ಸ್ನೇಹ ಮತ್ತು ಪ್ರಗತಿಯೇ ನಾಗರಿಕತೆಯ ಬೆಳವಣಿಗೆ

Date:

- Advertisement -

ಜ್ಞಾನ ಅನ್ನುವುದು ತನ್ನಷ್ಟಕ್ಕೇ ತುಂಬಾ ಸುಂದರವಾದ ಸಂಗತಿ. ಜೊತೆಗೆ ಆದರಿಂದ ಬೇರೆ ಬೇರೆ ಲಾಭಗಳೂ ಇವೆ. ಹೊಸ ಹೊಸ ಅನ್ವೇಷಣೆಗಳಿಂದ ಆಗುವ ಉತ್ಪಾದನೆಯಿಂದ ಸಿಗುವ ಅನುಕೂಲ ಒಂದು ಕಡೆ. ಇನ್ನೊಂದು ಕಡೆ ಜನರ ನಡುವೆ ಬೆಳೆಯುವ ಹೊಸ ಸಂಬಂಧಗಳು. ಹೀಗೆ ಹಲವಾರು ಲಾಭಗಳು ಜ್ಞಾನದಿಂದ ಆಗುತ್ತವೆ. 17ನೇ ಶತಮಾನದ ಫ್ರೆಂಚ್ ಲೇಖಕ ಕಾಮೆ ಡಿ ಬಸ್ಸಿಯ ಒಂದು ಪ್ರಖ್ಯಾತ ಉಲ್ಲೇಖವಿದೆ. ” ಅಂಧತ್ವದಿಂದ ಪ್ರೀತಿ ಹುಟ್ಟಿಕೊಳ್ಳುತ್ತದೆ. ಜ್ಞಾನದಿಂದ ಸ್ನೇಹ ಹುಟ್ಟಿಕೊಳ್ಳುತ್ತದೆ.” ಪ್ರೇಮ ಅನ್ನುವುದು ನಾವು ಯಾವುದಕ್ಕೆ ಸಿಕ್ಕಿಬೀಳುತ್ತಿದ್ದೇವೆ ಎನ್ನುವುದರ ತಿಳುವಳಿಕೆ ಇಲ್ಲದಿರುವುದರ ಪರಿಣಾಮವಿರಬಹುದು. ಆದರೆ ಪ್ರೇಮದಿಂದ ಜಗತ್ತು ಹಲವು ರೀತಿಯಲ್ಲಿ ಶ್ರೀಮಂತವಾಗಿರುವುದಂತೂ ನಿಜ. ವಿಶೇಷವಾಗಿ ರೋಮಿಯೋ ಮತ್ತು ಜ್ಯೂಲಿಯೆಟ್, ಅಭಿಜ್ಞಾನ ಶಾಕುಂತಲ, ಲೌಲಾ ಮಜ್ಜು ಇತ್ಯಾದಿ ಅತ್ಯುತ್ತಮ ಸಾಹಿತ್ಯ ಕೃತಿಗಳಿಂದ ಲೋಕ ಶ್ರೀಮಂತವಾಗಿದೆ. ಆದರೆ ಸ್ನೇಹ (ಬಸ್ಸಿ ರಬುಟಿನ್ ಹೇಳುವಂತೆ ಜ್ಞಾನದಿಂದ ಸ್ನೇಹ ಸೃಷ್ಟಿಯಾಗುತ್ತದೋ ಇಲ್ಲವೋ) ಏನನ್ನು ಸೃಷ್ಟಿಸುತ್ತದೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...
Amartya Sen 1 2

ಕಾಮೆ ಡಿ ಬಸ್ಸಿ ಹೇಳಿದ್ದಕ್ಕಿಂತ ವಿರುದ್ಧ ದಿಕ್ಕಿನಲ್ಲಿ ನಾನು ಯೋಚಿಸುತ್ತಿದ್ದೇನೆ. ಜ್ಞಾನ ಹೇಗೆ ಸ್ನೇಹವನ್ನು ಸೃಷ್ಟಿಸುತ್ತದೆ ಅನ್ನುವುದಕ್ಕಿಂತ ಸ್ನೇಹ ಹೇಗೆ ಜ್ಞಾನವನ್ನು ಸೃಷ್ಟಿಸುತ್ತದೆ ಅನ್ನುವುದಕ್ಕೆ ಹೆಚ್ಚು ಮಹತ್ವಕೊಡುತ್ತಿದ್ದೇನೆ. ಸ್ನೇಹ ಜ್ಞಾನವನ್ನು ಸೃಷ್ಟಿಸುವುದರಲ್ಲಿ ಹೇಗೆ ನೆರವಾಗುತ್ತದೆ ಎಂಬ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು. ಇದು ವಿಜ್ಞಾನದ ಚರಿತ್ರೆ ಹಾಗೂ ತತ್ತ್ವಶಾಸ್ತ್ರದ ಪ್ರಾಮುಖ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ ತುಂಬಾ ಮುಖ್ಯ. ಆದರೆ ರಾಷ್ಟ್ರೀಯತೆಯ ಭಾವನೆಯ ಜನ ಇದನ್ನು ಒಪ್ಪದೇ ಇರಬಹುದು. ಜಗತ್ತಿನ ಇತರ ಪ್ರದೇಶಗಳಿಂದ ಪ್ರತ್ಯೇಕವಾಗಿಯೇ ಉಳಿದುಕೊಂಡು (ಅಂದರೆ ಉಳಿದವರಿಂದ ಮತ್ತು ಗೆಳೆಯರಿಂದ ಕಲಿಯದೆ) ನಮ್ಮ ದೇಶದಲ್ಲಿ ವಿಜ್ಞಾನ ಮತ್ತು ಗಣಿತ ವಿಕಾಸಗೊಳ್ಳಬಹುದು ಎಂದು ಅವರು ಹೇಳಬಹುದು. ಆದರೆ ವಿಜ್ಞಾನ ಮತ್ತು ಗಣಿತ ಅಷ್ಟೇ ಅಲ್ಲ ಕೊನೆಗೆ ಸಂಸ್ಕೃತಿ ಕೂಡ ಹಾಗೆ ಬೆಳೆದಿಲ್ಲ.

ಉದಾಹರಣೆಗೆ ಪುರಾತನ ಭಾರತ ಒಂದು ದ್ವೀಪವಾಗಿ, ಜಗತ್ತಿನಿಂದ ಪ್ರತ್ಯೇಕವಾಗಿ ಉಳಿದುಕೊಂಡು ತನ್ನಷ್ಟಕ್ಕೆ ಅನ್ವೇಷಣೆಗಳನ್ನು ಮತ್ತು ಆವಿಷ್ಕಾರಗಳನ್ನು ಮಾಡಿದೆ ಅಂದುಕೊಳ್ಳುವುದು ಭಾರತೀಯ ರಾಷ್ಟ್ರೀಯವಾದಿ ಬುದ್ದಿಜೀವಿಗಳಿಗೆ ಸಂತೋಷವಾಗಬಹುದು. ಆದರೆ ಹಾಗೆ ಭಾವಿಸುವುದು ಮೂಲಭೂತವಾಗಿ ತಪ್ಪು. ನಾವು ಪರಸ್ಪರ ಒಬ್ಬರಿಂದ ಒಬ್ಬರು ಕಲಿಯುತ್ತೇವೆ. ನಮ್ಮ ಬೌದ್ಧಿಕ ಪರಿದಿ ಇನ್ನೊಬ್ಬರ ಜ್ಞಾನದಿಂದ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ನಾವು ಜ್ಞಾನವನ್ನು ಹೊರಗಿನಿಂದ ಪಡೆದುಕೊಳ್ಳುತ್ತೇವೆ. ಹಾಗೆ ಲಭಿಸಿದ ಜ್ಞಾನಕ್ಕೆ ತನ್ನದೇ ಆದ ಒಂದು ಚಾಲಕ ಶಕ್ತಿಯಿರುತ್ತದೆ. ಹಾಗಾಗಿ ಅದು ಬೆಳೆಯುತ್ತದೆ. ವೃದ್ಧಿಗೊಳ್ಳುತ್ತದೆ. ನಾವು ಪಡೆದುಕೊಂಡಿದ್ದಕ್ಕೆ ಮತ್ತಷ್ಟನ್ನು ಸೇರಿಸಿ ಜಗತ್ತಿಗೆ ಮರಳಿಕೊಡುತ್ತೇವೆ. ಉದಾಹರಣೆಗೆ ಗಣಿತಶಾಸ್ತ್ರದ ಸುವರ್ಣ ಯುಗವನ್ನೇ ಗಮನಿಸೋಣ. ಸುವರ್ಣಯುಗ ಅಂದರೆ ನಾವು ಸಾಮಾನ್ಯವಾಗಿ ಭಾವಿಸುವಂತೆ ವೇದದ ಕಾಲವಲ್ಲ. ಭಾರತದಲ್ಲಿ ನಿಜವಾಗಿ ಗಣಿತಶಾಸ್ತ್ರದ ಸುವರ್ಣಯುಗ ಅನ್ನೋದು ಮೊದಲ ಮಿಲಿನಿಯಂನ ಅಭಿಜಾತ ಕಾಲಕ್ಕೆ ಸಂಬಂಧಿಸಿದ್ದು. ಸರಿಸುಮಾರು ಕಾಳಿದಾಸ, ಶೂದ್ರಕ ಮತ್ತು ಇತರ ಸಾಹಿತಿಗಳಿಂದ ಮೇರು ಸಾಹಿತ್ಯ ಕೃತಿಗಳು ರಚನೆಯಾದ ಕಾಲ. ಕ್ರಿಶ 476ರಲ್ಲಿ ಜನಿಸಿದ ಆರ್ಯಭಟ ಅವರಿಂದ ವಿಶೇಷವಾಗಿ ಭಾರತದಲ್ಲಿ ಗಣಿತೀಯ ಕ್ರಾಂತಿ ಪ್ರಾರಂಭವಾಯಿತು. ಅದನ್ನು ವರಾಹಮಿಹಿರ, ಬ್ರಹ್ಮಗುಪ್ತ, ಭಾಸ್ಕರ ಮತ್ತು ಇತರರು ಬೆಳೆಸಿದರು. ಆರ್ಯಭಟನ ಹಾದಿ ತುಂಬಾ ಸಂಕೀರ್ಣವಾದದ್ದು ಮತ್ತು ಅದರ ವಿಸ್ತಾರ ತೀರಾ ಅಸಾಧಾರಣ. ಅದು ಸ್ವತಂತ್ರವಾಗಿ ಬೆಳೆಯಿತು ಅನ್ನುವುದು ನಿಜ. ಆದರೆ ಅಷ್ಟೇ ನಿಜವಾದ ಸಂಗತಿ ಅಂದರೆ ಅದರ ಮೇಲೆ ಗ್ರೀಸ್, ಬ್ಯಾಬಿಲೋನ್ ಮತ್ತು ರೋಮಿನಲ್ಲಿ ಆದ ಗಣೀತಿಯ ಬೆಳವಣೆಗೆಯ ಪ್ರಭಾವ ಆಗಿದೆ ಅನ್ನುವುದು. ಎರಡಕ್ಕೂ ಸಾಕಷ್ಟು ಆಧಾರಗಳಿವೆ.

Amartya Sen 759

ಹೊರಗಿನ ಪ್ರಭಾವ ಇತ್ತು. ಆದರೂ ಭಾರತದಲ್ಲಿ ಗಣಿತ ಮತ್ತು ಖಗೋಳಶಾಸ್ತ್ರ ಆರ್ಯಭಟನ ಕೈಯಲ್ಲಿ ತುಂಬಾ ಬೆಳೆಯಿತು. ಇಡೀ ಭಾರತದಲ್ಲೇ ಅದರ ಸಾಧನೆ ಅದ್ವಿತೀಯವಾದದ್ದು. ಭಾರತ ಹೊರಗಿನಿಂದ ಒಂದಿಷ್ಟನ್ನು ಪಡೆದುಕೊಂಡಿತು. ಆದರೆ ಹಾಗೆ ಪಡೆದುಕೊಂಡಿದ್ದಿಕ್ಕಿಂತ ತುಂಬಾ ಹೆಚ್ಚನ್ನು ಜಗತ್ತಿಗೆ ಅದು ನೀಡಿದೆ. ಭಾರತದಲ್ಲಿ ಹುಟ್ಟಿಕೊಂಡ ಹೊಸ ವಿಚಾರ ಹೊರ ಜಗತ್ತಿಗೆ ಹರಡಿಕೊಂಡಿತು. ಅದು ಕೇವಲ ಗ್ರೀಸ್ ಮತ್ತು ರೋಂಗೆ ಮಾತ್ರವಲ್ಲ, ವಿಶೇಷವಾಗಿ ಚೀನಾಗೂ ಹೋಯಿತು. ಅಲ್ಲಿ ಅದು ಖಗೋಳಶಾಸ್ತ್ರದ ಅಪ್ರತಿಮ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು (ಖಗೋಳಶಾಸ್ತ್ರ ತೀರಾ ಉಚ್ಚಾಯದಲ್ಲಿದ್ದ 8ನೇ ಶತಮಾನದಲ್ಲಿ ಭಾರತೀಯ ಗಣಿತಜ್ಞ ಗೌತಮ ಚೀನಾದ ಖಗೋಳಶಾಸ್ತ್ರದ ಸಮಿತಿಯ ಮುಖ್ಯಸ್ಥ ಆಗಿದ್ದ.) ಅದು ಹಾಗೆಯೇ ಅರಬ್ ಮಾತನಾಡುವ ಭಾಷಿಕರ ದೇಶಗಳಲ್ಲೂ ಹರಡಿಕೊಂಡಿತು. ಅರಬ್ ಭಾಷೆ 8ರಿಂದ 11ನೇ ಶತಮಾನದವರೆಗಿನ ಗಣಿತಶಾಸ್ತ್ರದ ಬೆಳವಣಿಗೆಯ ಬಹುಮುಖ್ಯ ಸಾಧನವಾಗಿತ್ತು. ಭಾರತ ಮೊದಲಿಗೆ ಬೇರೆಯವರಿಂದ ಕಲಿತು. ಅದನ್ನು ಬೆಳೆಸಿ ಅನಂತರದಲ್ಲಿ ಬೇರೆಯವರಿಗೆ ಕಲಿಸಿ ಗಣಿತದ ಜಗತ್ತಿಗೆ ದೊಡ್ಡ ಕೊಡುಗೆಯನ್ನು ನೀಡಿದರು. ಸ್ನೇಹ ಹೀಗೆ ಪರಸ್ಪರ ಪ್ರಭಾವ ಬೀರುವ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಈ ಪ್ರಕ್ರಿಯೆಯಲ್ಲಿ ಇಡುವ ಪ್ರತಿಹೆಜ್ಜೆಯೂ ಮುಂದಿನದನ್ನು ಗಟ್ಟಿಗೊಳಿಸುತ್ತಾ ವಿಭಿನ್ನ ದೇಶಗಳಲ್ಲಿ ಜ್ಞಾನವನ್ನು ಹೆಚ್ಚಿಸುತ್ತಾ ಸಾಗಿದೆ.

ಸುಮೇರಿಯ ಮತ್ತು ಬ್ಯಾಬಿಲೋನಿನಲ್ಲಿ ಶೈಶವಾವಸ್ಥೆಯಲ್ಲಿದ್ದ ತ್ರಿಕೋನಮಿತಿಯ ವಿಚಾರಗಳು ಕ್ರಿ.ಪೂ.3ನೇ ಶತಮಾನದಲ್ಲಿ ಗ್ರೀಕ್ ಗಣಿತದಲ್ಲಿ ಯುಕ್ಲಿಡ್ ಮತ್ತು ಅರ್ಕಿಮಿಡಿಸ್ ಅವರ ಗಮನಕ್ಕೆ ಬಂತು. ವಿಷ್ಯಾ ಮೈನರ್‌ನಲ್ಲಿ ಒಂದು ಶತಮಾನದ ನಂತರ ಹಿಪಾರ್ಕಸ್ ಗಮನಕ್ಕೆ ಬಂದಿತು. ಕ್ರಿ.ಪೂ. ಮೊದಲ ಶತಮಾನದಲ್ಲಿ ಸೂರ್ಯ ಸಿದ್ಧಾಂತವು ಭಾರತದಲ್ಲಿ ತ್ರಿಕೋನಮಿತಿಯ ರಚನೆಗಳನ್ನು ಮತ್ತಷ್ಟು ಸಂಕೀರ್ಣವಾಗಿ ಬೆಳೆಸಿತು.

ಭಾರತದ ಗಣಿತಶಾಸ್ತ್ರದ ಮೇಲೆ ಗ್ರೀಕ್ ಪ್ರಭಾವ ಆಗಿದ್ದು ಸ್ಪಷ್ಟ, ಆದರೆ ಅಲೆಕ್ಸಾಂಡರ್ ಮತ್ತು ಗ್ರೀಕ್ ನೆಲಸಿಗರು ಭಾರತಕ್ಕೆ ಪರಿಚಯಿಸಿದಕ್ಕಿಂತ ತ್ರಿಕೋನಮಿತಿಯನ್ನು ಅದರಲ್ಲೂ ವಿಶೇಷವಾಗಿ ಅನ್ವಯಿಕ ಖಗೋಳಶಾಸ್ತ್ರವನ್ನು ಸೂರ್ಯ ಸಿದ್ಧಾಂತ ಹೆಚ್ಚು ಅಭಿವೃದ್ಧಿಗೊಳಿಸಿತು. ಉದಾಹರಣೆಗೆ ಕ್ರಿಶ 5ನೇ ಶತಮಾನದ ಕೊನೆಯ ವೇಳೆಗೆ ಗಣಿತಶಾಸ್ತ್ರದಲ್ಲಿ ಆಗಿರುವ ಬೆಳವಣಿಗೆಯನ್ನು ಸಮಗ್ರವಾಗಿ ಆರ್ಯಭಟ ಕ್ರೋಡಿಕರಿಸುವ ಸಂದರ್ಭದಲ್ಲಿ ಸೈನ್ ಎಂಬ ಪರಿಕಲ್ಪನೆ ತ್ರಿಕೋನಮಿತಿಯ ಪರಿಕಲ್ಪನೆಯಾಗಿ ನಿಖರವಾದ ಪರಿಶೋಧನೆಯಾಗಿ ರೂಪಪಡೆದುಕೊಂಡಿತು. ಇಂದಿಗೂ ಅದು ಬಹುಶಃ ಬಹಳವಾಗಿ ಬಳಕೆಯಾಗುತ್ತಿರುವ ಪರಿಕಲ್ಪನೆ.

ಆದರೆ ಆರ್ಯಭಟನ ಪರಿಕಲನೆಗೆ “ಸೈನ್” ಎಂಬ ಹೆಸರು ಬಂದದ್ದಾದರು ಹೇಗೆ? ಅದು ಸಂಸ್ಕೃತದ ಪದವಲ್ಲ ಅಥವಾ ಯಾವುದೇ ಭಾರತೀಯ ಭಾಷೆಯ ಪದವೂ ಅಲ್ಲ. ಇದು ಸ್ವಲ್ಪಮಟ್ಟಿಗೆ ಭಾಷಾಶಾಸ್ತ್ರದ ಚರಿತ್ರೆಗೆ ಸಂಬಂಧಿಸಿದ ವಿಷಯ. ಇದನ್ನು ನನ್ನ ಆರ್ಗ್ಯುಮೆಂಟೇಟಿವ್ ಇಂಡಿಯನ್ ಪುಸ್ತಕದಲ್ಲಿ ಚರ್ಚಿಸಿದ್ದೇನೆ. ಅದನ್ನು ಮತ್ತೆ ಇಲ್ಲೂ ನೆನಪಿಸಿಕೊಳ್ಳುತ್ತಿದ್ದೇನೆ. ಆರ್ಯಭಟ ಸೈನ್ ಅನ್ನು ಸಂಸ್ಕೃತದಲ್ಲಿ “ಜ್ಯಾ-ಅರ್ಧ” ಅಂತ ಕರೆದ. ಅಂದರೆ ಅರ್ಧ ಜ್ಯಾ. ಅದಕ್ಕೆ ತ್ರಿಕೋನಮಿತಿಯ ಜ್ಯಾಮಿತಿಯನ್ನು ಆಧಾರವಾಗಿ ಬಳಸಿಕೊಂಡಿದ್ದ. ಸಂಕ್ಷೇಪವಾಗಿ ಅದನ್ನು “ಜ್ಯಾ” ಅಂತ ಉಲ್ಲೇಖಿಸಲಾಗುತ್ತಿತ್ತು. ಅರಬ್ ಗಣಿತಶಾಸ್ತ್ರಜ್ಞರು ಈ ಪರಿಕಲ್ಪನೆಯನ್ನು ಅರೆಬಿಕ್ ಭಾಷೆಗೆ ಅನುವಾದಿಸಿದಾಗ ಅದನ್ನು “ಜಿಬಾ” ಎಂದು ಕರೆದರು. ಅದು ಜ್ಯಾ ಎಂಬುದರ ಅಪಭ್ರಂಶ, ಅರೇಬಿಕ್‌ನಲ್ಲಿ ಬರೆಯುವಾಗ ಕೇವಲ ವ್ಯಂಜನಗಳನ್ನು ಬಳಸುತ್ತಾರೆ. ಸ್ವರಾಕ್ಷರಗಳನ್ನು ಬಿಟ್ಟುಬಿಡುತ್ತಾರೆ. ಹಾಗಾಗಿ ಆರ್ಯಭಟನ ಜ್ಯಾ ಅನ್ನು “ಜೆಬಿ” ಎಂದು ಎರಡು ವ್ಯಂಜನಗಳನ್ನು ಬಳಸಿ ಬರೆಯಲಾಯಿತು. ಅದನ್ನು ಉಚ್ಚರಿಸುವಾಗ ಜಯಾಬ್ ಎಂದು ಹೇಳಲಾಗುತ್ತಿತ್ತು. ಜಯಾಬ್ ಅಂದರೆ ಅರೆಬಿಕ್‌ನಲ್ಲಿ ಗೂಡು (ಕೋವ್ ಅಥವಾ ಬೆ) ಅನ್ನುವ ಅರ್ಥ ಇದೆ.

thumbnail proper 1280x72 1

ತ್ರಿಕೋನಮಿತಿಗೆ ಸಂಬಂಧಿಸಿದ ತೀರಾ ಸಂಕೀರ್ಣವಾದ ಅರಬ್ ಗ್ರಂಥಗಳಲ್ಲಿನ ಆರ್ಯಭಟನಿಂದ ಪಡೆದುಕೊಂಡ ಈ ಸಾಲುಗಳನ್ನು ಅಂತಿಮವಾಗಿ ಲ್ಯಾಟಿನ್‌ಗೆ ಅನುವಾದ ಮಾಡುವಾಗ ಜಯಾಬ್ ಎಂಬ ಪದವನ್ನು ಸಿನಸ್ ಎಂದು ಅನುವಾದಿಸಲಾಯಿತು. ಅಲ್ಲಿ ಅದಕ್ಕೆ ಕೋವ್ ಅಥವಾ ಬೆ ಅನ್ನುವ ಅರ್ಥ ಇದೆ. ಅಲ್ಲಿಂದ ಮುಂದಕ್ಕೆ ಈ ಸೈನಸ್ ಎಂಬ ಪದ ಸಂಕ್ಷಿಪ್ತಗೊಂಡು “ಸೈನ್” ಎಂಬ ಪದ ಆಧುನಿಕ ಜ್ಯಾಮಿತಿಯ ಪದವಾಗಿ ಬಳಕೆಗೆ ಬಂತು. ಇಂದು ಬಹುವಾಗಿ ಬಳಸುವ ಗಣಿತಶಾಸ್ತ್ರೀಯ

ಪದವಾದ ಸೈನ್ ಪದದಲ್ಲಿ ಆರ್ಯಭಟನ ಸಂಸ್ಕೃತ ಪದ ಜ್ಯಾದ ನೆನಪು ಮತ್ತು ನಂತರದ ಅರೆಬಿಕ್ ಮತ್ತು ಲ್ಯಾಟಿನ್ ಭಾಷೆಯ ಅನುವಾದಗಳ ನೆನಪನ್ನು ಕಾಣಬಹುದು. ಯುರೋಪಿನಿಂದ ಸರಳ ಸ್ವರೂಪದಲ್ಲಿ ಭಾರತಕ್ಕೆ ಬಂದು, ಇಲ್ಲಿ ಅಭಿವೃದ್ಧಿಗೊಂಡು ಮತ್ತೆ ಜಗತ್ತಿಗೆ ಹೋಗಿದೆ. ಅಲ್ಲಿ ಅದು ಹೆಚ್ಚು ಅಭಿವೃದ್ಧಿಗೊಂಡ ಗಣಿತಶಾಸ್ತ್ರದ ಮತ್ತು ಖಗೋಳಶಾಸ್ತ್ರದ ಸಾಧನವಾಗಿದೆ. ವಿಜ್ಞಾನ, ಗಣಿತಶಾಸ್ತ್ರ ಮತ್ತು ಸಂಸ್ಕೃತಿ ಬೆಳೆದಿರುವುದು ಹೀಗೆ. ಅದರ ಬೆಳವಣಿಗೆಯನ್ನು ಕುರಿತಂತಹ ಪ್ರತ್ಯೇಕವಾದೀ ನಿಲುವು ದಿಕ್ಕುತಪ್ಪಿಸುತ್ತದೆ. ಅದು ಅತ್ಯಂತ ತಪ್ಪು ನಿಲುವು.

ಸ್ನೇಹ ಅನ್ನೋದು ಕೇವಲ ರಾಷ್ಟ್ರಗಳ ನಡುವೆ ಮಾತ್ರವಲ್ಲ. ರಾಷ್ಟ್ರದ ಒಳಗೂ ಅನ್ವಯಿಸುತ್ತದೆ. ರಾಜಕೀಯ ಗುಂಪುಗಳ, ಪಂಗಡಗಳ ನಡುವೆ ಪ್ರತ್ಯೇಕತಾವಾದಿಗಳು ಉಂಟುಮಾಡಲು ಪ್ರಯತ್ನಿಸುತ್ತಿರುವ ವಿಭಜನೆ, ಘರ್ಷಣೆ ಮತ್ತು ಹಿಂಸೆ ನಮ್ಮ ಸಾಮಾಜಿಕ ಬದುಕುಗಳನ್ನು ಮಾತ್ರವಲ್ಲ ದೇಶಗಳ ನಡುವೆ ಮತ್ತು ಒಳಗೆ ಬೌದ್ಧಿಕ ಬೆಳವಣಿಗೆಗೂ ಹಾನಿಕಾರಕವಾಗಿದೆ. ಜ್ಞಾನದ ಬೆಳವಣಿಗೆಯನ್ನು ಕುರಿತ ಪ್ರತ್ಯೇಕತಾವಾದಿ ನಿಲುವು ಮೂಲಭೂತವಾಗಿ ತಪ್ಪು, ಅದು ರಾಷ್ಟ್ರೀಯವಾದಿಗಳಿಗೆ ಮತ್ತು ಮೂಲಭೂತವಾದಿಗಳಿಗೆ ಅಪ್ಯಾಯಮಾನವಾಗಿದ್ದಿರಬಹುದು. ಸ್ನೇಹ ಅನ್ನೋದು ನಮ್ಮ ಬೌದ್ಧಿಕ ಅನ್ವೇಷಣೆಯಲ್ಲಿ ತುಂಬಾ ಮುಖ್ಯ. ಸ್ನೇಹದಿಂದ ಬೇರೆಯ ಅನುಕೂಲಗಳೂ ಇವೆ ಅನ್ನುವುದು ನಿಜ. ಆದರೆ ವಿಜ್ಞಾನ ಮತ್ತು ಗಣಿತಶಾಸ್ತ್ರದ ಬೆಳವಣಿಗೆಯಲ್ಲಿ ಮತ್ತು ಸಾಮಾನ್ಯವಾಗಿ ಜ್ಞಾನದ ಬೆಳವಣಿಗೆಯಲ್ಲಿ ಸ್ನೇಹ ಉಂಟುಮಾಡುವ ಸುಂದರವಾದ ಪರಿಣಾಮ ಅವೆಲ್ಲಕ್ಕಿಂತ ತುಂಬಾ ಮಹತ್ವದ್ದು.

(This article first appeared in the print edition of Janu-ary 8, 2020, under the title “Friendship and progress”. The writer, a Nobel laureate in economics, is Thomas W. Lamont University Professor and professor of economics and philosophy at Harvard University. Excerpted from the keynote lecture at the Infosys Prize ceremony, 2020)

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website | + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಗತಿಕವಾಗಿ ಫಲವತ್ತತೆಯೇಕೆ ಕ್ಷೀಣಿಸುತ್ತಿದೆ?

ಅಮೆರಿಕ, ಹಲವು ಯುರೋಪ್ ದೇಶಗಳು ಮತ್ತೆ ಏಷ್ಯಾದ ಫಲವತ್ತತೆ (ಮಕ್ಕಳ ಜನನ...

ಹೊಸ ಜಿಡಿಪಿ ದತ್ತಾಂಶದ ಒಳನೋಟಗಳು

2026ರಲ್ಲಿ ಬಹುನಿರೀಕ್ಷಿತ ಹೊಸ ಜಿಡಿಪಿ ಸರಣಿ ಬಿಡುಗಡೆಯಾಗಿದೆ. ಆಧಾರವರ್ಷವನ್ನು ಪರಿಷ್ಕರಿಸಲಾಗಿದೆ. ಬಿಡುಗಡೆಯಾದ...

ರೂಪಾಯಿಯ ಕುಸಿತದ ವಿಶ್ಲೇಷಣೆ!

ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಯುದ್ಧ ಪ್ರಾರಂಭಿಸಿದಾಗಿನಿಂದ, ಏಷ್ಯಾದ...

ಭಾರತದ ಆರ್ಥಿಕತೆಯ ಮೇಲೆ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮಗಳು

ರಷ್ಯಾ-ಉಕ್ರೇನ್ ಯುದ್ಧವು ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಆದರೂ ಪಶ್ಚಿಮ ಏಷ್ಯಾದಲ್ಲಿನ...