ಕಳೆದ 18 ವರ್ಷಗಳಿಂದ ದಂತ ಆರೈಕೆ ಮತ್ತು ಚಿಕಿತ್ಸಾ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿರುವ ಆನಂದ್ ಡೆಂಟಲ್ ಆ್ಯಂಡ್ ಆರ್ಥೋಅಲೈನರ್ಸ್ ಸಂಸ್ಥೆಯ ನೂತನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಉಡುಪಿಯಲ್ಲಿ ಶುಭಾರಂಭಗೊಂಡಿದೆ.
ಉಡುಪಿಯ ಜಿಲ್ಲಾ ನ್ಯಾಯಾಲಯದ ಹಿಂಬದಿ ರಸ್ತೆಯಲ್ಲಿ ಆರಂಭಗೊಂಡಿರುವ ಈ ನೂತನ ಕ್ಲಿನಿಕ್, ಆಧುನಿಕ ದಂತ ಚಿಕಿತ್ಸಾ ಸೌಲಭ್ಯಗಳು ಹಾಗೂ ವಿವಿಧ ವಿಭಾಗಗಳ ಸಮಗ್ರ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶವನ್ನು ಹೊಂದಿದೆ. ದಂತ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜನರ ಕಾಳಜಿಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ, ಪರಿಣತ ವೈದ್ಯಕೀಯ ಸೇವೆ ಮತ್ತು ರೋಗಿಗಳಿಗೆ ಅನುಕೂಲಕರ ಚಿಕಿತ್ಸಾ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕ್ಲಿನಿಕ್ ಅನ್ನು ರೂಪಿಸಲಾಗಿದೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಡಾ. ಪ್ರವೀಣ್ ಶೆಟ್ಟಿ ಕೊಡ್ಲಾಡಿ, “ಕಳೆದ 18 ವರ್ಷಗಳಿಂದ ಜನರ ವಿಶ್ವಾಸವೇ ನಮ್ಮ ಸಂಸ್ಥೆಯ ದೊಡ್ಡ ಶಕ್ತಿ. ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ಚಿಕಿತ್ಸಾ ವಿಧಾನಗಳಿಗೆ ಅನುಗುಣವಾಗಿ ಇನ್ನಷ್ಟು ಉತ್ತಮ ಸೇವೆ ನೀಡುವ ಉದ್ದೇಶದಿಂದ ನೂತನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಆರಂಭಿಸಲಾಗಿದೆ. ಜನರಿಗೆ ಗುಣಮಟ್ಟದ ದಂತ ಆರೈಕೆ ಮತ್ತು ಸಮಗ್ರ ಚಿಕಿತ್ಸೆಯನ್ನು ಸುಲಭವಾಗಿ ಒದಗಿಸುವುದು ನಮ್ಮ ಪ್ರಮುಖ ಗುರಿ,” ಎಂದು ತಿಳಿಸಿದರು.

ಗಣ್ಯರ ಉಪಸ್ಥಿತಿಯಲ್ಲಿ ಶುಭಾರಂಭ
ಕಳೆದ ಭಾನುವಾರ ಕ್ಲಿನಿಕ್ ಉದ್ಘಾಟನೆಗೊಂಡಿದ್ದು, ನೂತನ ಕ್ಲಿನಿಕ್ನ ಉದ್ಘಾಟನಾ ಸಮಾರಂಭದಲ್ಲಿ ಬಾರ್ಕೂರಿನ ಹಿರಿಯ ದಂತ ಶಸ್ತ್ರಚಿಕಿತ್ಸಕ ಡಾ. ಯು. ವೆಂಕಟರಾಜ್, ಉಡುಪಿಯ ನೋಟರಿ ಹಾಗೂ ಹಿರಿಯ ವಕೀಲ ದಿವಾಕರ್ ಎಂ. ಶೆಟ್ಟಿ, ಉಡುಪಿಯ ನ್ಯೂ ಸಿಟಿ ಆಸ್ಪತ್ರೆಯ ಜನರಲ್ ಸರ್ಜನ್ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ರಮೇಶ್ ನಾಯಕ್ ಹಾಗೂ ಉಡುಪಿಯ ಹಿರಿಯ ದಂತ ಶಸ್ತ್ರಚಿಕಿತ್ಸಕ ಮತ್ತು ಶಿರ್ವ ಕಾಶಿಮಠ ಮಹಾಲಸನಾರಾಯಣಿ ದೇವಸ್ಥಾನದ ಅಧ್ಯಕ್ಷ ಡಾ. ಡಿ. ದಾಮೋದರ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಆನಂದ್ ಡೆಂಟಲ್ ಆ್ಯಂಡ್ ಆರ್ಥೋಅಲೈನರ್ಸ್ ಸಂಸ್ಥೆಯು ಕಳೆದ 18 ವರ್ಷಗಳಿಂದ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಜನರ ವಿಶ್ವಾಸಕ್ಕೆ ಪಾತ್ರವಾಗಿರುವುದನ್ನು ಶ್ಲಾಘಿಸಿದರು. ಆಧುನಿಕ ತಂತ್ರಜ್ಞಾನ, ಪರಿಣತ ವೈದ್ಯರ ಸೇವೆ ಹಾಗೂ ರೋಗಿಗಳ ಅಗತ್ಯಕ್ಕೆ ತಕ್ಕ ಚಿಕಿತ್ಸಾ ವ್ಯವಸ್ಥೆಯೊಂದಿಗೆ ಆರಂಭಗೊಂಡಿರುವ ನೂತನ ಕ್ಲಿನಿಕ್ ಉಡುಪಿ ಹಾಗೂ ಸುತ್ತಮುತ್ತಲಿನ ಜನರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲಿದೆ ಎಂದು ಶುಭ ಹಾರೈಸಿದರು.

ಒಂದೇ ಸೂರಿನಡಿ ಸಮಗ್ರ ದಂತ ಆರೈಕೆ
ನೂತನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ದಂತ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಚಿಕಿತ್ಸೆಗಳು, ಆರ್ಥೋಡಾಂಟಿಕ್ ಚಿಕಿತ್ಸೆಗಳು ಹಾಗೂ ಆರ್ಥೋಅಲೈನರ್ ಸೇವೆಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಒದಗಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಹಲ್ಲುಗಳ ಸಾಮಾನ್ಯ ಸಮಸ್ಯೆಗಳಿಂದ ಹಿಡಿದು ಹಲ್ಲುಗಳ ಜೋಡಣೆ, ಸೌಂದರ್ಯ ಮತ್ತು ಆರ್ಥೋಡಾಂಟಿಕ್ ಚಿಕಿತ್ಸೆಯವರೆಗೆ ರೋಗಿಗಳ ಅಗತ್ಯಕ್ಕೆ ಅನುಗುಣವಾಗಿ ಸೇವೆ ನೀಡುವ ವ್ಯವಸ್ಥೆಯನ್ನು ಕ್ಲಿನಿಕ್ ಹೊಂದಿದೆ. ವಿಶೇಷವಾಗಿ ಸಾಂಪ್ರದಾಯಿಕ ಬ್ರೇಸ್ಗಳ ಜೊತೆಗೆ ಆಧುನಿಕ ಆರ್ಥೋಅಲೈನರ್ ಚಿಕಿತ್ಸಾ ವಿಧಾನಗಳ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಪರಿಣತ ಸಲಹೆ ಮತ್ತು ಚಿಕಿತ್ಸಾ ಸೇವೆ ದೊರೆಯುವಂತಾಗಿದೆ.
ಆಧುನಿಕ ಚಿಕಿತ್ಸಾ ವಿಧಾನಗಳ ಜೊತೆಗೆ ರೋಗಿಗಳಿಗೆ ಆರಾಮದಾಯಕ ಅನುಭವ ನೀಡುವುದು, ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ದಂತ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೂ ಸಂಸ್ಥೆ ಆದ್ಯತೆ ನೀಡುತ್ತಿದೆ.
18 ವರ್ಷಗಳ ವಿಶ್ವಾಸದ ಮುಂದುವರಿದ ಪಯಣ
‘18 Years of Trust – Smile Care & Cure’ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಆನಂದ್ ಡೆಂಟಲ್ ಆ್ಯಂಡ್ ಆರ್ಥೋಅಲೈನರ್ಸ್, ತನ್ನ ಸೇವಾ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಉಡುಪಿಯಲ್ಲಿ ನೂತನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಆರಂಭಿಸಿದೆ.
18 ವರ್ಷಗಳ ಅನುಭವದೊಂದಿಗೆ ಜನರ ವಿಶ್ವಾಸವನ್ನು ಉಳಿಸಿಕೊಂಡು, ಮುಂದಿನ ದಿನಗಳಲ್ಲಿಯೂ ಗುಣಮಟ್ಟದ ದಂತ ಆರೈಕೆ, ಆಧುನಿಕ ಚಿಕಿತ್ಸಾ ತಂತ್ರಜ್ಞಾನ ಮತ್ತು ರೋಗಿ ಸ್ನೇಹಿ ಸೇವೆ ನೀಡುವ ಬದ್ಧತೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ.
ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ದಂತ ಚಿಕಿತ್ಸೆಯ ವಿವಿಧ ಅಗತ್ಯಗಳಿಗೆ ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೂತನ ಕ್ಲಿನಿಕ್ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುವ ನಿರೀಕ್ಷೆ ಮೂಡಿಸಿದೆ.






