ನೈರುತ್ಯ ಮಾರುತಗಳು ತಡವಾಗಿ ರಾಜ್ಯ ಪ್ರವೇಶಿಸಿದ್ದು, ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿತ್ತು. ಆ ತಿಂಗಳಿನಲ್ಲಿ ಶೇ.56ರಷ್ಟು ಮಳೆ ಕೊರತೆ ಉಂಟಾಗಿತ್ತು. ಜುಲೈ ತಿಂಗಳಿನಲ್ಲಿ ಮುಂಗಾರು ಚುರುಕುಗೊಂಡಿದ್ದರಿಂದ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.3ರಷ್ಟು ಹೆಚ್ಚು ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಅಂಕಿಅಂಶಗಳ ಪ್ರಕಾರ, ಜೂನ್ 1 ರಿಂದ ಜುಲೈ 31 ರವರೆಗಿನ ಕರ್ನಾಟಕದಲ್ಲಿ ಸರಾಸರಿ ಮಳೆ 453 ಮಿ.ಮೀ. ಮಳೆಯಾಗಿದೆ. ಈ ವರ್ಷದಲ್ಲಿ ಜುಲೈ 31ರ ವೇಳೆಗೆ ರಾಜ್ಯದಲ್ಲಿ 468.7ಮಿ.ಮೀ ಮಳೆ ಸುರಿದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ವರದಿ ಪ್ರಕಾರ, ರಾಜ್ಯದಲ್ಲಿ 7% ಮಳೆ ಕೊರತೆ ಉಂಟಾಗಿದೆ. ಸರಾಸರಿ 19% ವರೆಗಿನ ಕೊರತೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಮಲೆನಾಡು ಮಾತ್ರ ದೊಡ್ಡ ಪ್ರಮಾಣದ ಮಳೆಯ ಕೊರತೆಯನ್ನು ಎದುರಿಸುತ್ತಿದೆ. ಆ ಪ್ರದೇಶದಲ್ಲಿ ಸರಾಸರಿ 24% ಮಳೆ ಕೊರತೆ ಉಂಟಾಗಿದೆ.
“ಈಶಾನ್ಯ ಮಾನ್ಸೂನಿಂದ ಅಕ್ಟೋಬರ್-ನವೆಂಬರ್‌ನಲ್ಲಿ ರಾಜ್ಯದಲ್ಲಿ ಸುಮಾರು 200 ಮಿ.ಮೀ ಮಳೆಯಾಗಬಹುದು. ಆಗಸ್ಟ್‌ನ ಮಳೆಯಲ್ಲಿ ಸ್ವಲ್ಪ ಇಳಿಕೆಯಾಗಲಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶೇ. 140 ಹೆಚ್ಚಳ
ಎಲ್ಲ ಜಲಾಶಯಗಳಲ್ಲೂ ನೀರಿನ ಮಟ್ಟ ಸಹಜ ಸ್ಥಿತಿಗೆ ತಲುಪಿದ್ದು, ಸರಾಸರಿ ಶೇ.65ರಷ್ಟು ಭರ್ತಿಯಾಗಿವೆ. ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಶೇ.80ರಷ್ಟು ಅಣೆಕಟ್ಟುಗಳು ಭರ್ತಿಯಾಗಿದ್ದರೆ, ಕೃಷ್ಣಾ ಜಲಾನಯನದಲ್ಲಿ ಶೇ.73ರಷ್ಟು ತುಂಬಿವೆ.
2022ರಲ್ಲಿ ಇದೇ ಅವಧಿಯಲ್ಲಿ ಕೆಆರ್‌ಎಸ್ ಜಲಾಶಯದಲ್ಲಿ 49.4 ಟಿಎಂಸಿ ನೀರು ಇತ್ತು. ಈ ವರ್ಷ, ಕೇವಲ 34.9 ಟಿಎಂಸಿ ನೀರು ಸಂಗ್ರವಾಗಿದೆ.