲ್ಲಿ ಧರಣಿನಿರತ ಕುಸ್ತಿಪಟುಗಳ ಮೇಲಿನ ಹಲ್ಲೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ...

ಹರಿದ್ವಾರದಲ್ಲಿ ಚಾರಿತ್ರಿಕ ಪ್ರತಿಭಟನೆ; ಕುಸ್ತಿಪಟುಗಳು ಪದಕ ನದಿಗೆಸೆಯುವುದ ತಡೆದ ರೈತ ನಾಯಕ

ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ...

ಒಂದು ಬಾರಿ ಪ್ರಶಸ್ತಿ ಗೆಲ್ಲುವುದೇ ಕಷ್ಟ; ಕೊಹ್ಲಿ ಕಾಲೆಳೆದ ಗೌತಮ್‌ ಗಂಭೀರ್

ಐಪಿಎಲ್‌ 16ನೇ ಆವೃತ್ತಿಗೆ ತೆರೆ ಬಿದ್ದರೂ ಸಹ ಲಖನೌ ತಂಡದ ಮಾರ್ಗದರ್ಶಕ...

ತಂಬಾಕು ಜಾಹೀರಾತುಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ; ಸತ್ಯ ಬಿಚ್ಚಿಟ್ಟ ಸಚಿನ್!

ಹಲವು ಆಟಗಳನ್ನು ಆಡುತ್ತಿದ್ದರೂ ಕ್ರಿಕೆಟ್‌ ಕಡೆಗೆ ಆಕರ್ಷಣೆ ಎಂದ ಸಚಿನ್ ತೆಂಡೂಲ್ಕರ್ ಬಾಯಿಯ...