ಈ ದಿನ ಸಂಪಾದಕೀಯ | ತಮ್ಮದೇ ಅವನತಿಗೆ ಅಂತಿಮ ಮೊಳೆ ಹೊಡೆದುಕೊಳ್ಳುತ್ತಿದ್ದಾರೆ ಟ್ರಂಪ್!

Date:

ಟ್ರಂಪ್ ಅಮೆರಿಕದಲ್ಲಿ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಟ್ರಂಪ್‌ರನ್ನು ಶ್ವೇತಭವನದಿಂದ ಹೊರಹಾಕಲು ಅಮೆರಿಕನ್ನರು  ಎದುರು ನೋಡುತ್ತಿದ್ದಾರೆ. ತಮ್ಮ ಎಡಬಿಡಂಗಿ ನೀತಿ-ನಿರ್ಧಾರ-ಧೋರಣೆಗಳಿಂದ ತಮ್ಮ ಅವನತಿಯ ಅಂತಿಮ ಮೊಳೆಯನ್ನು ಟ್ರಂಪ್ ಅವರೇ ಹೊಡೆದುಕೊಳ್ಳುತ್ತಿದ್ದಾರೆ.

ಅಮೆರಿಕವನ್ನು ಉದ್ದೇಶಿಸಿ ದೂರದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಗೆದ್ದಿದ್ದೇವೆಂದು ಕಾಲ್ಪನಿಕ ವಿಜಯದ ಕುರಿತು ಹೇಳಿಕೊಂಡಿದ್ದಾರೆ. ಯುದ್ಧದಿಂದ ಕೆಲವೇ ವಾರಗಳಲ್ಲಿ ಹಿಂದೆ ಸರಿಯಲು ತಾವು ಸಿದ್ದರಿರುವುದಾಗಿ ಸೂಚನೆ ನೀಡಿದ್ದಾರೆ.

- Advertisement -

ಟ್ರಂಪ್ ವಿಜಯದ ಕುರಿತು ಮಾತನಾಡುತ್ತಿರುವುದು ಅವರ ಇತ್ತೀಚಿನ ಭ್ರಮೆಯ ಮಾತುಗಳಲ್ಲಿ ಒಂದು. ಯಾಕೆಂದರೆ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಆರಂಭಿಸಿದ ಬಳಿಕ, ಹಲವಾರು ಸಂದರ್ಭಗಳಲ್ಲಿ ಟ್ರಂಪ್ ಮಾತುಕತೆ ಭ್ರಮೆಯಿಂದಲೇ ತುಂಬಿರುವಂತೆ ಕಂಡಿದೆ. ಮಾತ್ರವಲ್ಲ, ಅವರ ಹೇಳಿಕೆಗಳು ಪದೇ-ಪದೇ ಬದಲಾಗಿವೆ. ಶುಕ್ರವಾರ ಭಾಷಣವೂ ಅವರ ಭ್ರಮೆಯ ಮುಂದುವರಿಕೆಯಂತೆಯೇ ಕಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಆದರೂ, ಅವರ ಭಾಷಣದಲ್ಲಿ ಕೆಲವು ವಿಷಯಗಳು ಎದ್ದು ಕಾಣುತ್ತಿದ್ದವು. ಇರಾನ್ ನೌಕಾಪಡೆ ಮತ್ತು ವಾಯುಪಡೆಗಳು ಬಹುತೇಕ ಧ್ವಂಸವಾಗಿವೆ ಎಂದು ಅವರು ಬಡಾಯಿ ಕೊಚ್ಚಿಕೊಂಡಿದ್ದಾರೆ. ಇದು ಇರಾನ್ ಮೇಲಿನ ತಮ್ಮ ನಿರ್ಣಾಯಕ ವಿಜಯವೆಂದು ಪ್ರತಿಪಾದಿಸಿದ್ದಾರೆ. ಜೊತೆಗೆ, ಮುಂಬರುವ ಎರಡು ವಾರಗಳಲ್ಲಿ ಇರಾನ್ ಮೇಲೆ ಅಮೆರಿಕ ತೀವ್ರವಾಗಿ ದಾಳಿ ಮಾಡಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಅಮೆರಿಕದ ಭೂಸೇನೆಯನ್ನು ಇರಾನ್‌ಗೆ ನುಗ್ಗಿಸುವ ಮತ್ತು ಬಲವಂತವಾಗಿಯಾದರೂ ಹಾರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲು ಅಮೆರಿಕ ಮಿಲಿಟರಿ ಬದ್ಧವಾಗಿದೆ ಎಂದು ಹೇಳುವ ಧೈರ್ಯವನ್ನು ಅವರು ತೋರಿಸಿಲ್ಲ. ಆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ.

ಸ್ಪಷ್ಟ ವಿಚಾರವೆಂದರೆ, ಹಾರ್ಮುಜ್ ಜಲಸಂಧಿಯ ನಿರ್ಬಂಧದಿಂದಾಗಿ ಬಾಧಿತವಾಗಿರುವ ಬಹುತೇಕ ದೇಶಗಳು ಅಮೆರಿಕದ ಮಿತ್ರರಾಷ್ಟ್ರಗಳೇ ಆಗಿವೆ. ಆದರೂ, ಜಲಸಂಧಿ ಕುರಿತಾದ ಜಾಗತಿಕ ಕಾಳಜಿಯನ್ನು ಟ್ರಂಪ್ ನಿರ್ಲಕ್ಷಿಸಿದ್ದಾರೆ. ಮಾತ್ರವಲ್ಲ, ಜಲಸಂಧಿ ವಿಚಾರವಾಗಿ ತಮ್ಮ ಮಿತ್ರರಾಷ್ಟ್ರಗಳೇ ಜವಾಬ್ದಾರಿ ಹೊತ್ತು, ಇರಾನ್ ಜೊತೆ ಮಾತುಕತೆ ನಡೆಸಬೇಕು. ಒತ್ತಡ ಹೇರಬೇಕು ಎಂದು ಹೇಳಿದ್ದು, ತಾವೇ ಸೃಷ್ಟಿಸಿದ ಬಿಕ್ಕಟ್ಟಿನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ.

ಯಾಕೆಂದರೆ, ವೆನಜುವೆಲಾ ಅಧ್ಯಕ್ಷರನ್ನು ಅಪಹರಿಸಿ, ಅಲ್ಲಿನ ತೈಲವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಡಿರುವ ಅಮೆರಿಕಗೆ ತೈಲ ಬಿಕ್ಕಟ್ಟಿನ ಬಿಸಿ ತಟ್ಟಿಲ್ಲ. ತಾವು ಇಂಧನ ವಿಚಾರದಲ್ಲಿ ಸ್ವಾವಲಂಬಿಯೆಂದು ಹೇಳಿಕೊಂಡಿರುವ ಟ್ರಂಪ್, ತಮ್ಮ ಮಿತ್ರರಿಗೂ ತೈಲ ಪೂರೈಸುವುದಾಗಿ ಹೇಳಿಕೊಂಡಿದ್ದಾರೆ.

ಗಮನಾರ್ಹವೆಂದರೆ, ಅಮೆರಿಕವು ತೈಲದಲ್ಲಿ ಸ್ವಾವಲಂಬಿಯಾಗಿದೆ ಎಂಬುದು ಎಷ್ಟು ಸತ್ಯವೋ, ಅಮೆರಿಕನ್ನರು ಇಂಧನಕ್ಕಾಗಿ ಅತಿ ಹೆಚ್ಚು ಬೆಲೆ ತೆರುತ್ತಿದ್ದಾರೆ ಎಂಬುದೂ ಅಷ್ಟೇ ಕಟುಸತ್ಯ. ಈ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಟ್ರಂಪ್‌ಗಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯು ಅಮೆರಿಕದ ಮೇಲೂ ಪ್ರಭಾವ ಬೀರುತ್ತಿದೆ. ಇಂಧನಕ್ಕಾಗಿ ಅಮೆರಿಕ ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸದೇ ಇರಬಹುದು. ಆದರೆ, ರಸಗೊಬ್ಬರಗಳ ಸಾಗಣೆಗೆ ಇದೇ ಜಲಸಂಧಿ ಅಮೆರಿಕಗೂ ಅತೀ ಮುಖ್ಯ.

ಹೀಗಾಗಿ, ಇರಾನ್ ಮೇಲೆ ಅಮೆರಿಕ ನಿರ್ಣಾಯಕ ವಿಜಯದ ಪ್ರತಿಪಾದನೆ, ಭೂಸೇನೆಯ ಆಕ್ರಮಣದ ಬಗ್ಗೆ ಪ್ರಸ್ತಾಪ ಇಲ್ಲದಿರುವುದು ಹಾಗೂ ಹಾರ್ಮುಜ್ ಜಲಸಂಧಿಯ ಉಸ್ತುವಾರಿಯನ್ನು ಮಿತ್ರರಾಷ್ಟ್ರಗಳೇ ಸ್ವತಂತ್ರವಾಗಿ ನಿಭಾಯಿಸಲಿ ಎಂಬ ಕರೆ- ಇವೆಲ್ಲವೂ ಅವರು ಯುದ್ಧದಿಂದ ಹಿಂದೆ ಸರಿದಿದ್ದಾರೆ. ತಾವು ಇರಾನ್ ಮುಂದೆ ಮಂಡಿಯೂರಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲಾಗದೆ, ಹೇಗಾದರೂ ಯುದ್ಧಕ್ಕೆ ಅಂತ್ಯ ಹಾಡಬೇಕೆಂಬ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಅಚ್ಚರಿ ಎಂಬಂತೆ, ಟ್ರಂಪ್ ಅವರು ತಾವು ಇರಾನ್‌ನಲ್ಲಿ ಆಡಳಿತ ಬದಲಾವಣೆಯನ್ನು ಎಂದಿಗೂ ಬಯಸಿರಲಿಲ್ಲವೆಂದು ಹೇಳಿಕೊಂಡಿದ್ದಾರೆ. ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇದು ಅವರ ತಂತ್ರ-ಕುತಂತ್ರಗಳೆಲ್ಲವೂ ತಲೆ ಕೆಳಗಾಗಿ, ಅವರು ಮತಿ-ಭ್ರಾಂತಿಗೊಂಡಿದ್ದಾರೆ ಎಂಬುದು ಎದ್ದುಕಾಣುತ್ತದೆ.

ಪ್ರತಿದಿನ ಇರಾನ್ ಮೇಲೆ ವಾಯುದಾಳಿ ನಡೆಸುತ್ತಿದ್ದರೂ ಟ್ರಂಪ್ ಕಾರ್ಯತಂತ್ರದ ಸೋಲನ್ನು ಎದುರಿಸುತ್ತಿದ್ದಾರೆ. ಯಾಕೆಂದರೆ, ಇರಾನ್‌ನಲ್ಲಿ ಆಡಳಿತ ಬದಲಾವಣೆ ಅಥವಾ ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ಕುಗ್ಗಿಸುವ ತಮ್ಮ ಉದ್ದೇಶಗಳನ್ನು ಈಡೇರಿಸುವುದರ ಹತ್ತಿರಕ್ಕೂ ಟ್ರಂಪ್ ಬಂದಿಲ್ಲ. ಹಾಗೆ ನೋಡಿದರೆ, ಇರಾನ್ ಎಲ್ಲ ಆಟದ ಕಾರ್ಡ್‌ಗಳನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿದೆ. ಆದರೆ, ಟ್ರಂಪ್ ಕೈಯಲ್ಲಿ ಆಟಕ್ಕೆ ಯಾವುದೇ ಕಾರ್ಡ್‌ಗಳೂ ಇಲ್ಲ. ಇದು ಸ್ವತಃ ಅಮೆರಿಕದ ಹಲವು ಪ್ರಜ್ಞಾವಂತರ ಅಭಿಪ್ರಾಯವೂ ಕೂಡ.

2025ರಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ, ಟ್ರಂಪ್‌ ಧೋರಣೆಗಳ ಕುರಿತು ಅಮೆರಿಕದಲ್ಲಿ ಅಭಿಪ್ರಾಯಗಳು ಭಾರೀ ಪ್ರಮಾಣದಲ್ಲಿ ಬದಲಾಗಿವೆ. ಟ್ರಂಪ್ ವಿರುದ್ಧ ಅಮೆರಿಕದಾದ್ಯಂತ ಆಕ್ರೋಶ ಮಡುಗಟ್ಟುತ್ತಿದೆ. ಬೀದಿಗಳಲ್ಲಿ ವ್ಯಕ್ತವಾಗುತ್ತಿದೆ.

ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, ‘ಅಮೆರಿಕ ಫಸ್ಟ್’ ನೀತಿಯಡಿ ಹಲವು ರಾಷ್ಟ್ರಗಳ ಮೇಲೆ ತೀವ್ರತರವಾದ ಸುಂಕಗಳನ್ನು ಹೇರಿದರು. ಆದರೆ, ಈ ಸುಂಕಗಳು ಇತರ ರಾಷ್ಟ್ರಗಳಿಗಿಂತ ಅಮೆರಿಕನ್ನರನ್ನೇ ಹೆಚ್ಚಾಗಿ ಬಾಧಿಸಿದವು. ಈ ಸುಂಕಗಳ ಹೆಚ್ಚಳದಿಂದ ದೈನಂದಿನ ವಸ್ತುಗಳ ಬೆಲೆ ಏರಿಕೆಯಾಗಿದೆ. ವಿಶೇಷವಾಗಿ, ಅಮೆರಿಕದ ಕೃಷಿ ವಲಯಕ್ಕೆ ಅಗತ್ಯವಾದ ರಸಗೊಬ್ಬರಗಳ ಬೆಲೆ 40%ರಷ್ಟು ಏರಿಕೆಯಾಗಿದೆ. ಇದು ಅಮೆರಿಕನ್ ರೈತರಲ್ಲಿ ಆಕ್ರೋಶ ಮೂಡಿಸಿದೆ. ಇನ್ನು, ಟ್ರಂಪ್ ಅವರ ತುಘಲಕ್ ನಿರ್ಧಾರಗಳಿಂದಾಗಿ ಷೇರು ಮಾರುಕಟ್ಟೆ ಪದೇ ಪದೇ ಕುಸಿಯುತ್ತಿರುವುದು ಹೂಡಿಕೆದಾರರಲ್ಲಿ ಭೀತಿ ಹುಟ್ಟಿಸಿದೆ. ವಲಸಿಗರ ವಿರುದ್ಧದ ಕಾರ್ಯಾಚರಣೆ ಹೆಸರಿನಲ್ಲಿ ಟ್ರಂಪ್ ಅವರ ಆಕ್ರಮಣಕಾರಿ ವರ್ತನೆ ಮಾನವ ಹಕ್ಕುಗಳ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ಈಗ, ಇರಾನ್ ವಿರುದ್ಧದ ಸಂಘರ್ಷವು ಅಮೆರಿಕನ್ನರ ತಾಳ್ಮೆ ಕೆಡಿಸಿದೆ. ಸಮೀಕ್ಷೆಗಳ ಪ್ರಕಾರ, ಕೇವಲ 14%ರಷ್ಟು ಜನರು ಮಾತ್ರ ಇರಾನ್ ಮೇಲಿನ ದಾಳಿಯನ್ನು ಬೆಂಬಲಿಸುತ್ತಿದ್ದರೆ, ಬಹುತೇಕರು ಯುದ್ದದ ವಿರುದ್ಧವಿದ್ದಾರೆ.

ಈ ಲೇಖನ ಓದಿದ್ದೀರಾ?: ಕ್ರಿಕೆಟ್‌ ಟಿಕೆಟ್‌ಗಾಗಿ ದುಂಬಾಲು ಬಿದ್ದ ಶಾಸಕರ ಕೃತ್ಯ ನಾಚಿಕೆಗೇಡು!

ಇತ್ತೀಚಿನ ದಿನಗಳಲ್ಲಿ, ಟ್ರಂಪ್ ವಿರುದ್ಧ ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ‘ನೋ ಕಿಂಗ್ಸ್’ ಹೆಸರಿನಡಿ ಸುಮಾರು 90 ಲಕ್ಷಕ್ಕೂ ಹೆಚ್ಚು ಜನರು ಬೀದಿಗೆ ಇಳಿದು ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಟ್ರಂಪ್ ಅವರು ಅಧ್ಯಕ್ಷೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಪ್ರಭುತ್ವದಂತೆ ನಡೆಸುತ್ತಿದ್ದಾರೆ ಎಂಬ ಆಕ್ರೋಶ ಅಮೆರಿಕದಾದ್ಯಂತ ವ್ಯಕ್ತವಾಗುತ್ತಿದೆ.

ಅಮೆರಿಕವು 2026ರ ಮಧ್ಯಂತರ ಚುನಾವಣೆಗಳಿಗೆ ಸಜ್ಜಾಗುತ್ತಿರುವ ಈ ಸಮಯದಲ್ಲಿ, ಟ್ರಂಪ್ ವಿರುದ್ಧದ ಈ ಆಕ್ರೋಶವು ಕೇವಲ ರಾಜಕೀಯ ವಿರೋಧವಾಗಿ ಮಾತ್ರವೇ ಉಳಿದಿಲ್ಲ. ಇದು, ಜನರ ಬದುಕು, ಅಮೆರಿಕದ ದಿಕ್ಕು-ಭವಿಷ್ಯದ ಕುರಿತಾದ ಕಳವಳಗಳಿಂದ ರೂಪುಗೊಂಡಿದೆ. ಟ್ರಂಪ್ ಅಮೆರಿಕದಲ್ಲಿ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಟ್ರಂಪ್‌ರನ್ನು ಶ್ವೇತಭವನದಿಂದ ಹೊರಹಾಕಲು ಅಮೆರಿಕನ್ನರು  ಎದುರು ನೋಡುತ್ತಿದ್ದಾರೆ. ತಮ್ಮ ಎಡಬಿಡಂಗಿ ನೀತಿ-ನಿರ್ಧಾರ-ಧೋರಣೆಗಳಿಂದ ತಮ್ಮ ಅವನತಿಯ ಅಂತಿಮ ಮೊಳೆಯನ್ನು ಟ್ರಂಪ್ ಅವರೇ ಹೊಡೆದುಕೊಳ್ಳುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...