ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

Date:

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ ಹತ್ತಿ ಹಣ್ಣು ಕೀಳೋದಂದ್ರೆ ಭಾರಿ ಇಷ್ಟ. ಒಮ್ಮೆ ನಾವು ಹೋಗಿದ್ದ ಮನೆಯ ತೋಟದಲ್ಲಿ ಹಣ್ಣು ತುಂಬಿದ್ದ ಸೀಬೆ ಮರಗಳ ಸಾಲನ್ನು ನೋಡಿದ ಮೇಲಂತು ನನ್ನ ಆಸೆಯನ್ನು ಹತ್ತಿಕ್ಕಿಕೊಳ್ಳಲು ಆಗಲೇ ಇಲ್ಲ. ಸೀಬೆಮರದಲ್ಲಿ ರೆಂಬೆಗಳು ಕೆಳಗಿನಿಂದಲೇ ಕವಲೊಡೆದಿರುತ್ತವೆ. ಹಣ್ಣಿನ ಭಾರಕ್ಕೆ ತೊನೆದು, ತೂಗುತ್ತಿದ್ದ ರೆಂಬೆಯನ್ನು ವಿರೋದು ನನಗೆ ನೀರು ಕುಡಿದಷ್ಟು ಸುಲಭವಾಗಿತ್ತು. ಹಣ್ಣಿನ ಭಾರದಿಂದ ಬಾಗಿದ್ದ ರೆಂಬೆಯ ಮೇಲೆ ಕುಳಿತಿದ್ದೆ. ಅಂಡೂರಿಕೊಂಡು ಒಂದೆರಡು ಅಡಿ ಕೆಳಗೆ ಜಾರಬೇಕಿತ್ತು ಅಷ್ಟೆ. ಆಗ ನನ್ನ ಕಾಲುಗಳ ಮೇಲೆ ಏನೋ ಹರಿದಾಡಿದಂತಾಯ್ತು. ನೋಡಿದರೆ ದಷ್ಟಪುಷ್ಟವಾದ ಕೆಂಜಿಗಗಳ ಸೈನ್ಯ ನೇರವಾಗಿ ನನ್ನ ಚಡ್ಡಿಯೊಳಕ್ಕೇ ಮೆರವಣಿಗೆ ಹೊರಟಿತ್ತು!

- Advertisement -

ಮುಂದಿನದನ್ನು ನಾನೇನು ಹೇಳಬೇಕಿಲ್ಲ. ನಾನು ಹುಲ್ಲುಹಾಸುಗಳನ್ನು ಹಾರಿಕೊಂಡು ಹತ್ತಿರದ ಬಚ್ಚಲು ಮನೆಗೆ ಆಷ್ಟು ವೇಗವಾಗಿ ದೌಡಾಯಿಸಿದ್ದನ್ನು ನೋಡಿ ನನ್ನಮ್ಮ ದಂಗಾಗಿದ್ದಳು. ಸೀಬೆ ಮರದಲ್ಲಿ ಕೆಂಜಿಗಗಳು ಇರುತ್ತವೆ ಎನ್ನುವುದು ನನಗೆ ಅಂದೇ ಗೊತ್ತಾಗಿದ್ದು, ಅವು ಅದೇನನ್ನು ಹುಡುಕುತ್ತಿದ್ದವೊ ನನಗಂತೂ ತಿಳಿಯದು. ಆದರೆ ಅದು ಸಿಗದೇ ಹೋದಾಗ ಭೀಕರವಾಗಿ ಕಚ್ಚುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ನನಗೆ ಈಗಲೂ ಸೀಬೆಹಣ್ಣು ಎಂದರೆ ತುಂಬಾ ಇಷ್ಟ. ಅದರಲ್ಲೂ ಬೆಂಗಾಲಿಯಲ್ಲಿ ದಂಶ ಎಂದು ಕರೆಯುವ ಸೀಬೆಹಣ್ಣು ಕಂಡರೆ ಬಲುಪ್ರೀತಿ. ಇನ್ನೂ ಹಣ್ಣಾಗುವ ಹಂತದಲ್ಲಿರುವ (ಅರೆಬಲಿತ) ಹಣ್ಣುಗಳೆಂದರೆ ಇನ್ನೂ ಪ್ರೀತಿ (ಇದು ಕೇಳುವುದಕ್ಕೆ ಸ್ವಲ್ಪ ಅಸಭ್ಯ ಅನಿಸಬಹುದು), ಸಿಹಿ, ಹುಳಿ, ಮತ್ತೆ ಸ್ವಲ್ಪ ಒಗರು ಬೆರೆತ ಆ ರುಚಿಯಿಂದ ಬಾಯಲ್ಲಿ ಒಂದು ತಾಜಾತನ ಚಿಮ್ಮುತ್ತದೆ. ನಿಮ್ಮ ಬಾಯೊಳಗೆ ಸಣ್ಣ ದೀಪವೊಂದು ಹೊತ್ತಿದಂತೆ ಅನಿಸುತ್ತದೆ. ಚಾಟ್ಸ್ ಮತ್ತೆ ಸಲಾಡ್‌ಗಳಿಗಂತೂ ಇದು ಬಲು ಸೊಗಸು. ವಿಟಮಿನ್‌ಭರಿತವಾದ ಇದರಲ್ಲಿ ನಾರಿನಂಶ ಹೆಚ್ಚಿಗೆ ಇರುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕಬ್ಬಿಣದ ಅಂಶವೂ ಇರುತ್ತದೆ (ವಿಶೇಷವಾಗಿ ಗುಲಾಬಿ ಕೆಂಪು ಬಣ್ಣದ ತಿರುಳಿರುವ ಸೀಬೆಹಣ್ಣಿನಲ್ಲಿ). ಇದರ ಗೈಸೆಮಿಕ್ ಇಂಡೆಕ್ಸ್ ಕೂಡ ತುಂಬಾ ಕಡಿಮೆ.

ಸೀಬೆಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ. ಅದು, ನಮ್ಮ ದೇಹದ ಕಬ್ಬಿಣದಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹರಿಯಾಣದ ಚೌಧರಿ ಚರಣ್ ಸಿಂಗ್ ಕೃಷಿ ವಿಶ್ವವಿದ್ಯಾಲಯದ ವರ್ಷಾ ರಾಣಿ ನೇತೃತ್ವದ ತಂಡವು 2024ರಲ್ಲಿ ಒಂದು ಯಾದೃಚ್ಛಿಕ ನಿಯಂತ್ರಿತ ಪ್ರಯೋಗ [randomised controlled trial] ನಡೆಸಿತು. ಅದರ ಪ್ರಕಾರ, ಏಳು ತಿಂಗಳ ಕಾಲ ಶಾಲೆಯ ಮಧ್ಯಾಹ್ನದ ಊಟದಲ್ಲಿ ಹೆಸರುಬೇಳೆಯ ಜೊತೆಗೆ ಸೀಬೆಹಣ್ಣನ್ನೂ ಕೊಡಲಾಯಿತು. ಅದನ್ನು ಸೇವಿಸಿದ 6ರಿಂದ 10 ವರ್ಷದ ಮಕ್ಕಳಲ್ಲಿ, ಕೇವಲ ಹೆಸರುಬೇಳೆ ಮಾತ್ರ ತಿಂದವರಿಗಿಂತ ರಕ್ತಹೀನತೆಗೆ [Anemia) ತುತ್ತಾಗುವ ಸಾಧ್ಯತೆ ಶೇ. 50ರಷ್ಟು ಕಡಿಮೆ ಇರುವುದು ಕಂಡುಬಂದಿತು.

ಇದು ಮುಖ್ಯ, ತುಂಬಾ ಮುಖ್ಯವಾದ ವಿಷಯ. ಏಕೆಂದರೆ ಜಗತ್ತಿನಲ್ಲಿ ಸುಮಾರು ಎರಡು ಶತಕೋಟಿ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಮತ್ತು ಭಾರತದಲ್ಲಿ ಅವರ ಸಂಖ್ಯೆ ಅತ್ಯಂತ ಹೆಚ್ಚಿಗೆ ಇದೆ. ಪ್ರಸ್ತುತ ಜಾಗತಿಕ ಮಾನದಂಡಗಳ ಪ್ರಕಾರ, ಭಾರತದ ಸುಮಾರು ಶೇ. 60ರಷ್ಟು ಮಹಿಳೆಯರು ಮತ್ತು ಮಕ್ಕಳು ಹಾಗೂ ಶೇ. 30ಕ್ಕಿಂತ ಹೆಚ್ಚು ಪುರುಷರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕಿಂತ ನಮ್ಮಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಿಗೆ ಇದೆ; ನಮಗಿಂತ ಹೆಚ್ಚು ಬಡತನದಲ್ಲಿರುವ ದೇಶಗಳ ಮಟ್ಟದಲ್ಲಿ ಈಗ ನಾವಿದ್ದೇವೆ. ರುಚಿಯಾದ, ತಾಜಾ ಸೀಬೆಹಣ್ಣು ಸಲೀಸಾಗಿ ಕೈಗಟುಕುವಂತಿದ್ದರೂ (ಆದರೆ ಕೆಂಜಿಗದ ಬಗ್ಗೆ ಸ್ವಲ್ಪ ಹುಷಾರಾಗಿರಬೇಕು) ನಮಗೆ ಈ ಪರಿಸ್ಥಿತಿ ಬಂದಿದೆ! ರಕ್ತಹೀನತೆ ಎಲ್ಲರಿಗೂ ಇರುತ್ತದೆ. ಇದೇನು ದೊಡ್ಡ ಕಾಯಿಲೆಯಲ್ಲ ಅಂದುಕೊಂಡರೆ ಅದು ತಪ್ಪು.

ಮೊದಲನೆಯದಾಗಿ, ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ [NFHS] ಪ್ರಕಾರ, 5 ಕೋಟಿಗಿಂತಲೂ ಹೆಚ್ಚು ಮಕ್ಕಳು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ದೈಹಿಕ ಬೆಳವಣಿಗೆ ಮತ್ತು ಬೌದ್ಧಿಕ ವಿಕಸನ ಎರಡಕ್ಕೂ ತೊಂದರೆಯಾಗುತ್ತದೆ. ಅದು ಮನುಷ್ಯನನ್ನು ದೈಹಿಕವಾಗಿ ಕುಂದಿಸುತ್ತದೆ. ಕೆಲವೊಮ್ಮೆ ಜೀವಕ್ಕೂ ಕುತ್ತಾಗಬಹುದು.

ಇದಲ್ಲದೆ, ಮೂರು ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ 9ರಷ್ಟು ಮಂದಿ ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರ ಮೆದುಳಿನ ಬೆಳವಣಿಗೆ ಕುಂಠಿತಗೊಳ್ಳುವ ಅಪಾಯವಿದೆ.

ಎರಡನೆಯದಾಗಿ ಗರ್ಭಿಣಿಯರಲ್ಲಿ ಮಗು ಮತ್ತು ತಾಯಿ ಇಬ್ಬರಿಗೂ ರಕ್ತಹೀನತೆ ತುಂಬಾ ಅಪಾಯಕಾರಿ. ಲ್ಯಾನ್‌ಸೆಟ್ ಗ್ಲೋಬಲ್‌ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಲೇಖನದ ಪ್ರಕಾರ ಹೆರಿಗೆ ಸಮಯದಲ್ಲಿ ಅತಿಯಾದ ರಕ್ತಸ್ರಾವವಾಗಿ, ತಾಯಿ ಸಾವನ್ನಪ್ಪುವ ಸಾಧ್ಯತೆ ರಕ್ತಹೀನತೆಯಿದ್ದವರಲ್ಲಿ 7 ಪಟ್ಟು ಹೆಚ್ಚಿಗೆ ಇರುತ್ತದೆ. ನನ್ನ ಲೆಕ್ಕಾಚಾರದ ಪ್ರಕಾರ ಪ್ರತಿ ವರ್ಷ ಸುಮಾರು 3 ಲಕ್ಷ ಮಹಿಳೆಯರು ಇಂತಹ ಅಪಾಯದ ನಡುವೆಯೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಮತ್ತು ಅವರಲ್ಲಿ ಸಾಯುವವರ ಸಂಖ್ಯೆಯೂ ಗಣನೀಯವಾಗಿದೆ.

ರಕ್ತಹೀನತೆ ಸಣ್ಣ ಪ್ರಮಾಣದಲ್ಲಿದ್ದರೂ ಜನರಿಗೆ ತೊಂದರೆಯಾಗುತ್ತದೆ. ಏಕೆಂದರೆ ರಕ್ತಹೀನತೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುತ್ತದೆ. ಈ ಹಿಮೋಗ್ಲೋಬಿನ್ ಮೂಲಕ ಸಾಗುವ ಆಮ್ಲಜನಕ ಸ್ನಾಯುಗಳಿಗೆ ಚೈತನ್ಯ ನೀಡುತ್ತದೆ.

banerjee 99994 content portrait mobile tiny 1

2000ದ ಆರಂಭದಲ್ಲಿ ನನ್ನ ಗೆಳೆಯ ಹಾಗೂ ಡ್ಯೂಕ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಡಂಕನ್ ಥಾಮಸ್ ಅವರ ತಂಡ ಕೇಂದ್ರ ಜಾವಾದಲ್ಲಿ ಒಂದು ಬೃಹತ್ ಅಧ್ಯಯನವನ್ನೇ ನಡಿಸಿತ್ತು, ಅದರಲ್ಲಿ 17,000 ಕಾರ್ಮಿಕರು ಪಾಲ್ಗೊಂಡಿದ್ದರು. ದಿನಗೂಲಿ ಕಾರ್ಮಿಕರಿಗೆ ಕಬ್ಬಿಣದ ಅಂಶವಿರುವ ಪೂರಕ ಆಹಾರ [Iron supplements] ನೀಡಿದಾಗ ಅವರಲ್ಲಾದ ಬದಲಾವಣೆಯನ್ನು ಅದು ಅಧ್ಯಯನ ಮಾಡಿತು.

ಅಧ್ಯಯನದಲ್ಲಿ ಪಾಲ್ಗೊಂಡ ಜನರಿಗೆ ವಿಶೇಷವಾಗಿ ರಕ್ತಹೀನತೆಯ ಸಮಸ್ಯೆಯೇನೂ ಇರಲಿಲ್ಲ. ಶೇಕಡಾ 8ಕ್ಕೂ ಕಡಿಮೆ ಗಂಡಸರಲ್ಲಿ ಸಾಧಾರಣ ಮಟ್ಟದ ರಕ್ತಹೀನತೆ ಇತ್ತು. ಅದು ಪ್ರಸ್ತುತ ಭಾರತದ ರಕ್ತಹೀನತೆಯ ಪ್ರಮಾಣಕ್ಕೆ ಹೋಲಿಸಿದರೆ ತುಂಬಾ ಕಡಿಮೆಯೆಂದೇ ಹೇಳಬಹುದು. ಆದರೂ, ಅಲ್ಪಪ್ರಮಾಣದ ರಕ್ತಹೀನತೆ ಇದ್ದ ಇವರಿಗೆ ಹೆಚ್ಚಿನ ಕಬ್ಬಿಣಂಶಗಳನ್ನು ನೀಡಿದಾಗ ಅವರ ಉತ್ಪಾದಕತೆ ಹೆಚ್ಚಿತು.

ಗಂಡಸರು ನಿದ್ದೆ ಮಾಡುವುದು ಕಡಿಮೆಯಾಯಿತು. ದುಡಿಮೆಯ ಅವಧಿ ಹೆಚ್ಚಿತು. ಅವರ ಗಳಿಕೆಯು ಶೇಕಡಾ 15ರಷ್ಟು ಹೆಚ್ಚಾಯಿತು. ನಮ್ಮಲ್ಲಿರುವ ರಕ್ತಹೀನತೆಯ ವ್ಯಾಪಕತೆಯನ್ನು ಗಣನೆಗೆ ತೆಗೆದುಕೊಂಡು ಅದನ್ನು ಇಡೀ ಭಾರತಕ್ಕೆ ಅನ್ವಯಿಸಿದರೆ ಅದು ದೊಡ್ಡ ಮೊತ್ತದ ಹಣ, ದುರದೃಷ್ಟವಶಾತ್, ಕೊನೇಪಕ್ಷ ಭಾರತದಲ್ಲಿ, ರಕ್ತ ಹೀನತೆಯ ಸಮಸ್ಯೆಯು ಅದರಷ್ಟಕ್ಕೆ ಪರಿಹಾರವಾಗುತ್ತಿಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ಭಾರತದ ಹೆಚ್ಚಿನ ಸಮುದಾಯಗಳಲ್ಲಿ 2015-16 ಮತ್ತು 2019-21ರ ಅವಧಿಯಲ್ಲಿ ರಕ್ತಹೀನತೆಯ ದರಗಳು ಹೆಚ್ಚಾಗಿವೆ. ಆಗ ಕೋವಿಡ್ ಪಿಡುಗು ಇತ್ತು ಅನ್ನುವುದು ನಿಜ. ಆದರೂ ರಕ್ತಹೀನತೆಯ ಏರಿಕೆಯ ಪ್ರಮಾಣ ಆತಂಕಕಾರಿ ಮಟ್ಟದಲ್ಲಿತ್ತು. ಹದಿಹರೆಯದ ಹುಡುಗಿಯರಲ್ಲಿ ರಕ್ತಹೀನತೆಯ ರಾಷ್ಟ್ರೀಯ ಸರಾಸರಿಯು ಶೇಕಡಾ 54ರಿಂದ 59ಕ್ಕೆ ಅಂದರೆ ಶೇಕಡ 5ರಷ್ಟು ಹೆಚ್ಚಾಗಿತ್ತು. ಆದರೆ ವರದಿಯ ಪ್ರಕಾರ ಅಸ್ಸಾಂನಲ್ಲಿ ರಕ್ತಹೀನತೆಯ ಪ್ರಮಾಣ ಶೇಕಡ 24ರಷ್ಟು ಹೆಚ್ಚಾಗಿತ್ತು.

ರಕ್ತಹೀನತೆ ಹೆಚ್ಚುವುದಕ್ಕೆ ಹಲವು ಕಾರಣಗಳಿವೆ. ಹೊಟ್ಟೆಹುಳುಗಳಿದ್ದರೂ ಕಬ್ಬಿಣದ ಅಂಶ ಹೀರಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ. ಮಲೇರಿಯಾ ಕೂಡ ಇದೇ ಕೆಲಸ ಮಾಡುತ್ತದೆ. ಇನ್ನು ಬಡವರಿಗೆ ತಿನ್ನುವುದಕ್ಕೆ ಸಾಕಷ್ಟು ಇರುವುದಿಲ್ಲ. ಹಾಗಾಗಿ ಅವರಲ್ಲಿ ರಕ್ತಹೀನತೆಯನ್ನು ಹೆಚ್ಚಿರುತ್ತದೆ.

ಆದರೆ ಆಶ್ಚರ್ಯದ ಸಂಗತಿಯೆಂದರೆ, ಶ್ರೀಮಂತ ಬಡವರ ನಡುವೆ ರಕ್ತ ಹೀನತೆಯ ಪ್ರಮಾಣದಲ್ಲಿ ಅಂತರ ತುಂಬಾ ಕಡಿಮೆ ಇದೆ: ತೀರಾ ಬಡವರಿಗೆ ಹೋಲಿಸಿದರೆ ಶ್ರೀಮಂತರಲ್ಲಿ ರಕ್ತಹೀನತೆ ಕೇವಲ ಶೇಕಡ 20ರಷ್ಟು ಕಡಿಮೆ ಇದೆ (ತುಂಬಾ ಶ್ರೀಮಂತರು ನಮ್ಮ ಸಮೀಕ್ಷೆಗೆ ಸಿಗುವುದೇ ಇಲ್ಲ.) ಶ್ರೀಮಂತ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಗುಜರಾತ್‌ನಲ್ಲೇ ರಕ್ತಹೀನತೆ ಹೆಚ್ಚಿಗೆ ಇದೆ!

ಇವೆಲ್ಲವನ್ನೂ ಗಮನಿಸಿದರೆ, ರಕ್ತ ಹೀನತೆಗೆ ನಮ್ಮ ಆಹಾರಕ್ರಮವೇ ಸ್ಪಷ್ಟವಾದ ಕಾರಣವೆಂದು ನನಗೆ ಅನ್ನಿಸುತ್ತದೆ. ಶ್ರೀಮಂತ ಭಾರತೀಯರು ಹೆಚ್ಚಾಗಿ ಸಸ್ಯಾಹಾರಿಗಳಾಗಿರುತ್ತಾರೆ. ಹಾಗಾಗಿಯೇ ಆದಾಯ ಹೆಚ್ಚಾದ ಹಾಗೆ ರಕ್ತಹೀನತೆ ಅದೇ ಪ್ರಮಾಣದಲ್ಲಿ ಕಡಿಮೆಯಾಗುತ್ತಿಲ್ಲ. ಜನರಲ್ಲಿ ಬಡತನ ಕಮ್ಮಿಯಾಗುತ್ತಿದ್ದಂತೆ ಅವರೂ ಶ್ರೀಮಂತರ ಅಹಾರ ಪದ್ಧತಿಯನ್ನೇ ಅನುಕರಿಸಲು ಪ್ರಾರಂಭಿಸುತ್ತಾರೆ. ಹೆಚ್ಚೆಚ್ಚು ಪನೀರ್ ಸೇವಿಸತೊಡಗುತ್ತಾರೆ. ಮಾಂಸ ಅಥವಾ ಸೊಪ್ಪುಗಳನ್ನು ಬಳಸುವುದನ್ನು ಕಡಿಮೆ ಮಾಡುತ್ತಾರೆ. ಇದು ಕೂಡ ರಕ್ತಹೀನತೆ ಹೆಚ್ಚಾಗಲು ಭಾಗಶಃ ಕಾರಣ.

ಬಾಂಗ್ಲಾ ದೇಶದವರು ಮತ್ತು ಪಾಕಿಸ್ತಾನದವರು ನಮಗಿಂತ ಹೆಚ್ಚು ಕೆಂಪುಮಾಂಸವನ್ನು [red meat] ಸೇವಿಸುತ್ತಾರೆ. ದೇಹವು ಸುಲಭವಾಗಿ ಹೀರಿಕೊಳ್ಳುವ ಕಬ್ಬಿಣದ ಅಂಶ ಈ ಕೆಂಪು ಮಾಂಸದಲ್ಲಿ ಸಿಗುತ್ತದೆ (ವಿಶೇಷವಾಗಿ ಯಕೃತ್ತು ಕಬ್ಬಿಣದ ಉತ್ತಮ ಆಕರವಾಗಿದೆ. ನನ್ನ ತಾಯಿ ಇದನ್ನು ಹೇಗಾದರೂ ಮಾಡಿ ನನ್ನ ಆಹಾರದಲ್ಲಿ ಸೇರಿಸಲು ಪ್ರಯತ್ನಿಸುತ್ತಿದ್ದರು. ಅವಾಗೆಲ್ಲಾ ನಾನದನ್ನು ವಿರೋಧಿಸುತ್ತಿದ್ದೆ). ಈ ದೇಶಗಳು ನಮಗಿಂತ ಹೆಚ್ಚು ಉತ್ತಮ ಸ್ಥಿತಿಯಲ್ಲಿರಲು ಇದು ಕಾರಣವಿರಬಹುದು.

ಹಾಗೆಂದ ಮಾತ್ರಕ್ಕೆ ಸಸ್ಯಾಹಾರಿಗಳು ಕೆಂಪುಮಾಂಸ ತಿನ್ನಲು ಶುರುಮಾಡಿ ಎಂದು ನಾನು ಸಲಹೆ ನೀಡುತ್ತಿಲ್ಲ: ಹಾಗೇನಾದರು ನಾನು ಹೇಳಿದರೆ ಈ ಅಂಕಣಕ್ಕೆ ಚಿತ್ರಗಳನ್ನು ಬಿಡಿಸಿ ಜೀವ ತುಂಬುತ್ತಿರುವ ಕಲಾವಿದೆ ಶಾಯನ್ [Cheyenne] ಮೊದಲು ನನ್ನನ್ನು ಬಿಟ್ಟು ಹೊರನಡೆಯಬಹುದು.

ಏಕೆಂದರೆ ಆಕೆ ಸಸ್ಯಾಹಾರಿ. ಆದರೆ ಸಸ್ಯಾಹಾರಿಗಳಿಗೆ ಸಾಕಷ್ಟು ಪ್ರಮಾಣದ ಕಬ್ಬಿಣಾಂಶ ಸಿಗುವುದು ಕಷ್ಟ, ಸಸ್ಯಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಆದರೆ ಆ ಕಬ್ಬಿಣವನ್ನು ಸುಲಭವಾಗಿ ಹೀರಿಕೊಳ್ಳುವುದಕ್ಕೆ ನಮ್ಮ ದೇಹಕ್ಕೆ ಸಾಧ್ಯವಾಗುವುದಿಲ್ಲ.

ಕೆಂಪು ಮಾಂಸವನ್ನು ಸೇವಿಸದೆಯೇ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶವನ್ನು ಪಡೆಯಬೇಕೆಂದರೆ, ಉತ್ತರ ಭಾರತದ ಸಸ್ಯಾಹಾರಿಗಳು ಹೆಚ್ಚಾಗಿ ಸೇವಿಸುತ್ತಿರುವ ಆಲೂ-ಪನೀರ್-ಮೊಸರು-ಬೇಳೆ-ಅನ್ನ-ರೊಟ್ಟಿಯ ಆಹಾರ ಪದ್ಧತಿಯನ್ನು ಬಿಡಬೇಕು.

ಭಾರತವನ್ನು ಸಸ್ಯಾಹಾರಿಗಳ ಸ್ವರ್ಗ ಅಂತಾರೆ. ಆದರೆ ನನಗೆ ಬೇಸರ ತರುವ ಸಂಗತಿಯೆಂದರೆ ಅಲ್ಲಿನ ಬಹುತೇಕ ಹೋಟೆಲ್‌ಗಳಲ್ಲಿ ಸಿಗುವುದು ಕೇವಲ ಒಂದೆರಡು ತರಕಾರಿಗಳಿಂದ ಮಾಡಿದ ಖಾದ್ಯಗಳು ಮಾತ್ರ. ಬದನೆಕಾಯಿ ಭರ್ತ ಅಥವಾ ನವರತ್ನ ಕುರ್ಮಾ. ನಾನು ಬದನೆಕಾಯಲ್ಲಿ ಏನು ಮಾಡಿದರೂ ತಿನ್ನುತ್ತೇನೆ. ಆದರೆ ಅದರಲ್ಲಿ ನಾಸುನಿನ್‌ ಅನ್ನುವ ಅಂಶವಿದೆ. ಅದು ನಮ್ಮ ದೇಹ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದಕ್ಕೆ ಅಡ್ಡಿಮಾಡುತ್ತದೆ.

ದುರದೃಷ್ಟವೆಂದರೆ ಆಹಾರಕ್ರಮ ಬದಲಾಯಿಸುವುದು ಅಷ್ಟು ಸುಲಭವಲ್ಲ, ಮೈಕಟ್ಟು ಕಾಪಾಡಿಕೊಳ್ಳಲು ಪ್ರಯತ್ನಿಸಿರುವ ನಮಗೆಲ್ಲಾ ಅದು ಚೆನ್ನಾಗಿ ಗೊತ್ತು. ಸಿರಿಧಾನ್ಯದ ಪಾಯಸ ಚೆನ್ನಾಗಿರುತ್ತದೆ. ಅದು ಆರೋಗ್ಯಕ್ಕೂ ಖಂಡಿತಾ ಒಳ್ಳೆಯದು. ಆದರೆ ನಮ್ಮ ಬಾಯಿಗೆ ಬಂಗಾಳದ ಸೊಗಸಾದ ಗೋಬಿಂದೋಭೋಗ್ ಅಕ್ಕಿ ಪಾಯಸವೇ ಬೇಕು. ಶುಗರ್-ಫ್ರೀ ಐಸ್‌ಕ್ರೀಮ್ ಅನ್ನೋದು ಸೊಗಸಾದ ಕಲ್ಪನೆ. ಆದರೆ ಅದನ್ನು ಫ್ರೀಜರ್‌ನಲ್ಲೇ ಬಿಡೋಕೆ ಖುಷಿ ಪಡ್ತೀನಿ.

ಇತ್ತೀಚೆಗೆ ರಕ್ತಹೀನತೆ ಮುಕ್ತ ಭಾರತ ಅನ್ನುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ. ಮಾತ್ರೆ ಮತ್ತು ಸಿರಪ್‌ಗಳ ಮೂಲಕ ಕಬ್ಬಿಣದ ಅಂಶವನ್ನು ಕೊಡುವ ಪರ್ಯಾಯ ಪ್ರಯತ್ನವನ್ನು ಕೈಗೆತ್ತಿಕೊಂಡಿದೆ. ಶಾಲೆಯಲ್ಲಿ ಬಿಸಿಯೂಟ ತಿನ್ನುವ ಮಕ್ಕಳಿಗೆ ಅಥವಾ ಅಂಗನವಾಡಿಗೆ ಹೋಗೋ ಪುಟಾಣಿಗಳಿಗೆ (ಆದರೆ ಎಲ್ಲರೂ ಅಂಗನವಾಡಿಗೆ ಹೋಗುವುದಿಲ್ಲ) ಈ ಕ್ರಮ ಸೂಕ್ತವಾಗುತ್ತದೆ. ಆದರೆ ಹದಿಹರೆಯದವರು ಮತ್ತು ವಯಸ್ಕರು ಇದನ್ನು ದಿನಾ ಹೊತ್ತಿಗೆ ಸರಿಯಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇದು ಕೇವಲ ಒಂದು ಸಲ ಅಥವಾ ಒಂದು ತಿಂಗಳು ತೆಗೆದುಕೊಂಡರೆ ಸಾಲುವುದಿಲ್ಲ. ಬಹುಶಃ ಜೀವನಪರ್ಯಂತ ತೆಗೆದುಕೊಳ್ಳಬೇಕಾಗಬಹುದು. ಅದು ಅಷ್ಟು ಸುಲಭವಲ್ಲ. ಜೊತೆಗೆ ಈ ಕಬ್ಬಿಣದ ಸೇವನೆಯಿಂದ ಮಲಬದ್ಧತೆಯಾಗುವ ಸಾಧ್ಯತೆಯಿದೆ. ಹಾಗಾಗಿ ಜನರಿಗೆ ಇವು ನಿಜವಾಗಿ ಅವಶ್ಯಕವಾಗಿದ್ದರೂ ತೆಗೆದುಕೊಳ್ಳುವುದಕ್ಕೆ ವಿರೋಧಿಸುತ್ತಾರೆ.

ಶಾಯೆನ್ ಒಲಿವಿಯೆ
ಅಭಿಜಿತ್ ಅವರ ಲೇಖನಗಳಲ್ಲಿ ಹಾಗೂ ಅಡುಗೆ ಪುಸ್ತಕಗಳಲ್ಲಿ ಬಳಸಿರುವ ವಿನ್ಯಾಸವೇ ವಿಭಿನ್ನ. ಸಾಮಾನ್ಯವಾಗಿ ಅಡುಗೆಯ ಯಥಾವತ್ ಫೋಟೊಗಳನ್ನು ಹಾಕೋದು ರೂಢಿ. ಅಭಿಜಿತ್ ಅವರಿಗೆ ಪ್ರತಿಯೊಂದು ರೆಸಿಪಿಯೂ ಒಂದು ಐಡಿಯಾ ಅಷ್ಟೆ, ಅದೊಂದು ಎಂಟ್ರಿ ಪಾಯಿಂಟ್, ಅದೊಂದು ಹೊಸ ಆಲೋಚನೆಗೆ ದಾರಿ. ಹಾಗಾಗಿ ಅದರ ಯಥಾವತ್ ಫೋಟೊ ಹಾಕೋ ಬದಲು ಆ ರೆಸಿಪಿಯ ಹಿಂದಿರೋ ಆಲೋಚನೆಯನ್ನು ತೋರಿಸುವ ಚಿತ್ರಗಳನ್ನು ಬಳಸೋದು ಕೂಡ ಒಳ್ಳೆಯ ಆಲೋಚನೆ.

DSC 7562

ಶಾಯನ್ ಒಲಿವಿಯ ಈ ಕೆಲಸವನ್ನು ಸೊಗಸಾಗಿ ಮಾಡಿದ್ದಾರೆ. ಅವರ ಚಿತ್ರದಲ್ಲಿ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇರೋ ಗದ್ದಲ-ಗೊಂದಲ, ಸಂಭ್ರಮ ಎಲ್ಲಾ ಇದೆ. ಇವೆಲ್ಲದರ ನಡುವೆ ಅಡುಗೆ ಮಾಡೋರು ತಮ್ಮದೇ ಆದ ಒಂದು ಸುಂದರ ಲೋಕವನ್ನು ಸೃಷ್ಟಿಸಿಕೊಳ್ಳಬೇಕು ಅನ್ನೋ ಮೆಸೇಜನ್ನು ಕೂಡ ಈ ಚಿತ್ರ ರವಾನಿಸುತ್ತದೆ. ಜೊತೆಗೆ ಸುಂದರ ಫೋಟೊಗಳನ್ನು ಹಾಕಿಬಿಟ್ರೆ, ಅಡುಗೆ ಹೊಸದಾಗಿ ಮಾಡರೋರಿಗೆ ನಮಗೆ ಈ ತರ ಮಾಡೋಕೆ ಆಗಲ್ಲಪ್ಪ” ಅನ್ನೋ ಭಯ ಅಥವಾ ಮುಜುಗರ ಬರಬಹುದು. ಶಾಯನ್ ಒಲಿವಿಯೆ ಬಿಡಿಸಿರೋ ಬಣ್ಣ ಬಣ್ಣದ ಚಿತ್ರಗಳು ಆ ಸಮಸ್ಯೆಯನ್ನೇ ದೂರ ಮಾಡಿದೆ. ಈ ಚಿತ್ರಗಳನ್ನ ನೋಡಿ ನಾವು ನಮ್ಮ ಅಡುಗೆಯನ್ನ ಅಳೆಯುವ ಅಗತ್ಯವಿಲ್ಲ. ಇವುಗಳನ್ನ ಒಂದು ಸುಂದರವಾದ ಕಲೆಯ ತರ ನೋಡಿ ಎಂಜಾಯ್ ಮಾಡಬಹುದು. ಅಡುಗೆ ಮಾಡೋರಿಗೆ ಅಡುಗೆ “ಫೋಟೋದ ಹಾಗೆಯೇ ಬರಬೇಕು”ಅನ್ನೋ ಒತ್ತಡ ಇರೋದಿಲ್ಲ. ಒಟ್ಟಲ್ಲಿ ಶಾಯನ್ ಒಲಿವಿಯ ಅವರ ಚಿತ್ರಗಳು ಒಟ್ಟಾರೆ ಲೇಖನದ, ಅಭಿಜಿತ್ ಬರಹಗಳ ಮೆರುಗನ್ನು ಹೆಚ್ಚಿಸಿವೆ.

ಅಭಿಜಿತ್ ಅವರ ಲೇಖನಗಳಲ್ಲಿ ಹಾಗೂ ಅಡುಗೆ ಪುಸ್ತಕಗಳಲ್ಲಿ ಬಳಸಿರುವ ವಿನ್ಯಾಸವೇ ವಿಭಿನ್ನ. ಸಾಮಾನ್ಯವಾಗಿ ಅಡುಗೆಯ ಯಥಾವತ್ ಫೋಟೊಗಳನ್ನು ಹಾಕೋದು ರೂಢಿ. ಅಭಿಜಿತ್ ಅವರಿಗೆ ಪ್ರತಿಯೊಂದು ರೆಸಿಪಿಯೂ ಒಂದು ಐಡಿಯಾ ಅಷ್ಟೆ, ಅದೊಂದು ಎಂಟ್ರಿ ಪಾಯಿಂಟ್, ಅದೊಂದು ಹೊಸ ಆಲೋಚನೆಗೆ ದಾರಿ. ಹಾಗಾಗಿ ಅದರ ಯಥಾವತ್ ಫೋಟೊ ಹಾಕೋ ಬದಲು ಆ ರೆಸಿಪಿಯ ಹಿಂದಿರೋ ಆಲೋಚನೆಯನ್ನು ತೋರಿಸುವ ಚಿತ್ರಗಳನ್ನು ಬಳಸೋದು ಕೂಡ ಒಳ್ಳೆಯ ಆಲೋಚನೆ. ಶಾಯನ್ ಒಲಿವಿಯ ಈ ಕೆಲಸವನ್ನು ಸೊಗಸಾಗಿ ಮಾಡಿದ್ದಾರೆ. ಅವರ ಚಿತ್ರದಲ್ಲಿ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇರೋ ಗದ್ದಲ-ಗೊಂದಲ, ಸಂಭ್ರಮ ಎಲ್ಲಾ ಇದೆ. ಇವೆಲ್ಲದರ ನಡುವೆ ಅಡುಗೆ ಮಾಡೋರು ತಮ್ಮದೇ ಆದ ಒಂದು ಸುಂದರ ಲೋಕವನ್ನು ಸೃಷ್ಟಿಸಿಕೊಳ್ಳಬೇಕು ಅನ್ನೋ ಮೆಸೇಜನ್ನು ಕೂಡ ಈ ಚಿತ್ರ ರವಾನಿಸುತ್ತದೆ. ಜೊತೆಗೆ ಸುಂದರ ಫೋಟೊಗಳನ್ನು ಹಾಕಿಬಿಟ್ರೆ, ಅಡುಗೆ ಹೊಸದಾಗಿ ಮಾಡರೋರಿಗೆ ನಮಗೆ ಈ ತರ ಮಾಡೋಕೆ ಆಗಲ್ಲಪ್ಪ” ಅನ್ನೋ ಭಯ ಅಥವಾ ಮುಜುಗರ ಬರಬಹುದು. ಶಾಯನ್ ಒಲಿವಿಯೆ ಬಿಡಿಸಿರೋ ಬಣ್ಣ ಬಣ್ಣದ ಚಿತ್ರಗಳು ಆ ಸಮಸ್ಯೆಯನ್ನೇ ದೂರ ಮಾಡಿದೆ. ಈ ಚಿತ್ರಗಳನ್ನ ನೋಡಿ ನಾವು ನಮ್ಮ ಅಡುಗೆಯನ್ನ ಅಳೆಯುವ ಅಗತ್ಯವಿಲ್ಲ. ಇವುಗಳನ್ನ ಒಂದು ಸುಂದರವಾದ ಕಲೆಯ ತರ ನೋಡಿ ಎಂಜಾಯ್ ಮಾಡಬಹುದು. ಅಡುಗೆ ಮಾಡೋರಿಗೆ ಅಡುಗೆ “ಫೋಟೋದ ಹಾಗೆಯೇ ಬರಬೇಕು”ಅನ್ನೋ ಒತ್ತಡ ಇರೋದಿಲ್ಲ. ಒಟ್ಟಲ್ಲಿ ಶಾಯನ್ ಒಲಿವಿಯ ಅವರ ಚಿತ್ರಗಳು ಒಟ್ಟಾರೆ ಲೇಖನದ, ಅಭಿಜಿತ್ ಬರಹಗಳ ಮೆರುಗನ್ನು ಹೆಚ್ಚಿಸಿವೆ.

ಇದೇ ಕಾರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹಲವು ತಜ್ಞರು ಅಕ್ಕಿ, ಗೋಧಿ ಅಥವಾ ಉಪ್ಪಿನ ಜೊತೆಗೆ ಕಬ್ಬಿಣದ ಅಂಶ (ಮತ್ತು ಕಬ್ಬಿಣದ ಹೀರಿಕೊಳ್ಳುವುದಕ್ಕೆ ನೆರವಾಗುವ ಪೋಷಕಾಂಶ)ವನ್ನು ಸೇರಿಸಬೇಕೆಂದು ಸೂಚಿಸುತ್ತಿದ್ದಾರೆ.

ಭಾರತ ಸರ್ಕಾರ ಕೂಡ ಈ ಆಲೋಚನೆಯನ್ನು ಕೆಲವು ವರ್ಷಗಳಿಂದ ಒಪ್ಪಿಕೊಂಡಿದೆ. ಆದರೆ ಇಂತಹ ಪೌಷ್ಟಿಕಾಂಶ ಬೆರೆಸಿದ ಆಹಾರಗಳನ್ನು ಅದರ ಗುಣಮಟ್ಟ ಹಾಳಾಗದಂತೆ ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪಿಸುವುದಕ್ಕೆ ಸಾಧ್ಯ ಅನ್ನುವುದಕ್ಕೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ. ಮುಖ್ಯವಾಗಿ ಭಾರತದ ಹೆಚ್ಚಿನ ಭಾಗಗಳಲ್ಲಿ ಇರುವ ಬಿಸಿಲು ಮತ್ತು ಸೆಕೆಗೆ ಅವುಗಳ ಶಕ್ತಿ ಹಾಗೆಯೇ ಉಳಿಯುತ್ತದೆಯೇ ಅನ್ನುವ ಅನುಮಾನವೂ ಇದೆ. ಒಂದು ವೇಳೆ ತಲುಪಿಸುವುದಕ್ಕೆ ಸಾಧ್ಯವಾದರೂ ಜನರು ಅದನ್ನು ಬಯಸುತ್ತಾರೆಯೇ ಅನ್ನುವುದು ದೊಡ್ಡ ಪ್ರಶ್ನೆ.

2010ರ ಆರಂಭದಲ್ಲಿ, ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಡಬಲ್ ಫೋರ್ಟಿಫೈಡ್ ಸಾಲ್ಟ್ ಅನ್ನು (ಅಂದ್ರೆ ಕಬ್ಬಿಣ ಮತ್ತು ಅಯೋಡಿನ್ ಎರಡೂ ಇರೋ ಉಪ್ಪು) ಬಳಸಲೇಬೇಕೆಂದು ಸರ್ಕಾರ ಆದೇಶಿಸಿತ್ತು. ಇದು ರಕ್ತಹೀನತೆ ಕಡಿಮೆ ಮಾಡುವುದಕ್ಕೆ ಎಷ್ಟು ಸಹಾಯವಾಗುತ್ತದೆ” ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ನಾವು ಬಿಹಾರದಲ್ಲಿ ಒಂದು ಅಧ್ಯಯನ ಮಾಡಿದೆವು. ಕೆಲವು ಹಳ್ಳಿಗಳನ್ನು ಯಾದೃಚ್ಛಿಕವಾಗಿ ಆರಿಸಿಕೊಂಡು, ಅಲ್ಲಿನ ಜನರಿಗೆ ಇದನ್ನು ಕೊಳ್ಳಲು ಪ್ರೋತ್ಸಾಹ ನೀಡಿದೆವು. ಅದಕ್ಕಾಗಿ ಈ ಉಪ್ಪನ್ನು ಸಬ್ಸಿಡಿ ದರದಲ್ಲಿ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಿದೆವು. ಹದಿಹರೆಯದವರಲ್ಲಿ ಇದರಿಂದ ರಕ್ತಹೀನತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ನಮ್ಮ ಅಧ್ಯಯನದಲ್ಲಿ ತಿಳಿಯಿತು. ಆದರೆ ಜನರಿಗೆ ಈ ಉಪ್ಪು ಸ್ವಲವೂ ಇಷ್ಟವಾಗಲಿಲ್ಲ. ಇದು ಪರಿಣಾಮ ಬೀರುವ ಮೊದಲೇ ಅದರ ಬಳಕೆಯನ್ನು ಅವರು ನಿಲ್ಲಿಸಿಬಿಟ್ಟರು.

ಆ ಉಪ್ಪಿನ ರುಚಿ ಕೆಟ್ಟದಾಗಿದೆ ಎಂದು ಅವರು ದೂರಿದರು (ಆದ್ರೆ ನಮಗೇನು ಅಂತಹ ವ್ಯತ್ಯಾಸ ಕಾಣಲಿಲ್ಲ), ಜೊತೆಗೆ ಅಡುಗೆಯ ಬಣ್ಣ ಕಪ್ಪಾಗುತ್ತದೆ ಅಂದರು (ಅದು ನಿಜ. ಈ ಉಪ್ಪು ಬಳಸಿದರೆ ಕಪ್ಪಾಗುತ್ತಿತ್ತು). ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ಆ ಉಪ್ಪಿನ ಪ್ರಯೋಜನದ ಬಗ್ಗೆ ನಂಬಿಕೆ ಇರಲಿಲ್ಲ ಎಂದು ನಮಗನ್ನಿಸಿತು. ಜನ ಈ ಉಪ್ಪನ್ನು ಕೆಲವು ಹಳ್ಳಿಗಳಲ್ಲಿ ಇನ್ನೂ ಬಳಸುತ್ತಾ ಇದ್ದಾರೆ. ಅಲ್ಲಿ ಅವರ ಮನವೊಲಿಸೋದಕ್ಕೆ ನನ್ನ ಬಾಲ್ಯದ ಗೆಳೆಯ ಪ್ರದೀಪ್ ಸಹಾ ನಮ್ಮ ಸ್ಕ್ರಿಪ್ಟ್ ಇಟ್ಟುಕೊಂಡು ಸಿದ್ಧಪಡಿಸಿದ್ದ ಒಂದು ಹಾಸ್ಯ ನಾಟಕವನ್ನು ಪ್ರದರ್ಶಿಸಿದ್ದೆವು. ಆ ಪ್ರಯೋಗವನ್ನು ನಾವು ಮಾಡಿ ಬಹಳ ಕಾಲವಾಯಿತು. ಆ ನಾಟಕದಲ್ಲಿ ಒಬ್ಬ ಯುವಕ ಇರ್ತಾನೆ, ಅವನ ಹೆಂಡತಿ ಗರ್ಭಿಣಿ. ಹುಟ್ಟೋ ಮಗು ಗಟ್ಟುಮುಟ್ಟಾಗಿ ಇರುತ್ತಾ ಅನ್ನುವ ಚಿಂತೆ ಅವನನ್ನು ಕಾಡ್ತಾ ಇತ್ತು. ಯಾಕಂದ್ರೆ ಅವನು ಶಕ್ತಿಹೀನ ಅಂತ ಊರಲ್ಲಿ ಎಲ್ಲರೂ ಅವನನ್ನು ಲೇವಡಿ ಮಾಡ್ತಿದ್ರು.

ತನ್ನ ಹೆಂಡತಿಯ ಈ ರಕ್ತಹೀನತೆಯನ್ನು ಹೇಗಾದರೂ ಮಾಡಿ ಕಡಿಮೆ ಮಾಡಬೇಕು ಅಂತ ಅವನಿಗೆ ಅನಿಸಿತ್ತು. ಆದರೆ ಕೇವಲ ಉಪ್ಪು ತಿಂದರೆ ಆ ಶಕ್ತಿ ಬರುತ್ತದೆ ಎಂದು ಅವನಿಗೆ ನಂಬುವುದಕ್ಕೆ ಕಷ್ಟವಾಗುತ್ತಿತ್ತು. ಆಗ ಅವನ ಹಿಂದಿನ ಗುರುಗಳು ಸೀಬೆಹಣ್ಣು ತಿಂದರೂ ಅನುಕೂಲವಾಗುತ್ತದೆ ಎಂದು ಅವನಿಗೆ ಹೇಳಿದರು. ಈ ದೇಹ ಕೆಲಸ ಮಾಡುವ ರೀತಿ ತನ್ನ ಅರಿವಿಗೆ ಮೀರಿದ್ದು ಎನ್ನುವುದು ಅವನಿಗೆ ಅರ್ಥವಾಗತೊಡಗಿತು.

ಸರ್ಕಾರ ಇತ್ತೀಚೆಗೆ ಅಕ್ಕಿ ಮತ್ತು ಗೋಧಿಗೆ ಪೌಷ್ಟಿಕಾಂಶ ಬೆರೆಸಿ ಶಾಲೆಯ ಬಿಸಿಯೂಟಕ್ಕೆ ಹಾಗೂ ರೇಷನ್ ಅಂಗಡಿಗಳಲ್ಲಿ ಕಡ್ಡಾಯವಾಗಿ ಕೊಡಲು ಯೋಚಿಸುತ್ತಿದೆ. ಆದರೆ ಅಂತಹ ಪೌಷ್ಟಿಕಾಂಶ ಬೆರೆಸಿದ ಅಕ್ಕಿಯನ್ನು ಸರಿಯಾಗಿ ಪೂರೈಸುವುದು ಮತ್ತದರ ಗುಣಮಟ್ಟ ಪರೀಕ್ಷಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಪಡಿತರ ವ್ಯವಸ್ಥೆಯಲ್ಲಿ ಅದರ ನೀಡಿಕೆಯನ್ನು ನಿಲ್ಲಿಸಿದ್ದಾರೆ.

ಜನರಿಗೆ ಇದರ ಬಗ್ಗೆ ಸರಿಯಾದ ಅರಿವು ಮೂಡಿಸುವುದಕ್ಕೆ ಬಹುಶಃ ಇದು ಸರಿಯಾದ ಸಮಯ, ಸಾಮಾನ್ಯವಾಗಿ ನಾವು ಬಳಸುವ ಅಕ್ಕಿಗಿಂತ ಹೆಚ್ಚು ಕಬ್ಬಿಣದ ಅಂಶ ಹೊಂದಿರುವ ಸಾಂಪ್ರದಾಯಿಕ ಅಕ್ಕಿ ತಳಿಗಳು ನಮ್ಮಲ್ಲಿ ಸಾಕಷ್ಟು ಇವೆ ಅನ್ನುವ ಅಭಿಪ್ರಾಯವಿದೆ. ಆ ಬಗ್ಗೆ ಸರಿಯಾಗಿ ಪರೀಕ್ಷೆ ಮಾಡಿ ಖಾತ್ರಿ ಪಡಿಸಿಕೊಳ್ಳಬೇಕು. ಅದು ನಿಜ ಅನ್ನುವುದಾದರೆ ಅದರ ಮಾರಾಟಕ್ಕೆ ವ್ಯವಸ್ಥೆ ಮಾಡೋದು ಕೂಡ ಯೋಜನೆಯ ಭಾಗವಾಗಬೇಕು. ಯಾಕೆಂದರೆ ಪಡಿತರ ಅಕ್ಕಿ ಬೇಡ ಅನ್ನೋ ಶ್ರೀಮಂತ ಜನರಲ್ಲೂ ರಕ್ತಹೀನತೆ ಇದ್ದೇ ಇದೆ. ಅವರಿಗೂ ಇದರಿಂದ ಸಹಾಯವಾಗುತ್ತದೆ. ಇದೆಲ್ಲದರ ಮಧ್ಯೆ, ಜನರಿಗೆ ಸೀಬೆ ಹಣ್ಣಿನ ಬಗ್ಗೆ ಹೇಳುವುದನ್ನು ಮಾತ್ರ ಮರೆಯಬಾರದು!

ಸೀಬೆಹಣ್ಣಿನ ತಿನಿಸುಗಳು
ನಿಮ್ಮ ಆಹಾರದಲ್ಲಿ ಸೀಬೆಹಣ್ಣನ್ನು ಹೆಚ್ಚಾಗಿ ಬಳಸಲು ಎರಡು ಸುಲಭಮತ್ತು ರುಚಿಕರವಾದ ದಾರಿಗಳು ಇಲ್ಲಿವೆ.

  1. ಸೀಬೆಹಣ್ಣಿನ ಕೋಸಂಬರಿ:

ಕಾಲು ಬಟ್ಟಲು ಹೆಸರುಬೇಳೆಯನ್ನು 4 ಗಂಟೆಗಳ ಕಾಲ ನೆನೆಸಿಡಿ. ನಂತರ ನೀರನ್ನು ಬಸಿದು, ಅದಕ್ಕೆ ಅರ್ಧ ಕಪ್ ಸಣ್ಣದಾಗಿ ಹೆಚ್ಚಿದ ಸೌತೆಕಾಯಿ ಮತ್ತು ಕ್ಯಾರೆಟ್ ಸೇರಿಸಿ. ಒಂದು ಕಪ್ ಸಣ್ಣದಾಗಿ ಹೆಚ್ಚಿದ, ಹದವಾಗಿ ಹಣ್ಣಾಗಿರುವ ಸೀಬೆಹಣ್ಣಿನ ತುಂಡುಗಳನ್ನು ಸೇರಿಸಿ. ಸಣ್ಣಗೆ ಕತ್ತರಿಸಿರುವ ಒಂದು ಹಸಿಮೆಣಸಿನ ಕಾಯಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸೇರಿಸಿ. ನಂತರ ಅದಕ್ಕೆ ಒಂದು ಚಮಚ ನಿಂಬೆ ರಸ ಮತ್ತು ಅರ್ಧ ಚಮಚ ಉಪ್ಪು ಸೇರಿಸಿ. ಕೊನೆಯಲ್ಲಿ ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಹಾಕಿ.

  1. ಸೀಬೆಹಣ್ಣಿನ ರಾಯತ

ಹದವಾಗಿ ಹಣ್ಣಾಗಿರುವ ಮೂರು ಸೀಬೆಹಣ್ಣಿನ (ಆದರೆ ತುಂಬಾ ಮೆತ್ತಗಿರಬಾರದು) ಬೀಜ ತೆಗೆದು, ತುರಿದುಕೊಳ್ಳಿ (ಸುಮಾರು ಒಂದು ಕಪ್ ಇರಲಿ). ಅದಕ್ಕೆ ಒಂದು ಕಪ್ ಮೊಸರು, ಒಂದು ಚಮಚ ಜೀರಿಗೆ ಪುಡಿ, ಅರ್ಧ ಚಮಚ ಅಚ್ಚಖಾರದ ಪುಡಿ, ಸ್ವಲ್ಪ ಉಪ್ಪು ಮತ್ತು ಕಾಲು ಚಮಚ ಸಕ್ಕರೆ ಸೇರಿಸಿ, ರುಚಿಗೆ ಸ್ವಲ್ಪ ಹುರಿದ ವಾಲ್‌ನಟ್ ತುಂಡುಗಳನ್ನು ಸೇರಿಸಿದರೆ ರಾಯತ ಸಿದ್ದ.

ರಕ್ತಹೀನತೆ ನಿವಾರಣೆಗೆ ಸೀಬೆ ಅದ್ಭುತವಾದ ಹಣ್ಣು ಅನ್ನೋದನ್ನ ಮರೆಯಬೇಡಿ.

-ಅಭಿಜಿತ್ ಬ್ಯಾನರ್ಜಿ

Originally published in Times of India, April 4, 2026

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

16ನೇ ಹಣಕಾಸು ಆಯೋಗ -ನ್ಯೂನತೆಗಳು ಮತ್ತು ಆತಂಕಗಳು

ಹಿಂದಿನ ಆಯೋಗಗಳಿಗೆ ಹೋಲಿಸಿದರೆ 16ನೇ ಹಣಕಾಸು ಆಯೋಗಕ್ಕೆ ಹೆಚ್ಚಿನ ಸ್ವಾತಂತ್ರವಿತ್ತು. ಅದಕ್ಕೆ...

ಅಮರ್ತ್ಯ ಸೇನ್ ಅವರ ಸಾಮಾಜಿಕ ಆಯ್ಕೆಯನ್ನು ಕುರಿತು

ಅಮರ್ತ್ಯ ಸೇನ್ ಕಲ್ಕತ್ತಾದ ಪ್ರಸಿಡೆನ್ಸಿ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ವ್ಯಾಸಂಗ...