ಬೆಂಗಳೂರು ಬಂದ್ | ರ‍್ಯಾಪಿಡೋ ಬೈಕ್ ಚಾಲಕರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರತಿಭಟನಾನಿರತರು

Date:

ಸೆ.11 ರಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ನಗರದ ನಾಲ್ಕು ಭಾಗಗಳಲ್ಲಿಯೂ ಪ್ರತಿಭಟನೆ ನಡೆಸುತ್ತಿವೆ. ಎಲ್ಲೆಡೆ ಖಾಸಗಿ ವಾಹನಗಳ ಸಂಚಾರ ಬಂದ ಆಗಿದೆ. ಈ ವೇಳೆ, ರಸ್ತೆಗಿಳಿಯುವ ಆಟೋ, ಟ್ಯಾಕ್ಸಿ ಚಾಲಕರ ಮೇಲೆ ಪ್ರತಿಭಟನಾನಿರತರು ಹಲ್ಲೆ ನಡೆಸುತ್ತಿದ್ದಾರೆ. ಇದರ ಜತೆಗೆ ರ‍್ಯಾಪಿಡೋ ಬೈಕ್ ಚಾಲಕರ ಮೇಲೆ ಹಲ್ಲೆ ಮಾಡುತ್ತಿರುವ ಘಟನೆ ನಡೆಯುತ್ತಿದೆ.

ಬೊಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾನಿರತರು ರ‍್ಯಾಪಿಡೋ ಬೈಕ್ ಬುಕ್ ಮಾಡಿ, ರ‍್ಯಾಪಿಡೋ ಬೈಕ್ ಚಾಲಕರನ್ನು ಸ್ಥಳಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ. ಅವರು ಸ್ಥಳಕ್ಕೆ ಬಂದ ಬಳಿಕ ಹೆಲ್ಮೆಟ್‌ ತೆಗೆದು ಹಲ್ಲೆ ಮಾಡುತ್ತಿದ್ದಾರೆ.

ಕಾರು ಚಾಲಕನ ಮೇಲೆ ಹಲ್ಲೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಾಡಿಗೆ ಹೋಗುತ್ತಿದ್ದ ಕಾರು ಚಾಲಕನನ್ನು ಹಿಡಿದು ತಡೆಯಲಾಗಿದೆ. ಬಳಿಕ ಕಾರ್ ಕೀ ಕಿತ್ತುಕೊಂಡು ಆತನ ಮೇಲೆ ಪ್ರತಿಭಟನಾನಿರತರು ಹಲ್ಲೆ ಮಾಡಿ ಥಳಿಸಿದ ಘಟನೆ ಗಾಂಧಿ ನಗರದ ಮೌರ್ಯ ಸರ್ಕಲ್ ಬಳಿ ನಡೆದಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಬಂದ್ | ರಸ್ತೆಗಿಳಿದ ವಾಹನದ ಮೇಲೆ ಕಲ್ಲು ತೂರಾಟ, ಚಾಲಕರಿಗೆ ಸನ್ಮಾನ

ಸ್ಥಳಕ್ಕೆ ಬಂದ ಪೊಲೀಸರಿಂದ ಕಾರು ಚಾಲಕನ ರಕ್ಷಣೆ ಮಾಡಲಾಗಿದೆ.

ಸಂಗೊಳ್ಳಿ ರಾಯಣ್ಣ ಫ್ಲೈಓವರ್ ಮೇಲೆ ಮತ್ತೋರ್ವ ರ‍್ಯಾಪಿಡೋ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಸಿಕ್ಕ ಸಿಕ್ಕಲ್ಲಿ ರ‍್ಯಾಪಿಡೋ ಚಾಲಕರ ಮೇಲೆ ಪ್ರತಿಭಟನಾನಿರತರು ಹಲ್ಲೆ ಮಾಡುತ್ತಿದ್ದಾರೆ.

ಖಾಸಗಿ ಚಾಲಕರು ತಮ್ಮ ಬೇಡಿಕೆಗಳಿಗ ಈಡೇರಿಕೆಗೆ ಮಾಡುತ್ತಿರುವ ಈ ಪ್ರತಿಭಟನೆ ಹಲ್ಲೆ ಮತ್ತು ಹಿಂಸಾಚಾರಕ್ಕೆ ತಿರುಗುತ್ತಿದೆ. ರ‍್ಯಾಪಿಡೋ ಚಾಲಕರನ್ನು ತಾವೇ ಬುಕ್ ಮಾಡಿ ಕರೆಸಿ ಥಳಿಸುವಂತಹ ಘಟನೆಗಳು ನಗರದಲ್ಲಿ ವರದಿಯಾಗುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರಿನ ಜನರಿಗೆ ಕುಡಿಯುವ ನೀರಿನಿಂದ ಆರೋಗ್ಯ ಸಮಸ್ಯೆ ಉಂಟಾದರೆ ಶಿಸ್ತು ಕ್ರಮ: ಡಿ ಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರಿನ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಒಂದು...

ಸೌಂದರ್ಯ ಜಗದೀಶ್ ಆತ್ಮಹತ್ಯೆ | ಬಿಸಿನೆಸ್ ಪಾಲುದಾರರ ವಿರುದ್ಧ ಎಫ್‌ಐಆರ್‌ ದಾಖಲು

ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಬೆಂಗಳೂರು ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆ ಮಾಡದ ಸರ್ಕಾರ: ಆರ್.ಅಶೋಕ್

ಬೆಂಗಳೂರು ನಗರದ ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಒಂದು ನಯಾಪೈಸೆಯನ್ನೂ ಬಿಡುಗಡೆ...

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭ: ಸಚಿವ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ನಾವು...