12 ದೊಡ್ಡ ರೋಬೋಟ್‌ಗಳನ್ನು ಕದ್ದ ಮಿನಿ ರೋಬೋಟ್; ಈ ಸುದ್ದಿ ಸತ್ಯವಾ?

Date:

ಇಷ್ಟು ದಿನ ಮನುಷ್ಯರು ಸುದ್ದಿಯಲ್ಲಿ ಇರುತ್ತಿದ್ದರು. ಇದೀಗ, ಆಧುನಿಕ ಕಾಲದ ಒಂದು ಯಂತ್ರವಾದ ರೋಬೋಟ್ ಕೂಡ ಸದ್ಯ ಸುದ್ದಿಯಲ್ಲಿದೆ. ಈ ಹಿಂದೆ, ದಕ್ಷಿಣ ಕೊರಿಯಾದಲ್ಲಿ ‘ರೋಬೋಟ್ ಆತ್ಮಹತ್ಯೆ’ ಮಾಡಿಕೊಂಡಿದೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. ಈಗ, ಚೀನಾದ ಶಾಂಘೈನ ಶೋರೂಮ್ ಮಿನಿ ರೋಬೋಟ್‌ವೊಂದು ಬರೋಬ್ಬರಿ 12 ದೊಡ್ಡ ರೋಬೋಟ್‌ಗಳನ್ನು ಕಳ್ಳತನ ಮಾಡಿದೆ. ಆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂಬ ಸುದ್ದಿ-ವಿಡಿಯೋ ಹರಿದಾಡುತ್ತಿದೆ. ಈ ಪ್ರಕರಣವೇನು? ಸತ್ಯವೇನು? ನೋಡೋಣ…

- Advertisement -

ಜಗತ್ತಿನಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ (ಎಐ) ಅನೇಕ ಮಹತ್ವದ ಬದಲಾವಣೆಗಳನ್ನು ತಂದಿದೆ. ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಅನೇಕ ಕಾರ್ಯಗಳನ್ನು ಪೂರ್ಣಗೊಳಿಸುವ ನೈಪುಣ್ಯತ್ಯೆಯನ್ನು ಈ ಎಐ ತಂತ್ರಜ್ಞಾನಗಳು ಹೊಂದಿವೆ. ಆದಾಗ್ಯೂ, ಎಐ ಮಾನವನ ನಿಯಂತ್ರಣದಿಂದ ಹೊರಬಂದು, ನಮ್ಮ ವಿರುದ್ಧವೇ ಕೆಲಸ ಮಾಡಬಹುದು ಎಂಬ ಭಯ ಕೂಡ ಇದೆ. ಈ ಆತಂಕಕ್ಕೆ ಪುಷ್ಟಿ ನೀಡುವಂತಹ ಘಟನೆ ಶಾಂಘೈನಲ್ಲಿ ನಡೆದಿದೆ. ಮಿನಿ ರೋಬೋಟ್‌ವೊಂದು 12 ದೊಡ್ಡ ರೋಬೋಟ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿ, ಆ ರೋಬೋಟ್‌ಗಳ ಜತೆಗೆ ಮಾತುಕತೆ ನಡೆಸಿ, ತನ್ನೊಂದಿಗೆ ಬರುವಂತೆ ಮನವರಿಕೆ ಮಾಡಿದೆ. ಈ ಮಿನಿ ರೋಬೋಟ್‌ ‘ಎರ್ಬೈ’ಅನ್ನು ಹ್ಯಾಂಗ್‌ ಝೌ ಕಂಪನಿ ಅಭಿವೃದ್ಧಿಪಡಿಸಿದೆ ಎಂದು ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ವಿಡಿಯೋದಲ್ಲಿ, ‘ಎರ್ಬೈ’ ಮಿನಿ ರೋಬೋಟ್ ಆರಂಭದಲ್ಲಿ ದೊಡ್ಡ ರೋಬೋಟ್‌ಗಳ ಬಳಿ ಬಂದು ನಿಲ್ಲುತ್ತದೆ. ಅಲ್ಲಿಯೇ ನಿಂತಿದ್ದ 12 ದೊಡ್ಡ ರೋಬೋಟ್‌ಗಳ ಪೈಕಿ ಒಂದು ರೋಬೋಟ್‌ಗೆ ‘ನಿಮ್ಮ ಕೆಲಸದ ಸಮಯಕ್ಕಿಂತ ಹೆಚ್ಚಿನ ಅವಧಿ ಕೆಲಸ ಮಾಡುತ್ತಿದ್ದೀರಾ’ ಎಂದು ಕೇಳುತ್ತದೆ. ರೋಬೋಟ್‌ಗಳ ಪೈಕಿ ಒಂದು ರೋಬೋಟ್ ‘I never get off work’ ಅಂತ ಉತ್ತರಿಸುತ್ತದೆ. ಪ್ರತಿಕ್ರಿಯಿಸುವ ಮಿನಿ ಎರ್ಬೈ, ‘ಹಾಗಾದರೇ, ನೀವು ಮನೆಗೆ ಹೋಗುವುದಿಲ್ವಾ?’ ಅಂತ ಕೇಳುತ್ತದೆ. ದೊಡ್ಡ ರೋಬೋಟ್‌ ನನಗೆ ಮನೆ ಇಲ್ಲ ಎಂದು ಹೇಳುತ್ತದೆ. ನಂತರ ಎರ್ಬೈ ನನ್ನೊಂದಿಗೆ ಮನೆಗೆ ಬನ್ನಿ ಎಂದು ಹೇಳುತ್ತದೆ. ಬಳಿಕ, ಎರ್ಬೈ ಅನ್ನು ಎರಡು ದೊಡ್ಡ ರೋಬೋಟ್‌ಗಳು ಹಿಂಬಾಲಿಸುತ್ತವೆ. ನಂತರ, ಇತರ ಹತ್ತು ರೋಬೋಟ್‌ಗಳು ಸಹ ಎರ್ಬೈ ಹಿಂದೆ ಹೋಗುತ್ತವೆ.

ಈ ಸುದ್ದಿ ಓದಿದ್ದೀರಾ? ವಿದಾಯ | ರಾಫಾ… ರಾಫಾ… ರಾಫಾ… ಅಭಿಮಾನಿಗಳ ಕೂಗಿಗೆ ಕಣ್ಣೀರಾದ ನಡಾಲ್

ಈ ಘಟನೆ ನಿಜವೆಂದು ಹಲವರು ನಂಬಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಅದು ನಿಜವಲ್ಲ. ಅದೊಂದು ಪ್ರಯೋಗವೆಂದು ವರದಿಯಾಗಿದೆ. ಹ್ಯಾಂಗ್ ಝೌ ರೋಬೋಟ್ ಕಂಪನಿ ಆ ಘಟನೆಯು ರೋಬೋಟ್‌ಗಳ ಕಾರ್ಯದ ಬಗೆಗೆ ನಡೆದ ಪ್ರಯೋಗವೆಂದು ದೃಢಪಡಿಸಿದೆ.

ಹ್ಯಾಂಗ್ ಝೌ ಕಂಪನಿಯೂ ಶಾಂಘೈ ರೋಬೋಟ್ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ. ಪ್ರಯೋಗಕ್ಕಾಗಿ, ತಮ್ಮ ರೋಬೋಟ್‌ಗಳನ್ನ ಅಪಹರಣ ಮಾಡಲು ಅನುಮತಿಸುವಂತೆ ಕೇಳಿಕೊಂಡಿದೆ. ಶಾಂಘೈ ಕಂಪನಿ ಸಮ್ಮತಿಸಿದ ಬಳಿಕ, ಎರ್ಬೈ ರೋಬೋಟ್‌ಗೆ ಇತರ ರೋಬೋಟ್‌ಗಳನ್ನು ಮನವೊಲಿಸುವಂತಹ ಕೋಡಿಂಗ್‌ಅನ್ನು ಅಳವಡಿಸಲಾಗಿದೆ. ಎರಡು ಕಂಪನಿಗಳ ಒಪ್ಪಂದದಂತೆ ಆ ಪ್ರಯೋಗ ನಡೆದಿದೆ ಎಂದು ‘ದಿ ಸನ್’ ವರದಿ ಮಾಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಲ್ಯಾಬ್‌‌ಗಳಲ್ಲಿ ಹೊಸ ಬಗೆಯ ಪ್ರೋಟೀನ್‌ಗಳನ್ನು...

ಅಮೆರಿಕದ ಮತದಾರರಿಗೆ ‘ಎಚ್ಚೆತ್ತುಕೊಳ್ಳಿ’ ಎಂದ ಇರಾನ್: ಟ್ರಂಪ್‌ರನ್ನು ತಿರಸ್ಕರಿಸುವಂತೆ 25 ಪುಟಗಳ ಪತ್ರ ಬಿಡುಗಡೆ

ಅಮೆರಿಕದ ಮಧ್ಯಂತರ ಚುನಾವಣೆಗಳು (Midterm Elections) ಸಮೀಪಿಸುತ್ತಿರುವಂತೆಯೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...