ಅಲ್ಲಮನ ಅನನ್ಯ ಪದಪ್ರಯೋಗಗಳು | ಠಾವು

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಠಾವು
ಒಂದು ಇಲ್ಲದ ಬಿಂದುವ
ತಂದೆಯಿಲ್ಲದ ಕಂದನ
ಮಾತೆ ಇಲ್ಲದ ಜಾತನ
ಗಮನವಿಲ್ಲದ ಗಮ್ಯನ
ಮೂವರರಿಯದ ಮುಗ್ಧನ
ಠಾವ ತೋರಿಸು ಗುಹೇಶ್ವರ

- Advertisement -

ವಚನಾರ್ಥ:
ಪರವಸ್ತು ಅರ್ಥಾತ್ ಪರಮಾತ್ಮನ ಪರಿಕಲ್ಪನೆಯಲ್ಲಿ ರಚನೆಯಾದ ವಚನವಿದು. ಈ ಪ್ರಪಂಚದ ಸೃಷ್ಟಿಯ ಆದಿಯಲ್ಲಿ ಏನೂ ಇಲ್ಲದೆ ಎಲ್ಲವೂ ಬಯಲು ಸ್ವರೂಪದಲ್ಲಿ ಇದ್ದಾಗ ಅಲ್ಲಿ ಪರವಸ್ತು ಒಂದೇ ತಾನೇ ತಾನಾಗಿ ಇದ್ದಿತ್ತು. ಅದು ಒಂದೂ ಇಲ್ಲದಲ್ಲಿ ಬಿಂದುವಾಗಿತ್ತು. ನಂತರ ಪರಮಾತ್ಮನಾಗಿ ಜೀವತಳೆಯಿತು. ಆ ಪರಮಾತ್ಮ ಸ್ವಯಂಭು. ಪರಮಾತ್ಮನಿಗೆ ತಂದೆ ಇಲ್ಲ ತಾಯಿ ಇಲ್ಲ. ತಂದೆ ಇಲ್ಲದ ಕಂದ. ತಾಯಿ ಇಲ್ಲದೆ ಜನಿಸಿದ ಜಾತ. ಗಮನವಿಲ್ಲದ ಗಮ್ಯ ಅಂದರೆ ನಿಂತಲ್ಲಿಯೇ ನಿಂತು ಎಲ್ಲೆಲ್ಲೂ ಚಲಿಸುವವ.  ಈಶೋಪನಿಷತ್ತಿನ 4ನೇ ಶ್ಲೋಕವು ಪರಮಾತ್ಮನ ಸ್ವರೂಪವನ್ನು ವಿವರಿಸುತ್ತದೆ: “ಆ ಒಂದೇ ಅಚಲವಾದ ಪರಮಾತ್ಮನು ಮನಸ್ಸಿನಿಂದಲೂ ವೇಗವಾಗಿ ಹೋಗುವವನು. ದೇವತೆಗಳು ಸಹ ಅವನನ್ನು ತಲುಪಲು ಸಾಧ್ಯವಿಲ್ಲ. ಅವನು ಒಂದೆಡೆ ಸ್ಥಿರವಾಗಿ ನಿಂತಿದ್ದರೂ, ಓಡುತ್ತಿರುವ ಇತರರನ್ನೂ ಮೀರಿ ಮುಂದೆ ಸಾಗುವಂತವ.” ಬ್ರಹ್ಮ ಅಂದರೆ ಸೃಷ್ಟಿ, ವಿಷ್ಣು ಅಂದರೆ ಸ್ಥಿತಿ, ರುದ್ರ ಅಂದರೆ ಪ್ರಳಯ ಅವನನ್ನು ಅರಿಯಲಾರರು. ಮೂವರರಿಯದ ಮುಗ್ಧ. ಇಂತಹ ಪರವಸ್ತು ಎಲ್ಲಾ ಶರಣರ ಅಂತರಂಗದಲ್ಲಿ ಅಡಕವಾಗಿರುತ್ತದೆ. ಅದರ ಠಾವನ್ನು ಸಾಧಕನು ಅರಸಬೇಕು, ಅನುಸರಿಸಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಪದ ಪ್ರಯೋಗಾರ್ಥ:
ಠಾವು ಅಂದರೆ ಸ್ಥಳ, ಜಾಗ. ಠಾವ ತೋರಿಸು ಅಂತ ಗುಹೇಶ್ವರನಲ್ಲಿ ಅಲ್ಲಮನ ವಿನಂತಿ. ಯಾವ ಠಾವು? ಆತನಿರುವ ಠಾವು. ಆ ಠಾವನ್ನು ಅರಸಿ ಆತನನ್ನು ಕಾಣುವುದೇ ಸಾಧಕ ಜೀವನದ ಗುರಿ. ಠಾವು ಎಂಬುದು ಶಕ್ತಿಶಾಲಿ ಕನ್ನಡ ಪದ. ಈ ಪದ ಅಲ್ಲಮನಿಗೆ ಅತ್ಯಂತ ಪ್ರಿಯವಾದ ಪದವೂ ಆಗಿದ್ದಿರಬಹುದು. ಏಕೆಂದರೆ ಅಲ್ಲಮನ ಸುಮಾರು 21 ವಚನಗಳಲ್ಲಿ ಠಾವು ಎಂಬ ಪದ ಮತ್ತೆ ಮತ್ತೆ ಪ್ರಯೋಗವಾಗಿರುವುದು ಕಂಡುಬರುತ್ತದೆ. ಒಂದು-ಬಿಂದು, ತಂದೆ-ಕಂದ, ಮಾತೆ-ಜಾತ, ಗಮನ-ಗಮ್ಯ, ಮೂವರು-ಮುಗ್ದ ಹೀಗೆ ವಚನದುದ್ದಕ್ಕೂ ಪ್ರಾಸಬದ್ದವಾಗಿ, ಅರ್ಥಬದ್ದವಾಗಿ ಪದ ಜೋಡಣೆ ಮಾಡುತ್ತ ಕೊನೆಯಲ್ಲಿ ತನಗೆ ಪ್ರಿಯವಾದ ಪದ “ಠಾವ”ನ್ನು ಸರಿಯಾದ ಠಾವಿನಲ್ಲಿ ಇರಿಸಿ ವಚನವನ್ನು ಕಳೆಗಟ್ಟಿಸಿರುವುದು ಅಲ್ಲಮನ ಅನನ್ಯ ಪದಪ್ರಯೋಗ. ಆಕಾಶವಾಣಿ ದೂರದರ್ಶನದ ಗಾಯನ ಕಲಾವಿದರಾದ ಖಾಸಿಂ ಮಲ್ಲಿಗೆಮಡುವು ಈ ವಚನವನ್ನು ಭಾವಪೂರ್ಣವಾಗಿ ಸ್ಪಷ್ಟವಾಗಿ ಹಾಡಿದ್ದಾರೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿಮಾತು | ಟ್ರೋಲ್ ಮಾಡುವುದರಿಂದ ವಾಸ್ತವ ಬದಲಾಗದು!

“ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕಿ ಉಳಿದರೆ, ಅವಳ ಗೌರವ ಕಡಿಮೆ ಆಗುತ್ತದೆಯೇ ?...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅತಿನಿದ್ರಿಗಳು 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ

'ಲಾಪತಾ ಲೇಡೀಸ್' ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ...