ನಟ ಆಮಿರ್‌ ಖಾನ್‌ಗೆ ಮೊದಲ ಆರ್‌ಕೆ ಲಕ್ಷ್ಮಣ್ ಪ್ರಶಸ್ತಿ

Date:

ಬಾಲಿವುಡ್ ನಟ ಆಮಿರ್‌ ಖಾನ್‌ ಅವರಿಗೆ ಮೊದಲ ಆರ್‌ಕೆ ಲಕ್ಷ್ಮಣ್ ಪ್ರಶಸ್ತಿ ಸಂದಿದೆ. ಇದೇ ನವೆಂಬರ್ 23ರಂದು ಪುಣೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಮಿರ್ ಖಾನ್ ಅವರಿಗೆ ಮೊದಲ ಆರ್‌ಕೆ ಲಕ್ಷ್ಮಣ್ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಪುಣೆಯ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನವೆಂಬರ್ 23ರಂದು ಸಂಜೆ 5 ಗಂಟೆಗೆ ಆರಂಭವಾಗಲಿದೆ.

- Advertisement -

ಪ್ರಖ್ಯಾತ ಭಾರತೀಯ ವ್ಯಂಗ್ಯಚಿತ್ರಕಾರ, ಸಚಿತ್ರಕಾರ ಮತ್ತು ಹಾಸ್ಯಗಾರ, ‘ದಿ ಕಾಮನ್ ಮ್ಯಾನ್’ ಪಾತ್ರಕ್ಕೆ ಹೆಸರುವಾಸಿಯಾಗಿರುವ ಆರ್‌ಕೆ ಲಕ್ಷ್ಮಣ್ ಅವರ ಹೆಸರಲ್ಲಿ ಸಲ್ಲುವ ಮೊದಲ ಪ್ರಶಸ್ತಿ ಇದಾಗಿದೆ. ಆಮಿರ್ ಖಾನ್ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಆರ್‌ಕೆ ಲಕ್ಷ್ಮಣ್ ಕುಟುಂಬ ಘೋಷಿಸಿದೆ. ಈ ಕಾರ್ಯಕ್ರಮದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವೂ ಇರಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್‌ಚುಕ್‌ ಮೇಲೆ ಕೇಂದ್ರದ ಕೆಂಗಣ್ಣೇಕೆ?

ಆರ್.ಕೆ. ಲಕ್ಷ್ಮಣ್ ಅವರ ಸೊಸೆ ಉಷಾ ಲಕ್ಷ್ಮಣ್, ಕಾರ್ಯಕ್ರಮ ಮತ್ತು ಪ್ರಶಸ್ತಿಯ ವಿವರಗಳ ಮಾಹಿತಿಯನ್ನು ನೀಡಿದ್ದು, “ಆರ್.ಕೆ. ಲಕ್ಷ್ಮಣ್ ಕುಟುಂಬವು ನವೆಂಬರ್ 23ರಂದು ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎ.ಆರ್. ರೆಹಮಾನ್ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ, ನಾವು ಮೊದಲ ಬಾರಿಗೆ ಆರ್.ಕೆ. ಲಕ್ಷ್ಮಣ್ ಹೆಸರಲ್ಲಿ ಪ್ರಶಸ್ತಿಯನ್ನು ಆರಂಭಿಸಲಿದ್ದೇವೆ. ಈ ಮೂಲಕ ಆರ್.ಕೆ. ಲಕ್ಷ್ಮಣ್ ಅವರಿಗೆ ಗೌರವ ಸಲ್ಲಿಸುತ್ತೇವೆ. ಇದು ನಾವು ಒಂದು ಕುಟುಂಬವಾಗಿ ಲಕ್ಷ್ಮಣ್ ಅವರಿಗೆ ನೀಡುತ್ತಿರುವ ಅತಿದೊಡ್ಡ ಗೌರವ” ಎಂದು ತಿಳಿಸಿದ್ದಾರೆ.

ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಮತ್ತು ಭಾರತೀಯ ಸಿನಿಮೀಯ ಸಂಪ್ರದಾಯಗಳಿಗೆ ಸವಾಲು ಮಾಡುವ, ವ್ಯಂಗ್ಯದ ಮೂಲಕವೇ ಸಿನಿಮಾದಲ್ಲಿ ನೈಜ ವಿಚಾರವನ್ನು ಜನರಿಗೆ ತಲುಪಿಸುವವರು ಆಮಿರ್ ಖಾನ್. ಲಗಾನ್, ತಾರೆ ಜಮೀನ್ ಪರ್, ದಂಗಲ್, ಪಿಕೆ ಮೊದಲಾದ ಸಿನಿಮಾಗಳಿಗೆ ಖಾನ್ ಹೆಸರುವಾಸಿ. ಖಾನ್ ಅವರ ಸೃಜನಶೀಲ ಸಾಧನೆಗಳನ್ನು ಗುರುತಿಸಿ ಆರ್‌ಕೆ ಲಕ್ಷ್ಮಣ್ ಶ್ರೇಷ್ಠತಾ ಪ್ರಶಸ್ತಿಯನ್ನು ನೀಡಲು ಕುಟುಂಬ ನಿರ್ಧರಿಸಿದೆ. ಖಾನ್ ಅವರ ಸಿನಿಮಾಗಳು ಆರ್‌ಕೆ ಲಕ್ಷ್ಮಣ್ ಅವರ ತತ್ವಗಳೊಂದಿಗೆ ವಿಶೇಷವಾಗಿ ಭಾರತೀಯ ಸಮಾಜದ ಬಗ್ಗೆಗಿನ ಅವರ ಚಿಂತನೆಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಕುಟುಂಬ ಈ ಮೂಲಕ ತಿಳಿಸಿದೆ.

ದಿ ಕಾಮನ್ ಮ್ಯಾನ್ ರಚನೆಗೆ ಹೆಸರುವಾಸಿಯಾದ ಆರ್‌ಕೆ ಲಕ್ಷ್ಮಣ್

ಆರ್‌ಕೆ ಲಕ್ಷ್ಮಣ್ ದೇಶದ ಅತ್ಯಂತ ಜನಪ್ರಿಯ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ಅವರು ‘ಯು ಸೆಡ್ ಇಟ್’ ಮತ್ತು ದಿ ಕಾಮನ್ ಮ್ಯಾನ್ ಕಾರ್ಟೂನ್‌ಗೆ ಹೆಸರುವಾಸಿಯಾಗಿದ್ದಾರೆ. ದೇಶದ ದೈನಂದಿನ ಜೀವನದ ಸಮಸ್ಯೆಗಳನ್ನು ಹಾಸ್ಯ ಮತ್ತು ವ್ಯಂಗ್ಯವಾಗಿ ಕಾರ್ಟೂನ್‌ ಮೂಲಕ ಪ್ರಸ್ತುತ ಪಡಿಸುತ್ತಿದ್ದರು. ಆರ್‌ಕೆ ಲಕ್ಷ್ಮಣ್ ಅವರ ಸಹೋದರ ಆರ್‌ಕೆ ನಾರಾಯಣ್ ಬರೆದ ‘ಮಾಲ್ಗುಡಿ ಡೇಸ್’ ಟಿವಿ ಸರಣಿಗಾಗಿ ರೇಖಾಚಿತ್ರಗಳನ್ನು ರಚಿಸಿದ್ದರು. ಲಕ್ಷ್ಮಣ್ ಪದ್ಮಭೂಷಣ, ಪದ್ಮವಿಭೂಷಣ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ವೆಟ್ಟುವಂ’ | ಪಾ ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ!

ನಿರ್ದೇಶಕ ಪಾ ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್...

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ ಪ್ಯಾಟ್ರಿಷಿಯೊ ಗುಜ್ಮಾನ್

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ...

ಕನ್ನಡದ ಹಿರಿಯ ನಟ ಅನಂತ್ ನಾಗ್‌ಗೆ 2024ನೇ ಸಾಲಿನ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗರಿ

ಭಾರತೀಯ ಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ, ಕನ್ನಡದ ಹಿರಿಯ ನಟ...

₹9 ಕೋಟಿ ಚೆಕ್ ಬೌನ್ಸ್ ಪ್ರಕರಣ: ನಟ ರಾಜ್‌ಪಾಲ್ ಯಾದವ್‌ಗೆ ‘ಸುಪ್ರೀಂ’ನಿಂದ ತಾತ್ಕಾಲಿಕ ರಿಲೀಫ್

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿಗೆ ಸಂಬಂಧಿಸಿದ ₹9 ಕೋಟಿ ಮೊತ್ತದ...