ಈ ದಿನ ಸಂಪಾದಕೀಯ | ಬಿಜೆಪಿ ಬೆವರಿಳಿಸಿದ ಬಂಗಾಳದ ನವದುರ್ಗೆಯರು

Date:

ಕೇಂದ್ರ ಸರ್ಕಾರದ ವಿರುದ್ಧ, ದುಷ್ಟ-ಭ್ರಷ್ಟ ಬಿಜೆಪಿ ನಾಯಕರ ವಿರುದ್ಧ ತಕ್ಷಣ ಬೀದಿಗಿಳಿಯುವ ದೀದಿ, ಜನರೊಂದಿಗೆ ಜನರಾಗಿ ಬೆರೆತುಹೋಗುವ ಪರಿ ಅನನ್ಯವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಮಮತಾ ಬ್ಯಾನರ್ಜಿ ಮುಂಚೂಣಿಗೆ ತಂದಿರುವ ಮಹಿಳೆಯರಾದ, ಮಹುವಾ ಮೊಯಿತ್ರಾ ಮತ್ತು ಸಯೋನಿ ಘೋಷ್ ಎಂಬ ಗಟ್ಟಿ ವ್ಯಕ್ತಿತ್ವಗಳು, ಅವರು ಈ ಚುನಾವಣೆಯಲ್ಲಿ ನಿರ್ವಹಿಸಿದ ಪಾತ್ರ ಅಮೋಘವಾಗಿದೆ.  

ಈ ಬಾರಿಯ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಎಸ್ಐಆರ್ ಹೆಚ್ಚು ಸದ್ದು ಮಾಡಿತು. ಅಂತಿಮ ಮತದಾರರ ಪಟ್ಟಿಯಿಂದ ಅಧಿಕೃತವಾಗಿಯೇ 63 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಯಿತು. ಅದರಲ್ಲೂ ಅತಿ ಹೆಚ್ಚು ಮುಸ್ಲಿಂ ಮತದಾರರು ಇರುವ ಪ್ರದೇಶಗಳಲ್ಲಿ, ಮುಸ್ಲಿಮರು ಮತದಾನದಿಂದ ಹೊರಗುಳಿಯುವಂತೆ ನೋಡಿಕೊಳ್ಳಲಾಯಿತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ-ಶಾ ಅವರು ಹೇಳಿದಂತೆ ಚುನಾವಣಾ ಆಯೋಗ ಕೇಳಿದ್ದು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಶಾಶ್ವತವಾಗಿ ಕಳಂಕ ಮೆತ್ತಿಕೊಂಡಿತು.

- Advertisement -

ಕೇಂದ್ರದ ಅಧಿಕಾರ, ಹಣಬಲ ಮತ್ತು ಧಾರ್ಮಿಕ ಧ್ರುವೀಕರಣವೆಂಬ ಅಸ್ತ್ರಗಳನ್ನು ಯಥೇಚ್ಛವಾಗಿ ಬಳಸುತ್ತಿರುವ ಮೋದಿ-ಶಾ, ಈ ಬಾರಿ ಪಶ್ಚಿಮ ಬಂಗಾಳವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅದರಲ್ಲೂ ಬಂಗಾಳದ ದುರ್ಗೆಯಂತಿರುವ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿ, ಅವರ ರಾಜಕೀಯ ಬದುಕನ್ನು ಕೊನೆಗೊಳಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕಾಗಿ ಪಶ್ಚಿಮ ಬಂಗಾಳವನ್ನು ಕದನಕಣವನ್ನಾಗಿಸಿದ್ದರು. ಅದು ಏಪ್ರಿಲ್ 28ರಂದು ನಡೆದ ಅಂತಿಮ ಹಂತದ ಮತದಾನದ ವೇಳೆಯಲ್ಲಿಯೂ ಸದ್ದು ಮಾಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ನಿನ್ನೆ ಮತಗಟ್ಟೆಯೊಂದರ ಬಳಿ ಬಂದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯನ್ನು ಟಿಎಂಸಿ ಕಾರ್ಯಕರ್ತರು ಸುತ್ತುವರಿದು ‘ಜೈ ಬಂಗಾಳ’ ಘೋಷಣೆ ಕೂಗಿದರು. ಚುನಾವಣಾ ಸಮಯದಲ್ಲಿ ಇಂತಹ ಘಟನೆಗಳು ಸರ್ವೇಸಾಮಾನ್ಯ. ಆದರೆ ಪಶ್ಚಿಮ ಬಂಗಾಳದ ಪರಿಸ್ಥಿತಿಯೇ ಬೇರೆ. ಸಣ್ಣ ಗಲಾಟೆಯೂ ವಿಕೋಪಕ್ಕೆ ತಿರುಗುತ್ತದೆ, ಹಿಂಸೆ-ರಕ್ತಪಾತಕ್ಕೆ ದಾರಿ ಮಾಡಿಕೊಡುತ್ತದೆ. ಅದನ್ನು ಕಾಯುತ್ತಿದ್ದವರಂತೆ ಸುವೇಂದು ಅಧಿಕಾರಿ, ಆ ತಕ್ಷಣವೇ ಗೃಹ ಸಚಿವ ಅಮಿತ್ ಶಾಗೆ ಫೋನಾಯಿಸಿದರು. ‘ಮತಗಟ್ಟೆ ಬಳಿ ನನ್ನ ಮೇಲೆ ಗೂಂಡಾಗಳು ದಾಳಿ ಮಾಡಿದರು. ಅವರು ಮತದಾರರಲ್ಲ, ಮಮತಾ ಬ್ಯಾನರ್ಜಿ ಗೂಂಡಾಗಳು, ಅವರೆಲ್ಲರೂ ಹೊರಗಿನವರು’ ಎಂದು ಕೂಗಾಡಿದರು. ಅಂತಹ ಒಂದು ದೂರಿಗಾಗಿಯೇ ಕಾಯುತ್ತಿದ್ದ ಗೃಹ ಸಚಿವರು, ಆ ತಕ್ಷಣವೇ ದೇಶದ ಪೊಲೀಸ್ ವ್ಯವಸ್ಥೆ, ಎನ್ಐಎ, ಸೇನಾ ತುಕಡಿ ನಿಯೋಜಿಸಿದರು. ಅದಕ್ಕೆ ಕಾನೂನು ಸುವ್ಯವಸ್ಥೆ, ಭದ್ರತೆಯ ನೆಪ ಹೇಳಿದರು. ಈಗಾಗಲೇ ಎಸ್ಐಆರ್‍‌ನಿಂದ ಹೈರಾಣಾಗಿದ್ದ ಮತದಾರರಿಗೆ ಶಾಂತಿಯುತವಾಗಿ ಮತ ಚಲಾಯಿಸಲೂ ಆಗದಂತೆ ನೋಡಿಕೊಂಡರು.

ಇದನ್ನು ಓದಿದ್ದೀರಾ?: ಗುಜರಾತ್- ಏಕ ಚಕ್ರಾಧಿಪತ್ಯದತ್ತ ಬಿಜೆಪಿ ದಾಪುಗಾಲು, ಕಾಂಗ್ರೆಸ್ ಕಂಗಾಲು!

ಇಷ್ಟಾದರೂ, ಪಶ್ಚಿಮ ಬಂಗಾಳದಲ್ಲಿ ಶೇ. 91.66ರಷ್ಟು ಮತದಾನವಾಗಿ ದಾಖಲೆ ಬರೆದಿದೆ. ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಕೂಡ ಹೇಳುತ್ತಿವೆ. ಆದರೆ ಜನರ ನಡುವೆ ಆಡಳಿತ ವಿರೋಧಿ ಅಲೆ ಕೆಲಸ ಮಾಡುತ್ತಿದೆ ಎಂಬುದು ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೂ ತಿಳಿದಿದೆ. ಊಹಾಪೋಹಗಳಿಗೆ ತೆರೆಎಳೆಯುವಂತೆ, ಇನ್ನೇನು ನಾಲ್ಕೈದು ದಿನಗಳಲ್ಲಿ ಫಲಿತಾಂಶವೂ ಹೊರಬರಲಿದೆ.

ಇಂತಹ ಸಂಕೀರ್ಣ ಸ್ಥಿತಿಯ ನಡುವೆಯೂ ಒಂದು ವಿಷಯವನ್ನು ಭಾರತೀಯ ರಾಜಕಾರಣ ಗಮನಿಸಲೇಬೇಕು. ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಅಧಿಕಾರ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟ ದೇಶದ ಗಮನ ಸೆಳೆದಿದೆ ಎಂಬುದನ್ನು ಒಪ್ಪಲೇಬೇಕು. ಏಕಾಂಗಿ ಮಹಿಳೆಯಾಗಿ ಕೇಂದ್ರ ಸರ್ಕಾರದ ಅಡೆ ತಡೆಗಳನ್ನು ಎದುರಿಸುತ್ತಿರುವ ರೀತಿ ವಿಶಿಷ್ಟವಾಗಿದೆ. ಆಕೆಯ ಸಿಡಿಲಬ್ಬರದ ಮಾತುಗಳಿಗೆ ಬಿಜೆಪಿ ನಾಯಕರ ಬಳಿ ಉತ್ತರವಿಲ್ಲದಾಗಿದೆ. ಬಂಗಾಳಿ ಜನ, ನೆಲ, ಭಾಷೆ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರಶ್ನೆಯನ್ನು ಚುನಾವಣೆಯ ಮಹತ್ವದ ವಿಷಯವನ್ನಾಗಿಸಿದ್ದು ವಿಶೇಷವಾಗಿದೆ. ಅವರ ಜಾತ್ಯತೀತ ನಿಲುವು, ಬಹುತ್ವ ಭಾರತದ ಬದ್ಧತೆ ಪ್ರಶಂಸೆಗೆ ಪಾತ್ರವಾಗಿದೆ.

ಇಲ್ಲಿ ಮತ್ತೊಂದು ಮುಖ್ಯ ಸಂಗತಿ ಎಂದರೆ, ಕೇಂದ್ರ ಸರ್ಕಾರದ ವಿರುದ್ಧ, ದುಷ್ಟ-ಭ್ರಷ್ಟ ಬಿಜೆಪಿ ನಾಯಕರ ವಿರುದ್ಧ ತಕ್ಷಣ ಬೀದಿಗಿಳಿಯುವ ದೀದಿ, ಜನರೊಂದಿಗೆ ಜನರಾಗಿ ಬೆರೆತುಹೋಗುವ ಪರಿ ಅನನ್ಯವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಮಮತಾ ಬ್ಯಾನರ್ಜಿ ಮುಂಚೂಣಿಗೆ ತಂದಿರುವ ಮಹಿಳೆಯರಾದ, ಮಹುವಾ ಮೊಯಿತ್ರಾ ಮತ್ತು ಸಯೋನಿ ಘೋಷ್ ಎಂಬ ಗಟ್ಟಿ ವ್ಯಕ್ತಿತ್ವಗಳು, ಅವರು ಈ ಚುನಾವಣೆಯಲ್ಲಿ ನಿರ್ವಹಿಸಿದ ಪಾತ್ರ ಅಮೋಘವಾಗಿದೆ.  

ಭಾರತೀಯ ಪುರುಷಪ್ರಧಾನ ರಾಜಕೀಯ ವ್ಯವಸ್ಥೆ ಮಹಿಳೆಯರನ್ನು ಎಲ್ಲಿ ಇಟ್ಟಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅದರಲ್ಲೂ ಮಹಿಳಾಪರ ಪೋಸು ಕೊಡುವ ಪ್ರಧಾನಿ ಮೋದಿಯವರ ಐಟಿ ಸೆಲ್, ವಿರೋಧ ಪಕ್ಷಗಳ ಮಹಿಳಾ ರಾಜಕಾರಣಿಗಳನ್ನು ಚಿತ್ರಿಸುವ ಬಗೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಸೋನಿಯಾ, ಮಮತಾರನ್ನು ಅವರು ಮಹಿಳೆಯರೆಂದೇ ಪರಿಗಣಿಸುವುದಿಲ್ಲ. ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿಯೂ ಸಂಘಪರಿವಾರದ ಹುನ್ನಾರಗಳನ್ನು, ಬಿಜೆಪಿ ನಾಯಕರ ನಾಟಕವನ್ನು ಬಹಳ ಗಟ್ಟಿ ಧ್ವನಿಯಲ್ಲಿ ಬಯಲು ಮಾಡುತ್ತಿರುವವರು ಮಹುವಾ ಮೊಯಿತ್ರಾ ಮತ್ತು ಸಯೋನಿ ಘೋಷ್ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಮಹುವಾ ಮೊಯಿತ್ರಾ ಮತ್ತು ಸಯೋನಿ ಘೋಷ್– ಇವರನ್ನು ನೀವು ಇಷ್ಟಪಡಬಹುದು, ಪಡದಿರಬಹುದು. ದ್ವೇಷಿಸಬಹುದು, ದುಷ್ಟ ದುರ್ಗೆಯರೆನ್ನಬಹುದು. ಸೋಷಿಯಲ್ ಮೀಡಿಯಾದ ಟ್ರೋಲ್ ಎಂಬ ಅಸ್ತ್ರ ಪ್ರಯೋಗಿಸಿ ಮನಬಂದಂತೆ ಚಿತ್ರಿಸಬಹುದು, ಚಾರಿತ್ರ್ಯವಧೆ ಮಾಡಿ ಲೇವಡಿ ಮಾಡಬಹುದು. ಆದರೆ ಅವರನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ.

ಇದು ಕೇವಲ ರಾಜಕೀಯ ಅಧಿಕಾರದ ಪ್ರಶ್ನೆಯಲ್ಲ, ಅದಕ್ಕಿಂತಲೂ ಆಳವಾದ ವಿಚಾರ. ಅಧಿಕಾರಸ್ಥರನ್ನು ಎದುರಿಸಿ ನಿಲ್ಲುವ, ಅಂಜಿಕೆಯಿಲ್ಲದೆ ಪ್ರಶ್ನಿಸುವ ಮತ್ತು ತಮಗೆ ಅನಿಸಿದ್ದನ್ನು ನೇರವಾಗಿ ಪ್ರತಿಪಾದಿಸುವ ಈ ಛಲಗಾತಿಯರು ಇದ್ದಕ್ಕಿದ್ದಂತೆ ಎದ್ದು ನಿಂತವರಲ್ಲ. ಅವರ ಬುದ್ಧಿವಂತಿಕೆ, ದಿಟ್ಟತನ ಮತ್ತು ಆತ್ಮಸ್ಥೈರ್ಯ ಸಾಮಾನ್ಯದ್ದಲ್ಲ. ಇಂತಹ ವ್ಯಕ್ತಿತ್ವಗಳು ಸಾರ್ವಜನಿಕ ಚರ್ಚೆಯ ನಿಲುವು-ಧೋರಣೆಯನ್ನೇ ಬದಲಿಸಿಬಿಡುತ್ತವೆ.

ಇದನ್ನು ಓದಿದ್ದೀರಾ?: ಐಪಿಎಲ್: ರನ್ ಹೊಳೆ, ಹಣದ ಸುರಿಮಳೆ, ಕ್ರಿಕೆಟ್ ಕಣ್ಮರೆ!

ಸದ್ಯ ಪಶ್ಚಿಮ ಬಂಗಾಳದಲ್ಲಿ ಸತತವಾಗಿ ಮೂರು ಸಲ ಗೆದ್ದು, ನಾಲ್ಕನೇ ಬಾರಿಗೆ ಗೆಲ್ಲಲು ತೃಣಮೂಲ ಕಾಂಗ್ರೆಸ್ ತವಕಿಸುತ್ತಿದೆ. ಗೆಲುವು ಅಥವಾ ಸೋಲು ರಾಜಕೀಯ ಚಕ್ರದ ಭಾಗವಾಗಿ ಬರಬಹುದು ಮತ್ತು ಹೋಗಬಹುದು. ಆದರೆ ಈ ಮೂವರು ಮಹಿಳೆಯರು ಯಾವುದೇ ಮೀಸಲಾತಿಗಾಗಿ ಕಾಯದೆ, ಭಾರತೀಯ ರಾಜಕಾರಣದಲ್ಲಿ ತಮ್ಮದೇ ಆದ ಸ್ಥಾನವನ್ನು ಈಗಾಗಲೇ ನಿರ್ಮಿಸಿಕೊಂಡಿದ್ದಾರೆ. ಕೇವಲ ಮನೋಬಲ ಮತ್ತು ಗಟ್ಟಿಧ್ವನಿಯ ಮೂಲಕ ಮಹಿಳೆ ರಾಜಕೀಯದ ಕೇಂದ್ರಕ್ಕೆ ತಲುಪಬಹುದು ಮತ್ತು ಪ್ರಭಾವ ಬೀರಬಹುದು ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ನಿರಂತರ ಪ್ರತಿರೋಧದ ಶಕ್ತಿ ಇರುವುದು ಮಹಿಳೆಯರಲ್ಲಿ ಎಂಬುದನ್ನು ಸಾರುತ್ತಿದ್ದಾರೆ.

ಸೋಜಿಗದ ಸಂಗತಿ ಎಂದರೆ, ಸರಳತೆಯನ್ನು ಮೈಗೂಡಿಸಿಕೊಂಡ ಮಮತಾ ಬ್ಯಾನರ್ಜಿ ಎಂಬ ಹೆಣ್ಣುಮಗಳು ಮೂರು ಬಾರಿ ಮುಖ್ಯಮಂತ್ರಿಯಾದರೂ, ಪಶ್ಚಿಮ ಬಂಗಾಳದ ಮಹಿಳೆಯರ ಬದುಕು ಬದಲಾಗದಿರುವುದು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ | ಬ್ರಿಜ್ ಭೂಷಣ್‌ಗೆ ಬಿಜೆಪಿ ಮತ್ತೆ ಮಣೆ; ಚುನಾವಣೆಗೆ ಮುನ್ನ ಟಾಪ್ ಟೀಮ್‌ನಲ್ಲಿ ಸ್ಥಾನ!

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಕೆಲವೇ ತಿಂಗಳ...

ಕೊಪ್ಪಳ | ಪರಿಸರ ನಿಯಮ ಉಲ್ಲಂಘನೆ: 8 ಕಾರ್ಖಾನೆಗಳ ಬಂದ್‌ಗೆ ನಿರ್ಧಾರ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕೊಪ್ಪಳ...

ಔರಾದ್‌ | ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಆಗ್ರಹ

ರಾಜ್ಯ ಸರ್ಕಾರದ ಆದೇಶದಂತೆ ಔರಾದ್ ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯ ಅಂಗಡಿ...