ರೂಪದರ್ಶಿ ಉದ್ಯಮದಲ್ಲೂ ಎಪ್‌ಸ್ಟೀನ್‌ ಕೀಚಕ ಕೃತ್ಯ: ನೂರಾರು ಇಮೇಲ್‌ಗಳ ಪುರಾವೆ!

Date:

ಅಮೆರಿಕದ ಫೆಡರಲ್‌ ಬ್ಯುರೊ ಕಲೆ ಹಾಕಿದ ಮಾಹಿತಿಯ ಪ್ರಕಾರ ಎಪ್‌ಸ್ಟೀನ್‌ ಸುಮಾರು ಸಾವಿರಕ್ಕೂ ಅಧಿಕ ಮಹಿಳಾ ಮಾಡೆಲ್‌ಗಳು ಸೇರಿದಂತೆ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂಬ ಆಘಾತಕಾರಿ ವಿಷಯ ಹೊರಬಂದಿದೆ.

- Advertisement -

ಹದಿನೆಂಟರ ಹರೆಯದ ರೂಪದರ್ಶಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಎಪ್ಸ್ಟೀನ್ ನನ್ನು ಪ್ರೇರೇಪಿಸಿದ ಇಮೇಲ್‌ ಸಂದೇಶಗಳು ಫ್ಯಾಶನ್ ಮತ್ತು ರೂಪದರ್ಶಿ ಉದ್ಯಮಕ್ಕೆ ಕಳಂಕ ಅಂಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

ರಾಮ್‌ಸೆಯ್‌ ಎಲ್‌ಕೊಲಿ ಎಂಬ ಮಾಡೆಲ್‌ ಏಜೆಂಟ್‌ ಎಪ್‌ಸ್ಟೀನ್‌ಗೆ ದಶಕಗಳ ಕಾಲ ನೂರಾರು ಇಮೇಲ್‌ ಸಂದೇಶಗಳನ್ನು ಕಳುಹಿಸಿದ್ದಾನೆ. ಈ ಸಂದೇಶಗಳಲ್ಲಿ ಸ್ತ್ರೀಯರ ದೇಹ ಮತ್ತು ಅವರ ಲೈಂಗಿಕ ವರ್ತನೆಗಳ ಬಗ್ಗೆ ಎಗ್ಗಿಲ್ಲದೆ ಚರ್ಚಿಸಿದ್ದಾರೆ. ಇವರೀರ್ವರು ಸೇರಿಕೊಂಡು ಫ್ಯಾಶನ್‌ ಹಾಗೂ ಮಾಡೆಲ್‌ ಇಂಡಸ್ಟ್ರಿಯನ್ನು ತಡಕಾಡಿದರೆ ಇನ್ನಷ್ಟು ಮಹಿಳೆಯರನ್ನು ಭೇಟಿ ಆಗಬಹುದು ಎಂದು ಮಾತನಾಡಿಕೊಂಡಿದ್ದಾರೆ.

2011ರದ್ದು ಎನ್ನಲಾಗಿರುವ ಸಂದೇಶವೊಂದರಲ್ಲಿ 20ರ ಪ್ರಾಯದ ರೂಪದರ್ಶಿಯೊಬ್ಬಳನ್ನು ಹಣದಾಹಿ ಎಂದು ರಾಮ್‌ಸೆಯ್‌ ಬಣ್ಣಿಸಿದ್ದಾನೆ. ʼಡಿಯರ್‌ ಜೆಫ್ರಿ ನೀನೊಮ್ಮೆ ಅವಳನ್ನು ಹಾಸಿಗೆಗೆ ಕರೆಸಿಕೊʼ ಎಂಬ ಅಸಭ್ಯ ಸಂದೇಶ ಕಳಿಸಿದ್ದಾನೆ.

ಎಲ್‌ಕೊಲಿ ಬಿಬಿಸಿಗೆ ಹೇಳಿಕೆ ನೀಡಿದ್ದು, ಕೆಲವು ಇಮೇಲ್ ಸಂದೇಶಗಳಲ್ಲಿ ತಾನು ಬಳಸಿರುವ ಭಾಷೆ ಮತ್ತು ಎಪ್‌ಸ್ಟೀನ್‌ ಜೊತೆಗಿನ ನಂಟಿನ ಕುರಿತು ತನಗೆ ವಿಷಾದವಿದೆ ಎಂದಿದ್ದಾನೆ. ಹೂಡಿಕೆದಾರ ಜೆಫ್ರಿ ಎಪ್‌ಸ್ಟೀನ್ ಸ್ತ್ರೀ ಪೀಡಕ ಎಂಬ ಅರಿವು ತನಗಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ಪ್ರಸ್ತುತ ಎಲ್‌ಕೊಲಿಯು ತಾನೊಬ್ಬ ಮಾನವಶಾಸ್ತ್ರಜ್ಞ ಹಾಗೂ ಸಂಗೀತಗಾರ, ಮೊನೊಟ್ರೊನಿಕ್‌ ಎಂಬ ಮ್ಯೂಸಿಕ್‌ ಬ್ಯಾಂಡ್‌ನ ಸಂಸ್ಥಾಪಕ ಎಂದು ಗುರುತಿಸಿಕೊಂಡಿದ್ದಾನೆ. ಆದರೆ 2011ರಲ್ಲಿ ಈತ ಒಬ್ಬ ಮಾಡೆಲ್‌ ಏಜೆಂಟಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂಬುದಕ್ಕೆ ಪುರಾವೆಗಳು ದೊರೆತಿವೆ.‌

ಇದನ್ನೂ ಓದಿ.. ಎಪ್‌ಸ್ಟೀನ್ ಫೈಲ್ಸ್‌ | ಟ್ವೀಟ್ ಡಿಲೀಟ್‌ಗೆ ಖುದ್ದು ಪುರಿಯಿಂದ ಬೆದರಿಕೆ! ‘ಥಗ್ ಆರ್ಮಿಗೆ ಹೆದರಲ್ಲ’ ಎಂದ ಮೊಯಿತ್ರಾ

ಡಿಪಾರ್ಟ್ಮೆಂಟ್‌ ಆಫ್‌ ಜಸ್ಟಿಸ್‌ ಇತ್ತೀಚಿಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಎಲ್‌ಕೊಲಿಯು 2009 ರಿಂದ ಜೆಫ್ರಿಯೊಡನೆ ಒಡನಾಟ ಇಟ್ಟುಕೊಂಡಿದ್ದ. ಎಪ್‌ಸ್ಟೀನ್‌ ಮಾಡುತ್ತಿದ್ದ ಕೀಚಕ ಕೃತ್ಯಗಳ ಪಾಲುದಾರನಾಗಿದ್ದ ಎಂಬ ಸತ್ಯ ಬಯಲಾಗಿದೆ. 2019, ಅಂದರೆ ಎಪ್‌ಸ್ಟೀನ್‌ ಕೊನೆಯ ದಿನಗಳವರೆಗೂ ಈತ ಮಹಿಳಾ ಮಾಡೆಲ್‌ಗಳ ಕುರಿತ ಮಾಹಿತಿಯನ್ನು ಜೆಫ್ರಿಗೆ ಒದಗಿಸುವ ವ್ಯಾಪಾರದಲ್ಲಿದ್ದ ಎಂಬ ಅಂಶ ತಿಳಿದು ಬಂದಿದೆ.

epstein kolaz

ಅಂತಾರಾಷ್ಟ್ರೀಯ ರೂಪದರ್ಶಿ ಉದ್ಯಮದೊಂದಿಗೆ ಎಪ್‌ಸ್ಟೀನ್ ಸಂಪರ್ಕಜಾಲ ವ್ಯಾಪಿಸಿಕೊಂಡ ಕುರಿತಾಗಿ ಈಗ ದೊರೆತ ಇಮೇಲ್‌ ಸಂದೇಶಗಳು ಬೆಳಕು ಚೆಲ್ಲಿದ್ದು, ಈ ಜಾಲದಿಂದಲೇ ಮಹಿಳೆಯರು ಹಾಗೂ ಮಕ್ಕಳ ಕುರಿತ ಖಾಸಗಿ ಮಾಹಿತಿ ಪಡೆಯುತ್ತಿದ್ದ ಎಂಬುದು ತಿಳಿದು ಬಂದಿದೆ.

ಅಮೆರಿಕಾದ ಫೆಡರಲ್‌ ಬ್ಯುರೊ ಕಲೆ ಹಾಕಿದ ಮಾಹಿತಿಯ ಪ್ರಕಾರ ಎಪ್‌ಸ್ಟೀನ್‌ ಸುಮಾರು ಸಾವಿರಕ್ಕೂ ಅಧಿಕ ಮಹಿಳಾ ಮಾಡೆಲ್‌ಗಳು ಸೇರಿದಂತೆ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂಬ ಆಘಾತಕಾರಿ ವಿಷಯ ಹೊರಬಂದಿದೆ.

ವಿಕ್ಟೋರಿಯಾ ಸೀಕ್ರೆಟ್‌, ಲಿಂಗೇರಿ ಚೈನ್‌ ಮುಂತಾದ ಪ್ರಸಿದ್ಧ ಫ್ಯಾಷನ್‌ ಬ್ರಾಂಡ್‌ಗಳ ಮಾಡೆಲ್‌ಗಳೊಂದಿಗೆ ಎಪ್‌ಸ್ಟೀನ್‌ನ ಸಂಪರ್ಕ ಜೋಡಿಸುವ ಕುರಿತ ಸಂಭಾಷಣೆ ಎಲ್‌ಕೊಲಿಯ ಇಮೇಲ್‌ಗಳಲ್ಲಿದೆ. ಎಪ್‌ಸ್ಟೀನ್‌ನ ಪ್ರಮುಖ ಗ್ರಾಹಕರಾದ ಲೆಸ್‌ವೆಕ್ಸ್‌ನೆರ್‌ ಹಾಗೂ ವೆರವಾಂಗ್‌ ಲೇಬೆಲ್‌ ಬ್ರಾಂಡ್‌ಗಳ ಮಾಡೆಲ್‌ ಜೊತೆಗೂ ಜೆಫ್ರಿ ಸಂಪರ್ಕ ಹೊಂದಿದ್ದ ಎಂಬುದು ತಿಳಿದು ಬಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...

ಮಂಗಳೂರು | ಕಾರಿಡಾರ್‌ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ

ಮಂಗಳೂರಿನ ಪಾಂಡೇಶ್ವರ ಸಮೀಪದ ಎಮ್ಮೆಕೆರೆ ಕ್ರಾಸ್ ಬಳಿಯ ರಾಮಲಕ್ಷ್ಮೀ ಹಾಲ್ ಸಭಾಭವನದಲ್ಲಿ...