ಮ್ಯಾಗ್ನಸ್ ಕಾರ್ಲ್‌ಸೆನ್‌ ಚೆಸ್ ಚಾಂಪಿಯನ್‌: ರನ್ನರ್ ಅಪ್ ಸ್ಥಾನದೊಂದಿಗೆ ಕ್ರೀಡಾಭಿಮಾನಿಗಳ ಮನಗೆದ್ದ ಪ್ರಜ್ಞಾನಂದ

Date:

ಅಝರ್​ಬೈಜಾನ್​ನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ 2023ರ​ ಫೈನಲ್​ ಪಂದ್ಯದಲ್ಲಿ ಭಾರತದ ಆರ್‌ ಪ್ರಜ್ಞಾನಂದ ವಿರುದ್ಧ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಗೆಲುವು ಸಾಧಿಸಿದ್ದಾರೆ.

ಟ್ರೋಫಿಯ ಭರವಸೆ ಮೂಡಿಸಿ ಫೈನಲ್‌ ತಲುಪಿದ್ದ ಆರ್​. ಪ್ರಜ್ಞಾನಂದ ಸೋತರೂ ವಿಶ್ವದ ಕ್ರೀಡಾಭಿಮಾನಿಗಳ ಮನಗೆದ್ದರು.

ಕಾರ್ಲ್‌ಸನ್‌ ಅವರು 1.5-0.5 ಅಂತರದಲ್ಲಿ ಪ್ರಜ್ಞಾನಂದ ವಿರುದ್ದ ಅಧಿಕಾರಯುತ ಗೆಲುವು ಪಡೆದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

18ರ ಹರೆಯದ ಪ್ರಜ್ಞಾನಂದ, 32ರ ವಯಸ್ಸಿನ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ ತೀವ್ರ ಪೈಪೋಟಿ ನೀಡಿದರು. ಎರಡು ದಿನದ ಗೇಮ್‌ಗಳಲ್ಲಿ ಪ್ರಜ್ಞಾನಂದರನ್ನು ಸೋಲಿಸಲು ಕಾರ್ಲ್‌ಸೆನ್ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಟೈ-ಬ್ರೇಕರ್‌ನಲ್ಲಿ ಜಯ ಮುಡಿಗೇರಿಸಿಕೊಂಡರು.

ವಿಶ್ವದ ನಂ.1 ಆಟಗಾರನಿಗೆ ಕಠಿಣ ಹೋರಾಟ ನೀಡಿ ಪ್ರಜ್ಞಾನಂದ ಭಾರತದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದರು.

29ನೇ ಶ್ರೇಯಾಂಕ ಹೊಂದಿದ್ದ ಪ್ರಜ್ಞಾನಂದ, ರನ್ನರ್ ಅಪ್ ಆಗುವ ಮೂಲಕ ಚೆಸ್ ಜಗತ್ತಿನ ಗಮನ ಸೆಳೆದಿದ್ದಾರೆ.

ವಿಶ್ವ ನಂಬರ್ ಒನ್ ಕಾರ್ಲ್‌ಸೆನ್ ಚೊಚ್ಚಲ ಚೆಸ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡರು. ಪ್ರಜ್ಞಾನಂದ ಅವರು ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಭಾಗವಹಿಸಿದ ಎರಡನೇ ಭಾರತೀಯ ಮತ್ತು ಕಿರಿಯ ಚೆಸ್ ಆಟಗಾರ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ‘ಪವರ್ ಪ್ಲೇ’ಯಲ್ಲಿ 125 ರನ್ ಚಚ್ಚಿದ ಹೈದರಾಬಾದ್: T20 ಇತಿಹಾಸದಲ್ಲೇ ಹೊಸ ದಾಖಲೆ

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌)ನ...

ಮಹಿಳೆಯರ ಕುಸ್ತಿ | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಕೊಂಡ ವಿನೇಶ್ ಫೋಗಟ್

ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಬಿಜೆಪಿ ಸಂಸದ...

ಪ್ಯಾರಿಸ್ ಒಲಿಂಪಿಕ್ಸ್‌ | ಮಹಿಳೆಯರ ಕುಸ್ತಿ: ಅರ್ಹತೆಯ ಹಾದಿಯಲ್ಲಿ ವಿನೇಶ್ ಪೊಗಾಟ್, ರೀತಿಕಾ, ಅಂಶು ಮಲಿಕ್, ಮಾನ್ಸಿ

ಮುಂದಿನ ಜುಲೈ 26ರಿಂದ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಏಷ್ಯನ್...

ಐಪಿಎಲ್ | ಕೆ ಎಲ್ ರಾಹುಲ್-ಡಿ ಕಾಕ್ ಶತಕದ ಜೊತೆಯಾಟ: ಚೆನ್ನೈ ವಿರುದ್ಧ ಲಕ್ನೋಗೆ ಭರ್ಜರಿ ಗೆಲುವು

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ...