“ನಮ್ಮಿಬ್ಬರಲ್ಲಿ ಒಬ್ಬರು ನೀತಿ ಬದಲಿಸಿಕೊಳ್ಳಲೇಬೇಕು”: ಅಡೋಬ್ ಸಿಇಒಗೆ ಸ್ಟೀವ್ ಜಾಬ್ಸ್ ಬರೆದಿದ್ದ ಆ ‘ಕೋಪದ ಇಮೇಲ್’!

Date:

​ಸಿಲಿಕಾನ್ ಸಿಟಿಯ ದಿಗ್ಗಜರಾದ ಆ್ಯಪಲ್ (Apple) ಮತ್ತು ಅಡೋಬ್ (Adobe) ನಡುವಿನ ಸಂಬಂಧ ಯಾವಾಗಲೂ ಸಂಕೀರ್ಣ. ಐಫೋನ್‌ನಲ್ಲಿ ‘ಫ್ಲ್ಯಾಶ್’ ತಂತ್ರಜ್ಞಾನ ನಿಷೇಧದ ವಿವಾದಕ್ಕೂ ಮುನ್ನ, 2005ರಲ್ಲಿ ಉದ್ಯೋಗಿಗಳ ನೇಮಕಾತಿ ವಿಚಾರದಲ್ಲಿ ಈ ಎರಡು ಕಂಪನಿಗಳ ನಡುವೆ ನಡೆದ ಶೀತಲ ಸಮರವು 2010ರ ನ್ಯಾಯಾಲಯದ ದಾಖಲೆಗಳಲ್ಲಿ ಬಹಿರಂಗವಾಗಿತ್ತು.

- Advertisement -

​2005ರಲ್ಲಿ ಅಡೋಬ್ ಕಂಪನಿಯು ಆ್ಯಪಲ್ ಉದ್ಯೋಗಿಗಳನ್ನು ಸೆಳೆಯುತ್ತಿದೆ ಎಂಬ ಮಾಹಿತಿ ಸ್ಟೀವ್‌ ಜಾಬ್ಸ್‌ ಅವರ ಗಮನಕ್ಕೆ ಬಂದಿತ್ತು. ಎರಡು ಕಂಪನಿಗಳ ನಡುವೆ ಉದ್ಯೋಗಿಗಳನ್ನು ಸೆಳೆಯಬಾರದು ಎಂಬ ಅಲಿಖಿತ ಒಪ್ಪಂದವಿದೆ ಎಂದು ನಂಬಿದ್ದ ಜಾಬ್ಸ್ ಕೂಡಲೇ ಅಡೋಬ್‌ ಸಿಇಒ ಬ್ರೂಸ್‌ ಚಿಝೆನ್‌ ಅವರಿಗೆ ನೇರವಾಗಿ, ಖಡಕ್‌ ಇಮೇಲ್‌ ಒಂದನ್ನು ರವಾನಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

​​ಆ ಇಮೇಲ್‌ನಲ್ಲಿ ಜಾಬ್ಸ್, “ಬ್ರೂಸ್, ಅಡೋಬ್ ನಮ್ಮ ಉದ್ಯೋಗಿಗಳನ್ನು ಸೆಳೆಯುತ್ತಿದೆ. ನಾವು ನಿಮ್ಮವರಿಂದ ನೇಮಕಾತಿ ಮಾಡಿಕೊಳ್ಳಬಾರದು ಎಂಬ ನೀತಿ ಪಾಲಿಸುತ್ತಿದ್ದೇವೆ. ಆದರೆ ನಿಮ್ಮ ನೀತಿ ಬೇರೆಯೇ ಇದ್ದಂತಿದೆ. ನಮ್ಮಿಬ್ಬರಲ್ಲಿ ಒಬ್ಬರು ಈ ನೀತಿಯನ್ನು ಬದಲಿಸಿಕೊಳ್ಳಲೇಬೇಕು. ಅದು ಯಾರು ಎಂದು ದಯವಿಟ್ಟು ತಿಳಿಸಿ” ಎಂದು ಎಚ್ಚರಿಸಿದ್ದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?

ಇದಕ್ಕೆ ಉತ್ತರಿಸಿದ್ದ ಬ್ರೂಸ್, “ನಾವು ಕೇವಲ ಹಿರಿಯ ನಿರ್ದೇಶಕರು ಅಥವಾ ಉಪಾಧ್ಯಕ್ಷರ ಮಟ್ಟದ ಉದ್ಯೋಗಿಗಳನ್ನು ಮಾತ್ರ ಪರಸ್ಪರ ನೇಮಿಸಿಕೊಳ್ಳಬಾರದು ಎಂಬ ಒಪ್ಪಂದವಿದೆ ಎಂದು ನಾನು ಭಾವಿಸಿದ್ದೆ. ಆದರೆ, ಈ ಒಪ್ಪಂದವನ್ನು ಮುಂದುವರಿಸಲು ನಾವು ಸಿದ್ದ” ಎಂದು ಸಮಜಾಯಿಸಿ ನೀಡಿದ್ದರು.

ಅಮೆರಿಕದಲ್ಲಿ ಪ್ರತಿಸ್ಪರ್ಧಿ ಕಂಪನಿಗಳು ಪರಸ್ಪರ ಉದ್ಯೋಗಿಗಳನ್ನು ‘ಕೋಲ್ಡ್ ಕಾಲ್’ ಮಾಡಿ ಸೆಳೆಯಬಾರದು ಎಂದು ಒಳಒಪ್ಪಂದ ಮಾಡಿಕೊಳ್ಳುವುದು ಕಾನೂನುಬಾಹಿರ. ಈ ಇಮೇಲ್ ಸಂಭಾಷಣೆಗಳು 2010ರ ಆಂಟಿಟ್ರಸ್ಟ್ ಮೊಕದ್ದಮೆಯ ವೇಳೆ ಸಾಕ್ಷಿಯಾಗಿ ಬಳಕೆಯಾದವು. ಅಂತಿಮವಾಗಿ, ಉದ್ಯೋಗಿಗಳನ್ನು ಸೆಳೆಯುವಂತೆ ರಹಸ್ಯ ಒಪ್ಪಂದ ಮಾಡಿಕೊಂಡ ಆರೋಪದ ಮೇಲೆ ಆ್ಯಪಲ್, ಅಡೋಬ್, ಗೂಗಲ್ ಮತ್ತು ಇಂಟೆಲ್ ಕಂಪನಿಗಳು ಒಟ್ಟಾಗಿ 415 ಮಿಲಿಯನ್‌ ಡಾಲರ್ (ಸುಮಾರ್ 3400 ಕೋಟಿ ರೂ) ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಹ್ಯಾಕಾಶದಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ...

ಒರಾಕಲ್‌ಗೆ ಎಐ ಹೊಡೆತ: ಕೆಲಸ‌ ಕಳೆದುಕೊಂಡ ಸಾವಿರಾರು ಉದ್ಯೋಗಿಗಳು

ಜಾಗತಿಕ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ದೈತ್ಯ 'ಒರಾಕಲ್' ಸಂಸ್ಥೆಯು ತನ್ನ ಜಾಗತಿಕ...

ಎಐ ಸ್ಮಾರ್ಟ್ ಗ್ಲಾಸ್‌ಗಳ ರಹಸ್ಯ ಚಿತ್ರೀಕರಣಕ್ಕೆ ತಡೆ: ಡಿಜಿಟಲ್ ಲೋಕದಲ್ಲಿ ಸದ್ದು ಮಾಡುತ್ತಿದೆ ಹೊಸ ಆ್ಯಪ್

ತಂತ್ರಜ್ಞಾನ ಬೆಳೆದಂತೆ ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವ ಆತಂಕದ ನಡುವೆಯೇ, ರಹಸ್ಯವಾಗಿ ವಿಡಿಯೊ ಅಥವಾ...

ಎಐ ವೇಗಕ್ಕೆ ತಡೆ ನೀಡಲು ಜಾಗತಿಕ ಕೂಗು: ಭುಗಿಲೆದ್ದ ಅಮೆರಿಕ–ಚೀನಾ ತಾಂತ್ರಿಕ ಜಟಾಪಟಿ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಅತಿವೇಗದ ಓಟಕ್ಕೆ ಕಡಿವಾಣ ಹಾಕಿ, ಸುರಕ್ಷತೆಗೆ...