ನಿಮ್ಮ ತೈಲವನ್ನು ನೀವೇ ತಂದುಕೊಳ್ಳಿರಿ: ಟ್ರಂಪ್‌ ಅಸಮಾಧಾನ

Date:

ನಿಮಗೆ ಅಗತ್ಯವಿರುವ ತೈಲವನ್ನು ನೀವೇ ತಂದುಕೊಳ್ಳಿ ಎಂದು ಅನ್ಯ ರಾಷ್ಟ್ರಗಳಿಗೆ ಟ್ರಂಪ್‌ ಸೂಚನೆ ನಿಡಿದ್ದಾರೆ. ಕೆಲವು ರಾಷ್ಟ್ರಗಳು ತಮಗಾಗಿ ತಾವು ಹೋರಾಡುವುದನ್ನು ಕಲಿಯಬೇಕು. ಅಮೆರಿಕ ಆ ರಾಷ್ಟ್ರಗಳಿಗೆ ಸಲಹೆ ನೀಡಲು ಹೋಗದು, ಸಹಕಾರವೂ ನೀಡದು. ಮೈತ್ರಿ ರಾಷ್ಟ್ರಗಳು ಅಮೆರಿಕವನ್ನು ಏಕಾಂಗಿ ಮಾಡಿದ ಹಾಗೆ ಅಮೆರಿಕ ಕೂಡ ಕೆಲ ದೇಶಗಳನ್ನು ಈ ಹೋರಾಟದಲ್ಲಿ ಏಕಾಂಗಿಯಾಗಿಸಲಿದೆ ಎಂದಿದ್ದಾರೆ.

- Advertisement -

ಇರಾನ್‌ ಜೊತೆಗಿನ ಅಮೆರಿಕ ಸಂಘರ್ಷದಲ್ಲಿ ಭಾಗಿಯಾಗದ ತನ್ನ ಮೈತ್ರಿ ಕೂಟದಲ್ಲಿನ ದೇಶಗಳಿಗೆ ಎಚ್ಚರಿಸಿರುವ ಟ್ರಂಪ್‌ , ಇರಾನ್‌ನೊಡನೆ ಅಮೆರಿಕ ಯುದ್ಧಕ್ಕಿಳಿದಾಗ ನೆರವಿಗೆ ಬಾರದ ದೇಶಗಳಿಗೆ ಅಮೆರಿಕ ಯಾವುದೇ ಸಹಕಾರ ನೀಡುವುದಿಲ್ಲ. ನೀವು ನಿಮಗೆ ಬೇಕಾದ ತೈಲವನ್ನು ಸ್ವತಃ ಹಾರ್ಮುಜ್‌ ಜಲಸಂಧಿಯ ಮೂಲಕ ತಂದುಕೊಳ್ಳಿ ಎಂದಿದ್ದಾರೆ.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಇದನ್ನು ಓದಿ>>ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು

 ಟ್ರುತ್‌ ಸೋಷಿಯಲ್‌ ಎಂಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅಮೆರಿಕ ಅಧ್ಯಕ್ಷ, ತಟಸ್ಥ ರಾಷ್ಟ್ರಗಳ ಮೇಲಿನ ತಮ್ಮ ಜಿಜ್ಞಾಸೆಯನ್ನು ಬಹಿರಂಗವಾಗಿ ಬರೆದುಕೊಂಡಿದ್ದಾರೆ.

ಕೆಲವು ರಾಷ್ಟ್ರಗಳಿಗೆ ಬೇರೆ ಯಾವುದೇ ಆಯ್ಕೆ ಇಲ್ಲ, ಒಂದೋ ಅಮೆರಿಕದಿಂದ ತೈಲ ಖರೀದಿ ಮಾಡಬೇಕು. ಅಮೆರಿಕದ ಬಳಿ ಬೇಕಾದಷ್ಟು ತೈಲ ದಾಸ್ತಾವೇಜು ಇದೆ. ಇಲ್ಲವೇ ಇರಾನ್‌ ನಿರ್ಬಂಧಿಸಿರುವ ಹಾರ್ಮುಜ್‌ ಮಾರ್ಗದಿಂದ ತೈಲ ಆಮದು ಮಾಡಿಕೊಳ್ಳಬೇಕು ಎಂದಿದ್ದಾರೆ.

ಇರಾನ್‌ನ ಮೇಲೆ ಅಸಮಧಾನ ಹೊರಹಾಕಿರುವ ಟ್ರಂಪ್‌ ಇರಾನ್‌ ಹಾರ್ಮುಜ್‌ ಜಲಮಾರ್ಗವನ್ನು ಮುಕ್ತಗೊಳಿಸದಿದ್ದರೆ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಟ್ರಂಪ್‌ನ ಆವೇಶದ ಮಾತುಗಳಿಗೆ ಪ್ರತಿಕ್ರಿಯಿಸಿರುವ ಇರಾನ್‌ ವಿದೇಶಾಂಗ ಸಚಿವ ಅಗರಾಚಿ, ಟೆಹರಾನ್‌ ಅಮೆರಿಕವನ್ನು ಮಾತ್ರ ಗುರಿಯಾಗಿಸಿದೆ. ಅಮೆರಿಕಗೆ ಇರಾನ್‌ ಸೇರಿದಂತೆ ಯಾವ ಅರಬ್‌ ರಾಷ್ಟ್ರಗಳ ಮೇಲೂ ಕಿಂಚಿತ್ತೂ ಗೌರವವಿಲ್ಲ. ಅಮೆರಿಕದ ರಕ್ಷಣೆಗೆ ಯಾರೂ ಬರಲಾರರು ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...