ಹಂಗೇರಿಯನ್ ಕಾದಂಬರಿಕಾರ ಲಾಸ್ಲೋ ಕ್ರಾಸ್ನಹೊರ್ಕಾಯಿಗೆ 2025ರ ಸಾಹಿತ್ಯ ನೊಬೆಲ್‌; ಸ್ಪರ್ಧೆಯಲ್ಲಿದ್ದರು ರುಶ್ದಿ, ಘೋಷ್‌

Date:

2025ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಹಂಗೇರಿಯ ಖ್ಯಾತ ಲೇಖಕ ‘ಲಾಸ್ಲೋ ಕ್ರಾಸ್ನಹೊರ್ಕಾಯಿ‘ ಅವರಿಗೆ ಸಂದಿದೆ. “for his compelling and visionary oeuvre that, in the midst of apocalyptic terror, reaffirms the power of art” ಕೃತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ‘ಸ್ವೀಡಿಷ್ ಅಕಾಡೆಮಿ’ ಘೋಷಿಸಿದೆ.

- Advertisement -

ಕ್ರಾಸ್ನಹೊರ್ಕಾಯಿ ಅವರನ್ನು ಆಧುನಿಕ ಯೂರೋಪಿಯನ್ ಸಾಹಿತ್ಯದ ಅತ್ಯಂತ ಗಂಭೀರ ಮತ್ತು ದೃಶ್ಯಮಯ ಧ್ವನಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಈ ಬಾರಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತದ ಅಮಿತಾವ್ ಘೋಷ್ ಹಾಗೂ ಸಲ್ಮಾನ್ ರುಶ್ದಿ ಕೂಡ ಇದ್ದರು. ಇಬ್ಬರೂ ದೀರ್ಘಕಾಲದಿಂದಲೇ ವಿಶ್ವ ಸಾಹಿತ್ಯ ವೇದಿಕೆಯಲ್ಲಿ ಪ್ರಭಾವ ಬೀರಿದ ಭಾರತೀಯ ಮೂಲದ ಲೇಖಕರು. ಘೋಷ್ ಅವರ The Shadow Lines, The Hungry Tide ಮುಂತಾದ ಕೃತಿಗಳು ಭಾರತೀಯ ಇತಿಹಾಸ, ವಲಸೆ, ಮತ್ತು ಪರಿಸರ ಚಿಂತನೆಗಳ ಕುರಿತ ಆಳವಾದ ಅನ್ವೇಷಣೆಗೆ ಹೆಸರುವಾಸಿಯಾಗಿವೆ. ರಶ್ದಿ ಅವರ Midnight’s Children ಮತ್ತು The Satanic Verses ಕೃತಿಗಳು ಭಾರತೀಯ ಇಂಗ್ಲಿಷ್ ಸಾಹಿತ್ಯದ ದಿಕ್ಕು ತೋರಿಸಿದ ಕೃತಿಗಳೆಂದು ಪರಿಗಣಿಸಲಾಗುತ್ತದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ

ಭಾರತದಿಂದ ಇಲ್ಲಿಯವರೆಗೂ ‘ರವೀಂದ್ರನಾಥ ಟ್ಯಾಗೋರ್’ (1913) ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಲೇಖಕರಾಗಿದ್ದಾರೆ. ಅವರ ‘ಗೀತಾಂಜಲಿ’ ಕೃತಿಗೆ ನೊಬೆಲ್‌ ಪ್ರಶಸ್ತಿ ದೊರಕಿತ್ತು. ನಂತರದ ಶತಮಾನದಲ್ಲಿ ಹಲವಾರು ಭಾರತೀಯ ಲೇಖಕರು ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಪಡೆದರೂ, ನೊಬೆಲ್ ಗೌರವಕ್ಕೆ ಪಾತ್ರವಾಗಿಲ್ಲ.

ಫ್ರೆಂಚ್ ಕವಿ ಸುಲ್ಲಿ ಪ್ರುಧೋಮ್ 1901ರಲ್ಲಿ ಮೊದಲ ನೊಬೆಲ್ ವಿಜೇತರಾಗಿದ್ದು, ಸ್ವೀಡನ್‌ನ ಸೆಲ್ಮಾ ಲಾಗರ್ಲೋಫ್ 1909ರಲ್ಲಿ ಮೊದಲ ಮಹಿಳೆಯಾಗಿದ್ದರು. ಇಲ್ಲಿಯವರೆಗೂ 18 ಮಹಿಳೆಯರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ...

ಸೌಜನ್ಯ ಪ್ರಕರಣದ ಮರುತನಿಖೆಗೆ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ

'ಸೌಜನ್ಯ ಪ್ರಕರಣ'ದ ಮರುತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ, ರಾಜ್ಯ...

CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧ; ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

CNN, MS NOW ಮತ್ತು Politico ಸುದ್ದಿ‌ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ...