ಚಾಮರಾಜನಗರ | ನಾಲ್ವರ ಮೇಲೆ ಕಾಡಾನೆ ದಾಳಿ; ಇಬ್ಬರು ಬಾಲಕರ ಸ್ಥಿತಿ ಗಂಭೀರ

Date:

  • ದೇವಸ್ಥಾನದ ಬಳಿ ಮಲಗಿದ್ದ ವೇಳೆ ದಾಳಿ ಮಾಡಿರುವ ಕಾಡಾನೆ
  • ಜಾತ್ರೆ ಹಿನ್ನೆಲೆ ದೇವಸ್ಥಾನದ ಮುಂದಿನ ಚಪ್ಪರದಲ್ಲಿ ಮಲಗಿದ್ದರು

ದೇವಾಲಯದ ಬಳಿ ಮಲಗಿದ್ದ ನಾಲ್ವರು ಬಾಲಕರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಬಾಲಕರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪದ ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಣಿಕಂಠ (17), ಅರಸ (12), ಸ್ವಾಮಿ (11) ಹಾಗೂ ಅಭಿ (12) ಗಾಯಗೊಂಡಿದ್ದು, ಎಲ್ಲರನ್ನೂ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಬಾಲಕರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ಜಡೇಸ್ವಾಮಿ ದೇವಾಲಯದ ಜಾತ್ರೆ ನಡೆಯಲಿದೆ. ಈ ಹಿನ್ನೆಲೆ ದೇವಸ್ಥಾನದ ಮುಂದೆ ಚಪ್ಪರ ಹಾಕಿ ಗ್ರಾಮಸ್ಥರು ಜಾತ್ರೆಗೆ ಸಿದ್ಧತೆ ನಡೆಸುತ್ತಿದ್ದರು. ದೇವಾಲಯದ ಕೆಲಸ‌ ಮುಗಿಸಿ 20ಕ್ಕೂ ಹೆಚ್ಚು ಗ್ರಾಮಸ್ಥರ ಜೊತೆಗೆ ಈ ಬಾಲಕರು ದೇವಸ್ಥಾನದ ಬಳಿ ಮಲಗಿದ್ದರು.

ಈ ಸುದ್ದಿ ಓದಿದ್ದೀರಾ?  ಮೈಸೂರು | ನೆರವಿಗೆ ಧಾವಿಸುವಂತೆ ಸುಡಾನ್‌ನಲ್ಲಿ ಸಿಲುಕಿರುವ ಹಕ್ಕಿಪಿಕ್ಕಿ ಸಮುದಾಯದ ಜನ ಮನವಿ

ದಿಢೀರನೇ ಕಾಡಾನೆಯೊಂದು ದಾಳಿ ಮಾಡಿದ್ದು, ದೇಗುಲಕ್ಕೆ ಹಾಕಿದ್ದ ಚಪ್ಪರ ದ್ವಂಸ ಮಾಡಿ ಮಲಗಿದ್ದವರ ಮೇಲೆ ಎರಗಿದೆ. ಈ ವೇಳೆ ನಾಲ್ವರು ಬಾಲಕರು ಗಾಯಗೊಂಡಿದ್ದಾರೆ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | ಮಸೀದಿಗೆ ನುಗ್ಗಿ ‘ಜೈ ಶ್ರೀರಾಮ್’ ಘೋಷಣೆ; ಇಬ್ಬರು ಆರೋಪಿಗಳ ಬಂಧನ

ಹಿಂದುತ್ವ ಕೋಮುವಾದಿ ಕಾರ್ಯಕರ್ತರು ಮಸೀದಿಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿ...

ಧಾರವಾಡ | ಅವಳಿ ನಗರಗಳಿಗೆ 5 ತಿಂಗಳಲ್ಲಿ 100 ಹೊಸ ಸಿಟಿ ಬಸ್‌ಗಳು ರಸ್ತೆಗಿಳಿಯಲಿವೆ: ಸಾರಿಗೆ ಸಚಿವ

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ 45 ಕೋಟಿ...

ಧಾರವಾಡ | ಬಿಜೆಪಿ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಶ್ರೀರಾಮಸೇನೆ ಕಿಡಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರದಲ್ಲಿ...

ಬಾಗಲಕೋಟೆ | ಅಂಗನವಾಡಿಯಲ್ಲಿ ಕಳಪೆ ಆಹಾರ ವಿತರಣೆ; ಗರ್ಭಿಣಿ ಮತ್ತು ಮಕ್ಕಳು ಅಸ್ವಸ್ಥ

ಅಂಗನವಾಡಿಯಲ್ಲಿ ವಿತರಿಸಿದ್ದ ಆಹಾರ ಸೇವಿಸಿ ಗರ್ಭಿಣಿ ಮತ್ತು ಆರು ಮಕ್ಕಳಲ್ಲಿ ವಾಂತಿ-ಭೇದಿ...