ಭಾರತ-ಚೀನಾ ಸಂಬಂಧ ಸುಧಾರಣೆ ಎಫೆಕ್ಟ್: ರದ್ದಾಗುತ್ತಾ ಸಲ್ಮಾನ್‌ ಖಾನ್‌ ಚಿತ್ರ ʼಮಾತೃಭೂಮಿʼ?

Date:

ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಮಾತೃಭೂಮಿʼಗೆ ದೊಡ್ಡ ರಾಜತಾಂತ್ರಿಕ ಅಡೆತಡೆ ಎದುರಾಗಿದ್ದು, ಸದ್ಯಕ್ಕೆ ಚಿತ್ರಕ್ಕೆ ಬಿಡುಗಡೆ ಭಾಗ್ಯ ಇಲ್ಲ ಎನ್ನಲಾಗುತ್ತಿದೆ. ಭಾರತ ಮತ್ತು ಚೀನಾ ನಡುವಿನ ಗಲ್ವಾನ್ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ತಯಾರಾಗಿದ್ದ ಈ ಚಿತ್ರದ ಟೈಟಲ್‌ ಪೈನಲ್‌ ಆದಾಗಿನಿಂದಲೂ ಸಾಲು ಸಾಲು ವಿವಾದಗಳು ಸೃಷ್ಟಿಯಾಗಿದ್ದವು.

- Advertisement -

ʼಬ್ಯಾಟಲ್ ಆಫ್ ಗಲ್ವಾನ್ʼ ಎಂದಿದ್ದ ಚಿತ್ರದ ಹೆಸರನ್ನು ಇತ್ತೀಚೆಗಷ್ಟೇ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಎಂದು ಮರುನಾಮಕರಣ ಮಾಡಲಾಗಿತ್ತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಹುತಾತ್ಮ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಅವರ ಪಾತ್ರ ನಿರ್ವಹಿಸುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಚಿತ್ರದ ಟೀಸರ್ ಬಿಡುಗಡೆಯಾದಾಗ ಚೀನಾದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿವಾದದ ಬೆನ್ನಲ್ಲೇ ಚಿತ್ರತಂಡ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರ ಕಳೆದ ಏಪ್ರಿಲ್ 17 ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಚಿತ್ರೀಕರಣ ಬಾಕಿ ಇರುವುದರಿಂದ ಮತ್ತು ಸೆನ್ಸಾರ್ ಮಂಡಳಿ (CBFC), ಭಾರತೀಯ ಸೇನೆ ಹಾಗೂ ರಕ್ಷಣಾ ಸಚಿವಾಲಯದಿಂದ ಇನ್ನೂ ಅನುಮತಿ (Clearance) ಸಿಗದ ಕಾರಣ, ಚಿತ್ರವನ್ನು ಆ.14ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ. ಒಟಿಟಿಗೆ ನೀಡದೆ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಈ ಹಿಂದೆ ಪಾಕಿಸ್ತಾನದೊಂದಿಗಿನ ಸಂಬಂಧ ಸುಧಾರಿಸುವಾಗ ಸಿನಿಮಾಗಳಲ್ಲಿ ಪಾಕಿಸ್ತಾನದ ಹೆಸರಿನ ಬದಲಿಗೆ ‘ನೆರೆ ದೇಶ’ (ಪಡೋಸಿ ಮುಲ್ಕ್) ಎಂದು ಕರೆಯಲಾಗುತ್ತಿತ್ತು. ಅದೇ ಮಾದರಿಯಲ್ಲಿ ಈಗ ‘ಮಾತೃಭೂಮಿ’ ಚಿತ್ರದಲ್ಲೂ ‘ಚೀನಾ’ ಹೆಸರನ್ನು ನೇರವಾಗಿ ಬಳಸದೆ ಕಥೆಯನ್ನು ಬದಲಾಯಿಸಲಾಗುತ್ತಿದೆ. ವಿವಾದಗಳನ್ನು ತಪ್ಪಿಸಲು ಚಿತ್ರದ ಕೆಲವು ಪ್ರಮುಖ ದೃಶ್ಯಗಳನ್ನು ಮರು ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

ಇದೇ ವೇಳೆ, ಗಲ್ವಾನ್ ಘಟನೆಯನ್ನಾಧರಿಸಿ ನಿರ್ಮಾಣವಾಗಬೇಕಿದ್ದ ಮತ್ತೊಂದು ದೊಡ್ಡ ಚಿತ್ರ ಸಂಪೂರ್ಣವಾಗಿ ರದ್ದಾಗಿದೆ ಎಂದು ವರದಿಯಾಗಿದೆ. ರಾಜತಾಂತ್ರಿಕ ಸೂಕ್ಷ್ಮತೆಗಳು ಮತ್ತು ಸರ್ಕಾರದ ಕಠಿಣ ನಿಯಮಗಳೇ ಈ ಚಿತ್ರಗಳಿಗೆ ಬ್ರೇಕ್ ಹಾಕಲು ಮುಖ್ಯ ಕಾರಣ ಎನ್ನಲಾಗಿದೆ.

ಗಲ್ವಾನ್ ಕಣಿವೆಯಲ್ಲಿ ವೀರಮರಣ ಅಪ್ಪಿದ ವೀರ್ ಚಕ್ರ ವಿಜೇತ ಸಿಪಾಯಿ ಗುರುತೇಜ್ ಸಿಂಗ್ ಅವರ ಜೀವನ ಆಧಾರಿತ ‘ದಿ ಲಯನ್ ಆಫ್ ಗಲ್ವಾನ್’ (The Lion of Galwan) ಎಂಬ ಚಿತ್ರವನ್ನು ನಿರ್ಮಿಸಲು ನಟಿ ಭಾಗ್ಯಶ್ರೀ ಅವರ ಪತಿ ಹಾಗೂ ನಿರ್ಮಾಪಕ |ಹಿಮಾಲಯ ದಸ್ಸಾನಿ ಮತ್ತು ಅವರ ಪುತ್ರ ಅಭಿಮನ್ಯು ದಸ್ಸಾನಿ ಯೋಜಿಸಿದ್ದರು. ಆದರೆ ಈಗ ಈ ಪ್ರಾಜೆಕ್ಟ್‌ ಅನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಹಿಮಾಲಯ ದಸ್ಸಾನಿ, “ಪ್ರಸ್ತುತ ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಿಸುತ್ತಿದೆ. ರಕ್ಷಣಾ ಸಚಿವಾಲಯದಿಂದ (MoD) ನಮಗೆ ಬಂದಿರುವ ನಿರ್ದೇಶನದ ಪ್ರಕಾರ, ಚಿತ್ರದಲ್ಲಿ ಎಲ್ಲೂ ‘ಚೀನಾ ವಿರೋಧಿ’ ಅಂಶಗಳನ್ನು ತೋರಿಸುವ ಹಾಗಿಲ್ಲ. ಒಂದು ವೇಳೆ ಗಲ್ವಾನ್ ಸಂಘರ್ಷದ ನೈಜ ಕಾರಣ ಮತ್ತು ಅಲ್ಲಿ ನಡೆದ ಜಗಳವನ್ನೇ ಸರಿಯಾಗಿ ತೋರಿಸಲು ಅನುಮತಿ ಸಿಗದಿದ್ದರೆ, ಸಿನಿಮಾ ಮಾಡುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಈ ಚಿತ್ರವನ್ನು ಕೈಬಿಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: The New York Indian Film Festival | ನ್ಯೂಯಾರ್ಕ್‌ನಲ್ಲಿ ಭಾರತದ ಚಲನಚಿತ್ರ ಹಬ್ಬಕ್ಕೆ ಕ್ಷಣಗಣನೆ

ಇತ್ತೀಚೆಗೆ ಸ್ನೇಹಿತರೊಬ್ಬರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ಸಲ್ಮಾನ್ ಖಾನ್ ಅವರನ್ನು ಮುತ್ತಿಕೊಂಡ ಮಾಧ್ಯಮದವರು ‘ಮಾತೃಭೂಮಿ’ ಚಿತ್ರದ ಅಪ್ಡೇಟ್ ಕೇಳಿ ಕಿರಿಕಿರಿ ಉಂಟುಮಾಡಿದ್ದರು. ಇದರಿಂದ ಕೋಪಗೊಂಡ ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

“ನನ್ನ ಕಷ್ಟದ ಸಮಯದಲ್ಲಿ ಮಾಧ್ಯಮಗಳು ಲಾಭ ಮಾಡಿಕೊಳ್ಳಲು ನೋಡುತ್ತಿವೆ. ಮಾಧ್ಯಮದವರು ಬ್ರೆಡ್-ಬಟರ್ ಸಂಪಾದಿಸಲಿ ಎಂದು ನಾನು ಯಾವಾಗಲೂ ಅವರ ಜೊತೆ ಚೆನ್ನಾಗಿ ನಡೆದುಕೊಂಡಿದ್ದೇನೆ. ಆದರೆ ಆಸ್ಪತ್ರೆಯಲ್ಲೂ ಬಂದು ಕಾಟ ಕೊಡುತ್ತಿದ್ದಾರೆ. ಮಾತೃಭೂಮಿ ಪಿಕ್ಚರ್ ಕಿ ಮಾ ಕಿ ಆಂಕ್ (ಆ ಚಿತ್ರಕ್ಕೆ ಬೆಂಕಿ ಬೀಳಾ), ಜೀವನ ಮುಖ್ಯವೋ, ಇಲ್ಲ ಸಿನಿಮಾ ಮುಖ್ಯವೋ?” ಎಂದು ಸಲ್ಮಾನ್ ತಮ್ಮ ಇನ್ಸ್ಟಾದಲ್ಲಿ ತೀಕ್ಷ್ಣವಾಗಿ ಬರೆದುಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ | ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ

ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ...

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...