ಬೆಂಗಳೂರು | ರಾಜಕಾಲುವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ

Date:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಬೃಹತ್ ನೀರುಗಾಲುವೆಗಳ ಬಳಿ ಅಗತ್ಯ ಕಾಮಗಾರಿ ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ವಲಯ ಆಯುಕ್ತ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಬೃಹತ್ ನೀರುಗಾಲುವೆ ಪರಿಶೀಲಿಸಿ ಬಳಿಕ ಮಾತನಾಡಿದ ಅವರು, “ನಾಗರಿಕರಿಗೆ ಮಳೆಗಾಲದ ವೇಳೆ ರಾಜಕಾಲುವೆಗಳಿಂದ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಂಡು ರಾಜಕಾಲುವೆಗಳಲ್ಲಿ ಸಂಗ್ರಹವಾಗುವ ಹೂಳನ್ನು ಕಾಲಕಾಲಕ್ಕೆ ತೆರವುಗೊಳಿಸುತ್ತಿರಬೇಕು” ಎಂದರು.

“ಸಾರ್ವಜನಿಕರ ಹಿತದೃಷ್ಠಿಯಿಂದ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಕಛೇರಿ ಹತ್ತಿರ ಹರಿಯುತ್ತಿರುವ ಬೃಹತ್ ಮಳೆ ನೀರುಗಾಲುವೆಯ ನಿರ್ವಹಣೆಗೆ ತೊಂದರೆಯಾಗದಂತೆ ಒಟ್ಟು ಮೂರು ಕಡೆ ರ‍್ಯಾಂಪ್ ನಿರ್ಮಿಸಿ, ಹೂಳನ್ನು ತೆಗೆಯಲು ಅನುಕೂಲವಾಗುವಂತೆ ಮಳೆ ನೀರುಗಾಲುವೆಯನ್ನು ಎತ್ತರಿಸಿ ಚಿಕ್ಕದಾದ ಹೈಡ್ರಾಲಿಕ್ ಎಸ್ಕವೇಟರ್ ಹೋಗುವಂತೆ ಆರ್.ಸಿ.ಸಿ ಛಾವಣಿಯಿಂದ ಬೃಹತ್ ಮಳೆ ನೀರುಗಾಲುವೆಯನ್ನು ಮುಚ್ಚಬೇಕು” ಎಂದು ಅಧಿಕಾರಿಗೆ ಸೂಚನೆ ನೀಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಕುಡಿಯುವ ನೀರಿನ ಬೆಲೆ ದುಪ್ಪಟ್ಟು; ಕಂಗಾಲಾದ ನಗರದ ನಾಗರಿಕರು

ಸಮೃದ್ಧಿ ಬಡಾವಣೆಯಲ್ಲಿ ನಿರ್ಮಿಸಿರುವ ಲೀಡ್ ಆಫ್ ಡ್ರೈನ್ ಪರಿಶೀಲನೆ

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಸಮೃದ್ದಿ ಬಡಾವಣೆಯಲ್ಲಿ ಈಗಾಗಲೇ ನಿರ್ಮಿಸಿರುವ ಲೀಡ್ ಆಫ್ ಡ್ರೈನ್‌ ಅನ್ನು ಪರಿಶೀಲಿಸಿ, ಹಳೆಯ ರಸ್ತೆ ಬದಿ ಚರಂಡಿಗೆ ಒಂದು ಮೀಟರ್‌ನಷ್ಟು ತಡೆಗೋಡೆ ನಿರ್ಮಿಸಿ ಕೆರೆ ತುಂಬಿ ಬರುವ ನೀರು ಹಾಗೂ ಡೈವರ್ಷನ್ ಚರಂಡಿಯ ನೀರನ್ನು ಹೊಸದಾಗಿ ನಿರ್ಮಿಸಿರುವ ಲೀಡ್ ಆಫ್ ಡ್ರೈನ್‌ಗೆ ಡೈವರ್ಷನ್ ಮಾಡಲು ಸೂಚಿಸಿದರು.

ನಾಯಂಡಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆ ಪರಿಶೀಲನೆ

ವಿಜಯನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಹರಿಯುತ್ತಿರುವ ವೃಷಭಾವತಿ ಮಳೆ ನೀರುಗಾಲುವೆ ಪರಿಶೀಲಿಸಿ, ಹೊರವರ್ತುಲ ರಸ್ತೆಯ ಸೇತುವೆಯ ಕೆಳಭಾಗದ ವೆಂಟ್ ಚಿಕ್ಕದಾಗಿರುವ ಕಾರಣ ಹೆಚ್ಚು ಮಳೆ ಬಿದ್ದ ಸಂದರ್ಭದಲ್ಲಿ ಪ್ರವಾಹ ಆಗುವುದನ್ನು ತಡೆಯಲು ಆಗಾಗ ಹೂಳನ್ನು ತೆಗೆಯಬೇಕು. ಜತೆಗೆ ನಾಯಂಡಹಳ್ಳಿ ಜಂಕ್ಷನ್ ವೃತ್ತದಲ್ಲಿ ಎಂ.ಆರ್.ಕನ್ವೇನ್‌ಷನ್ ಹಾಲ್ ಮುಂಭಾಗ ಲಭ್ಯವಿರುವ ಸುಮಾರು ಅರ್ಧ ಎಕರೆ ಖಾಲಿ ಜಾಗವನ್ನು ಘನ ತ್ಯಾಜ್ಯ ನಿರ್ವಹಣೆ ಉದ್ದೇಶಗಳಿಗೆ ಅಥವಾ ಬೃಹತ್ ನೀರುಗಾಲುವೆ ಉದ್ದೇಶಕ್ಕಾಗಿ ಮಾತ್ರ ಮೀಸಲಿಡಬೇಕು ಎಂದು ಹೇಳಿದರು.

ಗಾಳಿ ಆಂಜನೇಯ ದೇವಸ್ಥಾನದ ಹಿಂಭಾಗದ ವೃಷಭಾವತಿ ಮಳೆ ನೀರುಗಾಲುವೆ ಪರಿಶೀಲನೆ

ವಿಜಯನಗರ ವಿಧಾನಸಭಾ ಕ್ಷೇತ್ರದ ಗಾಳಿ ಆಂಜನೇಯ ದೇವಸ್ಥಾನದ ಹಿಂಭಾಗದ ವೃಷಭಾವತಿ ಮಳೆ ನೀರುಗಾಲುವೆಯನ್ನು ಪರಿಶೀಲಿಸಿ ಕವಿಕಾ ಕಾರ್ಖಾನೆ ಹಿಂಭಾಗ ಮಳೆನೀರುಗಾಲುವೆಯಲ್ಲಿನ ಹೂಳನ್ನು ಹೊರತೆಗೆಯಲು ಅನುಕೂಲವಾಗುವಂತೆ ಈಗಾಗಲೇ ನಿರ್ಮಿಸಿರುವ ತಾತ್ಕಾಲಿಕ ರ‍್ಯಾಂಪ್‌ಗೆ ಬದಲಾಗಿ ಶಾಶ್ವತವಾಗಿ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ನಿರ್ಮಿಸಿರುವಂತೆ ರ‍್ಯಾಂಪ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಈ ವೇಳೆ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರಾದ ಚೇತನ್, ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಬೆಂಕಿ ಅವಘಡ: ಸುಟ್ಟು ಕರಕಲಾದ 40ಕ್ಕೂ ಹೆಚ್ಚು ವಾಹನಗಳು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ನಗರದ ನಾಯಂಡಹಳ್ಳಿ...

ಬೆಂಗಳೂರು | ಸಿಎಂ ಮನೆ‌ ಕೂಗಳತೆ ದೂರದಲ್ಲಿ ಕೆಜಿಗಟ್ಟಲೇ ಚಿನ್ನ ಕದ್ದ ಆರೋಪಿ ಬಂಧನ

ಮುಖ್ಯಮಂತ್ರಿ ಮನೆ‌ ಕೂಗಳತೆ ದೂರದಲ್ಲಿ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳನೊಬ್ಬನನ್ನು...

ಬೆಂಗಳೂರು | ಬಾಲಕನನ್ನು ಕಂಬಕ್ಕೆ ಕಟ್ಟಿ ಹಲ್ಲೆ; ಬಾಲಕನ ವಿರುದ್ಧವೂ ಪ್ರಕರಣ ದಾಖಲು

17 ವರ್ಷದ ಬಾಲಕನನ್ನು ಎಂಟು ಮಂದಿ ಕೂಲಿ ಕಾರ್ಮಿಕರು ಕಂಬಕ್ಕೆ ಕಟ್ಟಿ...

ಕನ್ನಡಿಗರಿಗೆ ನೀಡಿದ ಉದ್ಯೋಗದ ಮಾಹಿತಿ ನೋಟೀಸ್ ಬೋರ್ಡ್‌ನಲ್ಲಿ ಪ್ರದರ್ಶಿಸುವುದು ಕಡ್ಡಾಯ: ಶಿವರಾಜ್ ತಂಗಡಗಿ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ಎಮ್‌ಎನ್‌ಸಿ (ಬಹುರಾಷ್ಟ್ರೀಯ)...