ಈ ದಿನ ಸಂಪಾದಕೀಯ | ಡಿಕೆಶಿ – ತೇಜಸ್ವಿ ಸೂರ್ಯ ಕಚ್ಚಾಟದಲ್ಲಿ ಬೆಂಗಳೂರಿಗಿಲ್ಲ ಲಾಭ!

Date:

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಅಗತ್ಯ ಯೋಜನೆಗಳು ಮತ್ತು ಪರಿಹಾರವನ್ನು ಕಂಡುಕೊಳ್ಳಬೇಕಿದ್ದವರು, ಸಮಸ್ಯೆಯ ನಿವಾರಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದ್ದವರು, ವೈಯಕ್ತಿಯ ನಿಂದನೆ, ವಾಗ್ವಾದದಲ್ಲಿ ತೊಡಗಿದ್ದಾರೆ. 

ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆ ಮುಗಿಯದ ಕತೆಯೂ, ಬಗೆಹರಿಯದ ಬಿಕ್ಕಟ್ಟೂ ಆಗಿ ಬೆಳೆದಿದೆ. ಅಗಲ ರಸ್ತೆಗಳು, ಫ್ಲೈ ಓವರ್‌ಗಳು, ಅಂಡರ್‌ ಪಾಸ್‌ಗಳು, ರಿಂಗ್‌ ರೋಡ್‌ಗಳು ನಾನಾ ರೀತಿಯ ರಸ್ತೆ ವ್ಯವಸ್ಥೆಗಳಿದ್ದರೂ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈಗ, ಕಾಂಗ್ರೆಸ್‌ ಸರ್ಕಾರ 18 ಕಿ.ಮೀ. ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈ ಪ್ರಸ್ತಾಪವು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಡುವೆ ವಾಗ್ವಾದ ಹುಟ್ಟುಹಾಕಿದೆ. ಇಬ್ಬರೂ ವೈಯಕ್ತಿಕ ನಿಂದನೆಯವರೆಗೂ ತಮ್ಮ ಜಟಾಪಟಿಯನ್ನು ಕೊಂಡೊಯ್ದಿದ್ದಾರೆ.

- Advertisement -

ಪ್ರಸ್ತಾವಿತ ಟನಲ್‌ ಯೋಜನೆಯನ್ನು ಸಂಸದ ತೇಜಸ್ವಿ ಸೂರ್ಯ ವಿರೋಧಿಸಿದ್ದಾರೆ. ಇದೊಂದು ಕಾರುಗಳನ್ನ ಕೇಂದ್ರೀಕರಿಸಿದ ಯೋಜನೆಯೆಂದು ಬಣ್ಣಿಸಿದ್ದಾರೆ. ಮ್ಯಾಟ್ರಿಮೋನಿಯಲ್ ಯೋಜನೆಯೆಂದು ವ್ಯಂಗ್ಯವಾಡಿದ್ದಾರೆ. ಸಂಚಾರ ದಟ್ಟಣೆಯ ನಿವಾರಣೆಗಾಗಿ ಮೆಟ್ರೋ ವಿಸ್ತರಿಸಬೇಕು, ಸಬ್‌ ಅರ್ಬನ್ ರೈಲು ಜಾಲ ವಿಸ್ತರಣೆಗೊಳ್ಳಬೇಕು, ಮುಖ್ಯವಾಗಿ – ನಗರ ಸಾರಿಗೆ ವ್ಯವಸ್ಥೆಯೊಳಗೆ ಖಾಸಗಿ ಬಸ್‌ಗಳಿಗೆ ಅವಕಾಶ ಕೊಡಬೇಕೆಂದು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳ ಬದಲಾಗಿ, ಖಾಸಗಿ ಬಸ್‌ಗಳು ಸೇವೆ ಒದಗಿಸಬೇಕು ಎನ್ನುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ತೇಜಸ್ವಿ ಸೂರ್ಯ ಅವರ ಈ ಸಲಹೆ, ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಬೇಕು ಎಂಬ ಬಿಜೆಪಿ ಹುನ್ನಾರದ ಭಾಗವೂ ಆಗಿದೆ. ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಪಕ್ಷ ಬಿಜೆಪಿ ಕಾರ್ಪೋರೇಟ್ ಹಿತಾಸಕ್ತಿ ಹೊಂದಿದೆ. ಎಲ್ಲವನ್ನೂ ಖಾಸಗೀಕರಣ ಮಾಡಲು ಹವಣಿಸುತ್ತಿದೆ ಎಂಬುದು ಬಹಿರಂಗವಾಗದ ವಿಷಯವೇನೂ ಅಲ್ಲ. ಪ್ರಧಾನಿ ಮೋದಿಯಿಂದ ಹಿಡಿದು, ಸ್ಥಳೀಯ ಕಾರ್ಪೋರೇಟ್‌ವರೆಗೂ ಎಲ್ಲರೂ ಬಂಡವಾಳಶಾಹಿಗಳ ಪರವಾಗಿ ತುತ್ತೂರಿ ಊದುವುದು, ಸಮರ್ಥಿಸಿಕೊಳ್ಳುವುದು ನಡೆದೇ ಇದೆ. ಮೋದಿ ಸರ್ಕಾರವು ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ ಕುಳಗಳ ಕೈಗಿಡುತ್ತಲೇ ಇದ್ದಾರೆ. ಬೆಂಗಳೂರು ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಬೇಕೆಂದು ತೇಜಸ್ವಿ ಸೂರ್ಯ ಬಯಸಿದ್ದಾರೆ.

ಬೆಂಗಳೂರಿನ ವಿಚಾರದಲ್ಲಿ ‘ಮೆಟ್ರೋ, ಸಬ್ ಅರ್ಬನ್ ರೈಲು’ ವಿಸ್ತರಣೆ ಕುರಿತು ಸಂಸದ ತೇಜಸ್ವಿ ಸೂರ್ಯ ಅವರ ಸಲಹೆಗಳನ್ನು ಸ್ವಾಗತಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ‘ಸಲಹೆಗಳು ಸ್ವಾಗತಾರ್ಹ. ಆದರೆ, ಅವರ ಪಕ್ಷವೇ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದಿಂದ ಅನುದಾನ ತರಬೇಕು. ಮೋದಿ ಸರ್ಕಾರ ಕರ್ನಾಟಕಕ್ಕೆ ಸರಿಯಾಗಿ ಅನುದಾನ ಕೊಡದೆ ವಂಚಿಸುತ್ತಿದೆ. ತೇಜಸ್ವಿ ಸೂರ್ಯ ಕೇಂದ್ರದಿಂದ ರಾಜ್ಯಕ್ಕೆ 10 ರೂಪಾಯಿ ಕೂಡ ತಂದಿಲ್ಲ’ ಎಂದಿದ್ದಾರೆ.

ಇವರಿಬ್ಬರ ನಡುವಿನ ವಾಗ್ವಾದವು ಬೆಂಗಳೂರಿನ ಸಮಸ್ಯೆಗಳನ್ನು ದಾಟಿ ವೈಯಕ್ತಿಕ ನಿಂದನೆಯವರೆಗೆ ಇಳಿದಿದೆ. ಡಿ.ಕೆ ಶಿವಕುಮಾರ್ ಅವರನ್ನು ತೇಜಸ್ವಿ ಸೂರ್ಯ, ‘ಖಾಲಿ ತಟ್ಟೆ’ ಎಂದು ಅಲ್ಲಗಳೆದಿದ್ದಾರೆ. ಡಿ.ಕೆ ಶಿವಕುಮಾರ್ ಕೂಡ ತೇಜಸ್ವಿ ಸೂರ್ಯರನ್ನು ‘ಚೈಲ್ಡ್‌, ಅನನುಭವಿ ಹಾಗೂ ವೇಸ್ಟ್‌ ಮೆಟೀರಿಯಲ್’ ಎಂದಿದ್ದಾರೆ.

ಇವರಿಬ್ಬರ ಈ ವೈಯಕ್ತಿಕ ನಿಂದನೆಗಳು ಮತ್ತು ಕಾರ್ಯರೂಪಕ್ಕೆ ಬಾರದ ಅನಗತ್ಯ ಚರ್ಚೆಗಳು, ಕೆಸರೆರಚಾಟವು ಬೆಂಗಳೂರಿನ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ. ಈ ಚರ್ಚೆ-ವಾಗ್ವಾದಗಳು ಅಭಿವೃದ್ಧಿ, ಅಗತ್ಯಗಳನ್ನು ಬದಿಗಿಟ್ಟು, ಕೇವಲ ರಾಜಕೀಯ ಕೆಸರೆರಚಾಟಕ್ಕಷ್ಟೇ ಸೀಮಿತವಾಗಿ ಉಳಿಯಲಿದೆ. ಮಾಧ್ಯಮಗಳೂ ಅಷ್ಟೇ, ತಮ್ಮ ಜವಾಬ್ದಾರಿ ಮರೆತು ಈ ಇಬ್ಬರ ಹೇಳಿಕೆ ಪಡೆಯುವುದರಲ್ಲೇ ಕಾಲಹರಣ ಮಾಡುತ್ತಿವೆ.

ಬೆಂಗಳೂರು 1.3 ಕೋಟಿ ವಾಹನಗಳನ್ನು ಹೊಂದಿರುವ ಭಾರತದ ಅತ್ಯಂತ ಟ್ರಾಫಿಕ್ ದೈತ್ಯ ನಗರಗಳಲ್ಲಿ ಒಂದು. ನಗರವಾಸಿಗಳು ಪ್ರತಿದಿನ 45 ನಿಮಿಷಗಳಷ್ಟು ಸಮಯವನ್ನು ರಸ್ತೆಯಲ್ಲಿ ಕಳೆದುಕೊಳ್ಳುತ್ತಿದೆ. 20% ವಾಹನ ಹೆಚ್ಚಳದಿಂದ 125%ರಷ್ಟು ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಪರಿಣಾಮವಾಗಿ, ವಾರ್ಷಿಕವಾಗಿ ಆರ್ಥಿಕ ನಷ್ಟ 60,000 ಕೋಟಿ ರೂ. ಇದೆ ಎಂದು ಅಧ್ಯಯನಗಳು ಹೇಳುತ್ತಿವೆ.

ಜೊತೆಗೆ, ಸಿಗ್ನಲ್‌ಗಳಲ್ಲಿ ಹೆಚ್ಚು ನಿಲ್ಲುವುದರಿಂದ, ಜನರು ಹೆಚ್ಚು ಸಮಯ ರಸ್ತೆಯಲ್ಲಿ ಕಳೆಯುತ್ತಿರುವುದರಿಂದ ಉಸಿರಾಟ ಸಮಸ್ಯೆ, ಮೈಗ್ರೇನ್, ಸೊಂಟನೋವು, ನಿದ್ರಾಹೀನತೆ, ಮಧುಮೇಹದಂತಹ ದೈಹಿಕ ಸಮಸ್ಯೆ ಹಾಗೂ ತೀವ್ರ ಒತ್ತಡ, ರೋಡ್‌ ರೇಜ್‌, ಖಿನ್ನತೆ-ಆತಂಕ, ಕೆಲಸದಲ್ಲಿ ನಿರಾಸಕ್ತಿ, ಏಕಾಂಗಿತನದಂತಹ ಮಾನಸಿಕ ಸಮಸ್ಯೆಗಳಿಗೂ ಒಳಗಾಗುತ್ತಿದ್ದಾರೆ. ಇದು, ಉತ್ಪಾದಕತೆ ಕುಸಿತ, ಚಲನಶಕ್ತಿ ಕುಂಠಿತ, ದೀರ್ಘ ರಜೆ, ದುರ್ಬಲತೆ ಕಾರಣವಾಗುತ್ತಿದ್ದು, ದೈನಂದಿನ ಕೆಲಸಗಳು ಮತ್ತು ಕೌಟುಂಬಿಕ ಸಂಬಂಧಗಳ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ.

ಈ ಲೇಖನ ಓದಿದ್ದೀರಾ?: ಆಗ ತಲೆ ಮೇಲೆ ಹೊತ್ತು ಮೆರೆಸಿದವರು ಈಗ ಪಲಾಯನ ಮಾಡುವುದು ತರವೇ?

ಸಂಚಾರ ದಟ್ಟಣೆಯೊಂದಿಗೆ ಇಂತಹ ಗಂಭೀರ ಸಮಸ್ಯೆಗಳು ಹೆಣೆದುಕೊಂಡಿರುವಾಗ, ತೇಜಸ್ವಿ ಸೂರ್ಯ ಮತ್ತು ಡಿ ಕೆ ಶಿವಕುಮಾರ್ ಅನಗತ್ಯ ವಾಗ್ವಾದದಲ್ಲಿ ತೊಡಗಿದ್ದಾರೆ. ಅದರ ಬದಲಾಗಿ, ಈ ಇಬ್ಬರೂ ಅಗತ್ಯ ಯೋಜನೆಗಳು ಮತ್ತು ಪರಿಹಾರವನ್ನು ಕಂಡುಕೊಳ್ಳಬೇಕಿತ್ತು. ಸಮಸ್ಯೆಯ ನಿವಾರಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿತ್ತು.

ಸಂಚಾರ ದಟ್ಟಣೆ ನಿವಾರಣೆಯಾಗಬೇಕೆಂದರೆ, ನಗರವಾಸಿಗಳು ಖಾಸಗಿ ವಾಹನಗಳ ಬದಲಾಗಿ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಪ್ರೇರೇಪಿಸಬೇಕು. ಅದಕ್ಕಾಗಿ, ‘ಎಂಡ್‌ ಟು ಎಂಡ್‌’ ಸಾರಿಗೆ ಸೌಲಭ್ಯ ಒದಗಿಸಬೇಕು. ಸಾರ್ವಜನಿಕ ಸಾರಿಗೆ ಜಾಲವನ್ನು ವಿಸ್ತರಿಸಬೇಕು. ಸಾರಿಗೆ ಬಸ್‌ಗಳ ಸಂಚಾರಕ್ಕೆ ಆದ್ಯತೆ ಒದಗಿಸಬೇಕು. ಮೆಟ್ರೋ ದರವನ್ನು ತಗ್ಗಿಸಬೇಕು. ಜನರು ಪರಿಸರ ಸ್ನೇಹಿ ಸೈಕಲ್‌ಗಳನ್ನು ಬಳಸುವಂತೆ ಪ್ರೋತ್ಸಾಹಿಸಬೇಕು.

ಮುಖ್ಯವಾಗಿ, ದೀರ್ಘಕಾಲದಲ್ಲಿ ಬೆಂಗಳೂರು ಕೇಂದ್ರಿತ ಕೈಗಾರಿಕೆ-ಉದ್ಯಮ-ವ್ಯವಹಾರವನ್ನು ವಿಕೇಂದ್ರೀಕರಣಗೊಳಿಸಬೇಕು. ವ್ಯವಹಾರ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನ ಮೇಲಿನ ಅವಲಂಬನೆಯನ್ನು ನಿಯಂತ್ರಿಸಬೇಕು. ಎಲ್ಲ ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ತೆರೆಯಬೇಕು. ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸಬೇಕು. ಗ್ರಾಮೀಣ ಭಾಗದಲ್ಲಿ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಯುವಜನರು ಕೃಷಿಯಲ್ಲಿ ಹೆಚ್ಚು ತೊಡಗುವಂತೆ ಮಾಡಬೇಕು. ಇಂತಹ ಶಾಶ್ವತ ಮತ್ತು ದೀರ್ಘಕಾಲದ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳದೆ, ಬೆಂಗಳೂರಿನ ಸಂಚಾರ ಸಮಸ್ಯೆ ಬಗೆಹರಿಯುವುದಿಲ್ಲ. ಡಿ ಕೆ ಶಿವಕುಮಾರ್ – ತೇಜಸ್ವಿ ಸೂರ್ಯ ಕಚ್ಚಾಟವು ಯಾವುದೇ ಪರಿಹಾರವನ್ನೂ ನೀಡುವುದಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...