ಮದುವೆ, ಧಾರ್ಮಿಕ ಕಾರ್ಯಕ್ರಮಗಳ ದುರ್ಬಳಕೆ ಬಗ್ಗೆ ಕ್ರಮ: ಜಿಲ್ಲಾ ಚುನಾವಣಾಧಿಕಾರಿ

Date:

  • ಬಿಬಿಎಂಪಿ ನೂತನ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸುತ್ತಿದೆ: ಜಿಲ್ಲಾ ಚುನಾವಣಾಧಿಕಾರಿ
  • ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮತದಾನ ಕೇಂದ್ರಗಳಲ್ಲಿ ಸರತಿ ಸಾಲು ಮತ್ತು ಪಾರ್ಕಿಂಗ್ ಸ್ಲಾಟ್ ಲಭ್ಯತೆ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಇರುವ ಹಿನ್ನಲೆ, ರಾಜಕೀಯ ಪ್ರಚಾರಕ್ಕಾಗಿ ಮದುವೆ, ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗುವುದು ಹಾಗೂ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮೇಲೆ ನಿಗಾ ಇಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮದುವೆ ಮತ್ತು ಇತರೆ ಯಾವುದೇ ಸಮಾರಂಭಗಳು ನಡೆಯಲು ನಿರ್ಬಂಧವಿರುವುದಿಲ್ಲ. ಆದರೆ, ಈ ಸಮಾರಂಭಗಳನ್ನು ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡರೆ, ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.

“ಚುನಾವಣಾ ಆಯೋಗದ ಸಹಯೋಗದೊಂದಿಗೆ ಬಿಬಿಎಂಪಿಯು ನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಒಂದು ವಾರದಲ್ಲಿ ಸಿದ್ಧವಾಗಲಿದೆ. ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಯಾದ ಒಂದು ವಾರದವರೆಗೆ ಪರೀಕ್ಷಾ ಉದ್ದೇಶಗಳಿಗೆ ಕಾರ್ಯನಿರ್ವಹಿಸುತ್ತದೆ. ನಂತರದ ದಿನಗಳಲ್ಲಿ ಇದು ಸಾರ್ವಜನಿಕರ ಬಳಕೆಗೆ ಸಿದ್ಧವಾಗಲಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆರೋಗ್ಯ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಹೆಚ್ಚು ಹುಡುಕಾಟ ನಡೆಸುತ್ತಿರುವ ಯುವಕರು : ನಿಮ್ಹಾನ್ಸ್ ಅಧ್ಯಯನ

“ಈ ನೂತನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮತದಾನ ಕೇಂದ್ರಗಳಲ್ಲಿ ಸರತಿ ಸಾಲು ಮತ್ತು ಪಾರ್ಕಿಂಗ್ ಸ್ಲಾಟ್ ಲಭ್ಯತೆಯನ್ನು ಪರಿಶೀಲಿಸಲು ಸಹಕಾರಿಯಾಗಿದೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಕ್ತಿ ಯೋಜನೆಗೆ ಚಾಲನೆ | ಬಿಎಂಟಿಸಿ ಬಸ್‌ಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಕಂಡಕ್ಟರ್‌

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ...

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಬೇಕು; ಸಿಎಂ ಜೊತೆ ‘ಎದ್ದೇಳು ಕರ್ನಾಟಕ’ ನಿಯೋಗ ಚರ್ಚೆ

ನಾಡಿನ ಜನತೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಚುನಾವಣೆಯಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ....

ಬೆಂಗಳೂರು | ಕೆಐಎ ಒಂದನೇ ಟರ್ಮಿನಲ್‌ ಶೀಘ್ರ ನವೀಕರಣ

ಹದಿನೈದು ವರ್ಷಗಳಲ್ಲಿ 250 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ ಟರ್ಮಿನಲ್...

ಬೆಂಗಳೂರು | ಸ್ನೇಹಿತನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ

ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜೂ. 6ರಂದು ನಡೆದಿದ್ದ ಘಟನೆ...