ಮಲ್ಲಿಕಾರ್ಜುನ ಸ್ವಾಮೀಜಿ ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಸಮಾಜಮುಖಿ ಮೂರು ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ತಾಲೂಕಿನ ಹೊನಗನಹಳ್ಳಿ-ಸವನಹಳ್ಳಿಯ ಆತ್ಮಾನಂದ ಆಶ್ರಮದಲ್ಲಿ ನಡೆಯುತ್ತಿರುವ ಮಲ್ಲಿಕಾರ್ಜುನ ಸ್ವಾಮಿಗಳ 5ನೇ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
“ಹಸಿದು ಬಂದವರಿಗೆ ಅನ್ನ ಹಾಕಿದ್ದಾರೆ. ಬಡವರಿಗೆ ನೆರವಾಗಿದ್ದಾರೆ. ಸಮಾಜಮುಖಿ ಕಾರ್ಯಗಳ ಮೂಲಕ ಭಕ್ತಾದಿಗಳ ಮನಸ್ಸನ್ನು ಗೆದ್ದಿದ್ದಾರೆ. ಹೊನಗನಹಳ್ಳಿ-ಸವನಹಳ್ಳಿ ಗ್ರಾಮಗಳು ತನ್ನ ಎರಡು ಕಣ್ಣುಗಳಿದ್ದಂತೆ ಎನ್ನುತ್ತಿದ್ದರು. ನಾಟಕಗಳಲ್ಲಿ ಬಸವಾದಿ ಶರಣರು, ಬೀರದೇವರ ಪಾತ್ರಗಳಲ್ಲಿ ನಟಿಸಿ ಭಾರತೀಯ ಸಂಸ್ಕೃತಿ, ಪರಂಪರೆ, ಸಮಾಜ ಸುಧಾರಕರ ತತ್ವಾದರ್ಶಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಿರುವ ಸಾವಿರಾರು ಭಕ್ತರು ಅವರ ಮೇಲಿರುವ ಭಕ್ತಿಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಸಂಸ ಬೇತಮಂಗಲ ಹೋಬಳಿಯ ಸಂಚಾಲಕರಾಗಿ ಎಂ. ಸುಮಂತ್ ನೇಮಕ
ಈ ಕಾರ್ಯಕ್ರಮದಲ್ಲಿ ಜಗದ್ಗುರು ಡಾ.ಚನ್ನಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಮಮದಾಪುರ ವಿರಕ್ತಮಠದ ಮುರುಗೇಂದ್ರ ಮಹಾಸ್ವಾಮೀಜಿ, ನಾಗಠಾಣ ಉದಯಲಿಂಗೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮಸೂತಿಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ಮನಗೂಳಿ ವಿಭೂತಿಪುರಮಠ ಶಾಖಾ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯರು, ಆತ್ಮಾನಂದ ಆಶ್ರಮದ ದಯಾನಂದ ಸ್ವಾಮೀಜಿ, ಮುಖಂಡರಾದ ಸೋಮನಾಥ ಕಳ್ಳಿಮನಿ, ಬಸವರಾಜ ರೆಡ್ಡಿ, ನಚಿಕೇತ ಬಿದರಿ, ಮಲ್ಲಿಕಾರ್ಜುನ ಹಳ್ಳಿ, ಹನಮಂತ ಹಚಡದ, ಶಶಿಧರ ಬಿದರಿ, ಸಚೀನ ಬಿದರಿ, ಸಿದ್ದು ಹಂಡಿ, ರಾವುತ ಗಾಣಿಗೇರ, ಶಿವಯ್ಯ ಒಡೆಯರ, ಹೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಸಿದ್ದಣ್ಣ ಬಿಂಜಗೇರಿ, ಹೊನಗನಹಳ್ಳಿ-ಸವನಹಳ್ಳಿ ಗ್ರಾಮಸ್ಥರು, ಯುವಜನರು, ಮಹಿಳೆಯರು ಇದ್ದರು.




