ಐಪಿಎಲ್ 2023 | ಮಾರ್ಕ್‌ವುಡ್‌ ಮಾರಕ ದಾಳಿಗೆ ಡೆಲ್ಲಿ ತತ್ತರ; ಲಖನೌ ತಂಡಕ್ಕೆ ಗೆಲುವು

Date:

ವೇಗದ ಬೌಲರ್‌ ಮಾರ್ಕ್‌ ವುಡ್‌ ಮಾರಕ ಬೌಲಿಂಗ್‌ ದಾಳಿಗೆ ಸಿಲುಕಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಖನೌ ಸೂಪರ್‌ ಜೈಂಟ್ಸ್ ತಂಡದೆದುರು 50 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 16ನೇ ಆವೃತ್ತಿಯ ಐಪಿಎಲ್‌ ಮೂರನೇ ಪಂದ್ಯದಲ್ಲಿ ಲಖನೌ ತಂಡ ನೀಡಿದ 194 ಗುರಿಯನ್ನು ಬೆನ್ನಟ್ಟಿದ ಡೇವಿಡ್‌ ವಾರ್ನರ್‌ ನೇತೃತ್ವದ ಡಿಲ್ಲಿಯು 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ಗಳಷ್ಟೆ ಶಕ್ತವಾಯಿತು.

ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೇಗದ ಬೌಲರ್‌ ಮಾರ್ಕ್‌ ವುಡ್ 14 ರನ್‌ಗಳಿಗೆ 5 ವಿಕೆಟ್‌ಗಳನ್ನು ಉರುಳಿಸಿದರು. ಮತ್ತೊಬ್ಬ ವೇಗದ ಬೌಲರ್‌ ಆವೇಶ್ ಖಾನ್ 29/2 ಹಾಗೂ ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿ 31/2 ವಿಕೆಟ್‌ಗಳನ್ನು ಕಬಳಿಸಿದರು.

ನಾಯಕ ಡೇವಿಡ್‌ ವಾರ್ನರ್‌ ಹಾಗೂ ಆಲ್‌ರೌಂಡರ್‌  ರೀಲೆ ರೊಸೊ ಹೋರಾಟ ನಡೆಸಿದ್ದನ್ನು ಬಿಟ್ಟರೆ ಉಳಿದ ಬ್ಯಾಟ್ಸಮೆನ್‌ಗಳು ಲಖನೌ ಬೌಲರ್‌ಗಳೆದುರು ರನ್‌ ಗಳಿಸಲು ಪರದಾಡಿ ಸರದಿಯಂತೆ ಪೆವಿಲಿಯನ್‌ಗೆ ತೆರಳಿದರು. 48 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ ವಾರ್ನರ್‌ 56 ರನ್‌ ಗಳಿಸಿದರೆ ರೀಲೆ ರೊಸೊ 20 ಚಂಡುಗಳಲ್ಲಿ 1 ಸಿಕ್ಸರ್ 3 ಬೌಂಡರಿಗಳೊಂದಿಗೆ 30 ರನ್‌ ಕಲೆ ಹಾಕಿದರು.

ಈ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಲಖನೌ ತಂಡ ಕೈಲ್ ಮೆಯರ್ಸ್ ಅವರ ಅದ್ಭುತ ಬ್ಯಾಟಿಂಗ್‌ನಿಂದಾಗಿ 20 ಓವರ್‌ಗಳಲ್ಲಿ 193 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿತ್ತು.

ನಾಯಕ ಕೆ ಎಲ್‌ ರಾಹುಲ್‌(8), ದೀಪಕ್‌ ಹೂಡ(17) ಸಹಿತ ಪ್ರಮುಖ ಬ್ಯಾಟ್ಸ್‌ಮೆನ್‌ಗಳೆಲ್ಲ ಔಟಾಗಿ ಪೆವಿಲಿಯನ್‌ಗೆ ತರೆಳುತ್ತಿದ್ದರೂ ಕೈಲ್, ಏಕಾಂಗಿಯಾಗಿ ಕ್ರೀಸ್‌ನಲ್ಲಿ ನಿಂತು ಡೆಲ್ಲಿ ಬೌಲರ್‌ಗಳ ಬೆವರಿಳಿಸಿದರು.

ಕೇವಲ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್‌ ಹಾಗೂ 2 ಬೌಂಡರಿಯೊಂದಿಗೆ 73 ರನ್‌ ಬಾರಿಸಿ ನೆರದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಹದಿನೈದನೇ ಓವರ್‌ನಲ್ಲಿ ಬ್ಯಾಟಿಂಗ್‌ ಆರಂಭಿಸಿದ ನಿಕೋಲಸ್ ಪೂರನ್ ಕೂಡ 21 ಎಸತಗಳಲ್ಲಿ 3 ಸಿಕ್ಸರ್‌ ಹಾಗೂ 2 ಬೌಂಡರಿಯೊಂದಿಗೆ 36 ಚಚ್ಚಿದರು. ಉಳಿದಂತೆ ಆಯುಶ್ ಬದೋನಿ (12), ಕೃನಾಲ್‌ ಪಾಂಡ್ಯ (15) ರನ್‌ ತಂಡದ ಮೊತ್ತ 190 ದಾಟಲು ನೆರವಾದರು.

ಡೆಲ್ಲಿ ಪರ ಚೇತನ್ ಸಕಾರಿಯಾ /2 ಹಾಗೂ ಖಲೀಲ್ ಅಹಮ್ಮದ್ 30/2 ವಿಕೇಟ್‌ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್‌ 2023 | ಗಿಲ್‌ ಶತಕದಬ್ಬರ; ಮಕಾಡೆ ಮಲಗಿದ ಮುಂಬೈ; ಫೈನಲ್‌ಗೆ ಗುಜರಾತ್‌

ಗುಜರಾತ್‌ ಟೈಟನ್ಸ್‌ ತಂಡ ಸತತ ಎರಡನೇ ಬಾರಿಗೆ ಐಪಿಎಲ್‌ ಟೂರ್ನಿಯ ಫೈನಲ್‌...

ಐಪಿಎಲ್‌ 2023 | ಕ್ವಾಲಿಫೈಯರ್​ 2, ಫೈನಲ್‌ ಪಂದ್ಯದ ಟಿಕೆಟ್‌ ಪಡೆಯಲು ನೂಕುನುಗ್ಗಲು, ಕಾಲ್ತುಳಿತ

ಐಪಿಎಲ್‌ನ ಕೊನೆಯ ಎರಡು ಪಂದ್ಯಗಳ ಆನ್‌ಲೈನ್ ಟಿಕೆಟ್‌ಗಳ ಪ್ರತಿಯನ್ನೂ ಆಫ್‌ಲೈನ್‌ನಲ್ಲಿ ಸ್ಟೇಡಿಯಂನಲ್ಲಿ...

ಐಪಿಎಲ್‌ 16 ಕ್ವಾಲಿಫೈಯರ್​ 2 | ಗುಜರಾತ್‌ vs ಮುಂಬೈ; ಅಹಮದಾಬಾದ್‌ನಲ್ಲಿ ʻಮಿನಿ ಫೈನಲ್‌ʼ!

ಐಪಿಎಲ್‌ 16ನೇ ಆವೃತ್ತಿಯು ಉಪಾಂತ್ಯ ಹಂತ ತಲುಪಿದೆ. ಮಾರ್ಚ್‌ 31 ರಂದು...

ನಾಲ್ಕು ವರ್ಷಗಳ ಹಿಂದೆ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡುತ್ತಿದ್ದ ಆಕಾಶ್‌ ಮಧ್ವಾಲ್‌ ಈಗ ಐಪಿಎಲ್‌ ಹೀರೋ!

ಗುರಿಯಡೆಗಿನ ಸ್ಪಷ್ಟತೆ ಜೊತೆಗೆ ನಿರಂತರ ಪ್ರಯತ್ನ ಜಾರಿಯಲ್ಲಿದ್ದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ...