ಬಿಬಿಸಿ ವಿರುದ್ಧ 85,000 ಕೋಟಿ ರೂ. ಮೊಕದ್ದಮೆ ಹೂಡುವುದಾಗಿ ಟ್ರಂಪ್ ಬೆದರಿಕೆ; ತಪ್ಪನ್ನು ಒಪ್ಪಿಕೊಂಡ ಮುಖ್ಯಸ್ಥರು

Date:

2021ರ ಜನವರಿ 6ರಂದು ನಡೆದ ಕ್ಯಾಪಿಟಲ್ ಹಿಲ್ ಗಲಭೆಗೆ ಜನರನ್ನು ಟ್ರಂಪ್ ಪ್ರಚೋದಿಸಿದ್ದಾರೆ ಎಂದು ಬಿಂಬಿಸುವ ವಿಡಿಯೋವನ್ನು ಪ್ರಸಾರ ಮಾಡಿದ್ದಕ್ಕಾಗಿ, ಬಿಬಿಸಿ ವಿರುದ್ಧ 100 ಕೋಟಿ ಡಾಲರ್ (85,000 ಕೋಟಿ ರೂ.) ಪರಿಹಾರ ಕೇಳುವ ಮೊಕದ್ದಮೆ ಹೂಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಕ್ಷಮೆಯಾಚಿಸಿ ಅಥವಾ ಮೊಕದ್ದಮೆ ಎದರಿಸಿ ಎಂದು ಬಿಬಿಸಿಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಎಡಿಟಿಂಗ್‌ನಲ್ಲಾದ ದೋಷವನ್ನು ಬಿಬಿಸಿ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಬಿಬಿಸಿಯ ಇಬ್ಬರು ಪ್ರಮುಖರು ರಾಜೀನಾಮೆ ನೀಡಿದ್ದಾರೆ.

- Advertisement -

ಇತ್ತೀಚೆಗೆ ಬಿಬಿಸಿ ಸಾಕ್ಷ್ಯಾಚಿತ್ರವೊಂದನ್ನು ಬಿಡುಗಡೆ ಮಾಡಿತ್ತು. ಚಿತ್ರದಲ್ಲಿ, ಟ್ರಂಪ್ ಅವರ ಎರಡು ಭಾಷಣಗಳನ್ನು ‘ಎಡಿಟ್‌’ ಮಾಡಿ, ಟ್ರಂಪ್ ಅವರು ಕ್ಯಾಪಿಟಲ್ ಹಿಲ್ ಗಲಭೆ ಪ್ರಚೋದನೆ ನೀಡಿದ್ದಾರೆ ಎಂಬುದಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪ ಕೇಳಿಬಂದ ಬೆನ್ನಲ್ಲೇ, ಬಿಬಿಸಿ ಮಹಾನಿರ್ದೇಶಕ ಟಿಮ್ ಡೇವಿ ಮತ್ತು ನೂತನ ಮುಖ್ಯಸ್ಥೆ ಡೆಬೊರಾ ಟರ್ನೆಸ್ ಭಾನುವಾರ ರಾಜೀನಾಮೆ ನೀಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

ಈ ನಡುವೆ, ಟ್ರಂಪ್ ಅವರ ವಕೀಲರು ಬಿಬಿಸಿಗೆ ನೋಟಿಸ್‌ ಕಳಿಸಿದ್ದಾರೆ. ಅದರಲ್ಲಿ; ಬಿಬಿಸಿ ಕ್ಷಮೆಯಾಚಿಸಬೇಕು, ಸಾಕ್ಷ್ಯಚಿತ್ರವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಟ್ರಂಪ್‌ಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಟ್ರಂಪ್ ವಿಡಿಯೋ ಕುರಿತು ಯುಕೆ ಸಂಸದೀಯ ಸಮಿತಿಯೊಂದಿಗೆ ಮಾಹಿತಿ ಹಂಚಿಕೊಂಡಿರುವ ಬಿಬಿಸಿ ಅಧ್ಯಕ್ಷ ಸಮೀರ್ ಶಾ ಅವರು “ವಿಡಿಯೋವನ್ನು ಎಡಿಟ್ ಮಾಡಿದ ರೀತಿಯು ‘ತೀರ್ಪಿನ ದೋಷ’ಕ್ಕೆ ಕಾರಣವಾಗಿದೆ. ಭಾಷಣವನ್ನು ಸಂಪಾದಿಸಿದ ವಿಧಾನವು ಗಲಭೆಗೆ ಪ್ರಚೋದನೆ ನೀಡುವ ರೀತಿಯಲ್ಲಿದೆ ಎಂಬುದನ್ನು ನಾವು ಒಪ್ಪುತ್ತೇವೆ. ತಪ್ಪಿನ ಕಾರಣಕ್ಕಾಗಿ ನಾವು ಕ್ಷಮೆಯಾಚಿತ್ತೇವೆ” ಎಂದು ಹೇಳಿದ್ದಾರೆ.

ಬಿಬಿಸಿ ಪ್ರಕಟಿಸಿದ ಟ್ರಂಪ್ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, “ಬಿಬಿಸಿ ಸಾಯುತ್ತಿದೆ. ಏಕೆಂದರೆ, ಅದು ಟ್ರಂಪ್ ವಿರೋಧಿ ನಕಲಿ ಸುದ್ದಿಯನ್ನು ಪ್ರಕಟಿಸಿದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ...

CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧ; ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

CNN, MS NOW ಮತ್ತು Politico ಸುದ್ದಿ‌ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ...

ಸೂಚನೆಯಿಲ್ಲದೆ ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ ‘OpenAI’

ಆಸ್ಟ್ರೇಲಿಯಾದ ಸರ್ಕಾರಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ ಒಂದನ್ನು ಕೃತಕ ಬುದ್ಧಿಮತ್ತೆ (AI)...

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...