ಕೋವಿಡ್ ವ್ಯಾಕ್ಸಿನ್ | 217 ಡೋಸ್ ಪಡೆದ ವೃದ್ಧ; ತಜ್ಞರು ಹೇಳುವುದೇನು?

Date:

ಜರ್ಮನಿಯಲ್ಲಿ 62 ವಯಸ್ಸಿನ ವೃದ್ಧರೊಬ್ಬರು ಕಳೆದ 29 ತಿಂಗಳಲ್ಲಿ ಬರೋಬ್ಬರಿ 217 ಕೋವಿಡ್ ಲಸಿಕೆ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಈ ಲಸಿಕೆ ಪಡೆದಿರುವುದು ಯಾವುದೇ ವೈದ್ಯಕೀಯ ಪ್ರಯೋಗವಾಗಿರಲಿಲ್ಲ. ಈ ವ್ಯಕ್ತಿಯು ತನ್ನ ‘ಖಾಸಗಿ ಕಾರಣಕ್ಕಾಗಿ’ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

- Advertisement -

ಜೂನ್ 2021ರಿಂದ ನವೆಂಬರ್ 2023ರವರೆಗೆ ಕೋವಿಡ್ ಲಸಿಕೆಯ 217 ಡೋಸ್‌ಗಳನ್ನು ಪಡೆದಿದ್ದಾರೆ. ಆದರೆ ಖಾಸಗಿ ಹಕ್ಕು ಕಾರಣ ಈ ವ್ಯಕ್ತಿಯ ಹೆಸರು, ಇತರೆ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಒಟ್ಟು 217 ಡೋಸ್‌ಗಳಲ್ಲಿ 134 ಅಧಿಕೃತವಾಗಿ ಪಡೆದಿದ್ದರೆ, ಇನ್ನುಳಿದ ಡೋಸ್‌ಗಳನ್ನು ಸ್ವತಃ ಹಾಕಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಇನ್ನು ಈ ವ್ಯಕ್ತಿ ನಿರಂತರವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿರುವುದು ಮಾತ್ರವಲ್ಲದೆ ಕಳೆದ 29 ತಿಂಗಳ ಅವಧಿಯಲ್ಲಿ ಪದೇ ಪದೇ ಕೋವಿಡ್ ಪರೀಕ್ಷೆಯನ್ನು ಮಾಡಿಸಿದ್ದಾರೆ. ಈವರೆಗೂ ಈ ಲಸಿಕೆ ಸಂಬಂಧಿತ ಯಾವುದೇ ಅಡ್ಡ ಪರಿಣಾಮಗಳು ಈ ವ್ಯಕ್ತಿಯಲ್ಲಿ ಕಂಡುಬಂದಿಲ್ಲ ಮತ್ತು ಈ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿಲ್ಲ.

ತಜ್ಞರು ಹೇಳುವುದೇನು?

“ಇದು ಅಸಾಮಾನ್ಯ ಪ್ರಕರಣವಾಗಿದೆ. ಇಷ್ಟೊಂದು ಡೋಸ್‌ಗಳನ್ನು ಪಡೆದುಕೊಳ್ಳಲು ಯಾವುದೇ ಮಾರ್ಗಸೂಚಿಯಿಲ್ಲ. ಮೊದಲ ಮೂರು ಡೋಸ್‌ ಪಡೆದ ಬಳಿಕ ಈ ವ್ಯಕ್ತಿಯಲ್ಲಿ ಕೋವಿಡ್ ಪ್ರತಿರೋಧಕ ಶಕ್ತಿ ಹೆಚ್ಚಾದ ಕಾರಣ ಕೋವಿಡ್ ಬಂದಿರದೆ ಇರಬಹುದು. ಈ ವ್ಯಕ್ತಿಯ ನಡವಳಿಕೆ ಬಗ್ಗೆ ತಿಳಿದಿರದ ಕಾರಣ ಏನೇ ಬದಲಾವಣೆಯಾದರೂ ನಮಗೆ ತಿಳಿಯುತ್ತಿಲ್ಲ,” ಎಂದು ಸಿಎನ್‌ಎನ್‌ಗೆ ಅಲ್ಬರ್ಟ್ ಐನ್‌ಸ್ಟೀನ್ ವೈದ್ಯಕೀಯ ಕಾಲೇಜಿನ ಡಾ ಎಮಿಲಿ ಹ್ಯಾಪಿ ಮಿಲ್ಲರ್ ತಿಳಿಸಿದ್ದಾರೆ.

ಇನ್ನು ಫ್ರೆಡ್‌ರಿಚ್‌-ಅಲೆಕ್ಸಾಂಡರ್ ವಿಶ್ವವಿದ್ಯಾನಿಲಯದ ಸಂಶೋಧಕಿ ಡಾ ಕಿಲಿಯಾನ್ ಸೋಬರ್ ಹೇಳುವಂತೆ, “ನಾವು ಮೂರು ಬಾರಿ ಡೋಸ್ ಪಡೆದರೂ 200 ಬಾರಿ ಡೋಸ್ ಪಡೆದರೂ ಪ್ರಯೋಜನವೇನು ಬದಲಾಗುವುದಿಲ್ಲ.”

ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಂಶೋಧಕರು 2022ರ ಮೇ ತಿಂಗಳಲ್ಲಿ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಆ ಸಂದರ್ಭದಲ್ಲಾಗಲೇ ವೃದ್ಧ 213 ಕೋವಿಡ್‌ ಡೋಸ್‌ಗಳನ್ನು ಪಡೆದುಕೊಂಡಿದ್ದರು. ಈ ವ್ಯಕ್ತಿ ತನ್ನ ವೈದ್ಯಕೀಯ ಮಾಹಿತಿ, ಪರೀಕ್ಷೆಗಾಗಿ ರಕ್ತ, ಇತರೆ ದಾಖಲೆಗಳನ್ನು ನೀಡಲು ಒಪ್ಪಿಕೊಂಡಿದ್ದರು. ಈ ಪರೀಕ್ಷೆಗಳ ಸಂದರ್ಭದಲ್ಲೇ ವ್ಯಕ್ತಿ ಮತ್ತೆ ನಾಲ್ಕು ಕೋವಿಡ್‌ ಡೋಸ್ ಪಡೆದುಕೊಂಡಿದ್ದಾರೆ.

ಈ ವ್ಯಕ್ತಿ ನೀಡಿದ ರಕ್ತವನ್ನು ಮೂರು ಕೋವಿಡ್ ಲಸಿಕೆ ಡೋಸ್‌ಗಳನ್ನು ಪಡೆದಿರುವ 29 ಜನರ ರಕ್ತದೊಂದಿಗೆ ಪರೀಕ್ಷೆ ಮಾಡಲಾಗಿದೆ. ಈ ವ್ಯಕ್ತಿಯ 214 ಮತ್ತು 215ನೇ ಲಸಿಕೆ ಡೋಸ್ ಬಳಿಕ ದೇಹದಲ್ಲಿ ಪ್ರತಿರೋಧಕ ಶಕ್ತಿಯು ತೀವ್ರವಾಗಿ ಹೆಚ್ಚಾಗಿರುವುದು ತಿಳಿದುಬಂದಿದೆ. ಇಷ್ಟೊಂದು ಡೋಸ್‌ಗಳನ್ನು ಪಡೆದಿದ್ದರೂ ಕೂಡಾ ಯಾವುದೇ ದುಷ್ಪರಿಣಾಮಗಳು ಕಂಡುಬಂದಿಲ್ಲ.

 

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮರಣದಂಡನೆಗೆ ಜಾಗತಿಕ ತಡೆ; ವಿಶ್ವಸಂಸ್ಥೆಯ ನಿರ್ಣಯದ ವಿರುದ್ಧ ಮತ ಚಲಾಯಿಸಿದ ಭಾರತ!

ಮರಣದಂಡನೆ ಶಿಕ್ಷೆಗೆ ಜಾಗತಿಕವಾಗಿ ತಾತ್ಕಾಲಿಕ ತಡೆ ಹೇರುವಂತೆ ಎಲ್ಲ ರಾಷ್ಟ್ರಗಳಿಗೆ ಕರೆ...

ಆನ್‌ಲೈನ್‌ನಲ್ಲಿ 70 ಬಾಲಕಿಯರಿಗೆ ಲೈಂಗಿಕ ಶೋಷಣೆ: ಭಾರತೀಯ ವಿದ್ಯಾರ್ಥಿಗೆ ಯುಕೆಯಲ್ಲಿ 30 ವರ್ಷ ಜೈಲು!

ಬ್ರಿಟನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿ ಬಿಲಾಲ್ ಕಾಜಿಗೆ ಅಲ್ಲಿನ ನ್ಯಾಯಾಲಯವು 30 ವರ್ಷಗಳ...

ಎನ್‌ವಿಡಿಯಾ ಗೂಢಚರ್ಯೆ ಭೀತಿ: ಚೀನಾದ ಮೇಲಿನ ಚಿಪ್ ದಿಗ್ಬಂಧನ ವಿಫಲ, ಒಳಜಗಳಕ್ಕೆ ಇಳಿದ ಅಮೆರಿಕದ ಆಡಳಿತ ವರ್ಗ

ನವೆಂಬರ್ 18-19ರಂದು ಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ...

ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ನಿರ್ಣಯ ಪಾಸ್: ಭಾರತ ಸೇರಿ 151 ರಾಷ್ಟ್ರಗಳ ಬೆಂಬಲ

ಆಕ್ರಮಿತ ಪ್ಯಾಲೆಸ್ಟೈನ್ ಮತ್ತು ಸಿರಿಯಾದ ಗೋಲನ್ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಇಸ್ರೇಲ್...