ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

Date:

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಮತ್ತು ವಿಕ್ಷಿತ್ ಭಾರತ್ -ರೋಜಗಾ‌ರ್ ಹಾಗೂ ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ ಅಥವಾ ಸಂಕ್ಷಿಪ್ತವಾಗಿ ವಿಬಿಜಿ ರಾಂ ಜಿ ಕಾಯ್ದೆಗಳ ಸಾಧಕ-ಬಾಧಕಗಳ ಬಗ್ಗೆ ಬಹಳ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ ಈ ಚರ್ಚೆಯಲ್ಲಿ ಎರಡೂ ಕಾಯ್ದೆಗಳನ್ನು ಕಾಡುತ್ತಿರುವ ಅತ್ಯಂತ ಪ್ರಮುಖ ವಿಷಯವಾದ ಕೂಲಿದರದ ಬಗ್ಗೆ ಯಾರೂ ಮಾತನಾಡುತ್ತಲೇ ಇಲ್ಲ.

- Advertisement -

ಒಂದು ಪ್ರಮುಖ ಮಾನದಂಡ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿದರ ಅತ್ಯಂತ ನಿರ್ಣಾಯಕವಾದ ಅಂಶ. ಸಾಪೇಕ್ಷವಾಗಿ ಕೂಲಿಯನ್ನು ಹೆಚ್ಚಿಸಿದರೆ ಕೆಲಸಗಾರರಲ್ಲಿ ವಿಶೇಷ ಹುರುಪು ಮತ್ತು ಉತ್ಸಾಹ ಮೂಡುತ್ತದೆ. ಮನರೇಗಾ ಆರಂಭವಾದ ಹೊಸದರಲ್ಲಿ ಹೀಗೆ ಆಗಿತ್ತು. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಪಾಲ್ಗೊಳ್ಳುವರಲ್ಲಿ ಇಂತಹ ಉತ್ಸಾಹ ಇರಬೇಕಾದ್ದು ಬಹಳ ಮುಖ್ಯ.

ಇದಕ್ಕೆ ವ್ಯತಿರಿಕ್ತವಾಗಿ, ಕೂಲಿದರವನ್ನು ಇಳಿಸಿದರೆ, ಅದು ಯೋಜನೆಯ ವೇಗವನ್ನು ಮಂದಗೊಳಿಸುತ್ತದೆ. ಅಥವಾ ಇದರಿಂದ ಕ್ರಮೇಣ ಯೋಜನೆಯೇ ನಿಂತು ಹೋಗಿಬಿಡಬಹುದು. ಏನೇ ಆದರೂ, ಯೋಜನೆಯ ಒಟ್ಟು ವೆಚ್ಚದ ಮೇಲೆ ಕೂಲಿದರ ಗಣನೀಯವಾಗಿ ಪ್ರಭಾವ ಬೀರುತ್ತದೆ.

Jean Dreze 4

ಕೂಲಿದರ ನಿರ್ಧಾರ ಹೇಗೆ?

ಮನರೇಗಾ ಯೋಜನೆಯಲ್ಲಿ ಕೆಲಸಗಾರರ ಕೂಲಿಯನ್ನು ಈ ಕಾಯ್ದೆಯ ‘ಸೆಕ್ಷನ್ 6ರ ಪ್ರಕಾರ ನಿರ್ಧರಿಸಲಾಗುತ್ತದೆ. ಇದರಲ್ಲಿ ಎರಡು ಭಾಗಗಳಿವೆ:

ಸೆಕ್ಷನ್ 6(1), ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಕೂಲಿ ದರವನ್ನು ಘೋಷಿಸುವ ಅಧಿಕಾರ ನೀಡುತ್ತದೆ. ಕೇಂದ್ರ ಸರ್ಕಾರ ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸಬಹುದು. ಇಲ್ಲಿ ವಿಭಿನ್ನ ಪ್ರದೇಶಗಳು ಅಂದರೆ, ವಾಸ್ತವದಲ್ಲಿ ವಿಭಿನ್ನ ರಾಜ್ಯಗಳು ಅಂತಲೇ ಆಗುತ್ತದೆ.

ಸೆಕ್ಷನ್ 6(2)ರ ಪ್ರಕಾರ, ಕೇಂದ್ರ ಸರ್ಕಾರವು ಸೆಕ್ಷನ್‌ 6(1)ರ ಅಡಿಯಲ್ಲಿ ಅಧಿಕೃತವಾಗಿ ಕೂಲಿ ದರಗಳನ್ನು ಘೋಷಿಸುವವರೆಗೆ, ಆಯಾ ರಾಜ್ಯ ಸರ್ಕಾರಗಳು ನಿಗದಿಪಡಿಸಿದ ಕನಿಷ್ಠ ಕೂಲಿ ದರಗಳೇ ಜಾರಿಯಲ್ಲಿರುತ್ತವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಕೃಷಿ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರಗಳು ನಿಗದಿಪಡಿಸಿದ ಕನಿಷ್ಠ ಕೂಲಿಯನ್ನು ಪಡೆಯುವುದಕ್ಕೆ ಮನರೇಗಾ ಕಾರ್ಮಿಕರು ಅರ್ಹರಾಗಿರುತ್ತಾರೆ. ಮನರೇಗಾ ಯೋಜನೆ 2006ರ ಫೆಬ್ರವರಿ 2 ರಂದು ಜಾರಿಗೆ ಬಂದಿತು. ಆದರೆ, 2009ರವರೆಗೆ ಕೇಂದ್ರ ಸರ್ಕಾರವು ಸೆಕ್ಷನ್ 6(1)ನ್ನು ಅಂದರೆ ಕೂಲಿದರಗಳನ್ನು ನಿರ್ಧರಿಸುವ ಅಧಿಕಾರವನ್ನು ಬಳಸಿಕೊಂಡಿರಲಿಲ್ಲ. ಆದ್ದರಿಂದ, ಆ ಅವಧಿಯಲ್ಲಿ ಆಯಾ ರಾಜ್ಯಗಳು ನಿರ್ಧರಿಸಿದ ಕನಿಷ್ಠ ಕೂಲಿ ದರಗಳೇ ಚಾಲ್ತಿಯಲ್ಲಿದ್ದವು. ಹಲವು ರಾಜ್ಯಗಳಲ್ಲಿ ಮಾರುಕಟ್ಟೆಯಲ್ಲಿ ಕೃಷಿ ಕಾರ್ಮಿಕರಿಗೆ ಸಿಗುತ್ತಿದ್ದ ಸಾಮಾನ್ಯ ಕೂಲಿಗಿಂತ ರಾಜ್ಯ ಸರ್ಕಾರಗಳು ನಿಗದಿಪಡಿಸಿದ್ದ ಕನಿಷ್ಠ ಕೂಲಿ ಹೆಚ್ಚಾಗಿತ್ತು. ಇದು ಆರಂಭದ ವರ್ಷಗಳಲ್ಲಿ ಮನರೇಗಾ ಯೋಜನೆ ಅಷ್ಟೊಂದು ಜನಪ್ರಿಯವಾಗಿದ್ದಕ್ಕೆ ಮುಖ್ಯ ಕಾರಣವಾಗಿತ್ತು. 2006 ರಿಂದ 2009ರ ನಡುವಿನ ಅವಧಿಯಲ್ಲಿ ಕೆಲವು ರಾಜ್ಯಗಳು ಕನಿಷ್ಠ ಕೂಲಿ ದರವನ್ನು ಗಣನೀಯವಾಗಿ ಏರಿಸಿದವು.

ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆಯೆಂದರೆ ಉತ್ತರ ಪ್ರದೇಶ, 2007-08ರಲ್ಲಿ ಅಲ್ಲಿ ದಿನಕ್ಕೆ 58 ರೂಪಾಯಿ ಇದ್ದ ಕೂಲಿ ದಿಢೀರನೆ 100 ರೂಪಾಯಿಯಾಯಿತು. ಆಗ ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದರು. ಮನರೇಗಾ ಯೋಜನೆಯ ಕೂಲಿಯ ಹಣವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಹಾಗಾಗಿ ರಾಜ್ಯ ಸರ್ಕಾರಗಳು ಲಗಾಮಿಲ್ಲದೆ ಕೂಲಿಯನ್ನು ಹೆಚ್ಚಿಸುತ್ತಿವೆ ಎಂದು ಕೆಲವು ವಿಶ್ಲೇಷಕರು ವಾದಿಸಿದರು. ಕೆಲವರು ಈ ಟೀಕೆಯನ್ನು ವಿರೋಧಿಸಿದರು. ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿನ ಸ್ವಂತ ಸಾರ್ವಜನಿಕ ಕೆಲಸಗಳಿಗೂ ಅಷ್ಟೇ ಕೂಲಿಯನ್ನು ಕೊಡಬೇಕಾಗುತ್ತದೆ. ಹಾಗಾಗಿ ರಾಜ್ಯಗಳಿಗೆ ಸುಮ್ಮಸುಮ್ಮನೆ ಕೂಲಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಅಲ್ಲದೆ, ಉತ್ತರಪ್ರದೇಶವನ್ನು ಬಿಟ್ಟರೆ ಬೇರೆ ಯಾವ ರಾಜ್ಯದಲ್ಲೂ ಕನಿಷ್ಠ ಕೂಲಿಯಲ್ಲಿ ಈ ಪ್ರಮಾಣದ ಏರಿಕೆಯಾಗಿಲ್ಲ ಎಂದು ಅವರು ವಾದಿಸಿದರು.

ಈ ಚರ್ಚೆ ಮುಂದುವರಿದೇ ಇತ್ತು. ಒಂದು ತೀರ್ಮಾನ ಸಾಧ್ಯವಾಗಿರಲಿಲ್ಲ. ಕೇಂದ್ರ ಸರ್ಕಾರ 2009ರ ಕೊನೆಯಲ್ಲಿ ಒಂದು ಆತಂಕಕಾರಿಯಾದ ನಿರ್ಧಾರ ತೆಗೆದುಕೊಂಡಿತು. ಸೆಕ್ಷನ್ 6(1)ನ್ನು ಬಳಸಿಕೊಂಡು ಮನರೇಗಾ ಕೂಲಿ ದರಗಳನ್ನು ತಾನೇ ಘೋಷಿಸಿತು. ಕೇಂದ್ರ ಸರ್ಕಾರವು ಬಹುತೇಕ ರಾಜ್ಯಗಳಲ್ಲಿ ದಿನಕ್ಕೆ 100ರೂ ಕೂಲಿಯನ್ನು ನಿಗದಿಪಡಿಸಿತ್ತು. ಕನಿಷ್ಠ ಕೂಲಿ ಈಗಾಗಲೇ ಹೆಚ್ಚಿದ್ದ ರಾಜ್ಯಗಳಲ್ಲಿ ಹೆಚ್ಚುವರಿ ಹಣವನ್ನೂ ನೀಡಿತು. ಕಾರ್ಮಿಕರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಯಿತು. ಇದನ್ನು 2009ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯನ್ನು ಈಡೇರಿಸುವುದಕ್ಕಾಗಿ ತೆಗೆದುಕೊಂಡ ಕ್ರಮವಾಗಿ ಇದನ್ನು ಬಿಂಬಿಸಲಾಯಿತು.

ಆದರೆ, ಈ ನಿರ್ಧಾರದಿಂದ ಕಾಲಕ್ರಮೇಣ ಕೇಂದ್ರ ಸರ್ಕಾರಕ್ಕೆ ಮನರೇಗಾ ಕೂಲಿಯಲ್ಲಿ ಏರಿಕೆಯಾಗದಂತೆ ನೋಡಿಕೊಳ್ಳುವುದಕ್ಕೆ ಅವಕಾಶವಾಯಿತು. ವಾಸ್ತವವಾಗಿ, ಅಂದಿನಿಂದ ಕೇಂದ್ರ ಸರ್ಕಾರವು ಮನರೇಗಾ ನೈಜ ಕೂಲಿಯನ್ನು ಸ್ಥಗಿತಗೊಳಿಸಿತು. ಇಂದಿಗೂ ಸಹ, ಪ್ರತಿ ವರ್ಷ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ರಾಜ್ಯವಾರು ಕೂಲಿಯನ್ನು ಹೆಚ್ಚಿಸಲಾಗುತ್ತದೆಯೇ ಹೊರತು, ಬೆಲೆ ಸೂಚ್ಯಂಕಕ್ಕಿಂತ ಹೆಚ್ಚಿಗೆ ಕೂಲಿ ಏರಿಕೆಯಾಗುತ್ತಿಲ್ಲ.

ನೈಜ ಕೂಲಿ ಸ್ಥಗಿತದ ಪರಿಣಾಮಗಳು

ಈ ರೀತಿ ಕೂಲಿ ದರವನ್ನು ಸ್ಥಗಿತಗೊಳಿಸಿದ್ದರಿಂದ ಎರಡುಗಂಭೀರವಾದ ಸಮಸ್ಯೆಗಳು ಹುಟ್ಟಿಕೊಂಡವು:

ಮೊದಲನೆಯದಾಗಿ ಅನೇಕ ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳು ನಿಗದಿಪಡಿಸಿದ ಕನಿಷ್ಠ ಕೂಲಿಗಿಂತಲೂ ಮನರೇಗಾ ಕೂಲಿ ಕಡಿಮೆಯಾಗತೊಡಗಿತು. ಯಾಕೆಂದರೆ ಕನಿಷ್ಠ ಕೂಲಿ ಹಣದುಬ್ಬರವನ್ನು ಅನುಸರಿಸಿ ಏರಿಕೆಯಾಗುತ್ತಿತ್ತು. ಅಂದರೆ ಹಣದುಬ್ಬರ ಹೆಚ್ಚಾದರೆ ಕನಿಷ್ಠ” ಕೂಲಿಯೂ ಏರಿಕೆಯಾಗುತ್ತಿತ್ತು. ಆದರೆ ಮನರೇಗ ಕೂಲಿ ಹಾಗೆ ಆಗುತ್ತಿರಲಿಲ್ಲ. ಲಾವಣ್ಯ ತಮಾಂಗ್ ಅವರು ಇತ್ತೀಚಿಗೆ ಮಾಡಿರುವ ಅಧ್ಯಯನದ ಪ್ರಕಾರ, 2025-26ರ ವೇಳೆಗೆ ಬಹುತೇಕ ರಾಜ್ಯಗಳಲ್ಲಿ ಮನರೇಗಾ ಕೂಲಿಯು ಕೃಷಿ ಕಾರ್ಮಿಕರ ಕನಿಷ್ಠ ಕೂಲಿಗಿಂತಲೂ ಬಹಳ ಕಡಿಮೆಯಿದೆ. ಇದು ಕನಿಷ್ಠ ಕೂಲಿಯನ್ನು ರಕ್ಷಿಸಬೇಕೆನ್ನುವ ಮನರೇಗಾದ ಆಶಯಕ್ಕೆ ವಿರುದ್ಧವಾಗಿದೆ. ಅಲ್ಲದೆ, ಕನಿಷ್ಠ ಕೂಲಿಗಿಂತ ಕಡಿಮೆ ಹಣ ನೀಡುವುದು ಕಾನೂನುಬದ್ದವೇ, ಎಂಬ ಪ್ರಶ್ನೆಯೂ ಇದೆ (ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆದರೆ ಇನ್ನೂ ಸ್ಪಷ್ಟ ತೀರ್ಪು ಬಂದಿಲ್ಲ).

ಎರಡನೆಯದಾಗಿ ಮನರೇಗಾ ಕೂಲಿಯು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಸಿಗುವ ಕೂಲಿಗಿಂತಲೂ ಕಡಿಮೆ ಇದೆ. 2009ರಿಂದ 2014ರ ನಡುವೆ ಗ್ರಾಮೀಣ ಭಾರತದಲ್ಲಿ ಕೂಲಿ ದರ ವೇಗವಾಗಿ ಹೆಚ್ಚುತ್ತಿತ್ತು. ಆದರೆ ಲೇಬರ್ ಬ್ಯೂರೋ ಅಂಕಿಅಂಶಗಳ ಪ್ರಕಾರ, 2014ರ ಹೊತ್ತಿಗೆ ಮನರೇಗಾದಲ್ಲಿ ಪುರುಷರಿಗೆ ಅಖಿಲ ಭಾರತ ಮಟ್ಟದಲ್ಲಿ ಕೃಷಿ ಕೂಲಿಯ ಶೇಕಡ 60ರಷ್ಟು ಮತ್ತು ಮಹಿಳೆಯರಿಗೆ ಶೇಕಡ 75ರಷ್ಟು ಮಾತ್ರ ಸಿಗುತ್ತಿತ್ತು. ಅಂದಿನಿಂದ ಈ ಅಂತರವು ಹಾಗೆಯೇ ಮುಂದುವರಿದಿದೆ. ಏಕೆಂದರೆ ಗ್ರಾಮೀಣ ಪ್ರದೇಶದಲ್ಲಿನ ನೈಜ ಕೂಲಿದರ (ಅಂದರೆ ಹಣದುಬ್ಬರಕ್ಕೆ ಹೊಂದಿಸಿದ ಕೂಲಿ) ಸ್ಥಗಿತಗೊಂಡಿದೆ.

ವಾಸ್ತವದಲ್ಲಿ ಈ ವ್ಯತ್ಯಾಸವು ಮೇಲೆ ಕಾಣುವುದಕ್ಕಿಂದ ಬಹಳ ಹೆಚ್ಚಿಗೆ ಇದೆ. ಇದಕ್ಕೆ ಕಾರಣವೇನೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಕೂಲಿ ಮನರೇಗಾಕ್ಕಿಂತ ಹೆಚ್ಚಿಗೆ ಇದೆ. ಅಷ್ಟೇ ಅಲ್ಲ ಮಾರುಕಟ್ಟೆಯಲ್ಲಿ ಕೂಲಿ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಆ ದಿನವೇ ಪಾವತಿಯಾಗುತ್ತದೆ. ಆದರೆ ಮನರೇಗಾದಲ್ಲಿ ಹಾಗಿಲ್ಲ: ಹಣ ಕೈಗೆ ಸಿಗುವುದಕ್ಕೆ ತುಂಬಾ ತಡವಾಗುತ್ತದೆ. ಯಾವಾಗ ಸಿಗುತ್ತದೆ ಅನ್ನುವ ಖಾತ್ರಿಯೂ ಇರುವುದಿಲ್ಲ. ಕೇಂದ್ರ ಸರ್ಕಾರ ಇದನ್ನು ಅಲ್ಲಗಳೆಯುತ್ತಲೇ ಇದೆ. ಆದರೆ ಪುರಾವೆಗಳು, ಅದರಲ್ಲೂ ವಿಶೇಷವಾಗಿ ‘ಲಿಬ್‌ಟೆಕ್’ ತಂಡ ನಡೆಸಿದ ಇತ್ತೀಚಿನ ಸಂಶೋಧನೆಗಳು ಇದನ್ನು ಸ್ಪಷ್ಟವಾಗಿ ತೋರಿಸಿವೆ. ವಾಸ್ತವವಾಗಿ ಕೇವಲ ತಡವಾಗಿರುವುದು ಮಾತ್ರವಲ್ಲ, ಎಷ್ಟೋ ಸಂದರ್ಭಗಳಲ್ಲಿ ಮನರೇಗಾ ಕೂಲಿ ಪಾವತಿಯೇ ಆಗಿಲ್ಲ. ಉದಾಹರಣೆಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ [ABPS] ಅಥವಾ ಮೊಬೈಲ್ ಮಾನಿಟರಿಂಗ್ ಸಿಸ್ಟಮ್‌ ತಾಂತ್ರಿಕ ತೊಂದರೆಗಳಿಂದಾಗಿ ಕೆಲಸಗಾರರಿಗೆ ಕೂಲಿಯೇ ಸಿಗುವುದಿಲ್ಲ. ಇದರಿಂದ ಕಾರ್ಮಿಕರಲ್ಲಿ ಮನರೇಗಾ ಬಗ್ಗೆ ತೀವ್ರ ನಿರಾಸಕ್ತಿ ಮೂಡುತ್ತದೆ. ಅದರ ಪರಿಣಾಮವಾಗಿ ಎಷ್ಟೋ ಗ್ರಾಮೀಣ ಕಾರ್ಮಿಕರು ಮನರೇಗಾದಲ್ಲಿ ಅಸಕ್ತಿಯನ್ನೇ ಕಳೆದುಕೊಂಡಿದ್ದಾರೆ.

ಆದರೆ ಸರ್ಕಾರಿ ಲೆಕ್ಕದ ಪ್ರಕಾರ ಮನರೇಗಾ ಕೆಲಸಗಾರರ ಸಂಖ್ಯೆ ಸ್ವಲ್ಪವೂ ಕಡಿಮೆಯಾಗಿಲ್ಲ. ಹಾಗಾಗಿ ಇದು, ಜನರು ಮನರೇಗಾದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಗೆ ವ್ಯತಿರಿಕ್ತವಾಗಿ ತೋರುತ್ತದೆ. ಆದರೆ, ಇತ್ತೀಚಿನ ‘ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ’ (PLFS) ಮಾಹಿತಿಯನ್ನು ಆಧರಿಸಿ ಮಾಡಿರುವ ವಿಶ್ಲೇಷಣೆ ಗಮನಿಸಿದರೆ ಅಧಿಕೃತ ಅಂಕಿಅಂಶ ಸುಳ್ಳೆಂಬುದು ಸ್ಪಷ್ಟವಾಗುತ್ತದೆ. ದೇಶಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಿದ ಆರಂಭದ ವರ್ಷಗಳಿಗೆ ಹೋಲಿಸಿದರೆ ಇಂದು ಮನರೇಗಾದ ಉದ್ಯೋಗದ ಮಟ್ಟ ಕಡಿಮೆಯಾಗಿರುವುದನ್ನು ಪೀರಿಯಾಡಿಕ್ ಸರ್ವೆಯ ಅಂಕಿಅಂಶಗಳು ತಿಳಿಸುತ್ತವೆ. ಸರ್ಕಾರಿ ದಾಖಲೆಗಳಿಗೂ ಮತ್ತು ವಾಸ್ತವ ಪರಿಸ್ಥಿತಿಗೂ ನಡುವೆ ಅಪಾರ ವ್ಯತ್ಯಾಸವಿದೆ. ಇದನ್ನು ನೋಡಿದರೆ ಆ ಅವಧಿಯಲ್ಲಿ ಮನರೇಗಾ ಯೋಜನೆಯಲ್ಲಿ ಮಿತಿಮೀರಿದ ಹಣದ ಸೋರಿಕೆಯಾಗಿರುವುದು ಗೊತ್ತಾಗುತ್ತದೆ.

ಜನರಲ್ಲಿ ನಿರಾಸಕ್ತಿ ಮೂಡುವುದಕ್ಕೂ ಹಾಗೂ ಭ್ರಷ್ಟಾಚಾರ ಹೆಚ್ಚಾಗುವುದಕ್ಕೂ ಪರಸ್ಪರ ಸಂಬಂಧವಿದೆ. ಕಾರ್ಮಿಕರು ಆಸಕ್ತಿ ಕಳೆದುಕೊಂಡಾಗ ಮೇಲ್ವಿಚಾರಣೆ ಬಿಗಿ ಕಳೆದುಕೊಳ್ಳುತ್ತದೆ. ಇನ್ನೂ ದುರಂತವೆಂದರೆ ಕಾರ್ಮಿಕರು ಕಾನೂನುಬದ್ದ ಹಾದಿಯನ್ನು ಬಿಟ್ಟು, ಪ್ರಲೋಬಕ್ಕೆ ಒಳಗಾಗಿ ಭ್ರಷ್ಟ ವ್ಯವಸ್ಥೆಯೊಂದಿಗೆ ಶಾಮೀಲಾಗಿ ಬಿಡುವ ಸಾಧ್ಯತೆಯೂ ಹೆಚ್ಚು.

ಮುಂದುವರಿದ ನೀತಿಯ ವೈಫಲ್ಯ

ದುರದೃಷ್ಟವಶಾತ್, ‘ವಿಬಿ-ಜಿ ರಾಮ್ ಜಿ’ಕಾಯಿದೆ ಈ ಬಿಕ್ಕಟ್ಟನ್ನು ಪರಿಹರಿಸುವುದಕ್ಕಿಂತ ಮುಂದುವರಿಸಿಕೊಂಡು ಹೋಗುವಂತೆ ಕಾಣುತ್ತಿದೆ. ಮೊದಲನೆಯದಾಗಿ, ಈ ಕಾಯಿದೆಯಲ್ಲಿ ಸಮಯಕ್ಕೆ ಸರಿಯಾಗಿ ವೇತನವನ್ನು ಪಾವತಿಸುವುದಕ್ಕೇ ಆಗಲಿ ಅಥವಾ ಭ್ರಷ್ಟಾಚಾರವನ್ನು ತಡೆಯುವುದಕ್ಕೇ ಆಗಲಿ ಯಾವುದೇ ಹೊಸ ಅಥವಾ ಉಪಯುಕ್ತ ನಿಯಮಗಳೂ ಇಲ್ಲ. ಎರಡನೆಯದಾಗಿ, ಕೂಲಿದರವನ್ನು ನಿರ್ಧರಿಸುವ ಅಧಿಕಾರವನ್ನು ಈ ಕಾಯ್ದೆ ಕೂಡ ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ (ಸೆಕ್ಷನ್ 10ರ ಅಡಿಯಲ್ಲಿ). ಈಗ ಅಂತಹ ಅಧಿಕಾರದ ಅವಶ್ಯಕತೆಯೇ ಇಲ್ಲ.

ಒಂದು ವಿಷಯ ನೆನಪಿಡಬೇಕು, ಹಿಂದೆ ಮನರೇಗಾ ಯೋಜನೆಯಲ್ಲಿ 6(2) ಬದಲಿಗೆ 6(1)ನ್ನು ಬಳಸಲು ಪ್ರಾರಂಭಿಸಿದ್ದಕ್ಕೆ ಒಂದು ಸಮರ್ಥನೆಯನ್ನು ನೀಡಲಾಗಿತ್ತು. ವೇತನವನ್ನು ಪೂರ್ತಿಯಾಗಿ ಕೇಂದ್ರ ಸರ್ಕಾರವೇ ನೀಡುವಾಗ, ಅದನ್ನು ರಾಜ್ಯ ಸರ್ಕಾರಗಳು ನಿರ್ಧರಿಸಬಾರದು ಎಂಬುದು ಆಗಿನ ವಾದವಾಗಿತ್ತು. ಆದರೆ, ಈ ಹೊಸ ಕಾಯಿದೆಯಡಿ ಕೂಲಿಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಹಂಚಿಕೊಳ್ಳುತ್ತವೆ. ಅಂದಮೇಲೆ, ಕನಿಷ್ಠ ವೇತನದ ಖಾತರಿ ನೀಡುವ ಮನರೇಗಾದ 6(1) ನಿಯಮವನ್ನು ಕೈಬಿಟ್ಟು ಸೆಕ್ಷನ್ 6(2) ಅಳವಡಿಸಿಕೊಳ್ಳಬೇಕಿತ್ತು. ಆದರೆ ಕೇಂದ್ರ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ. ಕನಿಷ್ಠ ವೇತನದ ನಿಯಮವನ್ನು ಕೈಬಿಟ್ಟು, ವಿಬಿ ಜಿ ರಾಂ ಜಿ ಕಾರ್ಮಿಕರಿಗೆ ಕೂಲಿ ದರವನ್ನು ತಾನೇ ನಿರ್ಧರಿಸುವ ಹಕ್ಕನ್ನು ಶಾಶ್ವತವಾಗಿ ಉಳಿಸಿಕೊಂಡಿದೆ.

ಇಲ್ಲಿ ಮತ್ತೊಂದು ಸಮಸ್ಯೆಯಿದೆ. ಹಳೆಯ ೯ ಒಂದು ಅಬಾಧಿತಗೊಳಿಸುವ ನಿಯಮವಿತ పల్లి 9/37 1 ಪ್ರಕಾರ 1948ರ ಕನಿಷ್ಠ ವೇತನಕಾಯ್ದೆಯಲ್ಲಿ ನಿರ್ಲಕ್ಷಿಸುವುದಕ್ಕೆ ಕೇಂದ್ರಕ್ಕೆ ಅಧಿಕಾರವಿತ್ತು. ಅಂ …ತನಕ್ಕಿಂತ ಕಡಿಮೆ ಕೂಲಿಯನ್ನು ಕೇಂದ್ರ ಕೊಡಬಹುದಿತ್ತು. ಆದರೆ ವಿಚಿತ್ರವೆಂದರೆ, ಹೊಸದಾಗಿ ಬಂದಿರುವ ಈ ವಿಬಿ-ಜಿ ರಾಮ್ ಜಿ’ ಕಾಯ್ದೆಯಲ್ಲಿ ಅಂತಹ ಯಾವುದೇ ನಿಯಮವೂ ಇಲ್ಲ. ಹಾಗಿರುವಾಗ, ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡುವುದನ್ನು ಸಮರ್ಥಿಸಿಕೊಳ್ಳುವುದಕ್ಕೆ ಸರ್ಕಾರಕ್ಕೆ ಈಗ ಸಾಧ್ಯವಾಗುವುದಿಲ್ಲ.

ಹಾಗಾಗಿ ಕೇಂದ್ರ ಒಂದು ಕೆಲಸ ಮಾಡಬಹುದಿತ್ತು. ಕೇಂದ್ರ ಸರ್ಕಾರವೇ ಎಲ್ಲಾ ರಾಜ್ಯಗಳಲ್ಲಿ ಕನಿಷ್ಠ ವೇತನಕ್ಕೆ ಸಮಾನವಾದ ಅಥವಾ ಅದಕ್ಕಿಂತ ಹೆಚ್ಚಿನ ಕೂಲಿಯನ್ನು ನಿಗದಿಪಡಿಸಬಹುದಿತ್ತು. ಇದರಿಂದ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದಂತಾಗುತ್ತಿತ್ತು. ಅಂದರೆ, ಇದರಿಂದ ಕೂಲಿ ಪಾವತಿಗೆ ಕಾನೂನಿನ ಸಮರ್ಥನೆ ಸಿಗುತ್ತಿತ್ತು. ಜೊತೆಗೆ ನೈಜ ಕೂಲಿಯನ್ನು ಹೆಚ್ಚಿಸುವುದಕ್ಕೆ ಮತ್ತು ಕಾಲಕಾಲಕ್ಕೆ ಕೂಲಿ ದರವನ್ನು ಪರಿಷ್ಕರಿಸುವುದಕ್ಕೆ ಒಂದು ಸರಳವಾದ ದಾರಿಯನ್ನು ರೂಪಿಸಿದಂತಾಗುತ್ತಿತ್ತು.

ಕೇಂದ್ರ ಸರ್ಕಾರ ಕೂಲಿಯನ್ನು ಹೆಚ್ಚಿಸದೆ ಹಾಗೆಯೇ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಹೆಚ್ಚಿಗೆಯಿದೆ. ಈ ಮೂಲಕ ವಿಬಿ ಜಿ ರಾಂ ಜಿ ಕಾಯ್ದೆಯಡಿ ಉದ್ಯೋಗಾವಕಾಶಗಳು ಕ್ರಮೇಣ ಅದರಷ್ಟಕ್ಕೆ ಕಡಿಮೆಯಾಗುತ್ತದೆ. ಅದು ಸರ್ಕಾರದ ಉದ್ದೇಶವೂ ಇರಬಹುದು. ಇದೇ ನಿಜವಾದರೆ, ಕೂಲಿಯನ್ನು ಸ್ಥಗಿತಗೊಳಿಸುವುದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲೇಬೇಕು. ಯಾಕೆಂದರೆ, ಅಭಾಧಿತಗೊಳಿಸುವ ನಿಯಮವನ್ನು ರದ್ದುಪಡಿಸಿರುವಈ ಸಂದರ್ಭದಲ್ಲಿ ಕನಿಷ್ಟ ವೇತನಕ್ಕಿಂದ ಒಂದು ರೂಪಾಯಿ ಕಡಿಮೆ ಕೊಟ್ಟರೂ ಅದು ಪಕ್ಕಾ ಕಾನೂನು ಬಾಹಿರ ಕೆಲಸವಾಗುತ್ತದೆ.

Orignally published in The Hindu

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...

16ನೇ ಹಣಕಾಸು ಆಯೋಗ -ನ್ಯೂನತೆಗಳು ಮತ್ತು ಆತಂಕಗಳು

ಹಿಂದಿನ ಆಯೋಗಗಳಿಗೆ ಹೋಲಿಸಿದರೆ 16ನೇ ಹಣಕಾಸು ಆಯೋಗಕ್ಕೆ ಹೆಚ್ಚಿನ ಸ್ವಾತಂತ್ರವಿತ್ತು. ಅದಕ್ಕೆ...

ಅಮರ್ತ್ಯ ಸೇನ್ ಅವರ ಸಾಮಾಜಿಕ ಆಯ್ಕೆಯನ್ನು ಕುರಿತು

ಅಮರ್ತ್ಯ ಸೇನ್ ಕಲ್ಕತ್ತಾದ ಪ್ರಸಿಡೆನ್ಸಿ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ವ್ಯಾಸಂಗ...