ಬೆಂಗಳೂರು | ಕುಡಿತ ಮತ್ತಿನಲ್ಲಿ ಸ್ನೇಹಿತನ ಹತ್ಯೆ; ಆರೋಪಿ ಬಂಧನ

Date:

  • ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ ಮೇಲೆ ಹಲ್ಲೆ
  • ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ ನರೇಶ

ಕ್ಷುಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶುಕ್ರವಾರ ಆರೋಪಿ ಮಾರಿಮುತ್ತು ಮತ್ತು ನರೇಶ ಎಂಬ ಸ್ನೇಹಿತರು ಮದ್ಯ ಸೇವಿಸಲು ಬಾರ್‌ಗೆ ಹೋಗಿದ್ದರು. ಇಬ್ಬರು ಕುಡಿದ ಮತ್ತಿನಲ್ಲಿದ್ದರು.

ಈ ವೇಳೆ, ನರೇಶ್ ನಿನ್ನ ಭವಿಷ್ಯ ಹೇಳುತ್ತೀನಿ ಎಂದು ‘ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ’ ಎಂದು ಆರೋಪಿಯನ್ನು ರೇಗಿಸಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಮಾರಿಮುತ್ತು ಆತನೊಂದಿಗೆ ಜಗಳ ಮಾಡಿದ್ದಾನೆ. ಇಬ್ಬರೂ ಜಗಳವಾಡುತ್ತಲೇ ಬಾರ್‌ನಿಂದ ಹೊರಬಂದಿದ್ದಾರೆ. ಇಬ್ಬರ ನಡುವೆ ಹೊಡೆದಾಟವಾಗಿದೆ.

ಈ ಸಮಯದಲ್ಲಿ ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ಆರೋಪಿ ಮಾರಿಮುತ್ತು ಬಲವಾಗಿ ನರೇಶ್ ತಲೆಗೆ ಹೊಡೆದಿದ್ದಾನೆ. ರಕ್ತಸ್ರಾವವಾಗಿ ನರೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.‌

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಕುಸಿದು ಬಿದ್ದ ಶಾಲಾ ಕಟ್ಟಡ; ಸಮಗ್ರ ತನಿಖೆ ನಡೆಯಲಿ ಎಂದ ಎಸ್‌ಐಒ

ಕಳೆದ ಎರಡು ದಿನಗಳ ಹಿಂದೆ ಶಿವಾಜಿನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ...

ಬೆಂಗಳೂರು | ನ್ಯಾಯಾಂಗ ಬಡಾವಣೆಯಲ್ಲಿ ಬೀದಿ ಬದಿ ವ್ಯಾಪಾರಿಯ ಎಳನೀರು ಕಳ್ಳತನ

ಬಡ ವ್ಯಾಪಾರಿಯೊಬ್ಬರು ಮಾರಾಟ ಮಾಡಲು ತಂದಿರಿಸಿದ್ದ ಸುಮಾರು 800 ಎಳನೀರು ರಾತ್ರೋರಾತ್ರಿ...

ಬಿಬಿಎಂಪಿ | ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸ್ಥಳಗಳ ಪಟ್ಟಿ ಸಿದ್ಧಪಡಿಸಿ: ತುಷಾರ್ ಗಿರಿನಾಥ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು....

ಬೆಂಗಳೂರು | ಯುವತಿ ಮೇಲೆ ಅತ್ಯಾಚಾರ – ಜಾತಿ ನಿಂದನೆ; ಆರೋಪಿ ಬಂಧನ

ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಮುದುವೆಯಾಗುವುದಾಗಿ ನಂಬಿಸಿ 7 ತಿಂಗಳ ಗರ್ಭಿಣಿಯಾದ...