ಚಂದ್ರ ದರ್ಶನದ ಹಿನ್ನೆಲೆ: ಸೌದಿ ಅರೇಬಿಯಾದಲ್ಲಿ ಸೋಮವಾರದಿಂದ ರಮಝಾನ್ ಉಪವಾಸ ಆರಂಭ

1
743

ಸೌದಿ ಅರೇಬಿಯಾದಲ್ಲಿ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ(ಮಾ.11) ರಮಝಾನ್ ತಿಂಗಳ ಉಪವಾಸ ಆರಂಭವಾಗಲಿದೆ ಎಂದು ಮೆಕ್ಕಾದ ‘Inside the Haramain’ ಅಧಿಕೃತ ಹ್ಯಾಂಡಲ್ ಪ್ರಕಟಣೆ ಹೊರಡಿಸಿದೆ.

ಅರ್ಧಚಂದ್ರಾಕೃತಿ ಕಂಡ ಬಗ್ಗೆ ಸೌದಿ ಅರೇಬಿಯಾದ ಸುದೈರ್‌ನಲ್ಲಿ ಮುಖ್ಯ ಖಗೋಳಶಾಸ್ತ್ರಜ್ಞ ಅಬ್ದುಲ್ಲಾ ಅಲ್-ಖುದೈರಿ ಅವರು ಸೌದಿಯ ರಾಯಭಾರಿಯೊಂದಿಗೆ ದೃಢೀಕರಿಸಿದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಅಲ್ಲದೇ, ಆ ಬಳಿಕ ಈ ಮಾಹಿತಿಯನ್ನು ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲೂ ಕೂಡ ಪ್ರಕಟಿಸಿದೆ.

“ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಚಂದ್ರದರ್ಶನಗೊಂಡಿದೆ. ಹಾಗಾಗಿ, ಪವಿತ್ರ ರಮಝಾನ್ ತಿಂಗಳ ಉಪವಾಸ ನಾಳೆ, 11 ಮಾರ್ಚ್ 2024 ರಂದು ಪ್ರಾರಂಭವಾಗುತ್ತದೆ. ಇಶಾ ಪ್ರಾರ್ಥನೆಯ ನಂತರ ಎರಡು ಪವಿತ್ರ ಮಸೀದಿ(ಮೆಕ್ಕಾ ಹಾಗೂ ಮದೀನಾ)ಗಳಲ್ಲಿ ತರಾವೀಹ್ ಪ್ರಾರ್ಥನೆಗಳು ಪ್ರಾರಂಭವಾಗುತ್ತವೆ” ಎಂದು ತಿಳಿಸಿದೆ. ಭಾರತದಲ್ಲಿ ಮಂಗಳವಾರ ಉಪವಾಸ ಆರಂಭವಾಗುವ ಸಾಧ್ಯತೆಗಳಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಮಝಾನ್ ತಿಂಗಳು ಮುಸ್ಲಿಮರಿಗೆ ಪವಿತ್ರ ತಿಂಗಳಾಗಿದ್ದು, ಈ ತಿಂಗಳು ಪೂರ್ತಿ ಬೆಳಗ್ಗೆಯಿಂದ ಸಂಜೆಯವರಿಗೆ ಉಪವಾಸ ವೃತ ಆಚರಿಸುತ್ತಾರೆ. ಮುಸ್ಲಿಮರ ಪವಿತ್ರ ಗ್ರಂಥ ಕುರ್‌ಆನ್ ಕೂಡ ಇಸ್ಲಾಮ್ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್‌ ಅವರಿಗೆ ರಮಝಾನ್ ತಿಂಗಳಲ್ಲಿ ಅವತೀರ್ಣಗೊಂಡಿತ್ತು. ಒಂದು ತಿಂಗಳ ಉಪವಾಸದ ಬಳಿಕ ಮುಸ್ಲಿಮರೆಲ್ಲರೂ ದಾನ ಧರ್ಮಗಳ ಪುಣ್ಯ ಕಾರ್ಯದೊಂದಿಗೆ ‘ಈದ್-ಉಲ್-ಫಿತ್ರ್’ ಹಬ್ಬವನ್ನು ಆಚರಿಸುತ್ತಾರೆ.

1 COMMENT

LEAVE A REPLY

Please enter your comment!
Please enter your name here