ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

Date:

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇನ್ನೂ ವೇಗದ ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತೇನೆ ಇತ್ಯಾದಿ ಸುವರ್ಣಯುಗದ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಈ ಬಾರಿ, ಅವರ ತಂಡ ವಾಸ್ತವ ಆರ್ಥಿಕ ಅಂಕಿಅಂಶಗಳ ಬಗ್ಗೆ ಸ್ವಲ್ಪ ಹೆಚ್ಚು ಎಚ್ಚರಿಕೆಯಿಂದ ಮಾತನಾಡುತ್ತಿದೆ.

- Advertisement -

ಹಿಂತಿರುಗಿ ನೋಡಿದರೆ, 2018ರಲ್ಲಿ ಆರ್ಥಿಕ ಬೆಳವಣಿಗೆಯು ಸಾಕಷ್ಟು ಹೆಚ್ಚಿಗೆ ಇತ್ತು (ಸುಮಾರು 3%). ಇದಕ್ಕೆ 2017ರ ಡಿಸೆಂಬರ್‌ನಲ್ಲಿ ಶ್ರೀಮಂತರಿಗೆ ಅನುಕೂಲ ಮಾಡಿಕೊಡುವುದಕ್ಕೆ ಜಾರಿಗೆ ತಂದ ತೆರಿಗೆ ಕಡಿತದ ಕಾನೂನು ಭಾಗಶಃ ಕಾರಣ. ಆದರೆ 2019ರ ಹೊತ್ತಿಗೆ ಆರ್ಥಿಕ ಬೆಳವಣಿಗೆ 2.3%ಕ್ಕೆ ಕುಸಿಯಿತು. ನಂತರ ಬಂತು ಕೋವಿಡ್-19. 2020ರ ಆರ್ಥಿಕತೆಯನ್ನು ಸಂಪೂರ್ಣವಾಗಿ ಹದಗೆಡಿಸಿತು. ಸಾಂಕ್ರಾಮಿಕದ ವರ್ಷವನ್ನು ಬಿಟ್ಟು ನೋಡಿದರೂ, ಮೊದಲ ಟ್ರಂಪ್ ಆಡಳಿತದ ಮೊದಲ ಮೂರು ವರ್ಷಗಳ ಸರಾಸರಿ ಬೆಳವಣಿಗೆ ಕೇವಲ 2.5% ಇತ್ತು. ಇದು ಒಬಾಮಾ ಆಡಳಿತದ ಕೊನೆಯ ಮೂರು ವರ್ಷಗಳ ಬೆಳವಣಿಗೆಗೆ ಹೋಲಿಸಿದರೆ ಸ್ವಲ್ಪ ಹೆಚ್ಚು (2.3%). ಆದರೆ ಅದು ಆಗಿನ ಹಣಕಾಸು ಸಚಿವ ಸ್ಟೀವನ್ ಮ್ಯುಚಿನ್ ಜಿಡಿಪಿ ಬೆಳವಣಿಗೆಯ ಬಗ್ಗೆ ನೀಡಿದ್ದ ಅಂದಾಜುಗಳಿಗಿಂತ ಬಹಳ ದೂರ ಇತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...
20180305 Simon Johnson 11 MARCH 2018 COLLIER.jpg

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೋವಿಡ್ ಬರುವ ಮೊದಲು ನಿರುದ್ಯೋಗದ ಮಟ್ಟ ಕಡಿಮೆಯಾಗಿತ್ತು ಮತ್ತು ಬಡತನವೂ ತಗ್ಗಿತ್ತು. ಒಬಾಮಾ ಅವರ ಎರಡನೇ ಅವಧಿಯ ಕೊನೆಯಲ್ಲಿ ಈ ಪ್ರವೃತ್ತಿ ಪ್ರಾರಂಭವಾಗಿತ್ತು. ಅದೇ ನಂತರವೂ ಮುಂದುವರಿದಿತ್ತು. ಆದರೆ, ಸಂಪತ್ತಿನ ಅಸಮಾನತೆ ಹೆಚ್ಚುತ್ತಾ ಹೋಯಿತು. ಆಗಿನ ತೆರಿಗೆ ಕಡಿತ ಈ ಅಸಮಾನತೆ ಹೆಚ್ಚಳಕ್ಕೆ ನೆರವಾಯಿತು. ಅಲ್ಲದೆ, ಟ್ರಂಪ್ ಅವರ ಮೊದಲ ಆಡಳಿತದ ಅವಧಿಯಲ್ಲಿ ಬಜೆಟ್ ಕೊರತೆ ಮತ್ತು ಸರ್ಕಾರದ ಸಾಲದ ಪ್ರಮಾಣವೂ ಗಣನೀಯವಾಗಿ ಹೆಚ್ಚಾಯಿತು.

ಈಗ ನಾವು ಮತ್ತೆ 2026ಕ್ಕೆ ಬರೋಣ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಹಣಕಾಸು ವಲಯದ ಮೇಲಿನ ನಿಯಂತ್ರಣಗಳನ್ನು ತೆಗೆದುಹಾಕುವ ಪ್ರಕ್ರಿಯೆ ಅಷ್ಟೇನೂ ತೀವ್ರವಾಗಿರಲಿಲ್ಲ. ಆದರೆ ಜನಪ್ರಿಯತೆ ಕಡಿಮೆಯಾಗುವುದಕ್ಕೆ ಪ್ರಾರಂಭವಾಗಿರುವುದರಿಂದ, ಈಗ ಎರಡನೆ ಅವಧಿಯಲ್ಲಿ ಟ್ರಂಪ್ ಸರ್ಕಾರವು ಹಣಕಾಸು ನಿಯಮಗಳನ್ನು ಸಡಿಲಗೊಳಿಸಲು ಹೆಚ್ಚು ಒತ್ತು ನೀಡುವ ಸಾಧ್ಯತೆಯಿದೆ. ಅದರ ಜೊತೆಗೆ ‘ಸ್ಟೇಬಲ್‌ಕಾಯಿನ್’ ಮತ್ತು ಇತರ ಕ್ರಿಸ್ಟೋಕರೆನ್ಸಿಗಳ ಬಳಕೆಯನ್ನು

ಪ್ರೋತ್ಸಾಹಿಸುತ್ತಿದೆ. ಅಲ್ಲದೆ, ತಮ್ಮ ಬಂಡವಾಳದ ಮಿತಿಗಿಂತ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವಂತೆ ಬ್ಯಾಂಕುಗಳನ್ನು ಒತ್ತಾಯಿಸಲಾಗುತ್ತಿದೆ. ಇದರ ಪರಿಣಾಮವಾಗಿ ಆರ್ಥಿಕ ಬೆಳವಣಿಗೆಯು ಸ್ವಲ್ಪ ಮಟ್ಟಿಗೆ ಹೆಚ್ಚಾಗಬಹುದು (2025ರ ತೆರಿಗೆ ಕಡಿತವು ಇದಕ್ಕೆ ನೆರವಾಗಬಹುದು). ಆದರೆ, ಇದರಿಂದ ಅಮೆರಿಕದ ಒಟ್ಟಾರೆ ಆರ್ಥಿಕ ವ್ಯವಸ್ಥೆಗೆ ಅಪಾಯವೂ ಗಣನೀಯವಾಗಿ ಹೆಚ್ಚುವ ಸಾಧ್ಯತೆಯಿದೆ.

ಸೈಮನ್ ಜಾನ್ಸನ್, ಫೆಬ್ರುವರಿ 2026

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಹಣಕಾಸು ಕಾರ್ಯದರ್ಶಿ ಸ್ಟೀವನ್ ಮ್ಯುಚಿನ್, ದೊಡ್ಡ ಆರ್ಥಿಕ ಪವಾಡ ಸಾಧಿಸುವ ಭರವಸೆ ನೀಡಿದ್ದರು. ಸಂಯುಕ್ತ ರಾಷ್ಟ್ರಗಳು ತಮ್ಮ ನೀತಿಗಳನ್ನು ಅಳವಡಿಸಿಕೊಂಡಾಗ ವಾರ್ಷಿಕ ಆರ್ಥಿಕ ಪ್ರಗತಿ ನಿರಂತವಾಗಿ ಶೇಕಡ ಮೂರು ಅಥವಾ ನಾಲ್ಕಕ್ಕಿಂತಲೂ ಹೆಚ್ಚಿರುತ್ತದೆ ಎಂದು ಅವರು ವಾದಿಸಿದ್ದರು. ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ತಮಗೆ ಬೇಕಾದಂತೆ ನಿಯಮಗಳನ್ನು ಸಡಿಲಗೊಳಿಸಿದರು ಮತ್ತು ತೆರಿಗೆಯನ್ನೂ ಕಡಿಮೆ ಮಾಡಿದರು. ಹಾಗಾದರೆ, ಟ್ರಂಪ್ ತಂಡದ ಸಾಧನೆ ಏನು?

ನಿಜ, ನಾವಿನ್ನೂ ಆರಂಭದ ದಿನಗಳಲ್ಲಿದ್ದೇವೆ. ಆದರೆ ಈವರೆಗಿನ ಫಲಿತಾಂಶ ತೀರಾ ನಿರಾಶದಾಯಕವಾಗಿದೆ. ಟ್ರಂಪ್ ತಮಗೆ ಬೇಕಾದ ನೀತಿಗಳನ್ನೇ ಹಠ ಹಿಡಿದು ಮುಂದುವರಿಸಿದರೆ, ಮುಂದಿನ ಮಧ್ಯಮ ಅವಧಿಯಲ್ಲಿ ಅಮೆರಿಕದ ನಿರಂತರ ಆರ್ಥಿಕ ಬೆಳವಣಿಗೆಯ ಅವಕಾಶಗಳಿಗೆ ಧಕ್ಕೆಯಾಗಬಹುದು.

ChatGPTImageJun13202602 58 18P

2017ರ ಅಮೆರಿಕದ ಆರ್ಥಿಕ ಸಾಧನೆಗೆ ತನ್ನ ನೀತಿಗಳೇ ನೇರವಾಗಿ ಕಾರಣ ಎಂದು ಟ್ರಂಪ್ ಪದೇ ಪದೇ ವಾದಿಸುತ್ತಾ ಬಂದಿದ್ದಾರೆ. ಅದರಲ್ಲೂ ಮೂರನೇ ತ್ರೈಮಾಸಿಕದ ಬೆಳವಣಿಗೆಯ ದರವು ಶೇ. 3.3 ರಷ್ಟಿದೆ ಎಂದು ಅವರು ಬಹಳ ಪ್ರಚಾರ ಮಾಡಿದ್ದರು. ನಂತರದ ಪರಿಷ್ಕರಣದಲ್ಲಿ ಅದನ್ನು ಶೇ. 3.2ಕ್ಕೆ ಇಳಿಸಲಾಯಿತು. ನಾಲ್ಕನೇ ತ್ರೈಮಾಸಿಕದಲ್ಲಿ ಈ ಬೆಳವಣಿಗೆಯ ದರ ಶೇ. 2.6ಕ್ಕೆ ಕುಸಿಯಿತು. ಆರಂಭಿಕ ಅಂದಾಜುಗಳ ಪ್ರಕಾರ, ಇಡೀ ವರ್ಷದ ಒಟ್ಟಾರೆ ಬೆಳವಣಿಗೆಯ ದರ ಶೇ. 2.3ನ್ನು ಮೀರುವುದಿಲ್ಲ. ಇದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅವಧಿಯಲ್ಲಿ ದಾಖಲಾದ 2014ರ (ಶೇ. 2.6) 2 20150 (ಶೇ. 2.9) ಪ್ರಗತಿಗಿಂತಲೂ ಕಡಿಮೆಯಾಗಿದೆ.

ನಿಜವೇನೆಂದರೆ, ಒಬಾಮಾ ಅವರ ಅವಧಿಯಲ್ಲಿ ತ್ರೈಮಾಸಿಕ ಬೆಳವಣಿಗೆಯ ದರವು ಏಳು ಬಾರಿ ಶೇ. 3ಕ್ಕಿಂತ ಹೆಚ್ಚಾಗಿತ್ತು ಮತ್ತು ಎರಡು ಬಾರಿ ಶೇ. 4.6ರ ಮಟ್ಟವನ್ನೂ ಕೂಡ ತಲುಪಿತ್ತು. 2009ರ ಮೂರನೇ ತ್ರೈಮಾಸಿಕದಿಂದ ನೋಡಿದರೆ, ಕೇವಲ ಎರಡು ಬಾರಿ ಬಿಟ್ಟು ಉಳಿದೆಲ್ಲಾ ಸಮಯದಲ್ಲಿ ಆರ್ಥಿಕ ಪ್ರಗತಿ ಧನಾತ್ಮಕವಾಗಿಯೇ [positive] ಇತ್ತು. ಒಬಾಮಾ ಕಾಲದಲ್ಲಿ ಪ್ರಗತಿ ಆಗಿದ್ದು ಕೇವಲ ಅಂಕಿ-ಅಂಶಗಳಲ್ಲಿ ಮಾತ್ರವಲ್ಲ, ಉದ್ಯೋಗ ಸೃಷ್ಟಿಯೂ ಗಣನೀಯವಾಗಿತ್ತು. ಅವರ ಎಂಟು ವರ್ಷಗಳ ಅಧಿಕಾರದಲ್ಲಿ ಏಳು ವರ್ಷಗಳ ಕಾಲ ಪ್ರತಿವರ್ಷ 20 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದವು. ಇದರ ಜೊತೆಗೆ ನಿರುದ್ಯೋಗ ದರ ಕಡಿಮೆಯಾಗಿತ್ತು. ಮತ್ತು ಕೆಲಸಕ್ಕೆ ಸೇರುವ ಜನರ ಸಂಖ್ಯೆಯೂ ಹೆಚ್ಚಿತ್ತು..

ಪವಾಡ ಮಾಡುವುದಿರಲಿ, ಆರ್ಥಿಕ ಬೆಳವಣಿಗೆಯಲ್ಲಿ ಯಾವುದೇ ಸುಧಾರಣೆಯನ್ನು ತರುವುದಕ್ಕೆ ಕೂಡ ಟ್ರಂಪ್ ಅವರಿಗೆ ಸಾಧ್ಯವಾಗಿಲ್ಲ. ಇದು ಏಕೆ ಹೀಗಾಯಿತು ಅಂದರೆ, ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ವಾಸ್ತವದಲ್ಲಿ ಅಂತಹ ದೊಡ್ಡ ಕೆಲಸಗಳನ್ನೇನೂ ಮಾಡಿಲ್ಲ. ಇದು ಸ್ಪಷ್ಟವಾಗಿ ತಿಳಿಯುತ್ತದೆ. ತಾನು ನಿಯಮಗಳನ್ನು ಸಡಿಲಗೊಳಿಸಿದ್ದೇನೆ ಎಂದು ಅವರು ಎಷ್ಟೇ ಬಡಾಯಿ ಕೊಚ್ಚಿಕೊಂಡರೂ, ದೇಶದ ಬೃಹತ್ ಆರ್ಥಿಕತೆಗೆ ಹೋಲಿಸಿದರೆ ಅವರು ರದ್ದುಗೊಳಿಸಿದ ನಿಯಮಗಳಿಂದಾದ ಲಾಭ ತೀರಾ ನಗಣ್ಯವಾಗಿದೆ.

ಇದಲ್ಲದೆ, 2017ರ ಕೊನೆಯಲ್ಲಿ ಟ್ರಂಪ್ ಜಾರಿಗೆ ತಂದ ತೆರಿಗೆ ಕಡಿತದ ಕಾನೂನಿನಿಂದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಪ್ರಯೋಜನವೇನೂ ಆಗಿಲ್ಲ. ಈ ತೆರಿಗೆ ಯೋಜನೆಯು ಮುಖ್ಯವಾಗಿ ಮಧ್ಯಮ ವರ್ಗದ ಕುಟುಂಬಗಳಿಂದ ಹಣವನ್ನು ಕಿತ್ತುಕೊಂಡು ಅತ್ಯಂತ ಶ್ರೀಮಂತ ಅಮೆರಿಕನ್ನರಿಗೆ ಹಂಚುವ ಯೋಜನೆಯಾಗಿದೆ. ಅದರಲ್ಲೂ ವಿಶೇಷವಾಗಿ ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದಂತಹ (ಅತಿ ಹೆಚ್ಚು ತೆರಿಗೆ ಇರುವ ಮತ್ತು ಡೆಮಾಕ್ರಟಿಕ್ ಪಕ್ಷದ ಪರವಾಗಿರುವ) ರಾಜ್ಯಗಳ ಮಧ್ಯಮ ವರ್ಗದವರ ಮೇಲೆ ಇದರ ಹೊರೆ ಹೆಚ್ಚಿದೆ.

ನ್ಯೂಯಾರ್ಕ್‌ನಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಟ್ಟಡಗಳು ಇತ್ಯಾದಿ ಆಸ್ತಿಗಳನ್ನು ಹೊಂದಿರುವ ಶ್ರೀಮಂತರಿಗೆ ಇದರಿಂದ ಲಾಭವಾಗಬಹುದು. ಆದರೆ ಹೊಸದಾಗಿ ಕಂಪನಿಗಳನ್ನು ಪ್ರಾರಂಭಿಸಲು, ಹೊಸ ವಸ್ತುಗಳನ್ನು ತಯಾರಿಸಲು ಅಥವಾ ಹೊಸ ಕಾರ್ಖಾನೆ ಮತ್ತು ಯಂತ್ರೋಪಕರಣಗಳಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಈ ಕಾನೂನಿಂದ ಅಂತಹ ಉತ್ತೇಜನವೇನೂ ಸಿಗುವುದಿಲ್ಲ. ಇನ್ನೂ ಮುಖ್ಯವಾಗಿ, ಈ ಕಾನೂನಿನಿಂದ ಸಂಶೋಧನೆ ಮತ್ತು ಅಭಿವೃದ್ಧಿ [Research & Development] ಯೋಜನೆಗಳ ಮೇಲೆ ದುಷ್ಪರಿಣಾಮ ಬೀರಬಹುದು. ಇದನ್ನು ಇತ್ತೀಚೆಗೆ ನಾನು ಚರ್ಚೆಯೊಂದರಲ್ಲಿ ಸೂಚಿಸಿದ್ದೆ. ಅಮೆರಿಕದ ದೀರ್ಘಕಾಲದ ಪ್ರಗತಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಅತಿ ಮುಖ್ಯವಾದ ಚಾಲಕ ಶಕ್ತಿಯಾಗಿದೆ.

2017ರ ಅಂಕಿ-ಅಂಶಗಳನ್ನು ಗಮನಿಸಿದರೆ, ಟ್ರಂಪ್ ಅವಧಿಯಲ್ಲಿ ಉದ್ದಿಮೆಗಳ ಹೂಡಿಕೆ ಹೆಚ್ಚಾದ ಯಾವುದೇ ಲಕ್ಷಣಗಳೂ ಕಾಣುವುದಿಲ್ಲ. ಹೌದು, ಈ ಅಂಕಿ-ಅಂಶಗಳಲ್ಲಿ ಏರಿಳಿತಗಳು ಸಹಜ. ಏಕೆಂದರೆ ಕಾಲಕಾಲಕ್ಕೆ ನಡೆಯುವ ಬದಲಾವಣೆಗಳಿಗೆ ತಕ್ಕಂತೆ ಅವು ಏರುತ್ತಾ ಅಥವಾ ಇಳಿಯುತ್ತಾ ಹೋಗುತ್ತವೆ. ಆದರೂ, ಈ ವಿಷಯದಲ್ಲೂ ಒಬಾಮಾ ಅವರು ತಮ್ಮ ಎರಡು ಅವಧಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಒಂದು ಉನ್ನತ ಮಟ್ಟದ ಗುರಿಯನ್ನು ಗೊತ್ತು ಮಾಡಿದ್ದರು.

ಟ್ರಂಪ್ ಅವರು ವ್ಯಾಪಾರಕ್ಕೆ ಅಡ್ಡಿಪಡಿಸುವುದಾಗಿ ಚುನಾವಣೆಯ ಸಮಯದಲ್ಲಿ ಹೇಳಿದ್ದರು. ಆದರೆ ಸಧ್ಯ ಅದ್ಯಾವುದನ್ನು ಮಾಡಲಿಲ್ಲ. ಅದೇ ಅವರ ಮೊದಲ ವರ್ಷದ ಅಧಿಕಾರಾವಧಿಯ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಅವರು ಮಾಡಿದ ಅತ್ಯಂತ ಒಳ್ಳೆಯ ಕೆಲಸ. ಉತ್ತರ ಅಮೆರಿಕದ ಮುಕ್ತ ವ್ಯಾಪಾರ ಒಪ್ಪಂದ [NAFTA] ಹಾಗೆಯೇ ಮುಂದುವರಿದಿದೆ ಮತ್ತು ಚೀನಾ ಸೇರಿದಂತೆ ಇತರ ಪ್ರಮುಖ ದೇಶಗಳ ಜೊತೆಗಿನ ವ್ಯಾಪಾರ ಸಂಬಂಧಗಳೂ ಮೊದಲಿನಂತೆಯೇ ಇವೆ. ಜನವರಿಯಲ್ಲಿ ಸರ್ಕಾರವು ಸೋಲಾರ್ ಪ್ಯಾನಲ್ ಮತ್ತು ವಾಷಿಂಗ್ ಮೆಷಿನ್‌ಗಳ ಮೇಲೆ ಆಮದು ಸುಂಕವನ್ನು [tariffs] ಹೇರಿತು. ನಿಜ. ಆದರೆ ದೇಶದ ಬೃಹತ್ ಆರ್ಥಿಕತೆಗೆ ಹೋಲಿಸಿದರೆ ಅದು ತೀರಾ ಕಡಿಮೆ. ಇದರಿಂದಾಗಿ. ಟ್ರಂಪ್ ಅವರ ಸ್ವಯಂಕೃತ ಅಪರಾಧದಿಂದ ಸಂಭವಿಸಬಹುದಾಗಿದ್ದ ದೊಡ್ಡ ಆರ್ಥಿಕ ಕುಸಿತ [recession] ತಪ್ಪಿದೆ. ಇಂತಹ ಕೆಟ್ಟ ಸ್ಥಿತಿ ಬಾರದಂತೆ ತಡೆದಿದ್ದಕ್ಕಾಗಿ ಅವರ ತಂಡವನ್ನು ನಾವು ಅಭಿನಂದಿಸಲೇಬೇಕು.

ಆದರೆ ಈಗ ನಾವು, ಟ್ರಂಪ್ ಅವರಿಂದಾಗಿ ಅಪಾಯಗಳು ಹೆಚ್ಚಾಗುವ ಹಂತದಲ್ಲಿದ್ದೇವೆ. ಬಾಲ್ಯದಲ್ಲಿ ವಲಸೆ ಬಂದವರಿಗೆ ರಕ್ಷಣೆ ನೀಡುತ್ತಿದ್ದ [DACA] ಕಾರ್ಯಕ್ರಮವನ್ನು ಅವರು ಕಳೆದ ವರ್ಷ ರದ್ದುಗೊಳಿಸಿದ್ದಾರೆ. ಆ ಮೂಲಕ, ಬಾಲ್ಯದಲ್ಲಿ ಕಾನೂನುಬಾಹಿರವಾಗಿ ಅಮೆರಿಕಕ್ಕೆ ಬಂದಿದ್ದ ಸುಮಾರು 8 ಲಕ್ಷ ಯುವಕರ ಭವಿಷ್ಯವನ್ನು ಅಪಾಯಕ್ಕೆ ದೂಡಿದ್ದಾರೆ. ಈಗ ಅವರೆಲ್ಲಾ ದೇಶದಿಂದ ಹೊರದೂಡಲ್ಪಡಬಹುದು ಎಂಬ ಭೀತಿಯಲ್ಲಿದ್ದಾರೆ.

ಇವರೆಲ್ಲಾ ಅತ್ಯಂತ ಉತ್ಪಾದಕಾ ಜನ. ಅವೇರಿಕೆಯ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇವರನ್ನು ಹೊರಹಾಕುವ ಟ್ರಂಪ್ ಅವರ ಈ ನಿರ್ಧಾರವು ಕೇವಲ ಮಾನವೀಯ ನೆಲೆಯಲ್ಲಿ ಮಾತ್ರವಲ್ಲ, ಆರ್ಥಿಕವಾಗಿಯೂ ಭೀಕರ ಪರಿಣಾಮಗಳನ್ನು ಬೀರಬಹುದು. ಇದರ ಜೊತೆಗೆ ಟ್ರಂಪ್ ಮತ್ತು ಅವರ ಬೆಂಬಲಿಗರು ಕಾನೂನುಬದ್ದ ವಲಸೆಯನ್ನೂ ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಲು ಮುಂದಾಗಿದ್ದಾರೆ. ಇದು ಭವಿಷ್ಯದ ಅಮೆರಿಕದ ಮಧ್ಯಮ ಅವಧಿಯ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಆರ್ಥಿಕ ಪ್ರಗತಿ ಗಣನೀಯವಾಗಿ ಕಡಿಮೆಯಾಗಬಹುದು.

ಹಾಗೆಯೇ, [NAFTA] ಒಪ್ಪಂದವನ್ನು ರದ್ದುಗೊಳಿಸುವ ಬೆದರಿಕೆಯನ್ನು ಟ್ರಂಪ್ ಇನ್ನೂ ಕೈಬಿಟ್ಟಿಲ್ಲ. ಒಂದು ವೇಳೆ ಅವರು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೆ, ಅದು ಅಮೆರಿಕದ ಆರ್ಥಿಕತೆಗೆ ಖಂಡಿತಾ ಒಳ್ಳೆಯದಲ್ಲ. ವಿಪರ್ಯಾಸವೆಂದರೆ, ಇದರಿಂದ ಮೆಕ್ಸಿಕೋದ ಆರ್ಥಿಕತೆಗೂ ಭಾರಿ ಹಾನಿಯಾಗುತ್ತದೆ. ಅಲ್ಲಿಂದ ಅಮೆರಿಕಕ್ಕೆ ಅಕ್ರಮವಾಗಿ ಬರುವವರ ಸಂಖ್ಯೆ ಹೆಚ್ಚಾಗಬಹುದು. ಇಂತಹ ಯಾವುದೇ ತಡೆಗಳನ್ನು ಒಡ್ಡದಿದ್ದರೂ, ಲ್ಯಾಟಿನ್ ಅಮೆರಿಕದಿಂದ ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತಾ ಬರುತ್ತಿತ್ತು. ಜನಸಂಖ್ಯಾ ಬೆಳವಣಿಗೆಯ ಕ್ರಮವನ್ನು ಗಮನಿಸಿದರೆ ಇದು ತಿಳಿಯುತ್ತದೆ.

ಟ್ರಂಪ್ ಅವರಿಂದ ಎದುರಾಗಲಿರುವ ಅತಿ ದೊಡ್ಡ ಅಪಾಯವೆಂದರೆ ಅದು ಹಣಕಾಸು ವಲಯದ ನಿಯಮಗಳ ಸಡಿಲಿಕೆ. 2008ರ ಆರ್ಥಿಕ ಬಿಕ್ಕಟ್ಟಿನ ನಂತರ ಇಂತಹ ದೊಡ್ಡ ಅಪಾಯಗಳನ್ನು ತಡೆಯಲು ಕೆಲವು ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಈಗ ಟ್ರಂಪ್ ಸರ್ಕಾರ ಮತ್ತು ಕಾಂಗ್ರೆಸ್ ಆ ನಿಯಮಗಳನ್ನೇ ರದ್ದುಗೊಳಿಸಲು ಪ್ರಯತ್ನಿಸುತ್ತಿವೆ.

ಆರ್ಥಿಕತೆಯನ್ನು ತರಾತುರಿಯಲ್ಲಿ ಬೆಳೆಸಲು ಮಾಡುವ ಇಂತಹ ಪ್ರಯತ್ನಗಳ ಪರಿಣಾಮ ಸಾಮಾನ್ಯವಾಗಿ ಕೆಟ್ಟದಾಗಿರುತ್ತವೆ. ಈ ಹಿಂದೆ ಜಾರ್ಜ್ ಡಬ್ಲೂ ಬುಷ್ ಅವರ ಸರ್ಕಾರವೂ ಇದನ್ನೇ ಮಾಡಿತ್ತು. ಅದರ ಫಲವಾಗಿ ದೇಶವು ದೊಡ್ಡ ಆರ್ಥಿಕ ಕುಸಿತವನ್ನು [Great Recession] ಎದುರಿಸಬೇಕಾಯಿತು.

Copyright: Project Syndicate, 2026. www.project-syndicate.org

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website | + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...

16ನೇ ಹಣಕಾಸು ಆಯೋಗ -ನ್ಯೂನತೆಗಳು ಮತ್ತು ಆತಂಕಗಳು

ಹಿಂದಿನ ಆಯೋಗಗಳಿಗೆ ಹೋಲಿಸಿದರೆ 16ನೇ ಹಣಕಾಸು ಆಯೋಗಕ್ಕೆ ಹೆಚ್ಚಿನ ಸ್ವಾತಂತ್ರವಿತ್ತು. ಅದಕ್ಕೆ...