ಅಮೆರಿಕ-ಇರಾನ್ ಯುದ್ಧ ಅಂತ್ಯ: ನೀರಿನೊಳಗಿನ ಸ್ಫೋಟಕ ಪತ್ತೆ ಹಚ್ಚಿ ತೆರವುಗೊಳಿಸುವುದೇ ಸವಾಲು!

Date:

ಅಮೆರಿಕ ಮತ್ತು ಇರಾನ್ ನಡುವಿನ ಸುಮಾರು 107 ದಿನಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ಐತಿಹಾಸಿಕ ಒಪ್ಪಂದವು ಜೂನ್ 15ರಂದು ಅಧಿಕೃತವಾಗಿ ಪ್ರಕಟವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನ ಪ್ರಧಾನಿ ಶಾಬಾಜ಼್ ಷರೀಫ್ ಯುದ್ಧ ಅಂತ್ಯದ ಘೋಷಣೆಯನ್ನು ಮಾಡಿದ್ದಾರೆ.

- Advertisement -

ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಈ ಶಾಂತಿ ಒಪ್ಪಂದ ನಡೆದಿದ್ದು, ಬರುವ ಶುಕ್ರವಾರ (ಜೂನ್ 19) ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಉಭಯ ದೇಶಗಳು ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಹಾಕಲಿವೆ. ಇರಾನ್‌ನ ಅಧಿಕೃತ ರಾಷ್ಟ್ರೀಯ ಟಿವಿ ಚಾನೆಲ್ ಮತ್ತು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕೂಡ ಒಪ್ಪಂದದ ಕರಡು ಪೂರ್ಣಗೊಂಡಿರುವುದನ್ನು ಸ್ಪಷ್ಟಪಡಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಇದನ್ನು ಓದಿದ್ದೀರಾ? ಇರಾನ್-ಅಮೆರಿಕ ‘ಕದನ ವಿರಾಮ’ ಒಪ್ಪಂದವಲ್ಲ, ಟ್ರಂಪ್ ಶರಣಾಗತಿ: ಅಮೆರಿಕ ಸಂಸದರ ಟೀಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, ಈ ಬಗ್ಗೆ ಪೋಸ್ಟ್ ಮಾಡಿದ್ದು, “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜತೆಗಿನ ಒಪ್ಪಂದ ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶಾಬಾಜ಼್ ಷರೀಫ್ ಅವರು ಮಾತುಕತೆಯ ಅಂತಿಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಲೆಬನಾನ್ ಸೇರಿದಂತೆ ಎಲ್ಲ ರಂಗಗಳಲ್ಲಿ ತಕ್ಷಣದಿಂದಲೇ ಮಿಲಿಟರಿ ಕಾರ್ಯಾಚರಣೆಗಳನ್ನು ಖಾಯಂ ಆಗಿ ಸ್ಥಗಿತಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.

ನೀರಿನೊಳಗಿನ ಸ್ಫೋಟಕ ಪತ್ತೆ ಹಚ್ಚಿ ತೆರವುಗೊಳಿಸುವುದೇ ಸವಾಲು!

ಒಪ್ಪಂದದ ಭಾಗವಾಗಿ ಜಗತ್ತಿನ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹೋರ್ಮುಜ಼್ ಜಲಸಂಧಿಯನ್ನು ಮುಕ್ತಗೊಳಿಸಲು ತೀರ್ಮಾನಿಸಲಾಗಿದೆ. ಆದರೆ ಈಗ ಯುದ್ಧದ ಸಂದರ್ಭದಲ್ಲಿ ನೀರೊಳಗೆ ಹರಡಲಾಗಿರುವ ಸ್ಫೋಟಕಗಳನ್ನು ಪತ್ತೆ ಹೆಚ್ಚಿ ತೆರವುಗೊಳಿಸುವುದೇ ಸವಾಲಾಗಿದೆ ಎನ್ನುತ್ತಾರೆ ತಜ್ಞರು.

ನೀರಿನೊಳಗಿನ ಸ್ಫೋಟಕಗಳನ್ನು ತೆರವುಗೊಳಿಸುವುದು ಜಗತ್ತಿನ ಅತ್ಯಂತ ಸಂಕೀರ್ಣ ಮತ್ತು ಅಪಾಯಕಾರಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇರಾನ್ ಮತ್ತು ಅಮೆರಿಕ ನೌಕಾಪಡೆಗಳು ಬಳಸಿರುವ ಆಧುನಿಕ ಸ್ಫೋಟಕಗಳು ಕೇವಲ ಕಣ್ಣಿಗೆ ಕಾಣುವ ಸರಪಳಿ ಬಾಂಬ್‌ಗಳಲ್ಲ. ಇವುಗಳಲ್ಲಿ ಹಲವು ವಿಧಗಳಿವೆ.

‘ಮ್ಯಾಗ್ನೆಟಿಕ್ ಮತ್ತು ಅಕೌಸ್ಟಿಕ್ ಮೈನ್ಸ್’ ಸ್ಫೋಟಕ ಹಡಗಿನ ಕಬ್ಬಿಣದ ಬಾಡಿ ಅಥವಾ ಇಂಜಿನ್‌ನ ಶಬ್ದವನ್ನು ಗ್ರಹಿಸಿ ಸ್ವಯಂಚಾಲಿತವಾಗಿ ಸ್ಫೋಟಗೊಳ್ಳುತ್ತವೆ. ಇನ್ನು ‘ಪ್ರೆಶರ್ ಮೈನ್ಸ್’ ನೀರಿನ ಒತ್ತಡದ ವ್ಯತ್ಯಾಸವನ್ನು ಗುರುತಿಸಿ ಸ್ಫೋಟಗೊಳ್ಳುವ ತಂತ್ರಜ್ಞಾನವನ್ನು ಹೊಂದಿದೆ. ಈಗ ಯುದ್ಧ ನಿಂತ ಬಳಿಕ ಜಲಮಾರ್ಗದಲ್ಲಿ ಹಡಗುಗಳು ಸಾಗಬೇಕಾದರೆ ಆ ಸ್ಫೋಟಕಗಳ ತೆರವು ಅಗತ್ಯ. ಈ ಸ್ಪೋಟಕಗಳನ್ನು ಪತ್ತೆ ಹಚ್ಚುವುದೇ ಒಂದು ದೊಡ್ಡ ಸವಾಲು!

ಇದನ್ನು ಓದಿದ್ದೀರಾ? ಇರಾನ್‌-ಅಮೆರಿಕ ಶಾಂತಿ ಒಪ್ಪಂದ; ಪಾಕ್ ಮಧ್ಯಸ್ಥಿಕೆಗೆ ಟೆಹ್ರಾನ್ ಶ್ಲಾಘನೆ

ಹೋರ್ಮುಜ಼್ ಜಲಸಂಧಿಯು ಕಿರಿದಾದ ಮತ್ತು ಅತ್ಯಂತ ಆಳವಾದ ಜಲಮಾರ್ಗ. ನೀರಿನ ಆಳದಲ್ಲಿರುವ ಬಲವಾದ ಪ್ರವಾಹಗಳು ಈಗಾಗಲೇ ಹರಡಿರುವ ಸ್ಫೋಟಕಗಳನ್ನು ಅವುಗಳ ಮೂಲ ಸ್ಥಾನದಿಂದ ಬೇರೆಡೆಗೆ ತೇಲಿಹೋಗುವಂತೆ ಮಾಡಿರುತ್ತವೆ. ಹೀಗಾಗಿ, ಎಲ್ಲೆಲ್ಲಿ ಸ್ಫೋಟಕಗಳಿವೆ ಎಂಬುದನ್ನು ಮ್ಯಾಪ್ ಮಾಡುವುದು ಕಷ್ಟಸಾಧ್ಯ ಮತ್ತು ಇದಕ್ಕೆ ನಿಖರವಾದ ಸೋನಾರ್ ತಂತ್ರಜ್ಞಾನ ಬಳಸಿ ಇಡೀ ಜಲಪ್ರದೇಶವನ್ನು ತಡಕಾಡಬೇಕಾಗುತ್ತದೆ. ಇದು ಅತಿ ನಾಚೂಕಾಗಿ ಮಾಡುವ ಕೆಲಸ. ಒಂಚೂರು ಎಡವಿದರೂ ಸ್ಫೋಟಕ ಸ್ಫೋಟಗೊಂಡು ಹಾನಿ ಉಂಟಾಗಬಹುದು.

ವಿಮಾ ಕಂಪನಿಗಳು ಮತ್ತು ಅಂತಾರಾಷ್ಟ್ರೀಯ ಹಡಗು ಸಾರಿಗೆ ಸಂಸ್ಥೆಗಳು ಇಡೀ ಜಲಮಾರ್ಗ ಶೇಕಡ 100ರಷ್ಟು ಸುರಕ್ಷಿತ ಎಂದು ಪ್ರಮಾಣೀಕರಿಸುವವರೆಗೆ ತಮ್ಮ ಕೋಟ್ಯಂತರ ರೂಪಾಯಿ ಮೌಲ್ಯದ ತೈಲ ಟ್ಯಾಂಕರ್‌ಗಳನ್ನು ಈ ಮಾರ್ಗದಲ್ಲಿ ಚಲಾಯಿಸಲು ಬಿಡಲ್ಲ. ಅಮೆರಿಕ ಮತ್ತು ಇರಾನ್‌ನ ಜಂಟಿ ತಾಂತ್ರಿಕ ತಂಡಗಳು ಈ ಜಲಮಾರ್ಗವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಕನಿಷ್ಠ ಕೆಲವು ವಾರಗಳಿಂದ ಒಂದೆರಡು ತಿಂಗಳುಗಳ ಕಾಲಾವಕಾಶ ತೆಗೆದುಕೊಳ್ಳಬಹುದು ಎಂದು ಅಂತಾರಾಷ್ಟ್ರೀಯ ನೌಕಾ ವಿಶ್ಲೇಷಕರು ಅಂದಾಜಿಸಿದ್ದಾರೆ. ಹಾಗಾಗಿ ಯುದ್ಧ ನಿಂತ ಕೂಡಲೇ ಹೋರ್ಮುಜ಼್ ಜಲಸಂಧಿ ಮುಕ್ತವಾಗದು. ಇನ್ನೂ ಹಲವು ದಿನಗಳು ಬೇಕಾಗುತ್ತದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...

ಬೀದರ್‌ | ವಸತಿ ಶಾಲೆಗಳ ಪ್ರಾಂಶುಪಾಲರು, ಮೇಲ್ವಿಚಾರಕರ ವರ್ಗಾವಣೆಗೆ ಡಿವಿಪಿ ಆಗ್ರಹ

ಬೀದರ್ ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ...

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...