ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ

Date:

“ನಮ್ಮದು ವೈವಿಧ್ಯತೆಯ ದೇಶ. ಆದರೆ ಈಗ ಒಂದು ದೇಶ, ಒಂದು ಭಾಷೆ, ಒಂದು ಚುನಾವಣೆ ಎಂದು ಹೇಳಲಾಗುತ್ತಿದೆ. ಸಂಸ್ಕೃತ ಭಾಷೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಉಳಿದ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಕೋಟ್ಯಂತರ ಜನರು ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ ಎಂದು ಸಾಹಿತಿ ಹಂ.ಪ.ನಾಗರಾಜಯ್ಯನವರು(ಹಂಪನಾ) ಆರೋಪಿಸಿದರು.

- Advertisement -

ಶನಿವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ʼಸಮಾಜಮುಖಿ ಸಾಹಿತ್ಯ ಸಮ್ಮೇಳನʼವನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮದು ಬಹುಭಾಷೆಗಳ ದೇಶ. ಆದರೆ ಕೇಂದ್ರಕ್ಕೆ ದಕ್ಷಿಣ ರಾಜ್ಯಗಳ ಭಾಷೆಗಳ ಮೇಲೆ ಕೆಂಗಣ್ಣು. ನೆಲದ ಭಾಷೆಗಳನ್ನು ಬಿಟ್ಟು ಸಂಸ್ಕೃತವನ್ನು ಮೇಲೆತ್ತುವ ಕೆಲಸವನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ. ಹಳೆಗನ್ನಡಗಳನ್ನು ಸಂಸ್ಕೃತಕ್ಕೆ ಬದಲಾಯಿಸಿಕೊಂಡು ಕಾಳಿದಾಸ, ವ್ಯಾಸರಿಗೆ ಅಪಚಾರ ಮಾಡಲಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಇದನ್ನು ಓದಿದ್ದೀರಾ? EXCLUSIVE | ವಿ.ಸೋಮಣ್ಣಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ? ಪ್ರಭಾವಿ ಮಠಾಧೀಶರೊಂದಿಗೆ ಪ್ರಸ್ತಾಪ

“ಈಗಾಗಲೇ ಲಿಪಿ ಇಲ್ಲದ 22 ದ್ರಾವಿಡ ಭಾಷೆಗಳನ್ನು ನೆಲ ಕಚ್ಚಿಸಲಾಗಿದೆ. ಕೇಂದ್ರ ಸರ್ಕಾರವು ಸಂಸ್ಕೃತ, ಹಿಂದಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತಿದೆ. ನೆಲದ ಭಾಷೆಯನ್ನು ಬಿಟ್ಟು ಸಂಸ್ಕೃತವನ್ನು ಮೇಲೆತ್ತುವ ಕೆಲಸ ವ್ಯಾಪಕವಾಗಿ ನಡೆದಿದೆ. ನಾವು ಸಂಸ್ಕೃತದ ಶತ್ರುಗಳಲ್ಲ, ಆದರೆ ಅದಕ್ಕೂ ಪ್ರಾಚೀನವಾದ ಪ್ರಾಕೃತ ಮತ್ತು ಪಾಲಿ ಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸಂಸ್ಕತಕ್ಕೆ 30 ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಆದರೆ ಉಳಿದ ಭಾಷೆಗಳಿಗೆ ಒಂದೆರಡು ಪ್ರಶಸ್ತಿಗಳಿವೆ. ದೇಶದ ಬೊಕ್ಕಸದ ಒಂದು ಭಾಗವನ್ನು ಸಂಸ್ಕೃತ ಭಾಷೆಗಾಗಿ ಖರ್ಚು ಮಾಡಲಾಗುತ್ತಿದೆ. ಕಳೆದ 11 ವರ್ಷದಲ್ಲಿ 2,532 ಕೋಟಿ ರೂ. ಹಣವನ್ನು ಸಂಸ್ಕೃತ ಭಾಷೆಗಾಗಿ ನೀಡಿದರೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳಿಗಾಗಿ ಬರೀ 142 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದೆ. ಕೇಂದ್ರದ ನೀತಿ ಬೆಂಬಲಿಸಿಲ್ಲವೆಂದು ಅನುದಾನ ಕಡಿಮೆ ಮಾಡುವುದು ತಪ್ಪು. ಇಂತಹ ಸಂದರ್ಭದಲ್ಲಿ ನಾವು ಕೃಷ್ಣನ ಕುಹಕವ ನೋಡಲ್ಲಿ ಎಂದ ಕುವೆಂಪು ಅವರನ್ನು ನೆನೆದು, ಕೇಂದ್ರದ ಕುಹಕವ ನೋಡಲ್ಲಿ ಎನ್ನಬಹುದು” ಎಂದು ವ್ಯಂಗ್ಯವಾಡಿದರು.

ಇನ್ನು ಬರಹಗಾರ, ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, “ಪ್ರಸ್ತುತ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯಕ್ಕಾಗಿ ಉಳಿದಿಲ್ಲ, ವೈಚಾರಿಕ ಕೇಂದ್ರವಾಗಿಲ್ಲ. ಬದಲಾಗಿಲ್ಲ ‘ಸೆಲೆಬ್ರೆಟಿಗಳ ಶೋ’ ಆಗಿದೆ. ಎಷ್ಟು ಹೆಸರಾಂತ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂಬುದು ಮುಖ್ಯವಾಗುತ್ತದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಸದ್ಯ ಏಕತೆ ಇನ್ನುವುದು ವೈವಿಧ್ಯತೆಯಲ್ಲಿ ಏಕತೆಯಾಗಿ ಉಳಿದಿಲ್ಲ. ನನ್ನ ಧರ್ಮದ ಏಕತೆಯಾಗಿದೆ. ಭಾವೈಕ್ಯತೆಯೂ ಒಂದು ಧರ್ಮಕ್ಕೆ ಸೀಮಿತವಾಗಿದೆ. ಸಮಾಜಮುಖಿ ಎಂಬುದು ಸಮಾಜದ ಪರವಾಗಿಲ್ಲ. ಬದಲಾಗಿ ಅವರ ಜಾತಿ, ಅವರ ಧರ್ಮಕ್ಕೆ ಸಮಾಜಮುಖಿಯಾಗಿದೆ. ಸದ್ಯ ಟೀಕೆ ಎಂಬುದು ಟೀಕೆಯಾಗಿ ಉಳಿಯದೆ ಬೈಗುಳವಾಗಿ ಉಳಿದಿದೆ. ಪ್ರಜಾಪ್ರಭುತ್ವವೂ ತಾಂತ್ರಿಕವಾಗಿದೆ” ಎಂದರು.

“ಮಾತು ತನ್ನ ಧ್ವನಿ ಕಳೆದುಕೊಂಡಿದ್ದು, ವಿಧಾನಸೌಧದಲ್ಲಿರಬೇಕಾದ ರಾಜಕೀಯ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಕೂತು ಮಾತನಾಡುವ, ಸಂವಾದ ನಡೆಸುವ ಪ್ರಜಾಪ್ರಭುತ್ವವೇ ಇಲ್ಲದಾಗಿದೆ. ರಾಜನ ಆಸ್ಥಾನದಲ್ಲಿದ್ದ ಪಂಪ, ಬಸವಣ್ಣರು ರಾಜನನ್ನು ಟೀಕಿಸಿ ಸಾಹಿತ್ಯ ಬರೆದರು. ಆದರೆ ಈಗ ಹಾಗಿಲ್ಲ. ಕಾಲ ನಮ್ಮನ್ನು ಕಟ್ಟಿಹಾಕಿಕೊಳ್ಳುತ್ತಿದೆ” ಎಂದು ಅಭಿಪ್ರಾಯಿಸಿದರು.

“ಮಹಾತ್ಮ ಗಾಂಧಿ ಅವರು ಎಂದಿಗೂ ರಾಮನನ್ನು ಹೋರಾಟಕ್ಕೆ ಬಳಸಿಕೊಂಡಿಲ್ಲ. ಚರಕ, ಖಾದಿ, ಉಪ್ಪು ಎಂಬ ಜಾತ್ಯತೀತ ಸಂಕೇತಗಳನ್ನು ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿಕೊಂಡರು. ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹದ ಬೊಗಸೆ ನೀರು ಮತ್ತು ಗಾಂಧಿಜಿ ಅವರ ಉಪ್ಪಿನ ಸತ್ಯಾಗ್ರಹದ ಒಂದು ಹಿಡಿ ಉಪ್ಪು ಭಾರತದ ದೊಡ್ಡ ಸಂಕೇತ” ಎಂದರು.

“ಅಂಬೇಡ್ಕರ್ ಅವರು ಹಿಂದೂ ಧರ್ಮ ನಂಬಿದವರಲ್ಲ, ಡಿ. ರಾಧಾಕೃಷ್ಣನ್ ಅವರು ಹಿಂದೂ ಧರ್ಮ ಪಾಲಿಸುತ್ತಿದ್ದವರು. ಇಬ್ಬರೂ ಸಂವಿಧಾನ ಸಭೆಯಲ್ಲಿ ಧಾರ್ಮಿಕ ಹಕ್ಕಿನ ಬಗ್ಗೆ ಮಾತನಾಡಿದರು. ಎಲ್ಲಾ ಧರ್ಮಕ್ಕೆ ಸಮಾನ ಹಕ್ಕಿದೆ ಎಂದು ಹೇಳಿದವರು. ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ವಿರೋಧಗಳನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಮೊದಲ ಶಿಕ್ಷಕಿಯರು” ಎಂದು ನೆನೆದರು.

“ಸದ್ಯ ದೇಶ ಧರ್ಮ, ಜಾತಿ ವಿಚಾರದಲ್ಲಿ ವಿಭಜನೆಯಾಗಿದೆ. ವಿಭಜನೆ ಮಾಡುತ್ತಲೇ ನಮ್ಮದು ಒಂದೇ ದೇಶ ಒಂದೇ ಭಾಷೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯದ, ಸಾಹಿತಿಗಳ ಜವಾಬ್ದಾರಿ ದೊಡ್ಡದು. ನಾವು ಸತ್ಯ ಹೇಳುವುದು ಮುಖ್ಯ. ಇದು ಎಲ್ಲಾ ಮರ್ಯಾದಸ್ಥ ಮನುಷ್ಯರ ಜವಾಬ್ದಾರಿ. ನಾವು ಮರ್ಯಾದಸ್ಥ ಮನುಷ್ಯರಾಗೋಣ” ಎಂದು ಕರೆ ನೀಡಿದರು.

ಇನ್ನು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಹೆಚ್ ಎಸ್ ಶಿವಪ್ರಕಾಶ್ ಅವರು ಮಾತನಾಡಿ ‘ಹಲವು ವ್ಯಕ್ತಿಗಳು ತಮ್ಮ ಆದಾಯದಿಂದ ತೆರಿಗೆ ಪಾವತಿಸುತ್ತಾರೆ. ಅದೆ ರೀತಿ ಬೇರೆ ಬೇರೆ ಅಧಿಕಾರಿಗಳಿದ್ದಾರೆ. ಅವರ ಬಳಿ ಅಧಿಕಾರವಿದೆಯೇ ವಿನಃ ಸಂಸ್ಕೃತಿ ಚಿಂತನೆ ಇಲ್ಲ. ಆದ್ದರಿಂದ ಈ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸಮಾಜಮುಖಿ ಬಳಗಕ್ಕೆ ಅಭಿನಂದನೆಗಳನ್ನು ತಿಳಿಸಿದರು’.

‘ಉತ್ತರ ಭಾರತವು ಕೂಡ ಭಾಷೆಯಲ್ಲಿ ವೈವಿದ್ಯ ಪೂರ್ಣವಾದದ್ದು. ಸರ್ಕಾರವು ಅಧಿಕೃತವಾಗಿ ಗುರುತಿಸಿದ ಭಾಷೆಗಳು ಬಿಟ್ಟು ಇತರ ಭಾಷೆಗಳನ್ನು ಗುರುತಿಸುವುದು ಮುಖ್ಯ. ಸಾಹಿತ್ಯ ಎನ್ನುವುದು ಯಾವುದೇ ದರ್ಶನದ ತಾತ್ಪರ್ಯವಲ್ಲ. ಅದು ಲೌಕಿಕವಲ್ಲ. ಅದು ಲೋಕೋತ್ತರವು ಅಲ್ಲ. ಸಾಹಿತ್ಯವು ಅಲೌಕಿಕಿ, ಒಂದು ಸುಂದರವಾದ ಸೃಷ್ಟಿ. ಉದಾಹರಣೆಗೆ ನಮಗೆ ಕಣ್ಣಿಗೆ ಕಾಣುವ ಜೋಗಜಲಪಾತದ ರೀತಿಯಲ್ಲಿ’ ಎಂದರು.

‘ಸನಾತನ ಧರ್ಮದಕ್ಕೆ ಮೊದಲ ಉಲ್ಲೇಖ ಸಿಗುವುದು ಬುದ್ದನ ಧಮ್ಮದಲ್ಲಿ‌. ಇಂದು ಕುಬ್ಜ ಮಾನವಿಯತೆ ದೇಶವನ್ನು ಆಳುತ್ತಿದೆ. ದೇಶದ ಎಲ್ಲ ಪ್ರದೇಶವನ್ನು, ಎಲ್ಲ ಜನರನ್ನು ಒಳಗೊಳ್ಳುವ ಮಾನವಿಯತೆ ಬರಬೇಕು’ ಎಂದರು.

‘ಸಾಹಿತ್ಯ ಎನ್ನುವುದು ಉದ್ಯಮಿಕರಣವಾಗುತ್ತಿದೆ. ಅದು ಇಂದಿನ ಅಪಾಯದಂತಿದೆ. ಇನ್ನು ಮುಂದಾದರು ನಾವು ಕಾರ್ಪೋರೆಟ್ ಸಾಹಿತೀಕರಣವನ್ನು ಧಿಕ್ಕರಿಸಿಬೇಕು. ನಾನು ಸಹ ಧಿಕ್ಕರಿಸುತ್ತೇನೆ ಎಂದು ಘೋಷಿಸುತ್ತೇನೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜ್ಯೋತಿ, ಶಶಿಧರ್ ಭಾರಿಘಾಟ್, ಹೆಚ್.ಆರ್.ಸುಜಾತ ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ...

ವಿಜಯಪುರ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ: ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನ

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 14 ಫಲಾನುಭವಿ ಆಧಾರಿತ...

ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್ 

SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ...