ಚಂದ್ರ ದರ್ಶನದ ಹಿನ್ನೆಲೆ: ಸೌದಿ ಅರೇಬಿಯಾದಲ್ಲಿ ಸೋಮವಾರದಿಂದ ರಮಝಾನ್ ಉಪವಾಸ ಆರಂಭ

Date:

ಸೌದಿ ಅರೇಬಿಯಾದಲ್ಲಿ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ(ಮಾ.11) ರಮಝಾನ್ ತಿಂಗಳ ಉಪವಾಸ ಆರಂಭವಾಗಲಿದೆ ಎಂದು ಮೆಕ್ಕಾದ ‘Inside the Haramain’ ಅಧಿಕೃತ ಹ್ಯಾಂಡಲ್ ಪ್ರಕಟಣೆ ಹೊರಡಿಸಿದೆ.

- Advertisement -

ಅರ್ಧಚಂದ್ರಾಕೃತಿ ಕಂಡ ಬಗ್ಗೆ ಸೌದಿ ಅರೇಬಿಯಾದ ಸುದೈರ್‌ನಲ್ಲಿ ಮುಖ್ಯ ಖಗೋಳಶಾಸ್ತ್ರಜ್ಞ ಅಬ್ದುಲ್ಲಾ ಅಲ್-ಖುದೈರಿ ಅವರು ಸೌದಿಯ ರಾಯಭಾರಿಯೊಂದಿಗೆ ದೃಢೀಕರಿಸಿದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಅಲ್ಲದೇ, ಆ ಬಳಿಕ ಈ ಮಾಹಿತಿಯನ್ನು ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲೂ ಕೂಡ ಪ್ರಕಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗೆಲ್ಲಬಹುದಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಲ್ಟಿ ಹೊಡೆದದ್ದು...

ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ನಾಲ್ಕು ಎಮ್ಮೆಲ್ಸಿ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದೇ ಒಂದು ಸೀಟನ್ನೂ ಪಡೆಯಲಾಗದೆ ಮುಗ್ಗರಿಸಿರುವುದು ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನ-ವಿಶ್ಲೇಷಣೆ ಹುಟ್ಟುಹಾಕಿದೆ....

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

“ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಚಂದ್ರದರ್ಶನಗೊಂಡಿದೆ. ಹಾಗಾಗಿ, ಪವಿತ್ರ ರಮಝಾನ್ ತಿಂಗಳ ಉಪವಾಸ ನಾಳೆ, 11 ಮಾರ್ಚ್ 2024 ರಂದು ಪ್ರಾರಂಭವಾಗುತ್ತದೆ. ಇಶಾ ಪ್ರಾರ್ಥನೆಯ ನಂತರ ಎರಡು ಪವಿತ್ರ ಮಸೀದಿ(ಮೆಕ್ಕಾ ಹಾಗೂ ಮದೀನಾ)ಗಳಲ್ಲಿ ತರಾವೀಹ್ ಪ್ರಾರ್ಥನೆಗಳು ಪ್ರಾರಂಭವಾಗುತ್ತವೆ” ಎಂದು ತಿಳಿಸಿದೆ. ಭಾರತದಲ್ಲಿ ಮಂಗಳವಾರ ಉಪವಾಸ ಆರಂಭವಾಗುವ ಸಾಧ್ಯತೆಗಳಿವೆ.

ರಮಝಾನ್ ತಿಂಗಳು ಮುಸ್ಲಿಮರಿಗೆ ಪವಿತ್ರ ತಿಂಗಳಾಗಿದ್ದು, ಈ ತಿಂಗಳು ಪೂರ್ತಿ ಬೆಳಗ್ಗೆಯಿಂದ ಸಂಜೆಯವರಿಗೆ ಉಪವಾಸ ವೃತ ಆಚರಿಸುತ್ತಾರೆ. ಮುಸ್ಲಿಮರ ಪವಿತ್ರ ಗ್ರಂಥ ಕುರ್‌ಆನ್ ಕೂಡ ಇಸ್ಲಾಮ್ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್‌ ಅವರಿಗೆ ರಮಝಾನ್ ತಿಂಗಳಲ್ಲಿ ಅವತೀರ್ಣಗೊಂಡಿತ್ತು. ಒಂದು ತಿಂಗಳ ಉಪವಾಸದ ಬಳಿಕ ಮುಸ್ಲಿಮರೆಲ್ಲರೂ ದಾನ ಧರ್ಮಗಳ ಪುಣ್ಯ ಕಾರ್ಯದೊಂದಿಗೆ ‘ಈದ್-ಉಲ್-ಫಿತ್ರ್’ ಹಬ್ಬವನ್ನು ಆಚರಿಸುತ್ತಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್ ಚುನಾವಣೆಯ ಅತಂತ್ರ ಜನಾದೇಶ- ಪರಿಸ್ಥಿತಿ ತಿಳಿಯಾಗಲು ಇನ್ನೂ ಕೆಲ ದಿನ, ಕಾರಣಗಳೇನು?

ಇಸ್ರೇಲ್‌ನಲ್ಲಿ ಅಕ್ಟೋಬರ್ 27ರಂದು ನಡೆದ ಸಂಸದೀಯ ಚುನಾವಣೆಯ (ನೆಸ್ಸೆಟ್) ಮತ ಎಣಿಕೆ...

ಇಸ್ರೇಲ್ ಚುನಾವಣೆ- ಅರಬ್ ಪಕ್ಷಗಳೇ ಈಗ ಕಿಂಗ್ ಮೇಕರ್

ಇಸ್ರೇಲ್‌ನಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳು ದೇಶವನ್ನು ಅತಂತ್ರ ಸ್ಥಿತಿಗೆ ನೂಕಿವೆ....