T20 ವಿಶ್ವಕಪ್ | ಆಸೀಸ್-ಬಾಂಗ್ಲಾದೇಶ-ಅಫ್ಘಾನ್‌; ಮೂವರಿಗೂ ಇದೆ ಸೆಮಿಫೈನಲ್ ಅವಕಾಶ; ಹೇಗೆ?

Date:

ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದ ಟಿ20 ವಿಶ್ವಕಪ್ 2024ರ ಸೂಪರ್ 8ರ ಘಟ್ಟದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾವು 24 ರನ್‌ಗಳ ರೋಚಕ ಗೆಲುವು ಸಾಧಿಸುವುದರೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಜೂನ್ 24ರಂದು ಸೈಂಟ್ ವಿನ್ಸೆಂಟ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

- Advertisement -

ಇನ್ನು ಉಳಿದ ಒಂದು ಸೆಮಿಫೈನಲ್‌ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಕುತೂಹಲಕಾರಿ ಪೈಪೋಟಿ ಆರಂಭಗೊಂಡಿದೆ. ಟೀಮ್ ಇಂಡಿಯಾ ಇದ್ದ ಗುಂಪಿನಲ್ಲಿ ಆಸ್ಟ್ರೇಲಿಯಾ-ಬಾಂಗ್ಲಾದೇಶ-ಅಫ್ಘಾನಿಸ್ತಾನ ಕೂಡ ಇದೆ. ಈಗ ಈ ಮೂವರಿಗೂ ಕೂಡ ಸೆಮಿಫೈನಲ್ ಅವಕಾಶವಿದೆ ಅಂದರೆ ನೀವು ನಂಬಲೇಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಸದ್ಯ ಈ ಗುಂಪಿನಲ್ಲಿ ಮೂರು ಪಂದ್ಯಗಳನ್ನಾಡಿರುವ ಮಿಚೆಲ್ ಮಾರ್ಷ್‌ ನೇತೃತ್ವದ ಆಸ್ಟ್ರೇಲಿಯಾವು ರನ್‌ರೇಟ್ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾವು ಈವರೆಗೆ ಆಡಿದ ಮೂರು ಪಂದ್ಯಗಳ ಪೈಕಿ ಬಾಂಗ್ಲಾದೇಶ ವಿರುದ್ಧ ಮಾತ್ರ ಗೆದ್ದಿತ್ತು. ಅಫ್ಘಾನಿಸ್ತಾನ ಹಾಗೂ ಟೀಮ್ ಇಂಡಿಯಾ ವಿರುದ್ಧ ಸೋತಿದೆ. ಹಾಗಾಗಿ, ಸದ್ಯ ರನ್‌ರೇಟ್ ಆಧಾರದಲ್ಲಿ ಒಂದು ಗೆಲುವು, ಎರಡು ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಟೀಮ್ ಇಂಡಿಯಾ ವಿರುದ್ಧದ ಇಂದಿನ ಪಂದ್ಯದಲ್ಲಿ ಸೋತರೂ ಕೂಡ ಆಸ್ಟ್ರೇಲಿಯಾಗೂ ಕೂಡ ಸೆಮಿಫೈನಲ್‌ಗೆ ತೆರಳಲು ಅವಕಾಶವಿದೆ. ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಒಂದು ವೇಳೆ ಅಫ್ಘಾನಿಸ್ತಾನ ಸೋತಲ್ಲಿ, ರನ್‌ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾವು ಸೆಮಿಫೈನಲ್‌ ಪ್ರವೇಶಿಸಲಿದೆ.

ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದಲ್ಲಿ ಆಸ್ಟ್ರೇಲಿಯಾದ ಸೆಮಿಫೈನಲ್‌ ಕನಸಿಗೆ ತೆರೆ ಬೀಳಲಿದೆ. ಒಂದು ವೇಳೆ ಅಫ್ಘಾನಿಸ್ತಾನ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ, ಇತಿಹಾಸ ನಿರ್ಮಾಣವಾಗಲಿದೆ.

ಬಾಂಗ್ಲಾದೇಶಕ್ಕೂ ಇದೆ ಒಂದು ಚಾನ್ಸ್‌

ಟೀಮ್ ಇಂಡಿಯಾ ಇಂದು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಬಳಿಕ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ-ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲದೇ, ಬಾಂಗ್ಲಾದೇಶಕ್ಕೂ ಕೂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ.

ಕುತೂಹಲಕಾರಿ ಅರ್ಹತೆಯ ಸನ್ನಿವೇಶ ಸದ್ಯ ನಿರ್ಮಾಣವಾಗಿದ್ದು, ಅಫ್ಘಾನ್ ವಿರುದ್ಧ ಬಾಂಗ್ಲಾದೇಶವು 61 ರನ್‌ಗಳಿಗಿಂತಲೂ ಹೆಚ್ಚು ರನ್‌ಗಳ ಅಂತರದಿಂದ ಗೆದ್ದರೆ ಅಥವಾ 13 ಓವರ್‌ಗಳಲ್ಲಿ ಚೇಸ್ ಮಾಡಿದರೆ ಅರ್ಹತೆ ಪಡೆಯಲಿದೆ. ಬಾಂಗ್ಲಾದೇಶವು ಈವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿದೆ.

ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 61 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದರೆ ಆಸ್ಟ್ರೇಲಿಯಾ ಅರ್ಹತೆ ಪಡೆಯುತ್ತದೆ. ಬಾಂಗ್ಲಾದೇಶವನ್ನು ಸೋಲಿಸಿದರೆ ಅಫ್ಘಾನಿಸ್ತಾನ ಅರ್ಹತೆ ಪಡೆಯುತ್ತದೆ. ಅದೃಷ್ಟ ಯಾರ ಕೈ ಹಿಡಿಯಲಿದೆ ಎಂದು ಕಾದುನೋಡಬೇಕಿದೆ. ಅದೃಷ್ಟ ಕೈ ಹಿಡಿದು ಸೆಮಿಫೈನಲ್ ಪ್ರವೇಶಿಸುವ ತಂಡವು ಜೂನ್ 24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಬೇಕಿದೆ.

ಬಾಂಗ್ಲಾದೇಶ-ಅಫ್ಘಾನ್ ಪಂದ್ಯದ ಮೇಲೆ ಎಲ್ಲರ ಕಣ್ಣು

ಉಳಿದಿರುವ ಒಂದೇ ಒಂದು ಸೂಪರ್ 8ರ ಘಟ್ಟದ ಪಂದ್ಯ ಎಂದರೆ ಅದು ಬಾಂಗ್ಲಾದೇಶ-ಅಫ್ಘಾನ್ ಪಂದ್ಯ. ಈ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮಂಗಳವಾರ ಬೆಳಗ್ಗೆ 6 ಗಂಟೆ(ಭಾರತೀಯ ಕಾಲಮಾನ)ಗೆ ಈ ಪಂದ್ಯವು ಆರಂಭವಾಗಲಿದೆ. ಕಿಂಗ್ಸ್‌ಟನ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದುಲೀಪ್ ಟ್ರೋಫಿ ಫೈನಲ್: 13 ವರ್ಷಗಳ ನಂತರ ಚಾಂಪಿಯನ್ ಪಟ್ಟ ಅಲಂಕರಿಸಿದ ಪೂರ್ವ ವಲಯ

ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ 'ದುಲೀಪ್ ಟ್ರೋಫಿ 2026'ರ ಫೈನಲ್...

ಮಹಿಳಾ ಟಿ20 ಇತಿಹಾಸದಲ್ಲೇ ಮೊದಲು: ಏಷ್ಯಾಕಪ್‌ನಲ್ಲಿ ಲಂಕಾ, ಪಾಕ್ ಸ್ಪಿನ್ನರ್‌ಗಳ ವಿಕ್ರಮ

ಮಹಿಳಾ ಟಿ20 ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟರ್‌ಗಳಿಗಿಂತ ಸ್ಪಿನ್ ಬೌಲರ್‌ಗಳು ಸಂಪೂರ್ಣ...

ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೆ ‘ಮ್ಯಾಚ್ ಫಿಕ್ಸಿಂಗ್’ ಕಳಂಕ: 7 ಮಂದಿ ತಂಡದಿಂದ ಔಟ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ನಡುವೆಯೇ ಪಾಕಿಸ್ತಾನ...

3 ಗಂಟೆಗಳ ರೋಚಕ ಹೋರಾಟ: ಯುಎಸ್ ಓಪನ್ ಮೊದಲ ಸುತ್ತಿನಲ್ಲೇ ವಿಲಿಯಮ್ಸ್ ಸಹೋದರಿಯರಿಗೆ ಸೋಲು

ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಸ್ಮಯಕಾರಿ ಪುನರಾಗಮನದ ನಿರೀಕ್ಷೆಯಲ್ಲಿದ್ದ ಲೆಜೆಂಡರಿ ಜೋಡಿ...