ಐಟಿ ಅಧಿಕಾರಿಗಳ ರಕ್ಷಣೆಯಲ್ಲಿ ಬಿಜೆಪಿ ಸರ್ಕಾರ ಒಬ್ಬೊಬ್ಬ ಅಭ್ಯರ್ಥಿಗೂ ₹10 ಕೋಟಿ ಸಾಗಿಸುತ್ತಿದೆ: ದಿನೇಶ್ ಗುಂಡೂರಾವ್

Date:

  • ಬಿಜೆಪಿ ಸರ್ಕಾರ, ಐಟಿ ಅಧಿಕಾರಿಗಳ ವಿರುದ್ಧ ಗುಡುಗಿದ ದಿನೇಶ್‌ ಗುಂಡೂರಾವ್‌
  • ʼಸೋಲುವ ಭೀತಿಯಿಂದ ತೊಂದರೆ ಕೊಡಬೇಕು ಎಂಬುದು ಬಿಜೆಪಿ ದುರುದ್ದೇಶ’

ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ತನ್ನ ಒಬ್ಬೊಬ್ಬ ಅಭ್ಯರ್ಥಿಗೆ ₹ 10 ಕೋಟಿ ರೂ.ಹಣ ನೀಡುತ್ತಿದೆ. ಅದು ನಮಗಿರುವ ಮಾಹಿತಿ ಪ್ರಕಾರ ಐಟಿ ಅಧಿಕಾರಿಗಳ ರಕ್ಷಣೆಯಲ್ಲಿ ಸರ್ಕಾರ ಆ ಹಣ ಸಾಗಿಸುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದ್ದಾರೆ.

ಗಾಂಧಿನಗರದ ತಮ್ಮ ಕಚೇರಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಬಿಜೆಪಿಗೆ ಅಧಿಕಾರಿಗಳೆಲ್ಲರೂ ರಕ್ಷಣೆ ಕೊಡುತ್ತಿದ್ದಾರೆ. ಎಲ್ಲಿಲ್ಲಿ ಹಣ ಇಡಬೇಕು, ಎಲ್ಲಿಗೆ ಕಳುಹಿಸಬೇಕು ಎನ್ನುವುದು ಅವರಿಗೆ ಸರಿಯಾಗಿ ಗೊತ್ತಿದೆ” ಎಂದರು.

“ಐಟಿ, ಇಡಿ, ಸಿಬಿಐ ಬಿಜೆಪಿಯ ಖಾಸಗಿ ವಿಭಾಗಗಳಾಗಿವೆ. ಅಭ್ಯರ್ಥಿಗಳಿಗೆ ಪೊಲೀಸ್ ವಾಹನಗಳಲ್ಲಿ ಅಥವಾ ಐಟಿ ಅಧಿಕಾರಿಗಳೇ ನೇರವಾಗಿ ತಲುಪಿಸಬಹುದು” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?

“ಐಟಿ, ಇಡಿ ಅಧಿಕಾರಿಗಳ ಬಗ್ಗೆ ಕಾಂಗ್ರೆಸ್‍ಗೆ ಯಾಕೆ ಭಯ ಎಂಬ ಪ್ರಶ್ನೆ ಸಿಎಂ ಬೊಮ್ಮಾಯಿ ಕೇಳಿದ್ದಾರೆ. ಭಯ ನಮಗಿಲ್ಲ, 2018, 2019ರ ಚುನಾವಣೆ ಸಂದರ್ಭದಲ್ಲಿ ನಾವೂ ನೋಡಿದ್ದೇವೆ. ಆಗ ಕಾಂಗ್ರೆಸ್-ಜೆಡಿಎಸ್‍ನವರು ಮಾತ್ರ ಐಟಿ, ಇಡಿ ಕಣ್ಣಿಗೆ ಕಾಣಿಸಿದ್ದು. ಈ ಬಾರಿಯೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಸೋಲುವ ಭೀತಿಯಿಂದ ಹೇಗಾದರೂ ತೊಂದರೆ ಕೊಡುವುದು ಬಿಜೆಪಿಯ ದುರುದ್ದೇಶ” ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಗಾದಿಯ ಪೈಪೋಟಿ ವಿಚಾರವಾಗಿ ಪ್ರತಿಕ್ರಿಯಿಸಿ, “ಎಲ್ಲ ಪಕ್ಷದಲ್ಲೂ ಸಿಎಂ ಕುರ್ಚಿಗೆ ಪೈಪೋಟಿ ಇದ್ದೇ ಇರುತ್ತದೆ. ಪೈಪೋಟಿ ಇಲ್ಲದೇ ಹೋದರೆ ಅದು ರಾಜಕೀಯ ಅನ್ನಿಸಿಕೊಳ್ಳುವುದಿಲ್ಲ. ಆದರೆ, ಸ್ಪರ್ಧೆ ಆರೋಗ್ಯಕರವಾಗಿ ಇರಬೇಕು. ಇನ್ನು ಕಾಂಗ್ರೆಸ್‍ನ ಯಾವುದೇ ಹುದ್ದೆಗಳಿಗೆ ಪೈಪೋಟಿ ನಡೆದರೂ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ” ಎಂದು ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Fact check | ಯತ್ನಾಳ್‌ ಹೇಳಿದ ಭಾರೀ ಸುಳ್ಳು: ಸಿಎಂ ವಿರುದ್ಧ ಆರೋಪ ಸುಳ್ಳೆಂಬುದಕ್ಕೆ ಇಲ್ಲಿದೆ ಸಾಕ್ಷಿ

ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು...

ಡಿಕೆಶಿ ವಿರುದ್ಧ ಸಿಬಿಐ ತನಿಖೆ ಅನುಮತಿ ಹಿಂಪಡೆದ ಸರ್ಕಾರ; ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ ಯತ್ನಾಳ್

ಉಪಮುಖ್ಯಮಂತ್ರಿ‌ ಡಿಕೆ ಶಿವಕುಮಾರ್‌ ಅಕ್ರಮ ಆಸ್ತಿಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ನೀಡಿದ್ದ‌...

ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 15 ನಿಲ್ದಾಣಗಳ ಆಧುನೀಕರಣ: ಯೋಗೇಶ್ ಮೋಹನ್

“ಬಂಗಾರಪೇಟೆ, ಕೆಂಗೇರಿ, ಕೃಷ್ಣರಾಜಪುರ, ಮಂಡ್ಯ, ಚನ್ನಪಟ್ಟಣ, ಹೊಸೂರು, ಹಿಂದೂಪುರ, ಕುಪ್ಪಂ, ಮಾಲೂರು,...

ಶೂದ್ರರು, ದಲಿತರಿಗೆ ಆರ್‌ಎಸ್‌ಎಸ್‌ ಗರ್ಭಗುಡಿಗೆ ಪ್ರವೇಶ ಇಲ್ಲ ಎಂಬುದು ಮತ್ತೆ ಸಾಬೀತು: ಸಿದ್ದರಾಮಯ್ಯ

ಹೊರಬಾಗಿಲಲ್ಲಿ ನಿಂತು 'ಜೀ..ಜೀ..ಹುಜೂರ್' ಎಂದಷ್ಟೇ ಹೇಳಬೇಕು:‌ ಸಿದ್ದರಾಮಯ್ಯ ಗೂಳಿಹಟ್ಟಿ ಶೇಖರ್...