ಭಾರತದ ಕೃಷಿ ಉತ್ಪನ್ನ ರಫ್ತು ಬಿಕ್ಕಟ್ಟು: ಮಾವು, ಅಕ್ಕಿ, ಮಸಾಲೆ ಪದಾರ್ಥಗಳ ನಿಷೇಧ

Date:

ಭಾರತೀಯ ಕೃಷಿ ಉತ್ಪನ್ನ ರಫ್ತು ಜಾಗತಿಕ ಮಟ್ಟದಲ್ಲಿ ಮುನ್ನಡೆಯಬೇಕಾದರೆ, ಕೇವಲ ರೈತರನ್ನು ಹೊಣೆ ಮಾಡದೆ, ಬೆಳೆಗಳ ಕಟಾವಿನ ನಂತರದ ಶೇಖರಣಾ ಘಟಕಗಳು ಹಾಗೂ ಸಂಸ್ಕರಣಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಹಂತ-ಹಂತದ ಗುಣಮಟ್ಟ ತಪಾಸಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕೃಷಿ ಉತ್ಪನ್ನ ರಫ್ತು ವಲಯವು ನಿಯಮಾವಳಿ ಅನುಸರಣೆಯಲ್ಲಿ ವಿಫಲವಾದ(Compliance Failure) ಕಾರಣ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸುವಂತಾಗಿದ್ದು, ರೋಗ ಲಕ್ಷಣ ತಪಾಸಣೆಯ ವೇಳೆ ಭಾರತದಿಂದ ಬಂದ ಹಲವು ಕೃಷಿ ಉತ್ಪನ್ನಗಳ ರಫ್ತು ಸರಕುಗಳಲ್ಲಿ ಸುರಕ್ಷಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಕೀಟನಾಶಕಗಳು ಉಳಿದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ, ನೇಪಾಳದ ಕೃಷಿ ಮತ್ತು ಪಶುಸಂಗೋಪನೆ ಅಭಿವೃದ್ಧಿ ಸಚಿವಾಲಯವು ಭಾರತೀಯ ಉತ್ಪನ್ನಗಳ ಆಮದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.

- Advertisement -

ಇದಕ್ಕೂ ಮುನ್ನ, ಮಾರ್ಚ್ ತಿಂಗಳಿನಲ್ಲಿ ಜಪಾನ್ ಅಧಿಕಾರಿಗಳು ಭಾರತ ಸರ್ಕಾರ ಸೂಚಿಸಿದ್ದ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಅಲ್ಲಿ ಒಪ್ಪಂದದ ಪ್ರಕಾರ ಗುಣಮಟ್ಟದ ನಿಯಮಗಳನ್ನು ಪೂರೈಸುವಲ್ಲಿ ವಿಫಲವಾಗಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜಪಾನ್‌ ಅಧಿಕಾರಿಗಳು, ಭಾರತೀಯ ಸಂಸ್ಕರಣಾ ಘಟಕಗಳಲ್ಲಿನ ಕಟ್ಟುನಿಟ್ಟಾದ ಸಂಸ್ಕರಣೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಕ್ರಿಯೆಗಳಲ್ಲಿನ ದೋಷಗಳನ್ನು ಎತ್ತಿತೋರಿಸಿದ್ದರು. ಬಳಿಕ ಭಾರತದ ಮಾವಿನ ಆಮದನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಭಾರತದ ಪ್ರಸಿದ್ಧ ತಳಿಗಳಾದ ಅಲ್ಫಾನ್ಸೋ, ಕೇಸರ್, ಚೌಸಾ, ಲಂಗ್ರಾ ಮತ್ತು ಬಂಗನಪಲ್ಲಿ ಸೇರಿದಂತೆ ಎಲ್ಲ ಪ್ರಮುಖ ಮಾವಿನ ತಳಿಗಳ ಮೇಲೆಯೂ ಪರಿಣಾಮ ಬೀರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಯೂರೋಪಿಯನ್ ಆಹಾರ ಸುರಕ್ಷತಾ ಪ್ರಾಧಿಕಾರ(EFSA) ಮತ್ತು ಯೂರೋಪಿಯನ್ ಕಮಿಷನ್‌ನ ವರದಿಯು ಭಾರತದ ಕೃಷಿ ರಫ್ತು ವಲಯ ಹಾಗೂ ಕೊಯ್ಲಿನ ನಂತರದ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಗಂಭೀರ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಾಕರಿಸಲ್ಪಟ್ಟ ಉತ್ಪನ್ನಗಳಲ್ಲಿ ರಾಸಾಯನಿಕಗಳು ಮತ್ತು ರೋಗಭರಿತ ಉತ್ಪನ್ನಗಳು ಕಂಡುಬಂದಿದ್ದು, ಜೈವಿಕ ಸುರಕ್ಷತೆಗೆ ದೊಡ್ಡ ಸವಾಲಾಗಿದೆಯೆಂದು ಅತಿ ಹೆಚ್ಚು ಉತ್ಪನ್ನಗಳನ್ನು ತಿರಸ್ಕರಿಸಲಾಗಿದೆ.

ತಿರಸ್ಕೃತಗೊಂಡ ಉತ್ಪನ್ನಗಳಲ್ಲಿ ಕೀಟನಾಶಕಗಳು ಮತ್ತು ಜೀವರಾಸಾಯನಿಕ ಲೋಹಗಳು ಸಿಂಹ ಪಾಲನ್ನು ಹೊಂದಿದ್ದು, ಸೀಸ(Lead), ಕ್ಯಾಡ್ಮಿಯಂ ಮತ್ತು ಪಾದರಸದಂತಹ ಜೀವರಾಸಾಯನಿಕ ಲೋಹಗಳಲ್ಲದೆ, ಕ್ಲೋರ್‌ಪೈರಿಫಾಸ್, ಟ್ರೈಸೈಕ್ಲಾಜೋಲ್, ಎಥಿಲಿನ್ ಆಕ್ಸೈಡ್‌ನಂತಹ ರಾಸಾಯನಿಕಗಳು ಕೂಡ ಪತ್ತೆಯಾಗಿವೆ.

  • 100ಕ್ಕೂ ಅಧಿಕ ರಫ್ತು ಸರಕುಗಳಲ್ಲಿ ಕ್ಲೋರ್‌ಪೈರಿಫಾಸ್ ಪತ್ತೆಯಾಗಿದ್ದು, ಇದು ಮಾನವನ ನರಮಂಡಲದ ಮೇಲೆ ವಿಷಕಾರಿ ಪರಿಣಾಮ ಬೀರುವುದರಿಂದ ಹಲವು ದೇಶಗಳಲ್ಲಿ ಇದನ್ನು ನಿರ್ಬಂಧಿಸಲಾಗಿದೆ.
  • ಟ್ರೈಸೈಕ್ಲಾಜೋಲ್ ಎಂಬ ರಾಸಾಯನಿಕ ಯೂರೋಪಿಯನ್ ದೇಶಗಳಲ್ಲಿ ನಿಷೇಧಿಸಲ್ಪಟ್ಟಿರುವ ಒಂದು ಶಿಲೀಂಧ್ರನಾಶಕ(Fungicide). ಆದರೂ ಧಾನ್ಯಗಳ ರಫ್ತಿನಲ್ಲಿ, ವಿಶೇಷವಾಗಿ ಅಕ್ಕಿ ಸರಕುಗಳಲ್ಲಿ ಇದನ್ನು ಹೆಚ್ಚಾಗಿ ಬಳಸಿರುವುದು ಕಂಡುಬರುತ್ತಿದೆ.
  • ಕಟಾವಿನ ನಂತರ ಬೆಳೆಗಳನ್ನು ಸಂಸ್ಕರಿಸಲು ಬಳಸುವ ಎಥಿಲಿನ್ ಆಕ್ಸೈಡ್ ಎಂಬ ರಾಸಾಯನಿಕ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದನ್ನು ಸಾಮಾನ್ಯವಾಗಿ ಹೊಲಗಳಲ್ಲಿ ಬಳಸುವುದಿಲ್ಲ; ಬದಲಿಗೆ, ಗೋದಾಮುಗಳಲ್ಲಿ ಶೇಖರಣೆಯ ಸಮಯದಲ್ಲಿ ಹಾಗೂ ರಫ್ತು ಮಾಡುವ ಮುನ್ನ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಲು ಬಳಸಲಾಗುತ್ತದೆ. ಹಾಗಾಗಿ ಕಟಾವಿನ ನಂತರ ಉತ್ಪನ್ನಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವುದು ಕಂಡುಬಂದಿದೆ.
  • ಕಳಪೆ ಶೇಖರಣಾ ವ್ಯವಸ್ಥೆ ಮತ್ತು ತೇವಾಂಶದ ಕಾರಣದಿಂದಾಗಿ ಸೂಕ್ಷ್ಮ ಜೀವಿಗಳು ಕಾಣಿಸಿಕೊಳ್ಳುತ್ತವೆ. ಸಾಲ್ಮೊನೆಲ್ಲಾ(Salmonella) ಬ್ಯಾಕ್ಟೀರಿಯಾವು ಸ್ವಚ್ಛತೆಯ ಕೊರತೆಯನ್ನು ಸೂಚಿಸಿದರೆ, ತೇವಾಂಶದ ಕಾರಣದಿಂದ ಧಾನ್ಯಗಳಲ್ಲಿ ಬೂಷ್ಟು(Fungal/Mold) ಬೆಳೆಯುವುದರಿಂದ ಅಫ್ಲಾಟಾಕ್ಸಿನ್ ಬಿ1(Aflatoxin B1) ಮತ್ತು ಓಕ್ರಾಟಾಕ್ಸಿನ್ ಎ(Ochratoxin A)ನಂತಹ ವಿಷಕಾರಿ ಅಂಶಗಳು ಉಂಟಾಗುತ್ತವೆ.

ಹೆಚ್ಚು ಬಾಧಿತವಾದ ಉತ್ಪನ್ನ: ತೀವ್ರ ನಿಗಾ ವಹಿಸಬೇಕಾದ ಪ್ರಮುಖ ಆಹಾರ ವಿಭಾಗ

ಉತ್ಪನ್ನದ ವರ್ಗಪ್ರಮುಖವಾಗಿ ಪತ್ತೆಯಾದ ಕಲುಷಿತ ಅಂಶಗಳು
ಮಸಾಲೆ ಪದಾರ್ಥಗಳು ಮತ್ತು ಗಿಡಮೂಲಿಕೆಗಳುಎಥಿಲಿನ್ ಆಕ್ಸೈಡ್, ಕ್ಲೋರ್‌ಪೈರಿಫಾಸ್, ಸಾಲ್ಮೊನೆಲ್ಲಾ
ಧಾನ್ಯಗಳು ಮತ್ತು ಬೇಕರಿ ಉತ್ಪನ್ನಗಳುಟ್ರೈಸೈಕ್ಲಾಜೋಲ್(ವಿಶೇಷವಾಗಿ ಅಕ್ಕಿ ತಳಿಗಳಲ್ಲಿ)
ಬೀಜಗಳು ಮತ್ತು ಒಣಹಣ್ಣುಗಳು(Nuts & Seeds)ಅಫ್ಲಾಟಾಕ್ಸಿನ್‌ಗಳು, ಜೀವರಾಸಾಯನಿಕ ಲೋಹಗಳು
ಹಣ್ಣುಗಳು ಮತ್ತು ತರಕಾರಿಗಳುನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಕೀಟನಾಶಕಗಳು
ಪಥ್ಯದ ಆಹಾರಗಳು ಮತ್ತು ಸಪ್ಲಿಮೆಂಟ್‌ಗಳುಜೀವರಾಸಾಯನಿಕ ಲೋಹಗಳು, ಅನಧಿಕೃತ ರಾಸಾಯನಿಕಗಳು

ಪೂರೈಕೆ ಸರಪಳಿ (Supply Chain) ಮೇಲಿನ ಪರಿಣಾಮಗಳು

ನಿರಂತರವಾಗಿ ಕೃಷಿ ಉತ್ಪನ್ನಗಳು ತಿರಸ್ಕಾರಗೊಳ್ಳುತ್ತಿರುವುದರಿಂದ ನಮ್ಮ ಪೂರೈಕೆ ಸರಪಳಿಯಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ರಾಸಾಯನಿಕಗಳನ್ನು ಪತ್ತೆಹಚ್ಚದಿರುವುದು ಸ್ಪಷ್ಟವಾಗುತ್ತದೆ. ಕಲುಷಿತಗೊಳ್ಳುವ ಪ್ರಕ್ರಿಯೆಯು ಕೇವಲ ಹೊಲಗಳಲ್ಲಿ ಮಾತ್ರ ನಡೆಯುವುದಿಲ್ಲ; ರೈತರು ಬಳಸುವ ಕೀಟನಾಶಕಗಳು ಒಂದು ಕಡೆಯಾದರೆ, ಸಾರಿಗೆ, ಗೋದಾಮುಗಳ ಕೀಟನಾಶಕಗಳು(Fumigation) ಮತ್ತು ಕೇಂದ್ರೀಯ ಸಂಸ್ಕರಣಾ ಘಟಕಗಳಲ್ಲಿ ಬಳಸುವ ರಾಸಾಯನಿಕಗಳಿಂದಲೂ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸಂಪೂರ್ಣ ಸರಪಳಿಯನ್ನು ಕಟ್ಟುನಿಟ್ಟಾದ ತಪಾಸಣೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂಬುದು ಕೃಷಿ ರಫ್ತು ತಜ್ಞರ ಅಭಿಪ್ರಾಯವಾಗಿದೆ.

ಚೀನಾ ಮಾರುಕಟ್ಟೆ: ರಫ್ತು ನಿರಾಕರಣೆ ಮತ್ತು ರಾಜತಾಂತ್ರಿಕ ವಿವಾದ

  • ಚೀನಾಕ್ಕೆ ರಫ್ತಾಗುವ ಅಕ್ಕಿ ಸರಕುಗಳು ತಿರಸ್ಕಾರಗೊಂಡಿರುವುದು ಕೇವಲ ಗುಣಮಟ್ಟದ ಪ್ರಶ್ನೆಯಾಗಿ ಉಳಿಯದೆ, ಒಂದು ಆರ್ಥಿಕ ಮತ್ತು ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ಚೀನಾ ಸರ್ಟಿಫಿಕೇಶನ್ ಮತ್ತು ಇನ್‌ಸ್ಪೆಕ್ಷನ್‌ ಗ್ರೂಪ್‌(CCIG)ನ ಭಾರತೀಯ ಕಚೇರಿಯು ಅಕ್ಕಿ ಸರಕುಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ, ಪ್ರಮಾಣೀಕರಿಸಿದ ನಂತರವೂ ಚೀನಾ ದೇಶವು ಆ ಸರಕುಗಳನ್ನು ತಿರಸ್ಕರಿಸಿದೆ ಎನ್ನಲಾಗಿದೆ.
  • “ನಮ್ಮ ರಫ್ತು ಸರಕುಗಳನ್ನು ಯಾವ ಆಧಾರದ ಮೇಲೆ ತಿರಸ್ಕರಿಸಲಾಗುತ್ತಿದೆ ಎಂಬ ನಿಖರವಾದ ಕಾರಣ ಅಥವಾ ಪದ್ಧತಿಯನ್ನು(Methodology) ಚೀನಾ ಅಧಿಕಾರಿಗಳು ಸ್ಪಷ್ಟಪಡಿಸುತ್ತಿಲ್ಲ. ಭಾರತದ ಜಾಗತಿಕ ನೋಟವನ್ನು ಹಾಳುಮಾಡಲು ಚೀನಾ ಪ್ರಯತ್ನಿಸುತ್ತಿದೆ” ಎಂದು ಭಾರತೀಯ ಅಧಿಕಾರಿಗಳು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುವ ಮೂಲಕ ಆರೋಪಿಸಿದ್ದಾರೆ.
  • ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಕುಗ್ಗಿಸಲು ಚೀನಾ ಹೀಗೆ ಮಾಡುತ್ತಿದೆ ಎಂದು ಕೆಲವು ವ್ಯಾಪಾರಿಗಳು ಆರೋಪಿಸಿದರೆ, ಇನ್ನು ಕೆಲವರು ಬೆಲೆಗಳು ಕಡಿಮೆಯಿದ್ದಾಗ ದಾಸ್ತಾನು(Inventory) ಮಾಡಿಕೊಂಡು, ಮುಂದಿನ ವ್ಯಾಪಾರ ಮಾತುಕತೆಗಳಲ್ಲಿ ಮೇಲುಗೈ ಸಾಧಿಸಲು ಚೀನಾ ಈ ತಂತ್ರ ಹೂಡುತ್ತಿದೆ ಎಂದು ವಾದಿಸುತ್ತಾರೆ.

ಯೂರೋಪಿಯನ್ ಯೂನಿಯನ್ (EU): ಗಂಭೀರ ಗುಣಮಟ್ಟದ ವೈಫಲ್ಯ

ಯೂರೋಪ್ ಭಾರತೀಯ ಕೃಷಿ ಉತ್ಪನ್ನಗಳ ಸ್ವಾಭಾವಿಕ ಮತ್ತು ಪ್ರಮುಖ ಆಮದುದಾರನಾಗಿದೆ. ಯುರೋಪ್ ತಿರಸ್ಕರಿಸಿರುವ ಉತ್ಪನ್ನಗಳನ್ನು ಗಮನಿಸಿದರೆ, ಅಲ್ಲಿ ಸ್ಪಷ್ಟವಾದ ಗುಣಮಟ್ಟದ ನಿಯಮಗಳ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.

  • ಕ್ಲೋರ್‌ಪೈರಿಫಾಸ್ ಅತ್ಯಂತ ವಿಷಕಾರಿ ಕೀಟನಾಶಕವಾಗಿದ್ದು, ಜೀನ್‌ಗಳ ನಾಶ(Genotoxic), ನರಮಂಡಲದ ಹಾನಿ(Neurotoxic) ಮತ್ತು ಕ್ಯಾನ್ಸರ್‌(Carcinogenic)ಗೆ ಕಾರಣವಾಗುವುದರಿಂದ ಜಗತ್ತಿನ 44 ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಹೀಗಿರುವಾಗ ಇದು ಭಾರತದ ಬರೋಬ್ಬರಿ 135 ಉತ್ಪನ್ನಗಳಲ್ಲಿ ಪತ್ತೆಯಾಗಿದೆ.
  • ಎಥಿಲಿನ್ ಆಕ್ಸೈಡ್(Ethylene Oxide) ಎಂಬ ರಾಸಾಯನಿಕವು ಭಾರತದಲ್ಲಿ ಕೃಷಿ ಬಳಕೆಗೆ ನೋಂದಣಿಯೇ ಆಗಿಲ್ಲದಿದ್ದರೂ, 40 ಉತ್ಪನ್ನಗಳಲ್ಲಿ ಪತ್ತೆಯಾಗಿದೆ. ಬೆಳೆ ಕಟಾವಾದ ಗೋದಾಮುಗಳಲ್ಲಿ ಬೆಳೆಗಳನ್ನು ಸಂಸ್ಕರಿಸುವಾಗ ಈ ರಾಸಾಯನಿಕಗಳನ್ನು ಬಳಸಿರುವುದು ಕಂಡುಬಂದಿದೆ. ಹಲವು ಉತ್ಪನ್ನಗಳಲ್ಲಿ ಕ್ಯಾಡ್ಮಿಯಂ, ಸೀಸ(Lead), ಮತ್ತು ಪಾದರಸ(Mercury)ದಂತಹ ಭಾರ ಲೋಹಗಳು ಪತ್ತೆಯಾಗಿವೆ. ಈ ರಾಸಾಯನಿಕಗಳು ಮತ್ತು ಲೋಹಗಳು ಮ್ಯುಟಾಜೆನಿಕ್(Mutagenic – ಜೀವಕೋಶಗಳ ಗುಣಲಕ್ಷಣ ಬದಲಾಯಿಸುವ) ಮತ್ತು ಕಾರ್ಸಿನೋಜೆನಿಕ್(ಕ್ಯಾನ್ಸರ್ ಕಾರಕ) ಸಂಯುಕ್ತಗಳನ್ನು ಹೊಂದಿದ್ದು, ಮನುಷ್ಯನ DNA ರಚನೆಯನ್ನು ಬದಲಾಯಿಸುವ ಹಾಗೂ ಕ್ಯಾನ್ಸರ್ ಉಂಟುಮಾಡುವ ಭೀಕರ ಸಾಮರ್ಥ್ಯವನ್ನು ಹೊಂದಿವೆ.

ಚೀನಾದ ತಿರಸ್ಕಾರಗಳ ಹಿಂದೆ ಮಾರುಕಟ್ಟೆಯ ತಂತ್ರಗಳು ಮತ್ತು ರಾಜಕೀಯ ಕಾರಣಗಳಿರುವ ಸಾಧ್ಯತೆಯಿದೆ ಎಂದಿದ್ದರೆ, ಯುರೋಪ್ ಮಾರುಕಟ್ಟೆಯ ತಿರಸ್ಕಾರಗಳು ಭಾರತೀಯ ರಫ್ತು ವ್ಯವಸ್ಥೆಯಲ್ಲಿ ತಕ್ಷಣವೇ ಸುಧಾರಿಸಬೇಕಾದ ಕೀಟನಾಶಕ ನಿರ್ವಹಣೆ ಮತ್ತು ಕಟ್ಟುನಿಟ್ಟಾದ ಗುಣಮಟ್ಟದ ತಪಾಸಣೆಯ ಅಗತ್ಯವನ್ನು ಎತ್ತಿ ತೋರಿಸುತ್ತವೆ ಎನ್ನಲಾಗಿದೆ.

“ಆಹಾರ ಪದಾರ್ಥಗಳಲ್ಲಿ ಈ ಮಾಲಿನ್ಯವು (Contamination) ನಿಖರವಾಗಿ ಯಾವ ಹಂತದಲ್ಲಿ ನಡೆಯುತ್ತಿದೆ ಎಂಬುದನ್ನು ಭಾರತ ಸರ್ಕಾರವು ಪತ್ತೆಹಚ್ಚುತ್ತಿಲ್ಲ. ಪ್ರತಿ ಬಾರಿಯೂ ಈ ಸಮಸ್ಯೆ ಮುನ್ನೆಲೆಗೆ ಬಂದಾಗ, ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಆಟ ಶುರುವಾಗುತ್ತದೆ. ಕೊನೆಗೆ ಇಡೀ ತಪ್ಪು ರೈತರ ತಲೆಗೆ ಸುತ್ತಿಕೊಳ್ಳುತ್ತದೆ. ಆದರೆ, ರೈತರು ಹೊಲಗಳಲ್ಲಿ ‘ಎಥಿಲಿನ್ ಆಕ್ಸೈಡ್’ ನಂತಹ ಕೀಟನಾಶಕಗಳನ್ನು ಬಳಸುವುದೇ ಇಲ್ಲ. ಗೋದಾಮುಗಳು ಮತ್ತು ಶೇಖರಣಾ ಘಟಕಗಳಲ್ಲಿ(Storage units) ಕೀಟಗಳನ್ನು ನಿಯಂತ್ರಿಸಲು ಈ ರಾಸಾಯನಿಕವನ್ನು ಬಳಸಲಾಗುತ್ತದೆ. ದುರದೃಷ್ಟವಶಾತ್, ನಮ್ಮಲ್ಲಿ ಒಂದು ಉತ್ಪನ್ನವನ್ನು ಪೂರೈಕೆ ಸರಪಳಿಯ ಪ್ರತಿಯೊಂದು ಹಂತದಲ್ಲೂ(Stage-by-stage) ಕಟ್ಟುನಿಟ್ಟಾಗಿ ತಪಾಸಣೆ ಮಾಡುವ ಯಾವುದೇ ವ್ಯವಸ್ಥೆಯಿಲ್ಲ” ಎಂದು ಪರಿಸರ ಮತ್ತು ಸಾರ್ವಜನಿಕ ನೀತಿ ತಜ್ಞರಾದ ನರಸಿಂಹ ರೆಡ್ಡಿ ದೊಂತಿ ಅವರು ಡೆಕಾನ್‌ ಹೆರಾಲ್ಡ್‌ಗೆ ಪ್ರತಿಕ್ರಿಯಿಸಿದ್ದಾರೆ.

  • ಮಾವಿನ ಹಣ್ಣಿನ ರಫ್ತು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪ್ರತಿಷ್ಠೆ

ಭಾರತವು ವಾರ್ಷಿಕವಾಗಿ ಸುಮಾರು 2.8 ಕೋಟಿ ಮೆಟ್ರಿಕ್ ಟನ್(28 Million Metric Tonnes) ಮಾವಿನ ಹಣ್ಣನ್ನು ಉತ್ಪಾದಿಸುತ್ತದೆ. ಇದು ಜಾಗತಿಕ ಉತ್ಪಾದನೆಯ ಶೇ.45 ರಿಂದ 50 ರಷ್ಟಾಗಿದೆ. ಭಾರತವು ಜಗತ್ತಿನ 150ಕ್ಕೂ ಹೆಚ್ಚು ದೇಶಗಳಿಗೆ ಮಾವನ್ನು ರಫ್ತು ಮಾಡುತ್ತದೆ. ಹೀಗಾಗಿ, ಯಾವುದೇ ಒಂದು ದೇಶದಲ್ಲಿ ಭಾರತೀಯ ಉತ್ಪನ್ನಗಳು ತಿರಸ್ಕೃತಗೊಂಡರೂ, ಅದು ಜಾಗತಿಕ ಪ್ರತಿಷ್ಠೆಗೆ ದೊಡ್ಡ ಮಟ್ಟದ ಹಾನಿಯಾಗುತ್ತದೆ.

  • ಜಪಾನ್ ಮಾರುಕಟ್ಟೆ ಮತ್ತು ಹಳೆಯ ಇತಿಹಾಸ

ಹಣ್ಣು ನೊಣಗಳ(Fruit Fly Infestation) ಕಾಟದ ಹಿನ್ನೆಲೆಯಲ್ಲಿ ಜಪಾನ್ ದೇಶವು 1986ರಲ್ಲೇ ಭಾರತೀಯ ಮಾವಿನ ಹಣ್ಣುಗಳ ಆಮದನ್ನು ನಿಷೇಧಿಸಿತ್ತು. ಈ ನಿಷೇಧವು ಸುಲಭವಾಗಿ ತೆರವಾಗಲಿಲ್ಲ. ಜಪಾನ್‌ನ, ತಪಾಸಣೆ ನಿಯಮಗಳನ್ನು ಪೂರೈಸಲು ಭಾರತವು ತನ್ನ ರಫ್ತು ಮೂಲಸೌಕರ್ಯವನ್ನೇ ಸಂಪೂರ್ಣವಾಗಿ ಬದಲಾಯಿಸಬೇಕಾಯಿತು. ಇದಕ್ಕಾಗಿ ಭಾರತವು ವಿಶೇಷ ವೇಪರ್ ಹೀಟ್ ಟ್ರೀಟ್‌ಮೆಂಟ್(VHT – ಆವಿ ಶಾಖ ಸಂಸ್ಕರಣೆ) ಘಟಕಗಳನ್ನು ಸ್ಥಾಪಿಸಿತು. ಈ ಸಸ್ಯ ನೈರ್ಮಲ್ಯ(Phytosanitary) ನಿಯಮಗಳನ್ನು ಪೂರೈಸಿದ ಬಳಿಕ ಜಪಾನ್ 2006ರಲ್ಲಿ ನಿಷೇಧವನ್ನು ಹಿಂತೆಗೆದುಕೊಂಡಿತ್ತು. ಎರಡು ದಶಕಗಳ ಹಿಂದೆ ಸ್ಥಾಪಿಸಲಾದ ಇದೇ VHT ತಪಾಸಣಾ ಘಟಕಗಳು ಮತ್ತು ಮೂಲಸೌಕರ್ಯಗಳು, ಇಂದು ಮತ್ತೊಮ್ಮೆ ಜಾಗತಿಕ ಗುಣಮಟ್ಟದ ನಿಯಮಗಳನ್ನು ಪೂರೈಸುವಲ್ಲಿ ವಿಫಲವಾಗುತ್ತಿರುವುದರಿಂದ ಜಪಾನ್‌ ಮತ್ತೊಮ್ಮೆ ಭಾರತೀಯ ಕೃಷಿ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ. ಇದು ಕೃಷಿ ರಫ್ತು ವಲಯದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿದೀರಾ? ಮೇಘಾಲಯದ ಖಾಸಿ ರೈತರ ಮಣ್ಣು ಸಂರಕ್ಷಣೆ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ಪ್ರೇರಣಾದಾಯಕ ಕಥೆ

ಪ್ರಸ್ತುತ ಬಿಕ್ಕಟ್ಟುಗಳು ಕೇವಲ ಬಿಡಿ ಪ್ರಕರಣಗಳಲ್ಲ. ಭಾರತೀಯ ಕೃಷಿ ಉತ್ಪನ್ನ ರಫ್ತು ಜಾಗತಿಕ ಮಟ್ಟದಲ್ಲಿ ಮುನ್ನಡೆಯಬೇಕಾದರೆ, ಕೇವಲ ರೈತರನ್ನು ಹೊಣೆ ಮಾಡದೆ, ಬೆಳೆಗಳ ಕಟಾವಿನ ನಂತರದ ಶೇಖರಣಾ ಘಟಕಗಳು ಹಾಗೂ ಸಂಸ್ಕರಣಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಹಂತ-ಹಂತದ ಗುಣಮಟ್ಟ ತಪಾಸಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...