ಯುದ್ಧದ ಪರಿಣಾಮವಾಗಿ ಜಿಡಿಪಿ ಕುಸಿಯುವ ಸಾಧ್ಯತೆಯಿದೆ

Date:

ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ 2027ರ ಹಣಕಾಸು ವರ್ಷದಲ್ಲಿ ಬೆಳವಣಿಗೆಯ ಅಂದಾಜುಗಳು ಗಣನೀಯವಾಗಿ ಕುಸಿಯುವ ಅಪಾಯವಿದೆ ಎಂದು ಅನಂತ ನಾಗೇಶ್ವರನ್ ಹೇಳಿದ್ದಾರೆ. ಹಾಗೂ ಸರ್ಕಾರದ ವೆಚ್ಚಗಳ ಆದ್ಯತೆಯನ್ನು ಬದಲಿಸಲು ಕರೆ ನೀಡಿದ್ದಾರೆ.

- Advertisement -

2027ರಲ್ಲಿ ಜಿಡಿಪಿ ಶೇಕಡ 6.8ರಿಂದ 7.2ರ ನಡುವೆ ಇರಬಹುದು ಎಂದು ಅಂದಾಜು ಮಾಡಲಾಗಿತ್ತು. ಫೆಬ್ರವರಿ 27 ರಂದು ಜಿಡಿಪಿಯ ಆಧಾರ ವರ್ಷವನ್ನು ಪರಿಷ್ಕರಣೆ ಮಾಡಿದ ಮೇಲೆ ನಾಗೇಶ್ವರನ್ ಅವರು 2027ರ ಜಿಡಿಪಿ ಅಂದಾಜನ್ನು ಪರಿಷ್ಕರಿಸಿ ಅದು ಶೇಕಡಾ 7 – 7.4ಕ್ಕೆ ಇರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಆದರೆ ಇತ್ತೀಚಿನ ವರದಿಯಲ್ಲಿ “ಈ ಸಂಖ್ಯೆಯಲ್ಲಿ ಗಣನೀಯ ಕುಸಿತದ ಸಾಧ್ಯತೆಯಿದೆ.” ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ “ಚಾಲ್ತಿ ಖಾತೆಯ ಕೊರತೆಯು ಕೂಡ 2027ರಲ್ಲಿ ಗಮನಾರ್ಹವಾಗಿ ಹೆಚ್ಚಾಗಲಿದೆ” ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಸಿದ್ಧಪಡಿಸಿದ ‘ಮಾಸಿಕ ಆರ್ಥಿಕ ವಿಮರ್ಶೆ’ಯ ಮುನ್ನುಡಿಯಲ್ಲಿ ಅವರು ತಿಳಿಸಿದ್ದಾರೆ.

ChatGPTImageApr20202606 38 38P

ಪರಿಣಾಮ ಬೀರಬಹುದಾದ ನಾಲ್ಕು ಕಾರಣಗಳು
ಈ ಯುದ್ಧದ ಪರಿಣಾಮವು ಭಾರತದ ಮೇಲೆ ನಾಲ್ಕು ರೀತಿಯಲ್ಲಿ ಆಗಬಹುದು ಎಂದು ಕಳೆದ ತಿಂಗಳು ಅವರು ಬರೆದಿದ್ದರು. ಅದನ್ನು ಮತ್ತೆ ಈ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ:

  1. ತೈಲ, ಆನಿಲ ಮತ್ತು ರಸಗೊಬ್ಬರಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಮುಖ್ಯವಾಗಿ ರಫ್ಟಿನ ಮೇಲೆ ಪರಿಣಾಮ,
  2. ಹೆಚ್ಚಿನ ಆಮದು ಬೆಲೆಗಳು.
  3. ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಗಳು (ಉದಾಹರಣೆಗೆ, ಸರಕು ಸಾಗಣೆ ಮತ್ತು ವಿಮೆ).
  4. ಗಲ್ಫ್ ದೇಶಗಳಲ್ಲಿನ ಭಾರತೀಯರಿಂದ ಬರುವ ಹಣದ ವರ್ಗಾವಣೆಯಲ್ಲಿ ಸಂಭವನೀಯ ಕುಸಿತ.

“ಆರ್ಥಿಕ ಪ್ರಗತಿ, ಹಣದುಬ್ಬರ, ಹಣಕಾಸಿನ ಸಮತೋಲನ ಮತ್ತು ಬಾಹ್ಯ ಸಮತೋಲನಗಳ ಮೇಲೆ ಈ ನಾಲ್ಕು ಅಂಶಗಳು ಒಟ್ಟಾರೆಯಾಗಿ ಬೀರುವ ಪರಿಣಾಮ ಗಣನೀಯವಾಗಿರುವ ಸಾಧ್ಯತೆಗಳಿವೆ” ಎಂದು ಅವರು ತಿಳಿಸಿದ್ದಾರೆ.

ಅತಿ ಹೆಚ್ಚು ತೊಂದರೆಗೊಳಗಾದ ಮತ್ತು ದುರ್ಬಲ ವ್ಯವಹಾರಗಳಿಗೆ ಹಾಗೂ ಕುಟುಂಬಗಳಿಗೆ ಭಾರತವು ತಕ್ಷಣದ ಪರಿಹಾರವನ್ನು ನೀಡಬೇಕಾದ ಅಗತ್ಯವಿದೆ. ಅದೇ ಸಮಯದಲ್ಲಿ, ಸಂಘರ್ಷದಿಂದ ಉದ್ಭವಿಸಿರುವ ಆಯಕಟ್ಟಿನ ಮತ್ತು ದೀರ್ಘಕಾಲೀನ ಅಗತ್ಯಗಳನ್ನು ಪೂರೈಸಲು (ಕೇವಲ ಇಂಧನಕ್ಕೆ ಸಂಬಂಧಿಸಿದಲ್ಲದೆ, ಹಲವಾರು ಇತರ ಸರಕು ಮತ್ತು ಸಾಮಗ್ರಿಗಳಲ್ಲಿ ಬಫರ್ ದಾಸ್ತಾನುಗಳನ್ನು ನಿರ್ಮಿಸುವಂತಹ ಕ್ರಮಗಳಿಗಾಗಿ) ಹಣಕಾಸನ್ನು ಹೊಂದಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ 2026ರ ವರದಿಯ ಪ್ರಕಾರ, ಭಾರತದ ಆರ್ಥಿಕತೆಯ ವೇಗ ಸ್ವಲ್ಪ ತಗ್ಗಿದೆ. ಇದಕ್ಕೆ ಜಾಗತಿಕವಾಗಿ ನಡೆಯುತ್ತಿರುವ ವಿದ್ಯಮಾನಗಳೇ ಮುಖ್ಯ ಕಾರಣ ಎನ್ನುತ್ತಾರೆ ನಾಗೇಶ್ವರನ್.

ಸರಕು ಸಾಗಾಟ: ಮಾರ್ಚ್ 22ರವರೆಗೆ ಸರಕು ಸಾಗಾಟದ ಬಿಲ್‌ಗಳ (E-way bills) ಸಂಖ್ಯೆ ಕಳೆದ ತಿಂಗಳಿಗೆ ಹೋಲಿಸಿದರೆ ಶೇ. 5.3 ರಷ್ಟು ಕಡಿಮೆಯಾಗಿದೆ. ಅಂದರೆ ಸಾಮಾನಿನ ಓಡಾಟ ಸ್ವಲ್ಪ ಕಡಿಮೆಯಾಗಿದೆ ಎಂದರ್ಥ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಇನ್ನೂ ಶೇ. 9.4ರಷ್ಟು ಹೆಚ್ಚಿಗೆಯೇ ಇದೆ.

ಉತ್ಪಾದನೆ: ಪೆಟ್ರೋಲ್, ಡೀಸೆಲ್ ಅಥವಾ ಇಂಧನದ ಬೆಲೆಗಳು ಏರಿಕೆಯಾದ ಕಾರಣ, ಕಂಪನಿಗಳ ಉತ್ಪಾದನಾ ವೇಗವು ಸ್ವಲ್ಪ ಮಂದಗತಿಯಲ್ಲಿದೆ.

ಖರೀದಿಸುವ ಆಸಕ್ತಿ: ಇಷ್ಟೆಲ್ಲಾ ಆದರೂ ಜನರ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಹೊಸ ವಾಹನಗಳ ನೋಂದಣಿ ಶೇ. 19.1 ರಷ್ಟು ಹೆಚ್ಚಾಗಿದೆ ಮತ್ತು ಜನರು ಡಿಜಿಟಲ್ ಮೂಲಕ (UPI ಇತ್ಯಾದಿ) ಹಣ ಪಾವತಿ ಮಾಡುವುದು ಕೂಡ ವೇಗವಾಗಿ ಬೆಳೆಯುತ್ತಿದೆ.

ಗ್ರಾಮೀಣ ಪ್ರದೇಶಗಳ ಸ್ಥಿತಿ: ಹಳ್ಳಿಗಳಲ್ಲಿ ಜನರ ಆರ್ಥಿಕ ಉತ್ಸಾಹ ಸ್ವಲ್ಪ ಕಡಿಮೆಯಾದಂತೆ ಕಂಡರೂ, ಅಲ್ಲಿನ ಜನರು ವಸ್ತುಗಳನ್ನು ಖರೀದಿಸುವುದು ಮಾತ್ರ ಹೆಚ್ಚಾಗುತ್ತಿದೆ.

ಆನಂತ ನಾಗೇಶ್ವರನ್ ಇಂತಹ ಸಂದರ್ಭದಲ್ಲೂ, ಪರಿಸ್ಥಿತಿ ಮಂಕಾಗದಂತೆ ಸರ್ಕಾರ ಎಚ್ಚರಿಕೆ ವಹಿಸುತ್ತಿದೆ. ಜನರಿಗೆ ಇಂಧನದ ಕೊರತೆಯಾಗದಂತೆ ನೋಡಿಕೊಳ್ಳಲು ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟಲು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

-ಅನಂತ ನಾಗೇಶ್ವರನ್

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು...

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...