ದಕ್ಷಿಣ ಕನ್ನಡ | ಕಾವೂರು ಕೆರೆ ಪುನರುಜ್ಜೀವನ ಕಾಮಗಾರಿ ಪೂರ್ಣ; ಶೀಘ್ರದಲ್ಲೇ ಉದ್ಘಾಟನೆ

Date:

  • ಕೆರೆಯ ಬಳಿ ಮನರಂಜನಾ ಪ್ರದೇಶ ನಿರ್ಮಾಣ
  • 300 ಜಾತಿಯ ಪಕ್ಷಿಗಳು ಕೆರೆಗೆ ಭೇಟಿ

ಮಂಗಳೂರಿನ ಕಾವೂರು ಕೆರೆ ಪುನರುಜ್ಜೀವನದ ಬಹುತೇಕ ಕಾಮಗಾರಿಗಳನ್ನು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್‌ಸಿಎಲ್) ಪೂರ್ಣಗೊಳಿಸಿದೆ. ಮುಂದಿನ ವಾರ ಲೋಕಾರ್ಪಣೆ ಮಾಡುವ ನಿರೀಕ್ಷೆಯಿದೆ. 8.3 ಎಕರೆ ವಿಸ್ತೀರ್ಣವಿರುವ ಕೆರೆಯು ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.

ಗುಜ್ಜರಕೆರೆಯ ನಂತರ ಎಂಎಸ್‌ಸಿಎಲ್‌ನ ಎರಡನೇ ಕೆರೆ ಅಭಿವೃದ್ಧಿ ಯೋಜನೆ ಇದಾಗಿದೆ. 2020ರಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಕೆರೆಯ ಪುನರುಜ್ಜೀವನ ಕಾರ್ಯಗಳು ಪ್ರಾರಂಭವಾಗಿದ್ದವು. ಆದರೆ, ಕೊರೊನಾ ಕಾರಣದಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಅಲ್ಲದೆ, ಅತಿಕ್ರಮಣಗಳು ಸೇರಿದಂತೆ ಹಲವು ಸಮಸ್ಯೆಗಳು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದ್ದವು. ರಾಜ್ಯ ಸರ್ಕಾರದ ಕೆರೆ ಅಭಿವೃದ್ಧಿ ಸಮಿತಿಯೂ ಕೂಡ ಕೆರೆಗೆ ಭೇಟಿ ನೀಡಿ ಪರಿಶೀಲಿಸಿತ್ತು. ಇದಾದ ಬಳಿಕ ಕೆರೆ ಅಭಿವೃದ್ಧಿ ಕಾಮಗಾರಿ ಪುನರಾರಂಭಗೊಂಡಿತ್ತು.

“ಮಳೆನೀರು ಕೊಯ್ಲು ಯೋಜನೆಯ ಭಾಗವಾಗಿ ಕೆರೆಯ ಸುಧಾರಣೆ ಮತ್ತು ಉನ್ನತೀಕರಣವನ್ನು ಕೈಗೆತ್ತಿಕೊಳ್ಳಲಾಗಿದೆ. ಸುತ್ತಮುತ್ತಲಿನ ಪ್ರದೇಶದ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯವನ್ನು ಸುಧಾರಿಸುವುದು ಮತ್ತು ಮನರಂಜನಾ ಪ್ರದೇಶವಾಗಿ ಪುನರಾಭಿವೃದ್ಧಿ ಮಾಡುವುದು ಇದರ ಉದ್ದೇಶವಾಗಿದೆ” ಎಂದು ಎಂಎಸ್‌ಸಿಎಲ್ ಜನರಲ್ ಮ್ಯಾನೇಜರ್ (ತಾಂತ್ರಿಕ) ಅರುಣ್ ಪ್ರಭಾ ಕೆ.ಎಸ್ ತಿಳಿಸಿದ್ದಾರೆ.

“827 ಮೀಟರ್ ಉದ್ದದ ನಿರಂತರ ವಾಕಿಂಗ್ ಮತ್ತು ಜಾಗಿಂಗ್ ಟ್ರ್ಯಾಕ್, ಔಟ್‌ಲೆಟ್‌ನಲ್ಲಿ ಅಸ್ತಿತ್ವದಲ್ಲಿರುವ ಸ್ಲೂಯಿಸ್ ಗೇಟಿನ ಆಧುನೀಕರಣ, ನವೀಕರಣ, ಆಸನ ಮತ್ತು ಮನರಂಜನಾ ಪ್ರದೇಶದ ನಿರ್ಮಾಣ ಹಾಗೂ ಕರೆಯ ಸುತ್ತ ಸುರಕ್ಷತೆಗಾಗಿ ಒಳ ಅಂಚಿನಲ್ಲಿ ಚೈನ್ ಲಿಂಕ್ ಬೇಲಿಯನ್ನು ನಿರ್ಮಿಸಲಾಗಿದೆ. ನಾಲ್ಕು ಚಕ್ರದ ವಾಹನ ಮತ್ತು ದ್ವಿಚಕ್ರ ವಾಹನ ನಿಲುಗಡೆ ಪ್ರದೇಶವನ್ನೂ ಕೂಡ ಅಭಿವೃದ್ಧಿಪಡಿಸಲಾಗಿದೆ” ಎಂದು ಅರುಣ್ ಪ್ರಭಾ ಕೆ.ಎಸ್ ತಿಳಿಸಿದ್ದಾರೆ.

“ಮೇರಿಹಿಲ್, ಬೊಂದೆಲ್ ಮತ್ತು ಕಾವೂರು ಸೇರಿದಂತೆ ಮೂರು ಪ್ರಮುಖ ಸ್ಥಳಗಳಿಂದ ಕೆರೆಗೆ ಒಳಹರಿವು ಬರುತ್ತದೆ. ಈ ಸರೋವರವು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಹಿಂದೆ, ಮಳೆ ಬೀಳುತ್ತಿದ್ದ ಸಮಯದಲ್ಲಿ ತ್ಯಾಜ್ಯವು ಕೆರೆಯಲ್ಲಿ ಸಂಗ್ರಹವಾಗುತ್ತಿತ್ತು. ಯುಜಿಡಿ ಚರಂಡಿಗಳಿಂದ ಸೋರುವಿಕೆಯಿಂದ ತ್ಯಾಜ್ಯನೀರು ಕೆರೆಗೆ ಸೇರುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ” ಎಂದು ಅವರು ಹೇಳಿದರು.

“ಕೆರೆಯು ಈಗಾಗಲೇ ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತಿದೆ. ಕನಿಷ್ಠ 300 ಜಾತಿಯ ಪಕ್ಷಿಗಳು ಕೆರೆಗೆ ಭೇಟಿ ನೀಡಲು ಪ್ರಾರಂಭಿಸಿವೆ. ಇದು ಪಕ್ಷಿ ವೀಕ್ಷಕರಿಗೆ ಸಂತೋಷವನ್ನುಂಟು ಮಾಡಿದೆ. ರಾತ್ರಿ ವೇಳೆ ಕೆರೆಯ ನೋಟವು ಅದ್ಭುತವಾಗಿ ಕಾಣುತ್ತದೆ. ಕಾರಂಜಿಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಇದರಿಂದ ಕೆರೆಯ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ” ಎಂದು ಹೇಳಿದರು.

“ನೀರಿನ ಗುಣಮಟ್ಟವು ಸುಧಾರಿಸುತ್ತಿದ್ದು, ಅದನ್ನು ಅಪೇಕ್ಷಣೀಯ ಮಟ್ಟಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇದರ ನಡುವೆ ಎನ್ಐಟಿಕೆ ಸುರತ್ಕಲ್ ಮತ್ತು ಎಜೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೂಡ ಸರೋವರದ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ” ಎಂದರು.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದಿಂದ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡ ಕೆನಡಾ

ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆಯ ವಿವಾದದ ನಂತರ ಕೆನಡಾ...

ಮುಸ್ಲಿಂ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರಿಗೆ 14 ದಿನ ಜೈಲು; ಗುಜರಾತ್ ಹೈಕೋರ್ಟ್

ಗುಜರಾತ್‌ ಖೇಡಾ ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐವರು ಮುಸ್ಲಿಂ ಯುವಕರಿಗೆ...

ಹೃದಯ ಬಡಿತವನ್ನು ನಿಲ್ಲಿಸಲು ಸಾಧ್ಯವಿಲ್ಲ: 26 ವಾರ ಪ್ರಾಯದ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂ

ತನ್ನ 26 ವಾರದ ಗರ್ಭವನ್ನು ತೆಗೆದುಹಾಕಲು ಅನುಮತಿ ಕೋರಿ ವಿವಾಹಿತ ಮಹಿಳೆಯೊಬ್ಬರು...

ಯಾದಗಿರಿ | ಪಡಿತರ ತಿದ್ದುಪಡಿಗೆ ಜನರ ಪರದಾಟ; ಕಡೆ ದಿನಾಂಕ ಮುಂದೂಡಲು ಕರವೇ ಒತ್ತಾಯ

ಹುಣಸಗಿ ಗ್ರಾಮ ಒನ್ ನಾಗರಿಕ ಸೇವಾಕೇಂದ್ರದಲ್ಲಿ ಪಡಿತರ ಚೀಟಿ ತಿದ್ದುಪಡಿಗಾಗಿ ಹಳ್ಳಿಗಳಿಂದ...