ಟ್ರಂಪ್ ಸುಂಕಗಳು ಅಮೆರಿಕ ಸುಪ್ರೀಂನಲ್ಲಿ ರದ್ದು; ಆದರೂ, ಭಾರತ ಸುಂಕ ತೆರಲೇಬೇಕು ಎಂದ ಅಧ್ಯಕ್ಷ

Date:

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತುರ್ತುಪರಸ್ಥಿತಿ ಅಡಿಯಲ್ಲಿ ವಿವಿಧ ದೇಶಗಳ ಮೇಲೆ ಹೇರಿದ್ದ ಭಾರೀ ಪ್ರಮಾಣದ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಟ್ರಂಪ್ ಅವರು ‘ತುರ್ತು ಪರಿಸ್ಥಿತಿ’ಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಹೆಚ್ಚುವರಿ ಸುಂಕಗಳನ್ನು ಹೇರಿದ್ದರು. ಆದರೆ, ಸುಂಕ ವಿಧಿಸುವ ಅಧಿಕಾರವು ಕಾಂಗ್ರೆಸ್‌ಗೆ (ಅಮೆರಿಕ ಸಂಸತ್ತು) ಮಾತ್ರವೇ ಇದೆ. ಟ್ರಂಪ್ ವಾದಿಸುತ್ತಿರುವ  ‘ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ ಅಡಿ (ಐಇಇಪಿಎ) ಸುಂಕ ವಿಧಿಸುವ ಅಧಿಕಾರ ಅಧ್ಯಕ್ಷರಿಗಿದೆ’ ಎಂಬುದು ಕಾಂಗ್ರೆಸ್‌ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಟ್ರಂಪ್ ಅವರು ಏಕಪಕ್ಷೀಯವಾಗಿ ಘೋಷಿಸಿದ್ದ ಸುಂಕಗಳನ್ನು ರದ್ದುಗೊಳಿಸಿದೆ.

- Advertisement -

ಅಮೆರಿಕ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳ ಮೇಲಿನ ಬೃಹತ್ ಸುಂಕಗಳು ಕಡಿತಗೊಂಡಿವೆ. ಈ ಹಿಂದೆ ಇದ್ದ ಹಳೆಯ ಸುಂಕಗಳು ಮರುಜಾರಿಗೆ ಬರಲಿವೆ. ಪರಿಣಾಮ, ಭಾರತದ ಮೇಲೆ ಪ್ರಸ್ತುತ ಜಾರಿಯಲ್ಲಿರುವ 18% ಸುಂಕವೂ ಕಡಿತಗೊಳ್ಳಲಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಭಾರತದ ಮೇಲಿನ ಅಮೆರಿಕ ಸುಂಕವು 2ಅಥವಾ 3%ಗೆ ಕಡಿತಗೊಳ್ಳಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ...

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ...

ಆದರೆ, ಭಾರತಕ್ಕೆ ವಿಧಿಸಲಾಗುತ್ತಿರುವ ಸುಂಕಗಳು ಕಡಿತಗೊಳ್ಳುವುದಿಲ್ಲ. ಭಾರತವು 18% ಸುಂಕ ಪಾವತಿಯನ್ನು ಮುಂದುವರೆಸಲಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ‘ಬಹಳ ನಿರಾಶಾದಾಯಕ’ವೆಂದು ಟ್ರಂಪ್ ಕರೆದಿದ್ದಾರೆ. ಈ ತೀರ್ಪಿನಿಂದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ‘ಏನೂ ಬದಲಾಗುವುದಿಲ್ಲ’ ಎಂದಿದ್ದಾರೆ.

“ಏನೂ ಬದಲಾಗುವುದಿಲ್ಲ. ಅವರು (ಭಾರತ) ಸುಂಕಗಳನ್ನು ಪಾವತಿಸುತ್ತಾರೆ ಮತ್ತು ನಾವು ಪಾವತಿಸುವುದಿಲ್ಲ. ಇದು ಈ ಹಿಂದೆ ಇದ್ದ ಪರಿಸ್ಥಿತಿಯ ಉಲ್ಟಾ ರೂಪವಾಗಿದೆ. ಪ್ರಧಾನಿ ಮೋದಿ ಒಬ್ಬ ಮಹಾನ್ ವ್ಯಕ್ತಿ, ಗೌರವಾನ್ವಿತ ವ್ಯಕ್ತಿ. ಅವರು ತಮ್ಮ ಎದುರಾಳಿಗಳಿಗಿಂತ ಹೆಚ್ಚು ಬುದ್ಧಿವಂತರಾಗಿದ್ದರು. ಅಮೆರಿಕಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅವರು ನಮ್ಮನ್ನು ಸುಲಿಗೆ ಮಾಡುತ್ತಿದ್ದರು. ಹಾಗಾಗಿ, ನಾವು ಭಾರತದೊಂದಿಗೆ ಒಂದು ಒಪ್ಪಂದ ಮಾಡಿಕೊಂಡೆವು. ಈಗ ಅದು ನ್ಯಾಯಯುತವಾದ ಒಪ್ಪಂದವಾಗಿದೆ. ನಾವು ಅವರಿಗೆ ಸುಂಕ ಪಾವತಿಸುತ್ತಿಲ್ಲ. ಆದರೆ, ಅವರು ಪಾವತಿಸುತ್ತಿದ್ದಾರೆ. ನಾವು ಪರಿಸ್ಥಿತಿಯನ್ನು ಅದಲುಬದಲು ಮಾಡಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಫೆಬ್ರವರಿ 13ರಂದು ಮೋದಿ ಅವರಿಗೆ ಕರೆ ಮಾಡಿದ್ದ ಟ್ರಂಪ್, ಅಮೆರಿಕ ಮತ್ತು ಭಾರತ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ. ಮಾರ್ಚ್ರ್ ತಿಂಗಳಿನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ. ಅದರ ಅಡಿಯಲ್ಲಿ ಭಾರತದ ಮೇಲೆ ಅಮೆರಿಕ ಹೇರಿದ್ದ 50% ಸುಂಕವನ್ನು 18%ಗೆ ಕಡಿತಗೊಳಿಸಲಾಗಿದೆ. ಅಂತೆಯೇ, ಅಮೆರಿಕದ ಸರಕುಗಳ ಮೇಲೆ ಭಾರತವು ಶೂನ್ಯ (0%) ಸುಂಕ ವಿಧಿಸಲು ಒಪ್ಪಿಕೊಂಡಿದೆ.

ಈ ಒಪ್ಪಂದದ ಭಾಗವಾಗಿ, ಅಮೆರಿಕದ ಎಲ್ಲ ಕೈಗಾರಿಕಾ ಸರಕುಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ರದ್ದುಗೊಳಿಸಲು ಭಾರತ ಒಪ್ಪಿಕೊಂಡಿದೆ. ಇದರಲ್ಲಿ ಒಣಗಿದ ಡಿಸ್ಟಿಲರ್ಸ್ ಗ್ರೇನ್ಸ್ (DDGs), ಪ್ರಾಣಿ ಆಹಾರಕ್ಕಾಗಿ ಕೆಂಪು ಜೋಳ, ಒಣ ಹಣ್ಣುಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಸ್ ಸೇರಿದಂತೆ ಎಲ್ಲ ಉತ್ಪನ್ನಗಳು ಯಾವುದೇ ಸುಂಕವಿಲ್ಲದೆ ಭಾರತದ ಮಾರುಕಟ್ಟೆಗಳಿಗೆ ಲಗ್ಗೆ ಇಡಲಿವೆ. ಇದು, ಭಾರತೀಯ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಅಪಾಯವನ್ನು ಸೂಚಿಸಿದೆ.

ಮತ್ತೊಂದೆಡೆ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಜವಳಿ ಮತ್ತು ಉಡುಪುಗಳು, ಚರ್ಮ ಮತ್ತು ಪಾದರಕ್ಷೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳು, ಸಾವಯವ ರಾಸಾಯನಿಕಗಳು, ಗೃಹಾಲಂಕಾರ ವಸ್ತುಗಳು, ಕರಕುಶಲ ವಸ್ತುಗಳು ಮತ್ತು ಕೆಲವು ಯಂತ್ರೋಪಕರಣಗಳ ಮೇಲೆ 18%ರಷ್ಟು ಸುಂಕವನ್ನು ವಿಧಿಸುತ್ತದೆ.

ಒಪ್ಪಂದವು ಏನೇ ಇದ್ದರೂ, ಅಮೆರಿಕದ ಸುಪ್ರೀಂ ಕೋರ್ಟ್‌ ಆದೇಶವನ್ನು ಟ್ರಂಪ್ ಪಾಲಿಸಬೇಕು. ಸುಂಕಗಳನ್ನು ಹಿಂದಿನ ಪ್ರಮಾಣಕ್ಕೆ ಇಳಿಸಬೇಕು. ಆದರೆ, ಅವರು ಸುಂಕ ಇಳಿಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಸೇಬು ಬೆಳೆಗಾರರಿಗೆ ಸರ್ವನಾಶದ ಭೀತಿ

ಅದಕ್ಕಾಗಿ, ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆಯ (IEEPA) ಸೆಕ್ಷನ್ 122ರ ಅಡಿಯಲ್ಲಿ 10% ಜಾಗತಿಕ ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುವುದಾಗಿ ಘೋಷಿಸಿದ್ದಾರೆ. ಆದರೆ, ಶಾಸಕಾಂಗದ ಮೂಲಕ ಅನುಮೋದಿಸದ ಹೊರತು, ಈ ಸುಂಕ ಆದೇಶವು 150 ದಿನಗಳ ನಂತರ ರದ್ದಾಗುತ್ತದೆ.

“ಸುಪ್ರೀಂ ಕೋರ್ಟ್‌ ತೀರ್ಪು ನನ್ನನ್ನು ಇನ್ನೂ ಬಲಗೊಳಿಸಿದೆ. ಪರ್ಯಾಯ ಮಾರ್ಗಗಳನ್ನು ಮುಕ್ತಗೊಳಿಸಿದೆ. ನಾನು ಏನು ಬೇಕಾದರೂ ಮಾಡಬಹುದು, ಸುಂಕ ವಿಧಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್‌ ಹೇಳಿರಬಹುದು. ಆದರೆ, ಆದರೆ ನನಗೆ ವ್ಯಾಪಾರ ನಿಷೇಧ ಹೇರಲು ಅಧಿಕಾರವಿದೆ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

“ಟ್ರೇಡ್ ಎಕ್ಸ್‌ಪಾನ್ಶನ್ ಆಕ್ಟ್ ಹಾಗೂ 1930ರ ಟ್ಯಾರಿಫ್ ಆಕ್ಟ್ ಸೇರಿದಂತೆ ಇತರ ಕಾನೂನುಗಳ ಮೂಲಕ ನಾನು ಸುಂಕಗಳನ್ನು ತರುತ್ತೇನೆ. ಈ ಆಯ್ಕೆಗಳು ಸ್ವಲ್ಪ ದೀರ್ಘ ಪ್ರಕ್ರಿಯೆ” ಎಂದು ಹೇಳಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೂರು ವರ್ಷಗಳಲ್ಲಿ ನಕಲಿ ವಿ.ವಿಗಳ ಸಂಖ್ಯೆ 20ರಿಂದ 32ಕ್ಕೆ ಏರಿಕೆ: ಹಳೆಯ 18 ಹೆಸರುಗಳು ಪಟ್ಟಿಯಲ್ಲಿ ಯಥಾಸ್ಥಿತಿ

ಮಾನ್ಯತೆ ಪಡೆಯದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ...

ಪಾಕ್ ಸಚಿವರಿಗೆ ರೆಡ್ ಕಾರ್ಪೆಟ್ ಸ್ವಾಗತ: ಪಹಲ್ಗಾಮ್ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆದಂತಿದೆ ಎಂದ ಕಾಂಗ್ರೆಸ್

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) 'ನಾಗರಿಕತೆಯ ಸಂವಾದ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ...

ಮಣಿಪುರ ಕಳ್ಳಭಟ್ಟಿ ದುರಂತ: ಮೂರು ದಿನಗಳಲ್ಲಿ ಎಂಟು ಮಂದಿ ಸಾವು, ಜಿಲ್ಲಾಡಳಿತದಿಂದ ಹೈಅಲರ್ಟ್

ಮಣಿಪುರ ಕಳ್ಳಭಟ್ಟಿ ದುರಂತದಲ್ಲಿ ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಚಾಂದೇಲ್ ಜಿಲ್ಲೆಯಲ್ಲಿ...

‘ಇದು ಪ್ರಧಾನಿಯವರ ಸ್ವಂತ ತಪ್ಪೊಪ್ಪಿಗೆ’ – ಫಿಕ್ಕಿ ವೇದಿಕೆಯಲ್ಲಿ ಮೋದಿ ಭಾಷಣಕ್ಕೆ ಕಾಂಗ್ರೆಸ್ ವಾಗ್ದಾಳಿ

ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (FICCI) ಶತಮಾನೋತ್ಸವ ಸಮಾವೇಶದಲ್ಲಿ ಪ್ರಧಾನಿ...