ಮೋದಿ ರೋಡ್‌ ಶೋ : ನಿಜಕ್ಕೂ ಹೂವು ತಂದಿದ್ದು ಜನರೇ?

Date:

  • ಪ್ರಧಾನಿ ರೋಡ್‌ ಶೋನಲ್ಲಿ 40 ಟನ್‌ ಹೂವು ಬಳಕೆ
  • ರಾಶಿ ಹೂವು ಜನರ ಕೈ ಸೇರಿದ್ದರ ಹಿಂದಿನ ಅಸಲಿಯತ್ತು ಬಯಲು

ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ನಡೆಸಿದ ರೋಡ್‌ ಶೋಗೆ ಬಳಕೆಯಾದ 40 ಟನ್‌ ಹೂವುಗಳು ಸಾರ್ವಜನಿಕರು ತಂದಿದ್ದಲ್ಲ, ಬದಲಿಗೆ ಬಿಜೆಪಿಗರೇ ಮಾರುಕಟ್ಟೆಯಿಂದ ಹೂವು ಖರೀದಿಸಿ ಜನರಿಗೆ ಹಂಚಿದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಾತುಗಳಿಗೆ ಪುಷ್ಟಿ ನೀಡುವುಂತೆ ಬಿಜೆಪಿಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೂಗಳನ್ನು ರಾಶಿ ಹಾಕಿರುವ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಬಹುಭಾಷಾ ನಟ ಪ್ರಕಾಶ್‌ ರಾಜ್‌ ಸೇರಿದಂತೆ ಹಲವರು ಬಿಜೆಪಿಗರಿಗೆ ಛೀಮಾರಿ ಹಾಕಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆ ಪ್ರಧಾನಿ ಮೋದಿ ಕಳೆದ ಶನಿವಾರ ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಿದ್ದರು. ಈ ರೋಡ್‌ ಶೋನಲ್ಲಿ ಮೋದಿ ಅವರ ಸ್ವಾಗತಕ್ಕೆ 40 ಟನ್‌ ಹೂಗಳು ಬಳಕೆಯಾಗಿದೆ ಎಂದು ವರದಿಯಾಗಿತ್ತು. ಸಾರ್ವಜನಿಕರು ತಮ್ಮ ಸ್ವಂತ ಹಣದಲ್ಲಿ ಹೂವು ಖರೀದಿಸಿ ದಾರಿಯುದ್ದಕ್ಕೂ ಚೆಲ್ಲಿ ಪ್ರಧಾನಿಗಳಿಗೆ ಭವ್ಯ ಸ್ವಾಗತ ನೀಡಿದರು ಎಂದೆಲ್ಲ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಸಿಕೊಂಡಿದ್ದರು. ಆದರೆ, ಬೆಂಗಳೂರಿನ ಬೀದಿಗಳಲ್ಲಿ ಕಿಲೋ ಮೀಟರ್‌ಗಟ್ಟಲೇ ಬಿದ್ದ 40 ಟನ್‌ ಹೂಗಳನ್ನು ಸಾರ್ವಜನಿಕರು ತಮ್ಮ ಸ್ವಂತ ಹಣದಲ್ಲಿ ಖರೀದಿಸಿ ತಂದಿದ್ದಲ್ಲ, ಬದಲಿಗೆ ಬಿಜೆಪಿ ನಾಯಕರು ಖರೀದಿಸಿ ಜನರಿಗೆ ಹಂಚಿದ್ದು ಎಂಬ ಅಂಶ ಬಹಿರಂಗಗೊಂಡಿದೆ.

ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೂವಿನ ರಾಶಿಯನ್ನು ಪರಿಶೀಲಿಸುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ʼಆಲ್ಟ್‌ ನ್ಯೂಸ್‌ʼ ಮುಖ್ಯಸ್ಥ ಮೊಹಮ್ಮದ್‌ ಝುಬೈರ್‌, “ಜನ ಸಾಮಾನ್ಯರು ತಮ್ಮ ಸ್ವಂತ ಹಣ ಖರ್ಚು ಮಾಡಿ ಹೂವು ಚೆಲ್ಲಿ ಮೋದಿ ಅವರನ್ನು ಸ್ವಾಗತಿಸಿದರು ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ, ಬಿಜೆಪಿ ಕಾರ್ಯಕರ್ತರಿಗೆ ಹೂವು ಹಂಚಿದ್ದು ಯಾರು ಎಂಬುದನ್ನು ತಿಳಿಯಲು ಈ ವಿಡಿಯೋವನ್ನು ನೋಡಿ” ಎಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಝುಬೈರ್‌ ಅವರ ಈ ಟ್ವೀಟ್‌ ಅನ್ನು ಬಳಸಿ ಬಿಜೆಪಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಕಾಶ್‌ ರಾಜ್‌, “ನಾಚಿಕೆಗೇಡು, ಮಹಾಸುಳ್ಳನ ರಂಗತಯಾರಿ” ಎಂದು ಛೀ ಮಾರಿ ಹಾಕಿದ್ದಾರೆ.

ಮೋದಿ ರೋಡ್‌ ಶೋಗೆ ಬಳಕೆಯಾದ ಹೂವಿನ ರಾಶಿಯ ಬಳಿ ಶೋಭಾ ಕರಂದ್ಲಾಜೆ ಇರುವ ವಿಡಿಯೋ ವೈರಲ್‌ ಆಗುತ್ತಲೇ ಆಕ್ರೋಶಗೊಂಡ ನೆಟ್ಟಿಗರು, “ಬಿಜೆಪಿ ನಾಯಕರು ಹೂವನ್ನು ಮಾತ್ರ ಖರೀದಿಸಿಲ್ಲ, ದಾರಿಯುದ್ದಕ್ಕೂ ಆ ಹೂಗಳನ್ನು ಚೆಲ್ಲಲು ಜನರನ್ನು ಕೂಡ ದುಡ್ಡು ಕೊಟ್ಟು ಕರೆ ತಂದಿದ್ದಾರೆ” ಎಂದು ಆರೋಪಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಂಗಲಾನ್ ಟ್ರೈಲರ್ ಬಿಡುಗಡೆ: ಆಗಸ್ಟ್‌ 15ರಿಂದ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ ಕೋಲಾರದ ಕಥೆ ‘ತಂಗಲಾನ್’

ತಮಿಳು ಚಿತ್ರರಂಗದ ಅತ್ಯದ್ಭುತ ನಿರ್ದೇಶಕ ಪ ರಂಜಿತ್ ನಿರ್ದೇಶನದ ನಟ ವಿಕ್ರಮ್...

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಇಡಿ ಸಮನ್ಸ್

ಸುಕೇಶ್ ಚಂದ್ರಶೇಖರ್ ಅವರ ಸುಮಾರು 200 ಕೋಟಿ ರೂಪಾಯಿ ಅಕ್ರಮ ಹಣ...

ಜೈಲೂಟ ಜೀರ್ಣವಾಗುತ್ತಿಲ್ಲ ಮನೆಯೂಟ, ಹಾಸಿಗೆ ಬೇಕೆಂದು ಹೈಕೋರ್ಟ್‌ಗೆ ದರ್ಶನ್ ಅರ್ಜಿ

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ 17 ಮಂದಿ...

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 10 ಆರೋಪಿಗಳ ಬೆರಳಚ್ಚು ಹೊಂದಾಣಿಕೆ?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮಾದರಿ, ಬಂಧಿತ ಆರೋಪಿಗಳ ಪೈಕಿ...