ಇಸ್ರೋದಿಂದ ಹೊಸ ದಾಖಲೆ; 36 ಉಪಗ್ರಹಗಳ ಯಶಸ್ವಿ ಉಡಾವಣೆ

Date:

  • ಆಂಧ್ರಪ್ರದೇಶದ ಸತೀಶ್ಧವನ್ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆ
  • 43.5 ಮೀಟರ್ ಎತ್ತರ, 5,805 ಕೆಜಿ ತೂಕದ ಮೊದಲ ತಲೆಮಾರಿನ 36 ಉಪಗ್ರಹಗಳು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅತ್ಯಂತ ಭಾರವಾದ ಲಾಂಚ್‌ ವೆಹಿಕಲ್‌ ಮರ್ಕ್‌ 3 ಉಡಾವಣಾ ನೌಕೆ, ಇಂಗ್ಲೆಂಡ್ ಮೂಲದ ಒನ್‌ವೆಬ್‌ ಗ್ರೂಪ್‌ಗೆ ಸೇರಿದ 36 ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ.

ಆಂಧ್ರಪ್ರದೇಶದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ(ಮಾರ್ಚ್‌ 26) 9 ಗಂಟೆಗೆ ಉಪಗ್ರಹಗಳ ಉಡಾವಣೆ ಯಶಸ್ವಿಯಾಗಿ ನಡೆದಿದೆ. 43.5 ಮೀಟರ್ ಎತ್ತರ, 5,805 ಕೆಜಿ ತೂಕದ ಮೊದಲ ತಲೆಮಾರಿನ 36 ಉಪಗ್ರಹಗಳನ್ನು ಸುಮಾರು 87.4 ಡಿಗ್ರಿಗಳ ಇಳಿಜಾರಿನೊಂದಿಗೆ 450 ಕಿಲೋಮೀಟರ್ ವೃತ್ತಾಕಾರದ ಕಕ್ಷೆಯಲ್ಲಿ ಇರಿಸಲಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇಂಗ್ಲೆಂಡ್‌ ಮೂಲದ ಒನ್‌ವೆಬ್‌ ಸರ್ಕಾರ ಮತ್ತು ವ್ಯವಹಾರಗಳಿಗೆ ಜಾಗತಿಕ ಸಂವಹನ ಜಾಲ ರೂಪಿಸುವ ಸಂಸ್ಥೆ. ಸರ್ಕಾರಗಳಿಗೆ, ವ್ಯವಹಾರಗಳಿಗೆ ಮತ್ತು ಸಮುದಾಯಗಳಿಗೆ ಅಂತರಿಕ್ಷದಿಂದ ಭೂಮಿಗೆ ಇಂಟರ್‌ನೆಟ್‌ ಒದಗಿಸುವ ಉದ್ದೇಶವನ್ನು ಒನ್‌ವೆಬ್‌ ಹೊಂದಿದೆ.

ಈ ಸುದ್ದಿ ಓದಿದ್ದೀರಾ? ವಿಂಡೋಸ್‌ ವಾಟ್ಸಾಪ್; ಡೆಸ್ಕ್‌ಟಾಪ್ ಆ್ಯಪ್‌ ಬಿಡುಗಡೆ ಮಾಡಿದ ಮೆಟಾ

ಒನ್‌ವೆಬ್‌ಗೆ ಭಾರ್ತಿ ಎಂಟರ್‌ಪ್ರೈಸಸ್‌ ಪ್ರಮುಖ ಹೂಡಿಕೆದಾರ ಕಂಪನಿ. ಈಗಾಗಲೇ ಒನ್‌ ವೆಬ್‌ನ ಮೊದಲ ಹಂತದ ಉಪಗ್ರಹಗಳನ್ನು ಇಸ್ರೊ ಫೆಬ್ರವರಿಯಲ್ಲಿ ಯಶಸ್ವಿಯಾಗಿ ಕಕ್ಷೆಗೆ ತಲುಪಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ 35 ಒನ್‌ವೆಬ್‌ ಉಪಗ್ರಹಗಳನ್ನು ಜಿಎಸ್‌ಎಲ್‌ವಿ ಮಾರ್ಕ್‌ 3 ಮೂಲಕ ನಿಗದಿತ ಕಕ್ಷೆಗೆ ಉಡಾವಣೆ ಮಾಡಲಾಗಿತ್ತು.

“ಲಡಾಕ್‌ನಿಂದ ಕನ್ಯಾಕುಮಾರಿ ಮತ್ತು ಗುಜರಾತ್‌ನಿಂದ ಅರುಣಾಚಲ ಪ್ರದೇಶದವರೆಗೆ ಒನ್‌ ವೆಬ್‌ ಉದ್ಯಮಗಳಿಗೆ ಮಾತ್ರವಲ್ಲದೆ ದೇಶಾದ್ಯಂತ ತಲುಪಲು ಕಷ್ಟಕರವಾದ ಪ್ರದೇಶಗಳು ಸೇರಿದಂತೆ ಪಟ್ಟಣಗಳು, ಗ್ರಾಮಗಳು, ಪುರಸಭೆಗಳು ಮತ್ತು ಶಾಲೆಗಳಿಗೆ ಸುರಕ್ಷಿತ ಪರಿಹಾರಗಳನ್ನು ತರುತ್ತದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಈ ಜಂಟಿ ಉಡಾವಣೆಗಾಗಿ ಇಸ್ರೋ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಉಡಾವಣಾ ಶುಲ್ಕ ವಿಧಿಸಿದೆ. ಇದು ಇಸ್ರೋದ ಅತಿ ದೊಡ್ಡ ಯೋಜನೆಗಳಲ್ಲಿ ಒಂದಾಗಿತ್ತು. 43.5 ಮೀಟರ್ ಎತ್ತರದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ 2ನೇ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಚಂದ್ರಯಾನ-2 ಮಿಷನ್ ಸೇರಿದಂತೆ ಐದು ಯಶಸ್ವಿ ಹಾರಾಟಗಳನ್ನು ಪೂರ್ಣಗೊಳಿಸಿರುವ ಇಸ್ರೋದ ಅತ್ಯಂತ ಭಾರವಾದ ಉಡಾವಣಾ ವಾಹನ 36 ಉಪಗ್ರಹಗಳನ್ನು ಹೊತ್ತು ನಭಕ್ಕೆ ನೆಗೆದಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಲೋ ಯುಪಿಐ | ಧ್ವನಿ ಮೂಲಕ ಹಣ ಪಾವತಿಸುವ ಫೀಚರ್ ಶೀಘ್ರ ಪ್ರಾರಂಭ

ಪಠ್ಯದ ಬದಲು ಧ್ವನಿ ಆಧಾರಿತ ಮೂಲಕ ಯುಪಿಐಯಲ್ಲಿ ಪಾವತಿ ಸೇವೆಗಳನ್ನು ಶೀಘ್ರದಲ್ಲಿಯೇ...

ಎಟಿಎಂ ಕಾರ್ಡ್ ಬಳಸದೆಯೇ, ಇನ್ನು ಮುಂದೆ ಯುಪಿಐ ಬಳಸಿ ನಗದು ವಿತ್ ಡ್ರಾ ಮಾಡಬಹುದು

ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆ ಇನ್ನು ಮುಂದೆ ಎಟಿಎಂನಲ್ಲಿ ನಗದು ವಿತ್‌...

ಚಂದ್ರನ ಮೇಲೆ ಇಸ್ರೋ ಮತ್ತೊಂದು ಪ್ರಯೋಗ; ವಿಕ್ರಮ್ ಲ್ಯಾಂಡರ್ ಮತ್ತೆ ಸಾಫ್ಟ್ ಲ್ಯಾಂಡ್

ಚಂದ್ರಯಾನ-3ರ 'ವಿಕ್ರಮ್ ಲ್ಯಾಂಡರ್' ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಯಿತು...

ಸೈಬರ್‌ ದಾಳಿ | ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಸರ್ಕಾರದಿಂದ ತುರ್ತು ಎಚ್ಚರಿಕೆ

ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಸಂಸ್ಥೆ, ಆಂಡ್ರಾಯ್ಡ್...