ಬೆಂಗಳೂರು | ಲೆಕ್ಕಕ್ಕಾಗಿ ಮರಗಳ ಸುತ್ತ ಬೈಂಡಿಂಗ್ ವೈರ್‌ ಬಿಗಿದ ಬಿಎಂಆರ್‌ಸಿಎಲ್

Date:

  • ಎರಡು ವರ್ಷಗಳ ಹಿಂದೆ ಮೆಟ್ರೋ ಮಾರ್ಗಕ್ಕಾಗಿ ಮರಗಳನ್ನು ಕತ್ತರಿಸಿದ ಬಿಎಂಆರ್‌ಸಿಎಲ್‌
  • ಆಕ್ಷನ್ ಏಡ್ ಸಂಸ್ಥೆಯಿಂದ ಮರಗಳ ಸಮೀಕ್ಷೆ; ಅಧ್ಯಯನಕ್ಕಾಗಿ ಮೂರು ಕೆರೆಗಳ ಆಯ್ಕೆ

ಮೆಟ್ರೋಗಾಗಿ ಮರಗಳನ್ನು ಕತ್ತರಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಮರಗಳ ನಾಶಕ್ಕೆ ಪರಿಹಾರವಾಗಿ ಬೇರೆಡೆ ಮರ, ಗಿಡ ಹಾಗೂ ಸಸಿಗಳನ್ನು ಪೋಷಿಸುತ್ತಿರುವ ಬಗ್ಗೆ ‘ಆಕ್ಷನ್ ಏಡ್ ಸಂಸ್ಥೆ’ ಸಮೀಕ್ಷೆ ನಡೆಸಿದೆ. ಮರದ ಸಂಖ್ಯೆಗಳ ಲೆಕ್ಕಕ್ಕಾಗಿ ನಿಗಮವು ಮರಗಳ ಸುತ್ತ ಬೈಂಡಿಂಗ್ ವೈರ್ ಮೂಲಕ ಬಿಗಿದು ಬೋರ್ಡ್ ಹಾಕಿದೆ. ಇದು ಒಳ್ಳೆಯ ಕ್ರಮವಲ್ಲ ಎಂದು ಕೆರೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಮೆಟ್ರೋ ಮಾರ್ಗಗಳಿಗಾಗಿ ಬಿಎಂಆರ್‌ಸಿಎಲ್‌ನಿಂದ ಹಲವಾರು ಮರಗಳನ್ನು ಕತ್ತರಿಸಲಾಗಿತ್ತು ಹಾಗೂ ಸ್ಥಳಾಂತರಿಸಲಾಗಿತ್ತು. ಅವುಗಳಿಗೆ ಬದಲಿಯಾಗಿ, ನಿಗಮವು ನೆಟ್ಟ ಸಸಿಗಳ ಮೇಲೆ ಆಕ್ಷನ್ ಏಡ್ ಸಂಸ್ಥೆಯೂ ಅಧ್ಯಯನ ನಡೆಸಿದೆ. ವೀರಸಾಗರ ಕೆರೆಯಲ್ಲಿ 120 ಸಸಿಗಳು, ಸಾರಕ್ಕಿ ಕೆರೆಯಲ್ಲಿ 621 ಸಸಿಗಳು, ಗೊಟ್ಟಿಗೆರೆ ಕೆರೆಯಲ್ಲಿ 160 ಸಸಿಗಳನ್ನು ನೆಡಲಾಗಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಅಧ್ಯಯನಕ್ಕಾಗಿ ಮೂರು ಕೆರೆಗಳನ್ನು ಅನುಕೂಲತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಏಡ್ ಸಂಸ್ಥೆ ಹೇಳಿದೆ.

ಅರಣ್ಯೀಕರಣದ ಅಡಿಯಲ್ಲಿ ನಿಗಮವು ನಗರದ ಮೂರು ಕೆರೆಗಳ ಬಳಿ ಮರಗಳನ್ನು ಪೊಷಿಸುವ ಹೊಣೆ ಹೊತ್ತಿದೆ. ಆದರೆ, ಈಗಾಗಲೇ ನೆಟ್ಟಿರುವ ಮರ ಹಾಗೂ ಗಿಡಗಳ ಪೈಕಿ ಸುಮಾರು 25% ಸಸಿಗಳು ಸತ್ತಿವೆ. ಇನ್ನು ಕೆಲವು ಸಾಯುವ ಅಂಚಿನಲ್ಲಿವೆ ಎಂದು ಆಕ್ಷನ್ ಏಡ್ ಸಂಸ್ಥೆ ಹೇಳಿದೆ.

ಮೂರು ಕೆರೆಗಳ ಬಳಿ ನೆಡಲಾಗಿದ್ದ ಒಟ್ಟು 901 ಗಿಡಗಳ ಪೈಕಿ, 211 ಸಸಿಗಳು ಕಂದು ಬಣ್ಣಕ್ಕೆ ತಿರುಗಿವೆ. ಕೆಲವು ಗಿಡಗಳು ಎಲೆಗಳಿಲ್ಲದೆ ಬೋಳು ಬೋಳಾಗಿವೆ. ಇನ್ನು ಕೆಲವು ಗಿಡಗಳು ಸತ್ತಿವೆ ಎಂದು ತಿಳಿಸಿದೆ.

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಆಕ್ಷನ್ ಏಡ್ ಅಸೋಸಿಯೇಷನ್‌ನ ರಾಘವೇಂದ್ರ ಬಿ ಪಚ್ಚಾಪುರ, “ನಿಗಮದಿಂದ ನೆಡಲಾದ ಸಸಿಗಳ ಆರೋಗ್ಯದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಧ್ಯಯನವನ್ನು ನಡೆಸಿದ್ದೇವೆ. ಅಧ್ಯಯನ ಮಾಡಿದ ಒಟ್ಟು ಸಸಿಗಳಲ್ಲಿ 16.5% ನೀರಿನ ಒತ್ತಡದಿಂದ ಕೂಡಿದೆ. ಸುಮಾರು 4% ಮರಗಳು ಸತ್ತಂತೆ ತೋರುತ್ತಿವೆ. ಈ ಸಮೀಕ್ಷೆಯೂ ಸಸಿಗಳಿಗೆ ಮಾರಕವಾಗಬಹುದಾದ ಸಮಸ್ಯೆಯನ್ನು ತೋರಿಸಿದೆ” ಎಂದು ಹೇಳಿದರು.

“ತಜ್ಞರು ಮತ್ತು ಕಾಲೇಜು ವಿದ್ಯಾರ್ಥಿಗಳು ಜಂಟಿಯಾಗಿ ಸಮೀಕ್ಷೆಯನ್ನು ನಡೆಸಲಾಗಿದೆ. ಬಹುತೇಕ ಸಸಿಗಳಿಗೆ ಯಾವುದೇ ರಕ್ಷಣೆಯನ್ನೂ ನೀಡಿಲ್ಲ. ಇದರಿಂದ ಅವು ದುರ್ಬಲವಾಗಿವೆ. ವೀರಸಾಗರ, ಸಾರಕ್ಕಿ ಮತ್ತು ಗೊಟ್ಟಿಗೆರೆ ಕೆರೆಗಳಲ್ಲಿ ಮರಗಳಿಗೆ ಯಾವುದೇ ರಕ್ಷಣೆ ನೀಡಿಲ್ಲ” ಎಂದರು.

“ವೀರಸಂದ್ರ ಕೆರೆಯಲ್ಲಿ 113 ಸಸಿಗಳಿಗೆ ಮರದ ಸಂಖ್ಯೆಗಳ ಫಲಕವನ್ನು ಕಂಡುಹಿಡಿಯಲು ಬೈಂಡಿಂಗ್ ತಂತಿಯಿಂದ ಬೋರ್ಡ್‌ಗಳನ್ನು ಕಟ್ಟಿದ್ದಾರೆ. ಬೋರ್ಡ್‌ಗಳನ್ನು ಕಟ್ಟಲು ಬೈಂಡಿಂಗ್ ವೈರ್ ಬಳಸುವುದು ಅಪಾಯಕಾರಿ. ಮರಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 80 ವರ್ಷ ಮೇಲ್ಪಟ್ಟವರಿಗಾಗಿ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ : ತುಷಾರ್ ಗಿರಿನಾಥ್

“ಕೆರೆಗಳಿಗೆ ಸೂಕ್ತವಾಗಿ ಬೇಲಿ ಹಾಕಲಾಗಿದೆಯೇ? ಎಲ್ಲ ಸಸಿಗಳಿಗೆ ಟ್ರೀ ಗಾರ್ಡ್‌ಗಳನ್ನು ಅಳವಡಿಸಲಾಗಿದೆಯೇ? ಸಸಿಗಳನ್ನು ಕಟ್ಟುವ ತಂತಿಯಿಂದ ಮುಕ್ತಗೊಳಿಸಲಾಗಿದೆ ಎಂಬ ಬಗ್ಗೆ ನಿಗಮ ಖಚಿತಪಡಿಸಿಕೊಳ್ಳಬೇಕು. ಎಲ್ಲ ಗುತ್ತಿಗೆದಾರರಿಗೆ ಆರೋಗ್ಯಕರ ರೀತಿಯಲ್ಲಿ ಮರಗಳಿಗೆ ನೇತಾಡುವ ಬೋರ್ಡ್‌ಗಳನ್ನು ಬಳಸಲು ನಿಗಮವು ಮಾರ್ಗಸೂಚಿಯನ್ನು ನೀಡಬೇಕು” ಎಂದು ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಶಾಲೆಗಳ ಸಮೀಪ ತಂಬಾಕು ಮಾರಾಟ ಮಾಡುತ್ತಿದ್ದ 186 ಅಂಗಡಿಗಳ ಮೇಲೆ ದಾಳಿ

ಪೊಲೀಸರಿಂದ ಶುಕ್ರವಾರ 81 ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ ಅಂಗಡಿ ಮಾಲೀಕರಿಂದ...

ಕುಸ್ತಿಪಟುಗಳ ಪ್ರತಿಭಟನೆ | ಸರ್ಕಾರದ ನಡೆ ಖಂಡನೀಯ: ರಾಮಚಂದ್ರ ಗುಹಾ

ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಸಮಾನ ಮನಸ್ಕರು ಹಮ್ಮಿಕೊಂಡಿದ್ದ...

ಬೆಂಗಳೂರು | ತಿಂಗಳೊಳಗೆ ಉಳಿದ 19 ‘ನಮ್ಮ ಕ್ಲಿನಿಕ್’ ಆರಂಭ

ಬೆಂಗಳೂರಿನಲ್ಲಿ ವಾರ್ಡ್‌ಗೊಂದರಂತೆ 243 'ನಮ್ಮ ಕ್ಲಿನಿಕ್' ಕೆಲವೊಂದು ಕ್ಲಿನಿಕ್‌ಗಳಲ್ಲಿ ಶುಶ್ರೂಷಕರಿಂದ ರೋಗಿಗಳ ಆರೈಕೆ...

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

ಬೀದರ್‌ ಮೂಲಕ ಅಭಿಷೇಕ್ (19) ಮೃತ ದುರ್ದೈವಿ ಎರಡು ದಿನಗಳಿಂದ ಅಭಿಷೇಕ್ ಮೊಬೈಲ್...