ಸೌದಿ ಅರೇಬಿಯಾ | 50 ವರ್ಷಗಳ ಬಳಿಕ ಕಫಲಾ ವ್ಯವಸ್ಥೆ ರದ್ದು: ವಲಸಿಗರ ಹೊಸ ಹಕ್ಕುಗಳು ಜಾರಿ

Date:

ಕಾರ್ಮಿಕರನ್ನು ಉದ್ಯೋಗದಾತರು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳಲು ಅವಕಾಶ ನೀಡುವ ಕಫಲಾ ವ್ಯವಸ್ಥೆಯನ್ನು ಸೌದಿ ಅರೇಬಿಯಾ 50 ವರ್ಷಗಳ ಬಳಿಕ ಅಧಿಕೃತವಾಗಿ ಕೊನೆಗೊಳಿಸಿದೆ. ಹಾಗೆಯೇ ವಲಸೆ ಕಾರ್ಮಿಕರಿಗೆ ಹೊಸದಾಗಿ ಹಕ್ಕುಗಳನ್ನು ಜಾರಿ ಮಾಡಿದೆ.

- Advertisement -

2025ರ ಜೂನ್‌ನಲ್ಲಿಯೇ ಈ ಸುಧಾರಣೆಯನ್ನು ತರಲಾಗಿದ್ದು, ಸುಮಾರು 13 ಮಿಲಿಯನ್ ವಿದೇಶಿ ಕಾರ್ಮಿಕರಿಗೆ ಹೊಸದಾಗಿ ನಿಯಮ, ಹಕ್ಕುಗಳನ್ನು ಜಾರಿ ಮಾಡಲಾಗಿದೆ. ಈವರೆಗೆ ಮುಖ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ವಲಸೆ ಕಾರ್ಮಿಕರಿಗೆ ಕಾರ್ಮಿಕ ಹಕ್ಕುಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಇದನ್ನು ಓದಿದ್ದೀರಾ? ʼವಿಶ್ವಗುರುʼ ತನ್ನ ನಾಗರಿಕರನ್ನು ಕೈಕೋಳಗಳಲ್ಲಿ ಸ್ವಾಗತಿಸಿತು; ಕೊಲಂಬಿಯಾ ದೇಶ ʼರಾಷ್ಟ್ರಪತಿ ವಿಮಾನವನ್ನೇ ಕಳಿಸಿತು!

ಏನಿದು ಕಫಲಾ ವ್ಯವಸ್ಥೆ, ಸುಧಾರಣೆಯೇನು?

ಅರೇಬಿಕ್ ಭಾಷೆಯಲ್ಲಿ ‘ಪ್ರಾಯೋಜಕತ್ವ’ ಎಂಬ ಅರ್ಥವನ್ನು ಹೊಂದಿರುವ ಕಫಲಾ ವ್ಯವಸ್ಥೆಯನ್ನು 1950ರ ದಶಕದಲ್ಲಿ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ದೇಶಗಳಲ್ಲಿ ಪರಿಚಯಿಸಲಾಗಿದೆ. ಈ ಚೌಕಟ್ಟಿನಡಿಯಲ್ಲಿ, ಕಾರ್ಮಿಕರ ಕಾನೂನು ಸ್ಥಾನಮಾನವನ್ನು ಕಫೀಲ್ ಎಂದು ಕರೆಯಲ್ಪಡುವ ಅವರ ಉದ್ಯೋಗದಾತರು ನಿರ್ವಹಿಸುತ್ತಾರೆ. ಈ ಕಫೀಲ್‌ ಎಂಬವರು ಉದ್ಯೋಗಗಳನ್ನು ಬದಲಾಯಿಸುವ, ದೇಶವನ್ನು ತೊರೆಯುವ ಅಥವಾ ಕಾನೂನು ಸಹಾಯವನ್ನು ಪಡೆಯುವ ವಿಚಾರದಲ್ಲಿ ನಿಯಂತ್ರಣವನ್ನು ಹೊಂದಿರುತ್ತದೆ. ಮಾನವ ಹಕ್ಕುಗಳ ಸಂಘಟನೆಗಳು ಈ ವ್ಯವಸ್ಥೆಯನ್ನು ಶೋಷಣೆ, ನಿಂದನೆ ಮತ್ತು ಬಲವಂತದ ಕಾರ್ಮಿಕ ಪದ್ಧತಿ ಎಂದು ಟೀಕಿಸಿವೆ.

ವೀಸಾ ಮತ್ತು ನಿವಾಸದಂತಹ ಆಡಳಿತಾತ್ಮಕ ಜವಾಬ್ದಾರಿಗಳನ್ನೂ ಸ್ಥಳೀಯ ಉದ್ಯೋಗದಾತರಿಗೆ ನೀಡುವ ಈ ವ್ಯವಸ್ಥೆಯು ಕಾಲಾನಂತರದಲ್ಲಿ ಕಾರ್ಮಿಕರ ಸ್ವಾಯತ್ತತೆ ಮತ್ತು ರಕ್ಷಣೆಗಳನ್ನು ಸೀಮಿತಗೊಳಿಸಿತು. ಗೃಹ ಕಾರ್ಮಿಕರು ಮತ್ತು ನಿರ್ಮಾಣ, ಆತಿಥ್ಯ ಮತ್ತು ಕೃಷಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಲಕ್ಷಾಂತರ ವಲಸೆ ಕಾರ್ಮಿಕರು ಈ ನಿರ್ಬಂಧಗಳಿಂದ ಅತಿ ಕೆಟ್ಟ ಪ್ರಭಾವಕ್ಕೆ ಒಳಗಾದರು.

ಸೌದಿ ಅರೇಬಿಯಾದ ಹೊಸ ಕಾರ್ಮಿಕ ಚೌಕಟ್ಟು ಕಫಲಾದ ಬದಲಾಗಿ ಗುತ್ತಿಗೆ ಉದ್ಯೋಗ ಮಾದರಿಯನ್ನು(contractual employment model) ಜಾರಿಗೆ ತಂದಿದೆ. ಸೌದಿ ಪ್ರೆಸ್ ಏಜೆನ್ಸಿ (SPA) ಪ್ರಕಾರ, ಕಾರ್ಮಿಕರು ಈಗ ತಮ್ಮ ಪ್ರಸ್ತುತ ಪ್ರಾಯೋಜಕರ ಅನುಮೋದನೆಯ ಅಗತ್ಯವಿಲ್ಲದೆಯೇ ಉದ್ಯೋಗ ಬದಲಾಯಿಸಬಹುದು. ನಿರ್ಗಮನ ವೀಸಾ ಇಲ್ಲದೆ ದೇಶವನ್ನು ತೊರೆಯಬಹುದು. ಈ ಹಿಂದೆ ಇಲ್ಲದ ಕಾನೂನು ರಕ್ಷಣೆಗಳನ್ನು ಪಡೆಯಬಹುದು.

ಇದನ್ನು ಓದಿದ್ದೀರಾ? ಯುಎಇ ಜೊತೆಯಲ್ಲಿ ಮೋದಿ ಭಾರತದ ಬಲಿಷ್ಠ ನಂಟು

ಸೌದಿ ಅರೇಬಿಯಾದ ವಿಷನ್ 2030 ಭಾಗವಾಗಿ ಈ ಸುಧಾರಣೆ ಮಾಡಲಾಗಿದೆ. ಇದು ಆರ್ಥಿಕತೆಯನ್ನು ಹೆಚ್ಚಿಸುವ, ವಿದೇಶಿ ಕಾರ್ಮಿಕರ ಕಲ್ಯಾಣದ ಗುರಿಯನ್ನು ಹೊಂದಿದೆ. ಅಧಿಕಾರಿಗಳು ಈ ಬದಲಾವಣೆಯನ್ನು ಪ್ರಮುಖ ಪ್ರಗತಿ ಎಂದು ಶ್ಲಾಘಿಸಿದ್ದಾರೆ. ಆದರೆ ಮಾನವ ಹಕ್ಕುಗಳ ಗುಂಪುಗಳು ನಿಜವಾದ ಸುಧಾರಣೆ ತರಲು ಹೊಸ ನಿಯಮವನ್ನು ಎಚ್ಚರಿಕೆಯಿಂದ ಅನುಷ್ಠಾನಗೊಳಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿವೆ.

ಸೌದಿ ಅರೇಬಿಯಾವು ಸುಮಾರು 13.4 ಮಿಲಿಯನ್ ವಲಸೆ ಕಾರ್ಮಿಕರನ್ನು ಹೊಂದಿದೆ. ಅಂದರೆ ಒಟ್ಟು ಜನಸಂಖ್ಯೆ ಶೇಕಡ 42ರಷ್ಟು. ಪ್ರಮುಖವಾಗಿ ಬಾಂಗ್ಲಾದೇಶ ಮತ್ತು ಭಾರತದಿಂದ ಸೌದಿ ಅರೇಬಿಯಾಕ್ಕೆ ಹೋಗಿ ದುಡಿಯುತ್ತಾರೆ. 2023ರಲ್ಲಿ 498,000 ಕ್ಕೂ ಹೆಚ್ಚು ಬಾಂಗ್ಲಾದೇಶಿಯರು ಮತ್ತು 426,951 ಇತರ ನೆರೆಯ ದೇಶದ ಪ್ರಜೆಗಳು ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಮನೆಕೆಲಸಗಾರರೇ 4 ಮಿಲಿಯನ್‌ರಷ್ಟಿದ್ದು, ಎಲ್ಲರೂ ವಿದೇಶಿ ಪ್ರಜೆಗಳಾಗಿದ್ದಾರೆ. ವಲಸೆ ಕಾರ್ಮಿಕರು ನಿರ್ಮಾಣ, ಮನೆಕೆಲಸ, ಆತಿಥ್ಯ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರಿದ್ದಾರೆ. ಕಫಲಾ ರದ್ದತಿಯು ಶೋಷಣೆಯನ್ನು ಕಡಿಮೆ ಮಾಡುತ್ತದೆ. ಕಾರ್ಮಿಕರಿಗೆ ಹೆಚ್ಚಿನ ಘನತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ...

CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧ; ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

CNN, MS NOW ಮತ್ತು Politico ಸುದ್ದಿ‌ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ...

ಸೂಚನೆಯಿಲ್ಲದೆ ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ ‘OpenAI’

ಆಸ್ಟ್ರೇಲಿಯಾದ ಸರ್ಕಾರಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ ಒಂದನ್ನು ಕೃತಕ ಬುದ್ಧಿಮತ್ತೆ (AI)...

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...