ಸಿಇಟಿ ಪರೀಕ್ಷೆ ನಡೆಯುವ ದಿನವೇ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯೂ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್ಇಎಬಿ) ಪರಿಷ್ಕರಿಸಿದೆ. ಹೊಸ ವೇಳಾಪಟ್ಟಿ ಪ್ರಕಟಿಸಿದೆ.
ಮೇ.22ರಂದು ಸಿಇಟಿ ಕನ್ನಡ ಪರೀಕ್ಷೆ ಮುಂಚೆಯೇ ನಿಗದಿ ಪಡಿಸಲಾಗಿತ್ತು. ಆದರೆ, ಇದರ ನಡುವೆಯೇ ಮೇ.22ರಿಂದ ಜೂನ್ 2ರವರೆಗೂ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆಯೆಂದು ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಈಗ ಇದನ್ನು ಮನಗಂಡ ಕೆಎಸ್ಇಎಬಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೇ.23ರಿಂದ ಜೂನ್ 3ರವರೆಗೂ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ https://kseab.karnataka.gov.in/ ಈ ವೆಬಸೈಟ್‌ಗೆ ಭೇಟಿ ನೀಡಬಹುದಾಗಿದೆ.
ದಿನಾಂಕ | ವಿಷಯ |
23 ಮೇ 2023 | ಕನ್ನಡ ಅರಾಬಿಕ್ |
24 ಮೇ 2023 | ಐಚ್ಚಿಕ ಕನ್ನಡ ರಸಾಯನ ಶಾಸ್ತ್ರ ಮೂಲ ಗಣಿತ |
25 ಮೇ 2023 | ಇಂಗ್ಲಿಷ್ |
26 ಮೇ 2023 | ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ |
27 ಮೇ 2023 | ಇತಿಹಾಸ ಸಂಖ್ಯಾಶಾಸ್ತ್ರ |
29 ಮೇ 2023 | ಹಿಂದಿ |
30 ಮೇ 2023 | ಭೂಗೋಳಿಕಶಾಸ್ತ್ರ ಮನಃಶಾಸ್ತ್ರ ಬೌತಶಾಸ್ತ್ರ 30 ಮೇ 2023 ಭೂಗೋಳಿಕಶಾಸ್ತ್ರ ಮನಃಶಾಸ್ತ್ರ ಬೌತಶಾಸ್ತ್ರ |
31 ಮೇ 2023 | ಲೆಕ್ಕಶಾಸ್ತ್ರ ಭೂಗರ್ಭಶಾಸ್ತ್ರ ಶಿಕ್ಷಣ ಶಾಸ್ತ್ರ ಗೃಹ ವಿಜ್ಞಾನ |
1 ಜೂನ್ 2023 | ರಾಜ್ಯ ಶಾಸ್ತ್ರ ಗಣಿತ ಶಾಸ್ತ್ರ |
2 ಜೂನ್ 2023 | ತರ್ಕ ಶಾಸ್ತ್ರ ಹಿಂದೂಸ್ತಾನಿ ಸಂಗೀತ ವ್ಯವಹಾರ ಅಧ್ಯಯನ |
3 ಜೂನ್ 2023 | ಅರ್ಥಶಾಸ್ತ್ರ |