ಮರಗಳೇ ಇಲ್ಲದ ಜಾಗಕ್ಕೆ ಅರಣ್ಯ ಇಲಾಖೆಯ ಆಕ್ಷೇಪ; ಸಾರ್ವಜನಿಕರ ಆಕ್ರೋಶ

Date:

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಕೇನೆಕುಂಜದ ಸರಕಾರಿ ಜಮೀನಿನಲ್ಲಿ ವಾರಾಹಿಯಿಂದ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಶನ್ ಯೋಜನೆಯ ಭಾಗವಾದ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯು ಯಾವುದೇ ಮರಗಳು ಇಲ್ಲದ ಹಾಗೂ ತನಗೆ ಹಕ್ಕೇ ಇಲ್ಲದ ಸರಕಾರಿ ಕಂದಾಯ ಇಲಾಖೆಗೆ ಸೇರಿದ 3 ಸೆಂಟ್ಸು ಜಮೀನಿಗೆ 2 ವರ್ಷಗಳಿಂದ ಅನಾವಶ್ಯಕ ಅಡ್ಡಿ ಉಂಟು ಮಾಡುತ್ತಿರುವ ವಿರುದ್ಧ ಇಂದು ಬೆಳ್ಳೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಾಗರಿಕ ಸಮಿತಿ-ಮೂಡುಬೆಳ್ಳೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

- Advertisement -

ಜಿಲ್ಲೆಯಲ್ಲಿ 2 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಣೆ ಮಾಡಿದ್ದು, ಈ ತಿಂಗಳಲ್ಲೇ ನೀರಿನ ಅಭಾವ ಉಂಟಾಗಿದೆ. ಕುಡಿಯುವ ನೀರಿನ ತುರ್ತು ಯೋಜನಗೆ ಅರಣ್ಯ ಇಲಾಖೆ ಅನಗತ್ಯ ಅಡ್ಡಿ ಉಂಟು ಮಾಡಿ ಟ್ಯಾಂಕ್ ನಿರ್ಮಾಣಕ್ಕೆ ತಡೆಯುಂಟು ಮಾಡುತ್ತಿರುವುದು ಸರಿಯಲ್ಲ ಎಂಬುದನ್ನು ಪ್ರತಿಭಟನಕಾರರು ಒಕ್ಕೊರಲಿನಿಂದ ಖಂಡಿಸಿದರು. ತಹಶೀಲ್ದಾರ್ ಅನಂತ ಶಂಕರ, ಆರ್‌ಎಫ್‌ಒ ವಾರಿಜಾಕ್ಷಿ, ಕಂದಾಯ ಪರಿವೀಕ್ಷಕ ಇಜ್ಜಾರ್ ಶಬ್ಬೀರ್, ವಿ.ಎ. ಪ್ರದೀಪ್ ಕುಮಾರ್, ಪಿ.ಡಿ.ಒ. ಆಶಾಲತಾ, ಗ್ರಾ, ಸಹಾಯಕ ಸ್ಟ್ಯಾನಿ ಡಿಸೋಜಾ, ಜಿ.ಪಂ. ಎಂಜಿನಿಯರ್ ಉದಯಕುಮಾರ್ ಶೆಟ್ಟಿ ಪ್ರತಿಭಟನ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...
WhatsApp Image 2026 10 05 at 5.30.36 PM

ಅರಣ್ಯ ಇಲಾಖೆ ನಿರ್ಲಕ್ಷ್ಯ

ಟ್ಯಾಂಕ್ ನಿರ್ಮಾಣ ಸ್ಥಳವು ಸರಕಾರಿ ಜಮೀನು ಆಗಿದ್ದು ಈ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು, ತಾಲ್ಲೂಕು ಭೂ ಮಾಪಕರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಜಂಟಿ ಅಳತೆ ಮಾಡಿದ ಸಂದರ್ಭದಲ್ಲಿ ಸದ್ರಿ ಜಮೀನು ಡೀಮ್ಡ್ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟವಾಗಿತ್ತು. ಆದರೆ ಅರಣ್ಯಾಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿ ಇಕ್ಕೆಲಗಳಲ್ಲಿ ರಸ್ತೆ ಇರುವ ಸರಕಾರಿ ಖಾಲಿ ಜಮೀನಿನಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ನಾಗರಿಕ ಸಮಿತಿ ಅಧ್ಯಕ್ಷ ಸುಧಾಕರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ವಲಯ ಅರಣ್ಯಾಧಿಕಾರಿಗಳು ಮೇಲಧಿಕಾರಿಗಳಿಗೆ ಕನಿಷ್ಟ ಒಂದೂ ಪತ್ರವನ್ನು ಬರೆದಿಲ್ಲ ಎಂಬುದು ತೀರಾ ದುರದೃಷ್ಟಕರ ಎಂದು ಅವರು ಹೇಳಿದರು.

Advertisements

ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ದೇವದಾಸ್ ಹೆಬ್ಬಾರ್ ಮಾತನಾಡಿ, ರಸ್ತೆ ಮಾರ್ಜಿನ್‌ನಲ್ಲಿ, ಲೋಕೋಪಯೋಗಿ ಇಲಾಖೆ ಅನುಮತಿ ಇಲ್ಲದೆ, ವಿದ್ಯುತ್ ತಂತಿಯ ಕೆಳಗೆ ಗಿಡಗಳನ್ನು ನೆಟ್ಟು ಸೋಗಿನ ಪರಿಸರ ಪ್ರೇಮ ವ್ಯಕ್ತಪಡಿಸುವ ಅರಣ್ಯ ಇಲಾಖೆಗೆ ಸಾರ್ವಜನಿಕರ ಕುಡಿಯುವ ನೀರಿನ ತುರ್ತು ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಬೆಳ್ಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಹರೀಶ್ ಶೆಟ್ಟಿ ಕಕ್ರಮನೆ, ಗಾ.ಪಂ. ಮಾಜಿ ಸದಸ್ಯರಾದ ಎ.ಜಿ. ಡಿಸೋಜಾ, ಗುರುರಾಜ ಭಟ್, ಅಶೋಕ್, ಐವನ್ ದಲ್ಮೇದಾ, ಪಾಣಾರ ಸಂಘದ ಗೌರವಾಧ್ಯಕ್ಷ ಸುಧಾಕರ ಪಾಣಾರ, ಅಧ್ಯಕ್ಷ ರಾಜು ಪಾಣಾರ, ಸ್ಥಳೀಯ ಮುಖಂಡರಾದ ಫ್ರಾನ್ಸಿಸ್ ಕಸ್ತಲೀನೋ, ರಾಮ ಕೇನೆಕುಂಜ, ಶಾಂತಾರಾಮ, ಡೆನಿಸ್ ಪಡುಬೆಳ್ಳೆ, ರಮೇಶ್ ಅಬ್ಬು ಪಡುಬೆಳ್ಳೆ, ಸಂದೇಶ್, ವಿಜಯ್, ದಯಾನಂದ ಭಂಡಾರಿ, ಅನಿಲ್ ಆಳ್ವಾ, ಸೂರಜ್ ಪೂಜಾರಿ, ಗಣೇಶ ಕುಲಾಲ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ನಾಗರಿಕ ಸಮಿತಿ ಕಾರ್ಯದರ್ಶಿ ಅಶ್ವಿನಿ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

ಡಿಸಿಗೆ ವರದಿ

ಸ್ಥಳ ಪರಿಶೀಲನೆ ನಡೆಸಿದ ಕಾಪು ತಹಶೀಲ್ದಾರ್ ಅನಂತ ಶಂಕರ್ ಅವರು ಟ್ಯಾಂಕ್ ಕಟ್ಟುವ ಸರಕಾರಿ ಜಮೀನಿನಲ್ಲಿ ಯಾವುದೇ ಮರಗಳಿರುವುದಿಲ್ಲ. ಕೇವಲ ೩ ಸೆಂಟ್ಸು ಜಮೀನಿನಲ್ಲಿ ಟ್ಯಾಂಕ್ ನಿರ್ಮಾಣ ಸಾಧ್ಯವಿದೆ ಎಂಬ ಬಗ್ಗೆ ಸ್ಥಳ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

ನಕಲಿ ಪರಿಸರವಾದಿಗಳ ಹಾವಳಿ

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ತಾವು ಪರಿಸರವಾದಿಗಳು ಎಂದು ಹೇಳಿಕೊಂಡು ಸಾರ್ವಜನಿಕ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತಿರುವವರ ಮಾತನ್ನು ಅರಣ್ಯ ಇಲಾಖೆ ಕೇಳುತ್ತಿದೆಯೇ ಹೊರತು ಕುಡಿಯುವ ನೀರಿಲ್ಲದೆ ಪರಿತಪಿಸುವ ಜನರು ಮಾತನ್ನು ಕೇಳುವ ಸೌಜನ್ಯ ತೋರುತ್ತಿಲ್ಲ. ಇಷ್ಟು ಸಮಯವಾದರೂ ಎಸಿಎಫ್/ಡಿಎಫ್‌ಒ ಸ್ಥಳಕ್ಕೆ ಭೇಟಿ ನೀಡಿಲ್ಲ. ನಕಲಿ ಪರಿಸರವಾದಿಗಳು ಅರಣ್ಯ ಸಂಬಂಧಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಶಂಕೆಯೂ ಇದೆ ಎಂದು ಹೇಳಿದ್ದಾರೆ.

1200 ಕೋಟಿ ರೂ. ವ್ಯರ್ಥ?

ವಾರಾಹಿಯಿಂದ ಉಡುಪಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಬಗ್ಗೆ ಪೈಪ್‌ಲೈನ್, ಓವರ್‌ಹೆಡ್ ಟ್ಯಾಂಕ್, ಜಡ್.ಬಿ.ಟಿ. ಸ್ಥಾಪನೆ ಸಹಿತ ಎಲ್ಲ ಪ್ರಕ್ರಿಯೆಗಳಿಗೆ ಸುಮಾರು 1200 ಕೋಟಿ ರೂ. ಟೆಂಡರ್ ಆಗಿದ್ದು, ಈಗಾಗಲೇ ಸುಮಾರು 800 ಕೋಟಿ ರೂ. ಗುತ್ತಿಗೆ ಸಂಸ್ಥೆಗೆ ಬಿಡುಗಡೆಯಾಗಿದೆ. ಆದರೆ ಅರಣ್ಯ ಇಲಾಖೆ ನಿಧಾನ ಧೋರಣೆ ಹಾಗೂ ಅನಗತ್ಯ ಹಸ್ತಕ್ಷೇಪದಿಂದ ಈ ಯೋಜನೆಯೇ ವ್ಯರ್ಥವಾಗುವ ಆತಂಕ ಎದುರಾಗಿದ್ದು ಸರಕಾರದ ಜನಸಾಮಾನ್ಯರ ತೆರಿಗೆ ಹಣ 1200 ಕೋಟಿ ವ್ಯರ್ಥವಾಗಲಿದೆಯೇ ಎಂಬುದು ಜನರ ಆತಂಕವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಾವು ಕಡಿತದಿಂದ ರೈತ ಅಸ್ವಸ್ಥ: ಆಸ್ಪತ್ರೆಗೆ ಸಾಗಿಸಲು ʻ108ʼ ಸಿಬ್ಬಂದಿ ನಕಾರ

ಶಿವಮೊಗ್ಗ ಜಿಲ್ಲೆಯ ನಗರ ಸಮೀಪದ ಕರಿಮನೆಯ ಕಾಡಿಗೆರೆ ಗ್ರಾಮದ ರೈತ ಜಮೀನಿನಲ್ಲಿ...

ಜಾಮಿಯಾ ಮಸೀದಿ ಉಪ್ಪಿನಕೋಟೆ: ನೂತನ ಕಮಿಟಿ ರಚನೆ, ಅಧ್ಯಕ್ಷರಾಗಿ ತಾಜುದ್ದೀನ್ ಇಬ್ರಾಹಿಂ ಆಯ್ಕೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಜಾಮಿಯಾ ಮಸೀದಿಯ ಮಹಾಸಭೆಯು ಅ.4ರಂದು...

ಶಿವಮೊಗ್ಗ | ವನ್ಯಜೀವಿ ಸಪ್ತಾಹ-2026ರ ಅಂಗವಾಗಿ ಸೈಕಲ್ ಜಾಥಾ

ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ 72ನೇ ವನ್ಯಜೀವಿ ಸಪ್ತಾಹ-2026ರ ಅಂಗವಾಗಿ ಅಕ್ಟೋಬರ್...

ಉಡುಪಿ | ದಲಿತರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ: ಸಂಜೀವ ಬಳ್ಕೂರು

ದಲಿತರ ಹಕ್ಕು, ಸಮಸ್ಯೆ ಹಾಗೂ ನ್ಯಾಯಕ್ಕಾಗಿ ಸಂಘಟಿತ ಹೋರಾಟ ಅಗತ್ಯವಾಗಿದ್ದು, ಸಂಘಟನೆಯೇ...