ʼವೇಮೊʼಗೆ ʼಟೆಸ್ಲಾʼ ಸಾಧನೆ ಅಸಾಧ್ಯ: ಟೀಕಿಸಿದರೂ ಮಸ್ಕ್‌ ಕಂಪನಿಯನ್ನೇ ಹೊಗಳಿದ ಹಳೆ ಉದ್ಯೋಗಿ

Date:

ಎಲಾನ್‌ ಮಸ್ಕ್‌ ಒಡೆತನದ ಅಮೆರಿಕನ್‌ ತಂತ್ರಜ್ಞಾನ ಕಂಪನಿ ಟೆಸ್ಲಾದ ಮಾಜಿ AI ನಿರ್ದೇಶಕ ಆಂಡ್ರೆಜ್ ಕಾರ್ಪತಿ, ಟೆಸ್ಲಾ ಹಾಗೂ ಗೂಗಲ್‌ನ ವೇಮೊದ ಸ್ವಯಂಚಾಲಿತ ಚಾಲನಾ ತಂತ್ರಜ್ಞಾನಗಳ ನಡುವಿನ ಕೆಲ ಮೂಲಭೂತ ವ್ಯತ್ಯಾಸಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಟೆಸ್ಲಾ ಸಾಧಿಸಿದ ಕರಾವಳಿ–ಕರಾವಳಿ (coast-to-coast) ಸ್ವಯಂಚಾಲಿತ ಚಾಲನಾ ಸಾಧನೆಯನ್ನು ವೇಮೊ ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

- Advertisement -

ಕಂಪನಿಯ AI ಸಾಮರ್ಥ್ಯಗಳ ಕುರಿತು ಕಾರ್ಪತಿಯ ತಿಳಿವಳಿಕೆಗಳು ʼಹಳೆಯದಾಗಿವೆʼ ಹಾಗೂ 2022ರಲ್ಲಿ ಅವರು ಹೊರನಡೆದಾಗ ಕಂಪನಿಯ AI ತಂತ್ರಜ್ಞಾನವು ಇದ್ದಕ್ಕಿದ್ದಂತೆ ಹೆಚ್ಚಿನ ಪ್ರಗತಿ ಸಾಧಿಸಿದೆ ಎಂದು ಎಲಾನ್ ಮಸ್ಕ್ ಸಾರ್ವಜನಿಕವಾಗಿ ಟೀಕಿಸಿದ ಕೆಲವೇ ದಿನಗಳಲ್ಲಿ ಕಾರ್ಪತಿ ಈ ಹೇಳಿಕೆ ನೀಡಿರುವುದು ಹೈಪ್‌ ಸೃಷ್ಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇತ್ತೀಚೆಗೆ ಟೆಸ್ಲಾ ಬಳಕೆದಾರ ಡೇವಿಡ್ ಮೊಸ್ ಅವರು ಟೆಸ್ಲಾದ ಫುಲ್ ಸೆಲ್ಫ್ ಡ್ರೈವಿಂಗ್ (FSD V14.2) ಬಳಸಿ ಅಮೆರಿಕದ ಒಂದು ಕರಾವಳಿಯಿಂದ ಇನ್ನೊಂದು ಕರಾವಳಿವರೆಗೆ ಸುಮಾರು 2,732 ಮೈಲುಗಳ ಪ್ರಯಾಣವನ್ನು ಸ್ವಯಂಚಾಲಿತವಾಗಿ ಪೂರ್ಣಗೊಳಿಸಿದ್ದರು. ಈ ಸಾಧನೆ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಾರ್ಪತಿ, “ನನ್ನ ತಿಳಿವಳಿಕೆಯ ಪ್ರಕಾರ ವೇಮೊಗೆ ಇಂತಹ ಪ್ರಯಾಣ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಕಾರ್ಪತಿಯ ಪ್ರಕಾರ, ವೇಮೊ ಮಾಡ್ಯೂಲರ್ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಅಂದರೆ, ಹೈ ಡೆಫಿನಿಷನ್ ನಕ್ಷೆಗಳು, ಲೈಡಾರ್ ಸೆನ್ಸರ್‌ಗಳು, 5ಜಿ ಸಂಪರ್ಕ ಮತ್ತು ವಿವಿಧ ನ್ಯೂರಲ್ ನೆಟ್‌ವರ್ಕ್‌ಗಳ ಸಂಯೋಜನೆಯ ಮೂಲಕ ಅದರ ಸ್ವಯಂಚಾಲಿತ ಚಾಲನೆ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆ ಕೆಲವು ಸಂದರ್ಭಗಳಲ್ಲಿ ದುರ್ಬಲವಾಗಿ ಕೆಲಸ ಮಾಡದೇ ಹೋಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾನ್ ಫ್ರಾನ್ಸಿಸ್ಕೋದಲ್ಲಿ ವಿದ್ಯುತ್ ಕಡಿತವಾದಾಗ ಟ್ರಾಫಿಕ್ ಸಿಗ್ನಲ್‌ಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ವೇಮೊ ಕಾರುಗಳು ರಸ್ತೆಯಲ್ಲೇ ಸಿಲುಕಿಕೊಂಡ ಘಟನೆಯನ್ನೂ ಅವರು ಉದಾಹರಣೆ ನೀಡಿದ್ದಾರೆ.

ಇದಕ್ಕೆ ವಿರುದ್ಧವಾಗಿ, ಟೆಸ್ಲಾ ಒಂದೇ ದೊಡ್ಡ ನ್ಯೂರಲ್ ನೆಟ್‌ವರ್ಕ್ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಕ್ಯಾಮೆರಾಗಳಿಂದ ಬಂದ ದೃಶ್ಯ ಮಾಹಿತಿಯನ್ನು ನೇರವಾಗಿ ಚಾಲನಾ ನಿರ್ಧಾರಗಳಿಗೆ ಪರಿವರ್ತಿಸುವ ಈ ತಂತ್ರಜ್ಞಾನ, ಕೋಟಿ ಕೋಟಿ ಮೈಲುಗಳ ಮಾನವ ಚಾಲನಾ ಅನುಭವದಿಂದ ತರಬೇತಿ ಪಡೆಯುತ್ತದೆ. ಇದು ಕಾರ್ಪತಿ ವಿವರಿಸಿದ ʼಸಾಫ್ಟ್‌ವೇರ್ 2.0ʼ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ.

ಇದನ್ನೂ ಓದಿ: 2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!

ಎಲಾನ್ ಮಸ್ಕ್ ಅವರ ಟೀಕೆಯ ನಡುವೆಯೂ ಕಾರ್ಪತಿ ಟೆಸ್ಲಾದ coast-to-coast ಸಾಧನೆಯನ್ನು ಶ್ಲಾಘಿಸಿದ್ದಾರೆ. ʼಕರಾವಳಿ–ಕರಾವಳಿ ಸ್ವಯಂಚಾಲಿತ ಚಾಲನೆ ಆಟೋಪೈಲಟ್ ತಂಡದ ಆರಂಭಿಕ ಗುರಿಯಾಗಿತ್ತು. ಇದಕ್ಕಾಗಿ ರಾತ್ರಿಯೆಲ್ಲಾ ವಿಡಿಯೋ ಕ್ಲಿಪ್‌ಗಳನ್ನು ಪರಿಶೀಲಿಸಿ, ಮಧ್ಯೆ ಮಧ್ಯೆ ಆಗುವ ಸಮಸ್ಯೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಕೆಲಸ ಮಾಡುತ್ತಿದ್ದೆವುʼ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಮಸ್ಕ್, ‌ʼಆಂಡ್ರೇಜ್, ನನ್ನ ಹಳೆಯ ಸಹೋದರ, ಮತ್ತೆ ಒಟ್ಟಿಗೆ ಕೆಲಸ ಮಾಡೋಣʼ ಎಂದು ಆಹ್ವಾನಿಸಿದರೂ, ಕಾರ್ಪತಿ ಮತ್ತೆ ಟೆಸ್ಲಾಗೆ ಮರಳುವ ಯಾವುದೇ ಸೂಚನೆ ನೀಡಿಲ್ಲ ಎಂದು Times Of India ವರದಿ ಮಾಡಿದೆ.

ಮಾಹಿತಿ ಕೃಪೆ: TOI

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...