‘ಕೊಳಕು ಪ್ರಶ್ನೆ’ ಕೇಳಿದರೆಂದು ವಿಚಾರಣೆಯಿಂದ ಸಿಡಿದೆದ್ದು ಹೊರ ನಡೆದ ಸಂಸದೆ ಮಹುವಾ ಮೊಯಿತ್ರಾ

Date:

ಲೋಕಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಗುರುವಾರ ಲೋಕಸಭೆಯ ನೈತಿಕ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ಸಭೆಯಿಂದ ಅರ್ಧದಲ್ಲೇ ಹೊರ ನಡೆದಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ತೀರಾ ವೈಯಕ್ತಿಕ ಮತ್ತು ಅನೈತಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದಾಗಿ ಅರ್ಧದಲ್ಲೇ ಹೊರಬಂದಿರುವುದಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಸಭೆಯಿಂದ ಹೊರ ನಡೆದ ಆಕ್ರೋಶ ಹೊರ ಹಾಕಿದ ಸಂಸದೆ, ಇದು ಕೂಡ ಒಂದು ನೈತಿಕ ಸಮಿತಿಯೇ? ತೀರಾ ವೈಯಕ್ತಿಕ ಮತ್ತು ಕೊಳಕು ಪ್ರಶ್ನೆಗಳು ಕೇಳಲು ಇವರಿಗೆ ಹಕ್ಕಿದೆಯಾ? ಇದು ಯಾವ ರೀತಿಯ ಸಭೆ? ಎಲ್ಲ ರೀತಿಯ ಹೊಲಸು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಲೋಕಸಭೆಯ ನೈತಿಕ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿದ್ದ ವಿಪಕ್ಷಗಳ ಎಲ್ಲ ಸಂಸದರು ಕೂಡ ಅರ್ಧದಲ್ಲೇ ಹೊರಬಂದಿದ್ದು, ಅವರು ಕೂಡ ಆಕ್ರೋಶ ಹೊರಹಾಕಿದ್ದಾರೆ.

ಬಳಿಕ ಮಾತನಾಡಿದ ಜನತಾ ದಳ (ಯುನೈಟೆಡ್) ಸಂಸದ ಗಿರಿಧಾರಿ ಯಾದವ್, “ಅವರು ಮಹಿಳೆಗೆ (ಟಿಎಂಸಿ ಸಂಸದ ಮಹುವಾ ಮೊಯಿತ್ರಾ) ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರು. ಅವರಿಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವ ಹಕ್ಕಿಲ್ಲ. ಆದ್ದರಿಂದ ನಾವು ಹೊರನಡೆದಿದ್ದೇವೆ” ಎಂದು ಹೇಳುತ್ತಾರೆ.

ಕಾಂಗ್ರೆಸ್ ಸಂಸದ ಉತ್ತಮ್ ಕುಮಾರ್ ರೆಡ್ಡಿ ಮಾತನಾಡಿ, “ಸಂಸತ್ತಿನ ನೈತಿಕ ಸಮಿತಿ ಅಧ್ಯಕ್ಷರ ಇಡೀ ಪ್ರಶ್ನೆಗಳನ್ನು ಗಮನಿಸುವಾಗ, ಯಾರದೋ ಆಜ್ಞೆಯ ಮೇರೆಗೆ ವರ್ತಿಸುತ್ತಿದ್ದಾರೆ ಎಂದು ತೋರುತ್ತದೆ. ಇದು ತುಂಬಾ ಕೆಟ್ಟದು, ಎರಡು ದಿನಗಳಿಂದ ನಾವು ಅವರಿಗೆ, ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ಎಲ್ಲಿವೆ ಎಂದು ಕೇಳಿದ್ದೇವಾದರೂ ಅದನ್ನು ಅವರು ಒದಗಿಸಿಲ್ಲ. ಅವರಲ್ಲಿ ಯಾವುದೇ ನಗದು ವರ್ಗಾವಣೆಗೆ ಸಂಬಂಧಿಸಿದ ಯಾವುದೇ ಪುರಾವೆಗಳಿಲ್ಲ’ ಎಂದು ತಿಳಿಸಿದ್ದಾರೆ.

ಯಾವ ರೀತಿಯ ಪ್ರಶ್ನೆಗಳನ್ನು ಕೇಳಿದರು ಎಂದು ಮಾಧ್ಯಮದವರು ಕೇಳಿದ್ದಕ್ಕೆ ಉತ್ತರಿಸಿದ ಸಂಸದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ, ಮಹುವಾ ಮೊಯಿತ್ರಾ ಅವರಲ್ಲಿ ನೀವು ಎಲ್ಲಿಗೆಲ್ಲ ಪ್ರಯಾಣಿಸುತ್ತೀರಾ? ನೀವು ಯಾರನ್ನೆಲ್ಲ ಭೇಟಿಯಾಗುತ್ತೀರಾ? ನಿಮ್ಮ ಫೋನ್ ದಾಖಲೆಗಳನ್ನು ನಮಗೆ ನೀಡಬಹುದೇ? ನೀವು ಏನೆಲ್ಲ ಮಾತನಾಡುತ್ತೀರಾ? ಎಷ್ಟು ಹೊತ್ತು ಮಾತನಾಡ್ತೀರಾ? ಹೋಟೆಲಿನಲ್ಲಿ ಯಾರೊಂದಿಗೆ ವಾಸ ಮಾಡಿದ್ರಿ? ಯಾರು ಹೋಟೆಲ್ ಬಿಲ್ ಕೊಟ್ಟರು? ಎಂಬಿತ್ಯಾದಿ ಮಹಿಳೆಗೆ ಕೇಳಬಾರದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದು ತೀರಾ ವೈಯಕ್ತಿಕ ಮತ್ತು ಕೊಳಕು ಪ್ರಶ್ನೆಗಳು. ಮಹಿಳೆಗೆ ಈ ರೀತಿ ಕೇಳಲು ಈ ಸಮಿತಿಗೆ ಹಕ್ಕಿದೆಯಾ? ಎಂದು ಪ್ರಶ್ನಿಸಿದರು. ಹಾಗಾಗಿಯೇ, ವಿಪಕ್ಷಗಳ ಎಲ್ಲ ಸಂಸದರು ಸಭೆಯಿಂದ ಹೊರ ನಡೆದಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಹುವಾ ಮೊಯಿತ್ರಾ ವಿರುದ್ಧ ಮಾಡಿದ ಲಂಚದ ಆರೋಪದ ಬಗ್ಗೆ ಲೋಕಸಭೆಯ ನೈತಿಕ ಸಮಿತಿ ತನಿಖೆ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮೊಯಿತ್ರಾ ಇಂದು ಸಮಿತಿಯ ಮುಂದೆ ಹಾಜರಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ

ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ...

ಟ್ರಂಪ್ ಮೇಲೆ ಗುಂಡಿನ ದಾಳಿ: ಸ್ನೇಹಿತನ ಬಗ್ಗೆ ಕಳವಳಗೊಂಡಿದ್ದೇನೆ ಎಂದ ಮೋದಿಗೆ ನೆಟ್ಟಿಗರ ಪಾಠ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಉತ್ತರ ಪ್ರದೇಶ | 2027ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲುತ್ತದೆ: ಬಿಜೆಪಿ ಶಾಸಕನ ವಿಡಿಯೋ ವೈರಲ್

"2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಸೋಲು ಕಾಣಲಿದೆ,...

ಬಸವರಾಜ ರಾಯರೆಡ್ಡಿ ಮಾಹಿತಿ ತಿಳಿದುಕೊಂಡು ಮಾತನಾಡಲಿ: ದಿನೇಶ್ ಗೂಳಿಗೌಡ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂಬ ಮುಖ್ಯಮಂತ್ರಿಗಳ ಆರ್ಥಿಕ...